Akrama-sakrama yojana: ಕೃಷಿ ಪಂಪ್ ಸೆಟ್ ಅಕ್ರಮ ಸಕ್ರಮ ಯೋಜನೆ ಕುರಿತು ಹೊಸ ಆದೇಶ ಹೊರಡಿಸಿದ ರಾಜ್ಯ ಸರಕಾರ!

pumpset Akrama sakrama yojana: ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಒದಗಿಸಲು ಅಕ್ರಮ ಸಕ್ರಮ ಯೋಜನೆ ಕುರಿತು ರಾಜ್ಯ ಸರಕಾರದಿಂದ ಹೊಸ ಆದೇಶ ಹೊರಡಿಸಿಲಾಗಿದೆ. ಈ ಆದೇಶದಲ್ಲಿ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್ ಚಾಲಿತ ಕೃಷಿ ಪಂಪ್ ಸೆಟ್ಅನ್ನು ಅಳವಡಿಕೆ ಮಾಡಿಕೊಳ್ಳಲು ರೈತರಿಗೆ ಒದಗಿಸುವ ಸಹಾಯಧನ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ.

Akrama-sakrama yojana: ಕೃಷಿ ಪಂಪ್ ಸೆಟ್ ಅಕ್ರಮ ಸಕ್ರಮ ಯೋಜನೆ ಕುರಿತು ಹೊಸ ಆದೇಶ ಹೊರಡಿಸಿದ ರಾಜ್ಯ ಸರಕಾರ!
Akrama sakrama yojana-2023

ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಒದಗಿಸಲು ಅಕ್ರಮ ಸಕ್ರಮ ಯೋಜನೆ ಕುರಿತು ರಾಜ್ಯ ಸರಕಾರದಿಂದ ಹೊಸ ಆದೇಶ ಹೊರಡಿಸಿಲಾಗಿದೆ. ಈ ಆದೇಶದಲ್ಲಿ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್ ಚಾಲಿತ ಕೃಷಿ ಪಂಪ್ ಸೆಟ್ಅನ್ನು ಅಳವಡಿಕೆ ಮಾಡಿಕೊಳ್ಳಲು ರೈತರಿಗೆ ಒದಗಿಸುವ ಸಹಾಯಧನ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ.

ಹೊಸ ಆದೇಶದ ಪ್ರಕಾರ ಇನ್ನು ಮುಂದೆ ರಾಜ್ಯದ ಎಲ್ಲಾ ಎಸ್ಕಾಂ ವತಿಯಿಂದ ವಿದ್ಯುತ್ ಜಾಲದಿಂದ 500 ಮೀಟರ್ ಗಿಂತ ಸಮೀಪದಲ್ಲಿರುವ ಕೃಷಿ ಪಂಪ್ಸೆಟ್ ಗಳಿಗೆ ನೇರವಾಗಿ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಲಿದೆ, ಇದಕ್ಕಿಂದ ಹೆಚ್ಚಿಗೆ ಅಂದರೆ 500 ಮೀಟರ್ ಗಿಂತ ದೂರದ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಇಂಧನ ಇಲಾಖೆಯ ಹೊಸ ಆದೇಶದಲ್ಲಿ ಉಲ್ಲೇಖಿಸಲಾಗಿದೆ. 

ಈ ಹಿಂದೆ ಸೋಲಾರ್ ಚಾಲಿತ ಪಂಪ್ ಸೆಟ್ ಗಳ ಅಳವಡಿಸಲು ಕೇಂದ್ರ ಸರ್ಕಾರ ಶೇಕಡ 30ರಷ್ಟು ಸಹಾಯಧನ ನೀಡುತಿತ್ತು. ಇದಕ್ಕೆ ರಾಜ್ಯ ಸರ್ಕಾರವು ಹೆಚ್ಚುವರಿ ಶೇ. 30 ಸಹಾಯಧನ ನೀಡುತಿತ್ತು ಈಗ ಈ ಸಹಾಯಧನ ಮೊತ್ತವನ್ನು ಶೇ.50ಕ್ಕೆ ಹೆಚ್ಚಳ ಮಾಡಲಾಗಿದ್ದು, ಉಳಿದ ಶೇ. 20ರಷ್ಟು ಮೊತ್ತವನ್ನು ರೈತರು ಭರಿಸಬೇಕಿದೆ. ವಿದ್ಯುತ್ ಸಂಪರ್ಕಕ್ಕೆ ರೈತರು ಈಗಾಗಲೇ ಪಾವತಿಸಿದ ಮೊತ್ತವನ್ನು ಅವರ ಪಾಲಿನ ವಂತಿಗೆಯಾಗಿ ಪರಿಗಣಿಸುವಂತೆ ಇಂಧನ ಇಲಾಖೆ ತಿಳಿಸಿದೆ.

ಸೌರ ವಿದ್ಯುತ್ ಚಾಲಿತ ಪಂಪ್ಸೆಟ್ ಅಳವಡಿಸಿದ ನಂತರ ಅಂತಹ ರೈತರು ವಿದ್ಯುತ್ ಜಾಲದಿಂದ ಪಡೆದ ಸಂಪರ್ಕವನ್ನು ಕಡಿತಗೊಳಿಸಬೇಕು. ಸ್ಥಳೀಯ ಬೇಡಿಕೆಗೆ ಅನುಗುಣವಾಗಿ 10 ಹೆಚ್.ಪಿ. ವರೆಗಿನ ಸೌರ ವಿದ್ಯುತ್ ಚಾಲಿತ ಪಂಪ್ಸೆಟ್ ಅಳವಡಿಸಬಹುದು. ಆದರೆ 7.5 ಹೆ.ಪಿ. ವರೆಗೆ ಮಾತ್ರ ಸಹಾಯಧನ ಸೀಮಿತವಾಗಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: PMSBY Insurance Scheme- ವರ್ಷಕ್ಕೆ 20 ರೂ ಪಾವತಿಸಿ 2 ಲಕ್ಷ  ವಿಮಾ ಸೌಲಭ್ಯ  ಪಡೆಯಲು ಅರ್ಜಿ ಆಹ್ವಾನ!

Pumpset Akrama sakrama yojana- ಹೊಸ ಆದೇಶದ ವಿವರ ಹೀಗಿದೆ:

ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಚರ್ಚೆಯ ನಂತರ, ಈ ಹಿಂದೆ ಅನಧಿಕೃತ ನೀರಾವರಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಪದ್ಧತಿಯನ್ನು ಕೂಡಲೇ ಬದಲಿಸಿ, ಹೊಸದಾಗಿ ಪದ್ಧತಿಯನ್ನು ಜಾರಿಗೆ ತರಲು ಸಚಿವ ಸಂಪುಟವು ತೀರ್ಮಾನಿಸಿತು. ಅದರಂತೆ ಈ ಕೆಳಕಂಡಂತೆ ಆದೇಶಿಸಿದೆ.

ರಾಜ್ಯದಲ್ಲಿ ನೀರಾವರಿ ಪಂಪ್‌ಸೆಟ್‌ಗಳನ್ನು ವಿದ್ಯುತ್ ಜಾಲಕ್ಕೆ ವ್ಯವಸ್ಥಿತವಾಗಿ ಸೇರ್ಪಡೆಗೊಳಿಸಲು ಮತ್ತು ಸೌರ ವಿದ್ಯುತ್ತನ್ನು ಸಮರ್ಪಕವಾಗಿ ಬಳಸಲು stand-alone /off grid ಸೋಲಾರ್ ಪಂಪ್‌ಸೆಟ್‌ಗಳನ್ನು ಹಾಗೂ IP set ಫೀಡರ್‌ಗಳ ಸೌರೀಕರಣವನ್ನು ಅನುಷ್ಠಾನಗೊಳಿಸಿ ರೈತರ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆ ವಿದ್ಯುತ್‌ ಸೌಕರ್ಯ ಕಲ್ಪಿಸಲು ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದ.

(1) ವಿದ್ಯುತ್ ಸರಬರಾಜು ಕಂಪನಿಗಳು 2015 ರಿಂದ ಈಚೆಗೆ IP ಸೆಟ್‌ಗಳನ್ನು ಸಕ್ರಮಗೊಳಿಸಿ, ಮೂಲಸೌಕರ್ಯ ರಚಿಸಲು ಕೈಗೊಂಡಿರುವ ಕ್ರಮಕ್ಕಾಗಿ ಘಟನೋತ್ತರ ಅನುಮೋದನೆ ನೀಡಿದ.

(2) ವಿದ್ಯುತ್ ಸರಬರಾಜು ಕಂಪನಿಗಳು 2015 ರಿಂದ ಈಚೆಗೆ ಬಂಡವಾಳ ವೆಚ್ಚದಲ್ಲಿ ಸಕ್ರಮಗೊಂಡ/ಸಾಮಾನ್ಯ IP ಸೆಟ್‌ಗಳಿಗೆ ವಿದ್ಯುತ್ ಮೂಲಸೌಕರ್ಯ ಕಲ್ಪಿಸಿರುವುದಕ್ಕೆ ಘಟನೋತ್ತರ ಅನುಮೋದನೆ ನೀಡಿದ.

ದಿನನಿತ್ಯ ಈ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್> WhatsApp channel ಮಾಡಿ ಕೃಷಿಕಮಿತ್ರ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ.

(3) ವಿದ್ಯುತ್ ಸರಬರಾಜು ಕಂಪನಿಗಳು ಸಕ್ರಮಗೊಳಿಸಿದ ಕೃಷಿ ಪಂಪ್‌ಸೆಟ್‌ಗಳಿಗೆ 2022-23 ಮತ್ತು 2023-24 ರಲ್ಲಿ ಟೆಂಡರ್ ಮೂಲಕ ಮೂಲಸೌಕರ್ಯಗಳನ್ನು ಕಲ್ಪಿಸುವ ಸಲುವಾಗಿ ಟೆಂಡರ್ ಕರೆಯಲಾದ ಅಂದಾಜುಪಟ್ಟಿಯನ್ನು ಪುನರ್ ಪರಿಶೀಲಿಸಿ, ಪಂಪ್‌ಸೆಟ್‌ಗಳು ಹಾಲಿ ಇರುವ ವಿದ್ಯುತ್ ಜಾಲದಿಂದ 500 ಮೀಟರ್‌ಯಿಂದಾಚೆಯಿದ್ದಲ್ಲಿ ಕ್ರಮಸಂಖ್ಯೆ (5) ರಂತ ಕಾಮಗಾರಿಗಳನ್ನು ಕೈಗೊಳ್ಳುವುದು ಮತ್ತು 500 ಮೀಟರ್ ಒಳಗಿರುವ ಪಂಪ್‌ಸೆಟ್‌ಗಳಿಗೆ ಕನಿಷ್ಠ ಅವಶ್ಯಕತೆಗೆ ತಕ್ಕಂತೆ ಅನುಷ್ಠಾನಗೊಳಿಸಲು ಕ್ರಮವಹಿಸುವುದು.

(4) ದಿನಾಂಕ 22.9.2023 ರೊಳಗೆ ನೋಂದಾಯಿಸಲ್ಪಟ್ಟ IP set ಸಂಖ್ಯೆಗಳನ್ನು ಕೂಡಲೇ ಧೃಡಪಡಿಸಿಕೊಂಡು ಟೆಂಡರ್ ಕರೆಯಬೇಕಾದ ಕಾಮಗಾರಿಗಳನ್ನು ನಿಯಮಾನುಸಾರ ಕ್ರಮವಹಿಸಲು ಅನುಮೋದಿಸಿದೆ.

(5) ಈಗಾಗಲೇ ನೋಂದಣಿಗೊಂಡು ಮೂಲಸೌಕರ್ಯ ರಚನೆಗೆ ಕಾಯುತ್ತಿರುವ ಅಥವಾ ಹೊಸದಾಗಿ ನೋಂದಣಿಗೊಳ್ಳುವ ಪಂಪ್‌ಸೆಟ್‌ಗಳು, ವಿದ್ಯುತ್ ಜಾಲದಿಂದ 500ಮೀಟರ್‌ಯಿಂದಾಚೆ ಇದ್ದಲ್ಲಿ, stand-alone/off-grid solar ಪಂಪ್‌ಸೆಟ್ ಅಳವಡಿಸಲು ಸೂಚಿಸಿದ. ಸೌರ ಪಂಪ್‌ಸೆಟ್‌ಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರದಿಂದ ಶೇ.30 ರಷ್ಟು ಸಹಾಯಧನ ಅಲ್ಲದ ರಾಜ್ಯ ಸರ್ಕಾರದಿಂದ ಶೇಕಡ 30 ರಷ್ಟು ಇರುವ ಸಹಾಯಧನವನ್ನು ಶೇಕಡ 50ಕ್ಕೆ ಹೆಚ್ಚಿಸಿ ಸರ್ಕಾರ ಅನುಮೋದಿಸಿದೆ. ರೈತರು ಈಗಾಗಲೇ ವಿದ್ಯುತ್ ಸಂಪರ್ಕಕ್ಕಾಗಿ ಮೊತ್ತವನ್ನು ಪಾವತಿಸಿದರೆ, ಪಾವತಿಸಿದ ಮೊತ್ತವನ್ನು ರೈತರ ವಂತಿಗೆ ಎಂದು ಪರಿಗಣಿಸಿ, ಸೌರ ಪಂಪ್‌ಸೆಟ್‌ಗಳನ್ನು ಅಳವಡಿಸುವುದು.

ಇದನ್ನೂ ಓದಿ: 3 phase current- ರೈತರಿಗೆ ಗುಡ್ ನ್ಯೂಸ್ ಈ ದಿನದಿಂದ ಕೃಷಿ ಪಂಪ್ ಸೆಟ್ ಗೆ 7 ತಾಸು 3 ಫೇಸ್‌ ಕರೆಂಟ್!

(6) Stand-alone/off-grid solar ಪಂಪ್ ಸೆಟ್ ಸೌಲಭ್ಯವನ್ನು ಸ್ಥಳೀಯ ಅವಶ್ಯಕತೆಯಂತೆ ಗುರುತು ಮಾಡಿ 10 HP ಸಾಮರ್ಥ್ಯಕ್ಕೆ ಮಿತಿಗೊಳಿಸುವುದು, ಆದಾಗ್ಯೂ MNRE ಷರತ್ತುಗಳ ಪ್ರಕಾರ 7.5 HP ಸಾಮರ್ಥ್ಯಕ್ಕೆ ಅನುಗುಣವಾಗಿ ಸಬ್ಸಿಡಿ/ಅನುದಾನವು ಸೀಮಿತವಾಗಿರುತ್ತದೆ.

(7) ರೈತರು Stand-alone/off-grid solar ಪಂಪ್‌ಸೆಟ್‌ ಅಳವಡಿಸಿಕೊಂಡ ನಂತರ, ಅಂತಹ ಪಂಪ್ ಸೆಟ್ ಗಳನ್ನು GRID POWER ಜಾಲದ ಸಂಪರ್ಕದಿಂದ ಕಡಿತಗೊಳಿಸಲು ಎಲ್ಲಾ ESCOM ಗಳು ಕ್ರಮವಹಿಸುವುದು.

(8) ಇಲಾಖೆಯಿಂದ ಇಲಾಖೆಗೆ ಶುಲ್ಕರಹಿತ ವರ್ಗಾವಣೆ ಆಧಾರದ ಮೇಲೆ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆಯಿಂದ ಇಂಧನ ಇಲಾಖೆಗೆ ಪಡೆಯುವ ಮೂಲಕ ಸಬ್‌ಸ್ಟೇಷನ್‌ನ ಬಳಿ RESCO ಮಾದರಿಯಡಿಯಲ್ಲಿ KUSUM-C ಪುಕಾರ ಫೀಡರ್ ಸೌರೀಕರಣ ಅನುಷ್ಠಾನಗೊಳಿಸುವುದು.

(9) KERC ನೀಡಿರುವ ಕಾಲಮಿತಿಯೊಳಗೆ ಎಲ್ಲಾ IP ಸೆಟ್ ಗಳನ್ನು ಎಣಿಕೆ ಮಾಡಿ ಅವುಗಳನ್ನು ಆಯಾ ರೈತರ ಆಧಾರ್ ಸಂಖ್ಯೆಗೆ ಲಿಂಕ್ ಮಾಡಲು ESCOM ಗಳು ಅಗತ್ಯ ಕ್ರಮ ತೆಗೆದುಕೊಂಡು ಪೂರ್ಣಗೊಳಿಸುವುದು.

(10) ದಿನಾಂಕ: 22.9.2023ರ ನಂತರ ನೋಂದಾಯಿಸಲ್ಪಡುವ IP ಸೆಟ್‌ಗಳಿಗೆ ಮೂಲಸೌಕರ್ಯವನ್ನು ರೈತರು ಸ್ವಯಂ-ಕಾರ್ಯನಿರ್ವಹಣೆಯಡಿ' (self- execution) ರಚಿಸಿಕೊಳ್ಳತಕ್ಕದ್ದು.

ನೀರಾವರಿ ಪಂಪ್‌ಸೆಟ್‌ಗಳ ಬಗ್ಗೆ, ಈ ಹಿಂದೆ ಹೊರಡಿಸಲಾಗಿದ್ದ ಎಲ್ಲಾ ಸರ್ಕಾರಿ ಆದೇಶ/ಸುತ್ತೋಲೆಗಳನ್ನು ಹಿಂಪಡೆಯಲಾಗಿದೆ.

ಇದನ್ನೂ ಓದಿ:  Crop insurance status- ಶೀಘ್ರದಲ್ಲೇ ರೈತರ ಖಾತೆಗೆ ಮಧ್ಯಂತರ ಬೆಳೆ ವಿಮೆ! ಈ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಅರ್ಜಿ ಸ್ಥಿತಿ ಚೆಕ್ ಮಾಡಿ.

ಆದೇಶದ ಮೂಲ ಪ್ರತಿ: