HomeNew postsBele vime-2024: ಆಧಾರ್ ನಂಬರ್ ಹಾಕಿ ಬೆಳೆ ವಿಮೆ ಅರ್ಜಿ ಚೆಕ್ ಮಾಡಲು ಲಿಂಕ್ ಬಿಡುಗಡೆ!

Bele vime-2024: ಆಧಾರ್ ನಂಬರ್ ಹಾಕಿ ಬೆಳೆ ವಿಮೆ ಅರ್ಜಿ ಚೆಕ್ ಮಾಡಲು ಲಿಂಕ್ ಬಿಡುಗಡೆ!

ರೈತರು ತಮ್ಮ ಮೊಬೈಲ್ ನಲ್ಲಿ ಆಧಾರ್ ಕಾರ್ಡ ನಂಬರ್ ಹಾಕಿ ಬೆಳೆ ವಿಮೆ(Bele vime-2024) ಅರ್ಜಿ ಸ್ಥಿತಿಯನ್ನು ಹೇಗೆ  ಚೆಕ್ ಮಾಡಿಕೊಳ್ಳಬಹುದು ಎಂದು ಈ ಕೆಳಗೆ ವಿವರಿಸಲಾಗಿದೆ.

ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಬೆಳೆ ವಿಮೆ ಪರಿಹಾರದ(bele vime parihara) ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದ್ದು ರೈತರು ತಮ್ಮ ಅಧಾರ್ ಕಾರ್ಡ ನಂಬರ್ ಹಾಕಿ ತಮಗೆ ಎಷ್ಟು ಬೆಳೆ ವಿಮೆ ಪರಿಹಾರ ಬಂದಿದೆ ಎಂದು ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಲುವುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಸರಕಾರದಿಂದ ಬೆಳೆ ವಿಮೆ ಅರ್ಜಿಗಳ ನಿರ್ವವಣೆಗೆ ಸಿದ್ದಪಡಿಸಿರುವ samrakshane ಅಧಿಕೃತ ಪೋರ್ಟಲ್ ಅನ್ನು ಆಂಡ್ರಾಯ್ಡ್ ಮೊಬೈಲ್ ಮೂಲಕ ಪ್ರವೇಶ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಅರ್ಜಿದಾರ ರೈತರ ಆಧಾರ್ ಕಾರ್ಡ ನಂಬರ್ ಅನ್ನು ನಮೂದಿಸಿ ಬೆಳೆ ವಿಮೆ ಅರ್ಜಿ ಯಾವ ಹಂತದಲ್ಲಿ? ಬೆಳೆ ವಿಮೆ ಪರಿಹಾರ ಜಮಾ ಅಗಿದ್ದರೆ ಎಷ್ಟು ಜಮಾ ಅಗಿದೆ? ಜೊತೆಗೆ ಬೆಳೆ ವಿಮೆ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ: Bele vime Claim enquiry- ನಿಮ್ಮ ಬೆಳೆ ವಿಮೆ ಅರ್ಜಿ ಸ್ಥಿತಿ ಕುರಿತು ಯಾರಲ್ಲಿ ವಿಚಾರಿಸಬೇಕು?

Bele vime parihara status- ಆಧಾರ್ ನಂಬರ್ ಹಾಕಿ ಬೆಳೆ ವಿಮೆ ಅರ್ಜಿ ಚೆಕ್ ಮಾಡಲು ಲಿಂಕ್:

Step-1: ಮೊದಲಿಗೆ ಈ Bele vime parihara status ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ samrakshane ವೆಬ್ ಪೋರ್ಟಲ್ ಅನ್ನು ಭೇಟಿ ಮಾಡಬೇಕು ಇದಾದ ಬಳಿಕ ಇಲ್ಲಿ ಬೆಳೆ ವಿಮೆ ಮಾಡಿಸಿದ ವರ್ಷ ಆಯ್ಕೆಯಲ್ಲಿ ನೀವು ಯಾವ ವರ್ಷದ ಬೆಳೆ ವಿಮೆ ಅರ್ಜಿ ಸ್ಥಿತಿ ನೋಡಲು ಇಚ್ಚೆಪಡುತ್ತಿರೋ ಆ ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು ಉದಾಹರಣೆ 2023-24 ಎಂದು ಆಯ್ಕೆ ಮಾಡಿಕೊಂಡು ಮುಂಗಾರು ಹಂಗಾಮಿನ ಬೆಳೆ ವಿಮೆ ಅರ್ಜಿಗೆ “Kharif”ಎಂದು ಆಯ್ಕೆ ಮಾಡಿಕೊಳ್ಳಬೇಕು, ಹಿಂಗಾರು ಇದ್ದಲಿ “rabi” ಬೇಸಿಗೆ ಹಂಗಾಮಿನ ಅರ್ಜಿ ಕುರಿತು ತಿಳಿಯಲು “summer” ಎಂದು ಆಯ್ಕೆ ಮಾಡಿಕೊಂಡು ಅಲ್ಲೇ ಕೆಳಗೆ ಕಾಣುವ “ಮುಂದೆ/Go” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ಮೇಲಿನ ಹಂತ ಪೂರ್ಣಗೊಳಿಸಿದ ನಂತರ ಈ ಪೇಜ್ ನಲ್ಲಿ ಕೆಳಗಡೆ Farmers ವಿಭಾಗದಲ್ಲಿ “Check status” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಬಳಿಕ “Check status by type” ಆಯ್ಕೆ ವಿಭಾಗದಲ್ಲಿ “Aadhaar” ಎಂದು ಕ್ಲಿಕ್ ಮಾಡಿಕೊಂಡು ಅರ್ಜಿದಾರ ರೈತರ ಆಧಾರ್ ಕಾರ್ಡ ನಂಬರ್ ಅನ್ನು ನಮೂದಿಸಿ ಕೆಳಗೆ ಕಾಣುವ Captcha ಕೋಡ್ ಅನ್ನು ಹಾಕಿ” Search” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಅಗ ಅರ್ಜಿದಾರರ ಬೆಳೆ ವಿಮೆ ಅರ್ಜಿಯ ವಿವರ ಕೆಳಗೆ ತೋರಿಸುತ್ತದೆ. ಈ ಅರ್ಜಿ ವಿವರದ ಕೊನೆಯಲ್ಲಿ ಕಾಣುವ Select ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ನಂತರ ಈ ಪೇಜ್ ನಲ್ಲಿ ನಿಮಗೆನಾದರು ಬೆಳೆ ವಿಮೆ ಪರಿಹಾರದ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಅಗಿದ್ದರೆ UTR Details ಕೆಳಗಡೆ ಯಾವ ದಿನ ಹಣ ಜಮಾ ಅಗಿದೆ? ಎಷ್ಟು ಮೊತ್ತ? UTR ನಂಬರ್ ಇತರೆ ವಿವರ ತೋರಿಸುತ್ತದೆ.

ಇದನ್ನೂ ಓದಿ: Bele vime status-2024: ಇಲ್ಲಿದೆ ಸರ್ವೆ ನಂಬರ್ ಹಾಕಿ ಎಷ್ಟು? ಬೆಳೆ ವಿಮೆ ಬಂದಿದೆ ಎಂದು ಚೆಕ್ ಮಾಡುವ ವಿಧಾನ! 

ಬೆಳೆ ವಿಮೆ ಪೂರಕ ಉಪಯುಕ್ತ ಲಿಂಕ್ ವಿವರ:

Bele vime mahiti- ಬೆಳೆ ವಿಮೆ ಪೂರಕ ನಮ್ಮ ಪುಟದ ಇತರ ಉಪಯುಕ್ತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: Read Now

Bele vime website- ಬೆಳೆ ವಿಮೆ ಅಧಿಕೃತ ಸಂರಕ್ಷಣೆ ವೆಬ್ಸೈಟ್: Click here

Most Popular

Latest Articles

- Advertisment -

Related Articles