Annabhagya amount-2024: ಈ ಪಟ್ಟಿಯಲ್ಲಿರುವವರಿಗೆ ಅನ್ನಭಾಗ್ಯ ಹಣ ಬಿಡುಗಡೆ! ಇಲ್ಲಿದೆ ಅಧಿಕೃತ ವೆಬ್ಸೈಟ್ ಲಿಂಕ್.

ಆಹಾರ ಇಲಾಖೆಯಿಂದ ಅಕ್ಕಿ ಬದಲು ನೀಡುವ ಎಪ್ರಿಲ್-2024 ತಿಂಗಳ ಅರ್ಥಿಕ ಸಹಾಯಧನ ಹಣವನ್ನು(Annabhagya amount) ಅರ್ಹ ಪಡಿತರ ಚೀಟಿಯ ಗ್ರಾಹಕರಿಗೆ ಜಮಾ ಮಾಡಲಾಗಿದೆ. ನಿಮ್ಮ ಬ್ಯಾಂಕ್ ಖಾತೆಗೆ ಈ ಹಣ ಜಮಾ ಅಗಿರುವುದನ್ನು ಹೇಗೆ ಖಚಿತಪಡಿಸಿಕೊಳ್ಳುವುದು ಮತ್ತು ಯಾರೆಲ್ಲ ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರು(Annabhagya beneficiary list) ಎಂದು ಈ ಕೆಳಗೆ ವಿವರಿಸಿದೆ.

Annabhagya amount-2024: ಈ ಪಟ್ಟಿಯಲ್ಲಿರುವವರಿಗೆ ಅನ್ನಭಾಗ್ಯ ಹಣ ಬಿಡುಗಡೆ! ಇಲ್ಲಿದೆ ಅಧಿಕೃತ ವೆಬ್ಸೈಟ್ ಲಿಂಕ್.
Annabhagya amount status check in mobile

ಆಹಾರ ಇಲಾಖೆಯಿಂದ ಅಕ್ಕಿ ಬದಲು ನೀಡುವ ಎಪ್ರಿಲ್-2024 ತಿಂಗಳ ಅರ್ಥಿಕ ಸಹಾಯಧನ ಹಣವನ್ನು(Annabhagya amount) ಅರ್ಹ ಪಡಿತರ ಚೀಟಿಯ ಗ್ರಾಹಕರಿಗೆ ಜಮಾ ಮಾಡಲಾಗಿದೆ. ನಿಮ್ಮ ಬ್ಯಾಂಕ್ ಖಾತೆಗೆ ಈ ಹಣ ಜಮಾ ಅಗಿರುವುದನ್ನು ಹೇಗೆ ಖಚಿತಪಡಿಸಿಕೊಳ್ಳುವುದು ಮತ್ತು ಯಾರೆಲ್ಲ ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರು(Annabhagya beneficiary list) ಎಂದು ಈ ಕೆಳಗೆ ವಿವರಿಸಿದೆ.

ಪಡಿತರ ಚೀಟಿ ಹೊಂದಿರುವ ಗ್ರಾಹಕರು ತಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆಯನ್ನು ನೇರವಾಗಿ ಭೇಟಿ ಮಾಡದೇ ಮನೆಯಲ್ಲಿ ಕುಳಿತು ನಿಮ್ಮ ಮೊಬೈಲ್ ನಲ್ಲೇ ಎಪ್ರಿಲ್-2024 ತಿಂಗಳ  ಅಕ್ಕಿ ಬದಲು ನೀಡುವ ಹಣ ನಿಮಗೆ ವರ್ಗಾವಣೆ ಅಗಿದೆಯೇ? ಎಂದು ಹೇಗೆ ಚೆಕ್ ಮಾಡಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದಲ್ಲದೇ ಯಾರಿಗೆಲ್ಲ ಎಪ್ರಿಲ್-2024 ತಿಂಗಳ ಅರ್ಥಿಕ ಸಹಾಯಧನ ಸಿಗಲಿದೆ ಮತ್ತು ಅರ್ಹರ ಪಟ್ಟಿಯನ್ನು ಆಹಾರ ಇಲಾಖೆಯ ಅಧಿಕೃತ ಜಾಲತಾಣ ಭೇಟಿ ಮಾಡಿ ಯಾವ ವಿಧಾನ ಅನುಸರಿಸಿ ಪಡೆಯಬೇಕು ಎನ್ನುವ ಮಾಹಿತಿಯನ್ನು ಸಹ ತಿಳಿಸಲಾಗಿದೆ.

ಇದನ್ನೂ ಓದಿ: Parihara amount-2024: ಕೇಂದ್ರದಿಂದ 3498 ಕೋಟಿ ಬರ ಪರಿಹಾರ ಬಿಡುಗಡೆ! ಈ ಪಟ್ಟಿಯಲ್ಲಿರುವ ರೈತರಿಗೆ ಸಿಗಲಿದೆ ಪರಿಹಾರದ ಹಣ!

Annabhagya beneficiary list- ಈ ಪಟ್ಟಿಯಲ್ಲಿರುವವರಿಗೆ ಎಪ್ರಿಲ್-2024 ತಿಂಗಳ ಅನ್ನಭಾಗ್ಯ ಹಣ:

ಆಹಾರ ಇಲಾಖೆಯ ಅಧಿಕೃತ ಈ ವೆಬ್ಸೈಟ್ ಅನ್ನು ನಿಮ್ಮ ಮೊಬೈಲ್ ಮೂಲಕ ನೇರವಾಗಿ ಭೇಟಿ ಮಾಡಿ ಈ ಕೆಳಗಿನ ಹಂತಗಳನ್ನು ಅನುಸರಿಸಿ ಅನ್ನಭಾಗ್ಯ ಯೋಜನೆಯಡಿ ಹಣ ಪಡೆಯಲು ಅರ್ಹರಿರುವ ಪಡಿತರ ಚೀಟಿಯ ಗ್ರಾಹಕರ ಪಟ್ಟಿಯನ್ನು ನೋಡಬಹುದು.

Step-1: ಪಡಿತರ ಚೀಟಿ ಹೊಂದಿರುವ ಗ್ರಾಹಕರು ಪ್ರಥಮದಲ್ಲಿ ಈ Annabhagya beneficiary list ಲಿಂಕ್ ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು. (ಗಮನಿಸಿ: ಮೊಬೈಲ್ ನಲ್ಲಿ ನೋಡುವಾಗ "Desktop view" ಆಯ್ಕೆಯನ್ನು ಕ್ಲಿಕ್ ಮಾಡಿಕೊಂಡು ನೋಡಿದರೆ ಉತ್ತಮ) ಬಳಿಕ ಈ ಪುಟದಲ್ಲಿ "ಇ-ಸೇವೆಗಳು" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ಇದಾದ ಬಳಿಕ "ಇ-ಪಡಿತರ ಚೀಟಿ" ವಿಭಾಗದ ಮೇಲೆ ಒತ್ತಿ ಅಲ್ಲೇ ಕೆಳಗೆ ತೋರಿಸುವ "ಹಳ್ಳಿ ಪಟ್ಟಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿ ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಂಡು "GO" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ರೇಷನ್ ಕಾರ್ಡ ಪಡೆಯಲು ಅರ್ಹರಿರುವ ಕಾರ್ಡದಾರರ RC number, ಹೆಸರು, ವಿಳಾಸ, ಪಡಿತರ ಚೀಟಿ ವಿಧ, ಮತ್ತು ಪಡಿತರ ಚೀಟಿಯಲ್ಲಿ ಎಷ್ಟು ಜನ ಸದಸ್ಯರಿದ್ದರೆ ಎಂದು ತೋರಿಸುತ್ತದೆ. ಈ ಪಟ್ಟಿಯಲ್ಲಿರುವವರಿಗೆ ಪಡಿತರ ದಾನ್ಯ ಮತ್ತು ಅಕ್ಕಿ ಹಣ ಪಡೆಯಲು ಅರ್ಹರು ಎಂದು.

ಇದನ್ನೂ ಓದಿ: Bara parihara list-2024: ಬರ ಪರಿಹಾರ ಹಣ ಬಿಡುಗಡೆಯಾದ ರೈತರ ಪಟ್ಟಿ ಬಿಡುಗಡೆ!

Annabhagya status check-2024: ನಿಮ್ಮ ಬ್ಯಾಂಕ್ ಖಾತೆಗೆ ಅನ್ನಭಾಗ್ಯ ಹಣ ಜಮಾ ಅಗಿರುವುದನ್ನು ಖಚಿತಪಡಿಸಿಕೊಳ್ಳುವುದು ಹೇಗ್?

ಇ-ಆಡಳಿತ ಕಚೇರಿಯಿಂದ ಎಲ್ಲಾ ಸರಕಾರಿ ಯೋಜನೆಗಳ ಅರ್ಥಿಕ ನೆರವಿನ ವರ್ಗಾವಣೆ ಸ್ಥಿತಿಯನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಲು ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ದಿಪಡಿಸಿದ್ದು, ಈ ಕೆಳಗಿನ ಹಂತವನ್ನು ಅನುಸರಿಸಿ ಅನ್ನಭಾಗ್ಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಅಗಿದಿಯಾ? ಎಂದು ಚೆಕ್ ಮಾಡಿಕೊಳ್ಳಬಹುದು.

Step-1: ಫಲಾನುಭವಿ ಗ್ರಾಹಕರು ಪ್ರಥಮದಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ> Download DBT karnataka app ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಇದಾದ ಬಳಿಕ ಗ್ರಾಹಕರ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ ಆಧಾರ್ ಕಾರ್ಡ ನಲ್ಲಿ ನಮೂದಿಸಿರುವ ಮೊಬೈಲ್ ನಂಬರ್ ಗೆ ಬರುವ 6 ಅಂಕಿಯ OTP ಅನ್ನು ನಮೂದಿಸಬೇಕು.(ವಿಶೇಷ ಸೂಚನೆ: ಮೊದಲ ಬಾರಿಗೆ OTP ಬರದೇ ಇದ್ದ ಪಕ್ಷದಲ್ಲಿ resend otp ಬಟನ್ ಮೇಲೆ ಕ್ಲಿಕ್ ಮಾಡಿ ಪುನಃ ಪ್ರಯತ್ನಿಸಿ)

Step-2: ನಂತರ ನಿಮಗೆ ಸದಾ ನೆನಪಿನಲ್ಲಿ ಉಳಿಯುವ ನಾಲ್ಕು ಅಂಕಿಯ ಪಾಸ್ವರ್ಡ(Password)ಅನ್ನು ರಚನೆ ಮಾಡಿಕೊಳ್ಳಬೇಕು. ತದನಂತರ ಫಲಾನುಭವಿಯ ವೈಯಕ್ತಿಕ ವಿವರ ತೋರಿಸುತ್ತದೆ ಕೊನೆಯಲ್ಲಿ ಮೊಬೈಲ್ ನಂಬರ್ ಹಾಕಿ "ಸಲ್ಲಿಸಿ" ಎಂದು ತೋರಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: DBT Payment status- ಆಧಾರ್ ಕಾರ್ಡ ನಂಬರ್ ಹಾಕಿ ಯಾವ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಿಳಿಯಿರಿ!

Step-3: ನಾಲ್ಕು ಸಂಖ್ಯೆಯ ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡ ನಂತರ karnataka DBT ಮೊಬೈಲ್ ಅಪ್ಲಿಕೇಶನ್ ಮುಖಪುಟ ಭೇಟಿ ಮಾಡಿ ಈಗಾಗಲೇ ನೀವು ರಚನೆ ಮಾಡಿಕೊಂಡಿರುವ ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ನಮೂದಿಸಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಕಾಣುವ "ಪಾವತಿ ಸ್ಥಿತಿ/Payment Status" ಬಟನ್ ಮೇಲೆ ಕ್ಲಿಕ್ ಮಾಡಿ ನಂತರ "ಅನ್ನಭಾಗ್ಯ ಯೋಜನೆ" ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ಏಪ್ರಿಲ್-2024 ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮಾ ವಿವರವನ್ನು ಪಡೆಯಬಹುದು.