- Advertisment -
HomeNew postsPm-kisan 14th instalment: ನಾಳೆ ಕೇಂದ್ರ ಸರಕಾರದಿಂದ ರೈತರ ಖಾತೆಗೆ ಪಿ ಎಂ ಕಿಸಾನ್ ಯೋಜನೆಯ...

Pm-kisan 14th instalment: ನಾಳೆ ಕೇಂದ್ರ ಸರಕಾರದಿಂದ ರೈತರ ಖಾತೆಗೆ ಪಿ ಎಂ ಕಿಸಾನ್ ಯೋಜನೆಯ 2000 ರೂ ಹಣ ವರ್ಗಾವಣೆ!

Last updated on October 1st, 2024 at 03:17 am

ಕೇಂದ್ರ ಸರಕಾರದಿಂದ ನಾಳೆ(27-07-2023) ಬೆಳಿಗ್ಗೆ 11:00 ಗಂಟೆಗೆ ದೇಶದ 8.5 ಕೋಟಿ ರೈತರ ಖಾತೆಗೆ ನೇರ ನಗದು ವರ್ಗಾವಣೆ(DBT) ಮೂಲಕ ಪಿ.ಎಂ ಕಿಸಾನ್ ಯೋಜನೆಯ(pm kisan Yojana) 2,000 ರೂ ಜಮಾ ಆಗಲಿದೆ. ಈ ಕುರಿತು ಕೇಂದ್ರ ಕೃಷಿ ಸಚಿವ(Agriculture minister) ನರೇಂದ್ರ ಸಿಂಗ್ ತೋಮರ್ ರವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ರೈತರಿಗೆ ಗೊಬ್ಬರ ಮತ್ತು ಬೀಜ ಖರೀದಿಗೆ ಅರ್ಥಿಕವಾಗಿ ಸಹಾಯ ನೀಡುವ ಉದ್ದೇಶದಿಂದ ಪಿ.ಎಂ ಕಿಸಾನ್ ಯೋಜನೆಯನ್ನು 2019ರಿಂದ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಏಕ ಕಾಲಕ್ಕೆ ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ ಇಲ್ಲಿಯವರೆಗೆ ರೂ 2,000 ದಂತೆ ಒಟ್ಟು 13 ಕಂತುಗಳನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ.

Pm kisan 14th instalment: 14 ನೇ ಕಂತಿನ ಹಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಾಳೆ ಅಂದರೆ ದಿನಾಂಕ: 27-07-2023 ರ  11:00 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ರೈತರ ಸಮೂಖದಲ್ಲಿ 8.5 ಕೋಟಿ ರೈತರ ಖಾತೆಗೆ ಏಕ ಕಾಲಕ್ಕೆ ನೇರ ನಗದು ವರ್ಗಾವಣೆ(DBT) ಮೂಲಕ ಅರ್ಥಿಕ ನೆರವನ್ನು ವರ್ಗಾವಣೆ ಮಾಡಲಿದ್ದಾರೆ.

ಈ ವಿಡಿಯೋ ಕಾನ್ಫರೆನ್ಸ್ ನಲ್ಲಿ ನೀವು ಭಾಗವಹಿಸಬವುದು ಈ https://pmevents.ncog.gov.in/registration/index/109 ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಒಟಿಪಿ ಪಡೆದು ನಿಮ್ಮ ವಿವರವನ್ನು ನಮೂದಿಸಿ ನೊಂದಣಿ ಮಾಡಿಕೊಂಡು ನಾಳೆಯ ಪಿ ಎಂ ಕಿಸಾನ್ ಯೋಜನೆಯ ವಿಡಿಯೋ ಕಾನ್ಫರೆನ್ಸ್  ಕಾರ್ಯಕ್ರಮಕ್ಕೆ ಮನೆಯಲ್ಲೇ ಕುಳಿತು ರೈತರು ಈ ವಿಡಿಯೋ ಸಂವಾದಲ್ಲಿ ಭಾಗವಹಿಸಬವುದಾಗಿದೆ.

ಇದನ್ನೂ ಓದಿ: Gruhalakshmi Yojana: ಗೃಹಲಕ್ಷ್ಮಿ ಯೋಜನೆಯ ವೇಳಾಪಟ್ಟಿಯ ಮೇಸೆಜ್ ಪಡೆಯಲು ವೆಬ್ಸೈಟ್ ನಲ್ಲಿ ಬದಲಾವಣೆ!

How to check pm kisan yojana status- ನಿಮ್ಮ ಖಾತೆಗೆ ಹಣ ಪಾವತಿಯನ್ನು ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಖಾತೆಗೆ ಹಣ ವರ್ಗಾವಣೆಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಬೆಳಗ್ಗೆ ಈ ಕಾರ್ಯಕ್ರಮ ಮುಗಿದ ನಂತರ ಸ್ವಲ್ಪ ಸಮಯ ಬಿಟ್ಟು ಏಕೆಂದರೆ ಹಣ ವರ್ಗಾವಣೆ ಮಾಹಿತಿ ಪಿ ಎಂ ಕಿಸಾನ್ ಯೋಜನೆಯ ವೆಬ್ಸೈಟ್ ನಲ್ಲಿ ಅಪ್ಡೇಟ್ ಅಗುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಅದ್ದರಿಂದ ಸಂಜೆ ಅಥವಾ 28-07-2023 ರ ಬೆಳಗ್ಗೆ  https://pmkisan.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಖಾತೆಗೆ ಅರ್ಥಿಕ ನೆರವಿನ ಹಣ ಪಾವತಿ ಅಗಿರುವುದನ್ನು ಚೆಕ್ ಮಾಡಬವುದು.

Step-1: ನಿಮ್ಮ ಮೊಬೈಲ್ ಮೂಲಕ ಈ https://pmkisan.gov.in/ (28-07-2023 ರ ನಂತರ) ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಯೋಜನೆಯ ಜಾಲತಾಣ ಭೇಟಿ ಮಾಡಿ ನಂತರ “Know Your Stutas” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-2: ನಂತರ ಅರ್ಜಿದಾರರ/ಫಲಾನುಭವಿಯ ರಿಜಿಸ್ಟ್ರೇಷನ್ ನಂಬರ್ ಹಾಕಿ ಅಲ್ಲೇ ಕಾಣುವ ಕ್ಯಾಪ್ಚನ್ ನಮೂದಿಸಿ “Get Data” ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಖಾತೆಗೆ 14 ನೇ ಕಂತಿನ ಹಣ ವರ್ಗಾವಣೆ ವಿವರ ಗೋಚರಿಸುತ್ತದೆ.

ಇದಲ್ಲದೆ ಈ ಪುಟದಲ್ಲಿ ಇಲ್ಲಿಯವರೆಗೆ ಎಷ್ಟು ಕಂತು ಹಣ ಜಮಾ ಅಗಿದೆ? ಯಾವ ಬ್ಯಾಂಕ್ ? ಬ್ಯಾಂಕ್ ಖಾತೆಯ ಕೊನೆಯ 4 ಸಂಖ್ಯೆ. ಹಣ ವರ್ಗಾವಣೆಯಾದ ದಿನಾಂಕ ಮಾಹಿತಿಯನ್ನು ಸಹ ಇಲ್ಲಿ ತಿಳಿಯಬವುದು.

ಸಮಾನ್ಯವಾಗಿ ಈ ಹಿಂದಿನ 13ನೇ ಕಂತು ರೈತರಿಗೆ ಜಮಾ ಅಗಿದರೆ ಅಂತಹ ಎಲ್ಲಾ ರೈತರಿಗೆ ಈ ಕಂತಿನ ಹಣವು ವರ್ಗಾವಣೆ ಅಗಿರುತ್ತದೆ.

Know your registration number- ನಿಮ್ಮ ರಿಜಿಸ್ಟ್ರೇಷನ್ ನಂಬರ್ ತಿಳಿಯುವ ವಿಧಾನ:

https://pmkisan.gov.in/KnowYour_Registration.aspx ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಮೊಬೈಲ್ ನಂಬರ್ ಅಥವಾ ಆಧಾರ್ ಕಾರ್ಡ ನಂಬರ್ ಹಾಕಿ ಒಟಿಪಿ ಪಡೆದು ಅದನ್ನು ನಮೂದಿಸಿ ನಿಮ್ಮ ರಿಜಿಸ್ಟ್ರೇಷನ್ ನಂಬರ್ ತಿಳಿದುಕೊಳ್ಳಬವುದು.

ಆಧಾರ್ ಕಾರ್ಡನಲ್ಲಿ ಹೆಸರು ತಿದುಪಡ್ದಿ ಮಾಡಿದ್ದರೆ ರೈತರಿಗೆ ಹಣ ಜಮಾ ಅಗುವುದಿಲ್ಲ- (PM-kisan “NAME CORRECTION AS PER AADHAAR)- 

ರೈತರು ತಮ್ಮ ಆಧಾರ್ ಕಾರ್ಡನಲ್ಲಿ ನಮೂದಿಸಿರುವ ಹೆಸರನ್ನು ತಿದುಪಡ್ಡಿ ಮಾಡಿದ್ದರೆ ಅಂತಹ ರೈತರು ತಪ್ಪದೇ ಈ ಯೋಜನೆಯ ತಂತ್ರಾಂಶದಲ್ಲಿ ನಿಮ್ಮ ಹೆಸರಿನಲ್ಲಿ ಅಗಿರುವ ಇಂಗ್ಲೀಷ್ ಅಕ್ಷರಗಳ ಬದಲಾವಣೆ ವಿವರವನ್ನು ಇಲ್ಲಿ ಅಪ್ಲೋಡ್ ಮಾಡಬೇಕು. ನೀವು ಇತೀಚೆಗೆ ಆಧಾರ್ ಕಾರ್ಡನ ತಿದ್ದುಪಡಿ ಮಾಡಿದ್ದಲ್ಲಿ ನಿಮ್ಮ ಆಧಾರ್ ಕಾರ್ಡ ಮತ್ತು ಜೋಡಣೆಯಾಗಿರುವ ಮೊಬೈಲ್ ಸಹಿತ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಮಾಹಿತಿಯನ್ನು ಸರಿಪಡಿಸಿಕೊಳ್ಳಬೇಕು ಇದಾದ ಬಳಿಕವೇ ನಿಮಗೆ ಹಣ ಪಾವತಿಯಾಗುತ್ತದೆ.

ನಿಮ್ಮ ಮೊಬೈಲ್ ನಲ್ಲಿ ಆಧಾರ್ ಕಾರ್ಡನಲ್ಲಿ ಹೆಸರು ತಿದುಪಡಿಯನ್ನು ಈ ಯೋಜನೆಯ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಬವುದು:

Step-1:  ಈ https://pmkisan.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಿ ಎಂ ಕಿಸಾನ್ ಯೋಜನೆಯ ಅಧಿಕೃತ ಜಾಲತಾಣದ ವೆಬ್ಸೈಟ್ ಭೇಟಿ ಮಾಡಿ ಮುಖಪುಟದಲ್ಲಿ ಕಾಣುವ “NAME CORRECTION AS PER AADHAAR” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-2: ತದನಂತರದಲ್ಲಿ ನಿಮ್ಮ ರಿಜಿಸ್ಟ್ರೇಷನ್ ನಂಬರ್(Registration Number) ಮತ್ತು ಅಲ್ಲೇ ಗೋಚರಿಸುವ ಕ್ಯಾಪ್ಚರ್ ಹಾಕಿ “Search” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು ನಂತರ “Edit” ಆಯ್ಕೆಯ ಮೇಲೆ ಕಿಕ್ ಮಾಡಿ ಪ್ರಸ್ತುತ ಆಧಾರ್ ಕಾರ್ಡನಲ್ಲಿರುವ ಹೆಸರು ಹೇಗೆ ಇದಿಯೋ ಹಾಗೆಯೇ ಟೈಪ್ ಮಾಡಿ ಮತ್ತು ನಿಮ್ಮ ಮೊಬೈಲ್ ನಂಬರ್ ನಮೂದಿಸಿ “Update” ಬಟನ್ ಮೇಲೆ ಕ್ಲಿಕ್ ಮಾಡಿದ್ದರೆ ನಿಮ್ಮ ಸರಿಯಾದ ಆಧಾರ್ ಕಾರ್ಡ ವಿವರ ಅಪ್ಲ್ಡೇಟ್ ಅಗುತ್ತದೆ.

Search ಮಾಡಿದ ನಂತರ ಈ ರೀತಿ “Record not found for correction or it has already been corrected” ತೋರಿಸಿದಲ್ಲಿ ಈಗಾಗಲೇ ನಿಮ್ಮ ವಿವರ ಸರಿಪಡಿಸಲಾಗಿದೆ ಎಂದು.

ಇದನ್ನೂ ಓದಿ: Pm kisan: ಪಿ ಎಂ ಕಿಸಾನ್ ಯೋಜನೆಯ 14 ನೇ ಕಂತಿನ ಹಣ ಬಿಡುಗಡೆ ದಿನಾಂಕ ಪ್ರಕಟಿಸಿದ ಕೇಂದ್ರ ಸರಕಾರ! 

- Advertisment -
LATEST ARTICLES

Related Articles

- Advertisment -

Most Popular

- Advertisment -