HomeNew postsBele vime status-2024: ಇಲ್ಲಿದೆ ಸರ್ವೆ ನಂಬರ್ ಹಾಕಿ ಎಷ್ಟು? ಬೆಳೆ ವಿಮೆ ಬಂದಿದೆ ಎಂದು...

Bele vime status-2024: ಇಲ್ಲಿದೆ ಸರ್ವೆ ನಂಬರ್ ಹಾಕಿ ಎಷ್ಟು? ಬೆಳೆ ವಿಮೆ ಬಂದಿದೆ ಎಂದು ಚೆಕ್ ಮಾಡುವ ವಿಧಾನ!

ರೈತರು ಯಾವುದೇ ಕಚೇರಿ ಸುತ್ತಾಡದೆ ತಮ್ಮ ಮನೆಯಲ್ಲಿ ಕುಳಿತು ಮೊಬೈಲ್ ನಲ್ಲಿಯೇ ಬೆಳೆ ವಿಮೆ ಜಮಾ ವಿವರ(Bele vime status-2024) ಮತ್ತು ಅರ್ಜಿ ಸ್ಥಿತಿಯನ್ನು(insurance application status) ಜಮೀನಿನ ಸರ್ವೆ ನಂಬರ್ ಹಾಕಿ ಹೇಗೆ ತಿಳಿದುಕೊಳ್ಳಬಹುದು ಎಂದು ಈ ಕೆಳಗೆ ವಿವರಿಸಲಾಗಿದೆ.

2023 ನೇ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ವಿವಿಧ ಬೆಳೆಗಳ ಬೆಳೆ ನಷ್ಟದ ಸರ್ವೆ ಆಧಾರದ ಮೇಲೆ ಈಗಾಗಲೇ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವಿಮಾ ಕಂಪನಿಗಳು ಬೆಳೆ ವಿಮೆ ಪರಿಹಾರದ ಹಣವನ್ನು ರೈತರ ಖಾತೆಗೆ ನೇರ ನಗದು ವರ್ಗಾವಣೆ(DBT) ಮುಖಾಂತರ ವರ್ಗಾವಣೆ ಮಾಡಲಾಗುತ್ತಿದೆ.

ರೈತರು ಈ ಲೇಖನದಲ್ಲಿ ವಿವರಿಸಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ನಿಮ್ಮ ಜಮೀನಿನ ಸರ್ವೆ ನಂಬರ್ ಅನ್ನು ಹಾಕಿ ನಿಮ್ಮ ಮೊಬೈಲ್ ನಲ್ಲೇ ನಿಮಗೆ ಎಷ್ಟು ಬೆಳೆ ವಿಮೆ ಜಮಾ ಅಗಿದೆ? ಎಂದು ಮತ್ತು ನಿಮ್ಮ ಬೆಳೆ ವಿಮೆ ಅರ್ಜಿ ಯಾವ ಹಂತದಲ್ಲಿದೆ ಎಂದು ಅರ್ಜಿ ಸ್ಥಿತಿಯನ್ನು ಕುಳಿತಲೇ ಯಾವ ಸರಕಾರಿ ಕಚೇರಿ ಅಲೆದಾಡದೇ ತಿಳಿದುಕೊಳ್ಳಬಹುದಾಗಿದೆ. ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ನಮ್ಮನ್ನು ಬೆಂಬಲಿಸಿ.

ಇದನ್ನೂ ಓದಿ: Crop insurance amount-2024: ಈ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ.

How to check crop insurance status-2024: ಸರ್ವೆ ನಂಬರ್ ಹಾಕಿ ಎಷ್ಟು? ಬೆಳೆ ವಿಮೆ ಬಂದಿದೆ ಎಂದು ಚೆಕ್ ಮಾಡುವ ವಿಧಾನ:

ರೈತರು ತಮ್ಮ ಮೊಬೈಲ್ ಮೂಲಕ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಬೆಳೆ ವಿಮೆಯ ಅಧಿಕೃತ samrakshane ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಸರ್ವೆ ನಂಬರ್ ಹಾಕಿ ಎಷ್ಟು? ಬೆಳೆ ವಿಮೆ ಬಂದಿದೆ ಎಂದು ಮತ್ತು ಬೆಳೆ ವಿಮೆ ಅರ್ಜಿ ಸ್ಥಿತಿಯನ್ನು ನೋಡಬಹುದು.

Step-1: ಮೊದಲ ಹಂತದಲ್ಲಿ ಈ Bele vime status check ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಸಂರಕ್ಷಣೆ ಜಾಲತಾಣವನ್ನು ಭೇಟಿ ಮಾಡಬೇಕು. ತದನಂತರ ಇಲ್ಲಿ “ವರ್ಷದ ಆಯ್ಕೆ / Select Insurance Year : 2023-24”    “ಋತು ಆಯ್ಕೆ / Select Insurance Season :    Kharif/ಮುಂಗಾರು” ಎಂದು ಕ್ಲಿಕ್ ಮಾಡಿ “ಮುಂದೆ/Go” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ನಂತರ ಕೆಳಗಡೆ Farmers ಕಾಲಂ ನಲ್ಲಿ ಕೊನೆಯಲ್ಲಿ ಕಾಣುವ “Crop insurance details on survey no” ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

Step-3: ಇದಾದ ಬಳಿಕ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ನಂವರ್ ಹಾಕಿ “Search” ಬಟನ್ ಮೇಲೆ ಕ್ಲಿಕ್ ಮಾಡಿದರೆ ಆ ಸರ್ವೆ ನಂಬರ್ ನಲ್ಲಿರುವ ಎಲ್ಲಾ ರೈತರು ಜಮೀನಿನ ವಿವರ ತೋರಿಸುತ್ತದೆ ನೀವು ಈ ಸರ್ವೆ ನಂಬರ್ ನಲ್ಲಿ ಬೆಳೆದಿರುವ ಬೆಳೆಗೆ ಬೆಳೆ ವಿಮೆ ಮಾಡಿಸಿದ್ದರೆ ಇಲ್ಲಿ ನಿಮ್ಮ ಹೆಸರಿರುವ ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿದರೆ ಕೆಳಗಡೆ ಬೆಳೆ ವಿಮೆ ಅರ್ಜಿಯ Application no, ಅರ್ಜಿ ಸ್ಥಿತಿ ಇತರೆ ವಿವರ ಗೋಚರಿಸುತ್ತದೆ.

ಇದನ್ನೂ ಓದಿ: Railway Recruitment-2024: ಆಗ್ನೇಯ ಮಧ್ಯ ರೈಲ್ವೆಯಲ್ಲಿ 999+ ಹುದ್ದೆಗಳ ಬೃಹತ್ ನೇಮಕಾತಿಗೆ ಅರ್ಜಿ ಅಹ್ವಾನ!

Application no ಮೇಲೆ ಕ್ಲಿಕ್ ಮಾಡಿದರೆ ಇನ್ನು ಹೆಚ್ಚಿನ ಮಾಹಿತಿ ತೋರಿಸುತ್ತದೆ.

ಗಮನಿಸಿ: ನೀವು ಹಾಕಿರುವ ಸರ್ವೆ ನಂಬರ್ ಮೇಲೆ ಬೆಳೆ ವಿಮೆ ಮಾಡಿಸದೇ ಇದ್ದಲ್ಲಿ ಯಾವುದೇ Application no ವಿವರ ತೋರಿಸುವುದಿಲ್ಲ.

Crop insurance status- ಬೆಳೆ ವಿಮೆ Application no ಹಾಕಿ ಬೆಳೆ ವಿಮೆ ಹಣ ಜಮಾ ವಿವರ ತಿಳಿಯುವ ವಿಧಾನ:

ಮೇಲಿನ ವಿಧಾನ ಅನುಸರಿಸಿ ನಿಮ್ಮ ಜಮೀನಿನ ಸರ್ವೆ ನಂಬರ್ ಅನ್ನು ಹಾಕಿ ಬೆಳೆ ವಿಮೆ ಅರ್ಜಿಯ ಅಪ್ಲಿಕೇಶನ್ ನಂಬರ್ ಅನ್ನು ಪಡೆದುಕೊಂಡು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಬೆಳೆ ವಿಮೆ ಹಣ ಜಮಾ ವಿವರ ತಿಳಿಯಬಹುದು.

Step-1: ಪ್ರಥಮದಲ್ಲಿ ಈ Crop insurance status ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂರಕ್ಷಣೆ ಜಾಲತಾಣದ ಮುಖಪುಟವನ್ನು ಭೇಟಿ ಮಾಡಬೇಕು. ತದನಂತರ ಇಲ್ಲಿ “ವರ್ಷದ ಆಯ್ಕೆ / Select Insurance Year : 2023-24”    “ಋತು ಆಯ್ಕೆ / Select Insurance Season :    Kharif/ಮುಂಗಾರು” ಎಂದು ಕ್ಲಿಕ್ ಮಾಡಿ “ಮುಂದೆ/Go” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: High Court Recruitment- ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪದವೀಧರರಿಗೆ ಉದ್ಯೋಗವಕಾಶ! 

Step-2: ನಂತರ ಕೆಳಗಡೆ Farmers ಕಾಲಂ ನಲ್ಲಿ ಕೊನೆಯಲ್ಲಿ ಕಾಣುವ “Status check” ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ “ಬೆಳೆ ವಿಮೆ Application no”, ಕ್ಯಾಪ್ಚ್/Captcha ಕೋಡ್ ಅನ್ನು ಹಾಕಿ Search ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಇಲ್ಲಿ ನಿಮ್ಮ ಬೆಳೆ ವಿಮೆ ಅರ್ಜಿ ವಿವರ ತೋರಿಸುತ್ತದೆ ಅರ್ಜಿದಾರರ ಹೆಸರಿನ ಕೊನೆಯಲ್ಲಿ ಕಾಣುವ Select ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಬೆಳೆ ವಿಮೆ ಜಮಾ ಅಗಿದರೆ ಈ ಕೆಳಗಿನ ಪೋಟೋದಲ್ಲಿ ತೋರಿಸಿರುವ UTR details ಕಾಲಂ ನಲ್ಲಿ ಹಣ ಜಮಾ ವಿವರ ತೋರಿಸುತ್ತದೆ ಒಂದೊಮ್ಮೆ ಕಾಣಿಸಿದೇ ಇದ್ದಲ್ಲಿ ಇನ್ನು ಸಲ್ಪ ದಿನದ ಬಳಿಕ ಮತ್ತೊಮ್ಮೆ ಇದೆ ವಿಧಾನ ಅನುಸರಿಸಿ ಚೆಕ್ ಮಾಡಬೇಕು.

Most Popular

Latest Articles

- Advertisment -

Related Articles