AIASL Recruitment 2024 - ವಿಮಾನ ನಿಲ್ದಾಣದಲ್ಲಿ 3,256 ಹುದ್ದೆಗಳ ಭರ್ತಿ

Air India Air Transport Service Limited - ಏರ್ ಇಂಡಿಯಾ ಏರ್ ಟ್ರಾನ್ಸ್ಪೋರ್ಟ್ ಸರ್ವಿಸ್ ಲಿಮಿಟೆಡ್ ಸಂಸ್ಥೆಯಲ್ಲಿ 3256 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

AIASL Recruitment 2024 - ವಿಮಾನ ನಿಲ್ದಾಣದಲ್ಲಿ 3,256 ಹುದ್ದೆಗಳ ಭರ್ತಿ
AIASL Recruitment

Air India Air Transport Service Limited - ಏರ್ ಇಂಡಿಯಾ ಏರ್ ಟ್ರಾನ್ಸ್ಪೋರ್ಟ್ ಸರ್ವಿಸ್ ಲಿಮಿಟೆಡ್ ಸಂಸ್ಥೆಯಲ್ಲಿ 3256 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

10ನೇ ತರಗತಿ ಪಾಸಾದವರು, ದ್ವಿತೀಯ ಪಿಯುಸಿ ಹಾಗೂ ಡಿಗ್ರಿ ಪಾಸಾದವರು ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜುಲೈ 12ನೇ ತಾರೀಖಿನಿಂದ ಜುಲೈ 16ರವರೆಗೆ ನೇರ ಸಂದರ್ಶನ ನಡೆಸುವುದರ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳು, ನೇರ ಸಂದರ್ಶನ ನಡೆಯುವ ವಿಳಾಸ ಹಾಗೂ ಅಧಿಸೂಚನೆ ಸೇರಿದಂತೆ ಇತರೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: karnataka dams water level: ರಾಜ್ಯದ ಯಾವ ಜಲಾಶಯಕ್ಕೆ ಎಷ್ಟು ನೀರು ಹರಿದು ಬರುತ್ತಿದೆ? ಇಲ್ಲಿದೆ ಸಂಪೂರ್ಣ ವಿವರ.

ನೇಮಕಾತಿ ವಿವರ: 

• ನೇಮಕಾತಿ ಸಂಸ್ಥೆ - ಏರ್ ಇಂಡಿಯಾ ಏರ್ ಟ್ರಾನ್ಸ್ಪೋರ್ಟ್ ಸರ್ವಿಸ್ ಲಿಮಿಟೆಡ್
• ನೇಮಕಾತಿ ಹುದ್ದೆಗಳ ಸಂಖ್ಯೆ - 3,256
• ಆಯ್ಕೆ ಪ್ರಕ್ರಿಯೆ - ನೇರ ಸಂದರ್ಶನ 

Vacancy details: 

ಡ್ಯೂಟಿ ಮ್ಯಾನೇಜರ್, ಜೂನಿಯರ್ ಆಫೀಸರ್, ಡೆಪ್ಯುಟಿ ಟರ್ಮಿನಲ್, ಹ್ಯಾಂಡಿಮ್ಯಾನ್ ಸೇರಿದಂತೆ ಒಟ್ಟು 3,256 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಹುದ್ದೆಗಳ ಸಂಪೂರ್ಣ ವಿವರಕ್ಕಾಗಿ ಅಭ್ಯರ್ಥಿಗಳು  ಅಧಿಸೂಚನೆಯನ್ನು ಪರಿಶೀಲಿಸಿ.

Age limit-ವಯೋಮಿತಿ ಅರ್ಹತೆಗಳು - ಅರ್ಜಿ ಸಲ್ಲಿಸುವವರು ಕನಿಷ್ಠ 28 ವರ್ಷದಿಂದ 50 ವರ್ಷದ ಒಳಗಿನ ಅಭ್ಯರ್ಥಿಗಳಾಗಿರಬೇಕು.

ಇದನ್ನೂ ಓದಿ: Birth certificate-ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರ ಪಡೆಯುವುದು ಭಾರೀ ಸುಲಭ!

ವೇತನ ಶ್ರೇಣಿ / Pay Scale - ₹22,000/- ರಿಂದ ₹75,000/- ವರೆಗೆ 

ನೇರ ಸಂದರ್ಶನ ನಡೆಯುವ ಸಮಯ ಮತ್ತು ವಿಳಾಸ : 

ಈ ಹುದ್ದೆಗಳ ನೇಮಕಾತಿಯು ಹುದ್ದೆಗಳಿಗೆ ಅನುಗುಣವಾಗಿ ನಿಗದಿಪಡಿಸಿದ ದಿನಾಂಕ ಜುಲೈ 12 ರಿಂದ ಜುಲೈ 16ನೇ ತಾರೀಖಿನವರೆಗೆ, ಬೆಳಗ್ಗೆ 9:30 ಯಿಂದ ಮದ್ಯಾಹ್ನ 12:30 ರವರೆಗೆ ಕೆಳಗಿನ ವಿಳಾಸದಲ್ಲಿ ನಡೆಯುತ್ತದೆ.   

ವಿಳಾಸ: ಜಿಎಸ್‌ಡಿ ಕಾಂಪ್ಲೆಕ್ಸ್‌, ಸಹರ್ ಪೊಲೀಸ್‌ ಠಾಣಾ ಹತ್ತಿರ, ಸಿಎಸ್‌ಎಂಐ ಏರ್‌ಪೋರ್ಟ್‌, ಟರ್ಮಿನಲ್-1, ಗೇಟ್‌ ನಂಬರ್-5, ಸಹರ್, ಅಂಧೇರಿ - ಪೂರ್ವ, ಮುಂಬೈ-400099

ಅರ್ಜಿ ಸಲ್ಲಿಸುವ ಮಾಹಿತಿ: ಅರ್ಜಿ ಸಲ್ಲಿಸಲು ಅರ್ಹರಿರುವ ಅಭ್ಯರ್ಥಿಗಳು ಕೆಳಗಿನ ಅಧಿಸೂಚನೆಯಲ್ಲಿ ಸಿಗುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿರಿ.

ಇದನ್ನೂ ಓದಿ: PNB Recruitment 2024 - ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 7ನೇ ತರಗತಿ ಪಾಸಾದವರಿಗೆ ಅವಕಾಶ!

ಸಂಸ್ಥೆಯ ಅಧಿಕೃತ ಜಾಲತಾಣ: https://www.aiasl.in/
• ಅಧಿಸೂಚನೆ : ಡೌನ್ಲೋಡ್