HomeGovt SchemesBirth certificate-ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರ ಪಡೆಯುವುದು ಭಾರೀ ಸುಲಭ!

Birth certificate-ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರ ಪಡೆಯುವುದು ಭಾರೀ ಸುಲಭ!

ಸಾರ್ವಜನಿಕರಿಗೆ ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಲು(Birth certificate application)ಹಳ್ಳಿಯ ಜನರು ನಗರ ಪ್ರದೇಶದ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ರಾಜ್ಯ ಸರಕಾರದಿಂದ ನೂತನ ಕ್ರಮವನ್ನು ಜಾರಿಗೆ ತರಲಾಗಿದ್ದು ಇನ್ನು ಮುಂದೆ ಈ ಪ್ರಮಾಣ ಪತ್ರಗಳನ್ನು ಪಡೆಯಲು ಹಳ್ಳಿಯ ಜನರು ನಗರ ಪ್ರದೇಶದ ಕಚೇರಿಗಳಿಗೆ ಹೋಗುವ ಅಶ್ಯಕತೆ ಇರುವುದಿಲ್ಲ.

ಸರಕಾರದ ಕೆಲವು ಯೋಜನೆಗಳ ಸೌಲಭ್ಯ ಪಡೆಯಲು ನಾಗರಿಕರಿಗೆ ಜನನ-ಮರಣ ಪ್ರಮಾಣ ಪತ್ರಗಳನ್ನು ಒದಗಿಸುವುದು ಕಡ್ಡಾಯ ಮಾಡಲಾಗಿದ್ದು ಈ ಕಾರಣದಿಂದಾಗಿ ಪ್ರಮಾಣ ಪತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ.

ರಾಜ್ಯ ಸರಕಾರದ ನೂತನ ಕ್ರಮವೇನು? ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರವನ್ನು ಎಲ್ಲಿ ಪಡೆಯಬಹುದು? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Free beauty parlour training-30 ದಿನದ ಉಚಿತ ಬ್ಯೂಟಿ ಪಾರ್ಲರ್ ಮ್ಯಾನೇಜಮೆಂಟ್ ತರಬೇತಿಗೆ ಅರ್ಜಿ ಆಹ್ವಾನ!

Grama panchayath Birth certificate application- ಜನನ-ಮರಣ ನೋಂದಣೀ ಮಾಡಲು ಗ್ರಾಮ ಪಂಚಾಯತಿಯಲ್ಲಿ ಅವಕಾಶ:

ಗ್ರಾಮ ಪಂಚಾಯತಿ ಕಾರ್ಯದರ್ಶಿಗೆ ಇನ್ನು ಮುಂದೆ ಜನನ-ಮರಣ ಪ್ರಮಾಣ ಪ್ರತ್ರವನ್ನು ನೋಂದಣಿ ಮಾಡಿಕೊಳ್ಳಲು ಅವಕಾಶ ಒದಗಿಸಲಾಗಿದ್ದು ಸಾರ್ವಜನಿಕರು ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಪಡೆಯಲು ಇನ್ನು ಮುಂದೆ ನಿಮ್ಮ ಹಳ್ಳಿಯ ಗ್ರಾಮ ಪಂಚಾಯತಿಯಲ್ಲೇ ಅರ್ಜಿ ಸಲ್ಲಿಸಬಹುದು. 

How to apply- ನೋಂದಣಿ ಹೇಗೆ?

ಜನನ, ಮರಣದ ನೋಂದಣಿಯನ್ನು ಇನ್ನು ಮುಂದೆ ಗ್ರಾಮ ಪಂಚಾಯಿತಿಯಲ್ಲೇ ಆರಂಭಿಸುವ ಪ್ರಕ್ರಿಯೆ (ಜುಲೈ 1 ರಿಂದ) ಇಂದಿನಿಂದ ಜಾರಿಗೆ ಬರಲಿದೆ.

ಗ್ರಾಮೀಣ ಪ್ರದೇಶದಲ್ಲಿ ಜನನ, ಮರಣ ನೋಂದಣಿ ವ್ಯವಸ್ಥೆಗೆ ಬಲ ತುಂಬುವ ಜೊತೆಗೆ 30 ದಿನದೊಳಗೆ ನೋಂದಾಯಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪನೋಂದಣಾಧಿಕಾರಿಗಳನ್ನಾಗಿ ಸರ್ಕಾರ ನೇಮಿಸಿದೆ.

ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಇನ್ನು ಮುಂದೆ ಜನನ – ಮರಣ ಉಪ ನೋಂದಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ: Guarantee Yojana-2024: ಗೃಹಲಕ್ಷ್ಮಿ ಹಣ ಬಿಡುಗಡೆ ದಿನಾಂಕ ಪ್ರಕಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!

Application fee-ಪ್ರಮಾಣ ಪತ್ರ ಪಡೆಯಲು ಶುಲ್ಕದ ವಿವರ:

ಈ ಕುರಿತು ಜನನ – ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಜನನ – ಮರಣಗಳಾದ 21 ದಿನಗಳ ಒಳಗೆ ನೋಂದಣಿ ಮಾಡಿಕೊಂಡು ಉಚಿತವಾಗಿ ಪ್ರಮಾಣ ಪತ್ರ ವಿತರಿಸಬೇಕು. 

21 ದಿನಗಳ ಬಳಿಕ 30 ದಿನದೊಳಗೆ ನೋಂದಾಯಿಸಿದರೆ- 2 ಶುಲ್ಕ

30 ದಿನಗಳ ತರುವಾಯ ಕಾರ್ಯದರ್ಶಿಗಳು ನೋಂದಣಿ ಮಾಡಬಾರದು ಎಂದು ಸೂಚಿಸಿದೆ. 

ಜನನ- ಮರಣಗಳು ನಡೆದು 30 ದಿನಗಳ ತರುವಾಯ ಮಾಹಿತಿ ನೀಡುವ ಜನನ-ಮರಣಗಳ ನೋಂದಣಿ ಅಧಿಕಾರವನ್ನು ಆಯಾ ಗ್ರಾಮಗಳ ಗ್ರಾಮ ಆಡಳಿತ ಅಧಿಕಾರಿಗೆ ನೀಡಲಾಗಿದೆ. 

ಜನರು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಬೇಕು. ತಹಶೀಲ್ದಾರ್‌ ಅವರ ಲಿಖಿತ ಅನುಮತಿ ಪಡೆದು ನೋಂದಣಿ ಮಾಡಬೇಕು ಎಂದು ಸೂಚಿಸಲಾಗಿದೆ.

30 ದಿನಗಳ ಬಳಿಕ ಒಂದು ವರ್ಷದೊಳಗಾದರೆ ತಹಶೀಲ್ದಾರರ ಪತ್ರ ಲಗತ್ತಿನ ಜೊತೆ ₹5 ಶುಲ್ಕ

1 ವರ್ಷ ನಂತರವಾದರೆ ಮೊದಲನೇ ವರ್ಗದ ದಂಡಾಧಿಕಾರಿ ಅಥವಾ ಮಹಾಪ್ರಾಂತ ದಂಡಾಧಿಕಾರಿ ಆದೇಶ ಪತ್ರ ಲಗತ್ತು- 10 ಶುಲ್ಕ

ಇದನ್ನೂ ಓದಿ: Crop insurance last date-ಈ ಬೆಳೆಗಳಿಗೆ ಬೆಳೆ ವಿಮೆ ಕಟ್ಟಲು ಇನ್ನು 15-30 ದಿನ ಮಾತ್ರ ಬಾಕಿ ಇದೆ!

For more Information-ಇನ್ನು ಹೆಚ್ಚಿನ ಮಾಹಿತಿಗಾಗಿ:

  • ವಾಟ್ಸಾಪ್ ಸಹಾಯವಾಣಿ: 8750971717
  • ಗ್ರಾಮ ಪಂಚಾಯತ್ ಅಧಿಕೃತ ವೆಬ್ಸೈಟ್: Click here
  • ಪಂಚಮಿತ್ರ ವೆಬ್ಸೈಟ್: Click here
Most Popular

Latest Articles

- Advertisment -

Related Articles