HomeNew postsCaste income certificate: ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು?...

Caste income certificate: ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು? ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ?

ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು? ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ? ಜಾತಿ ಮತ್ತು ಆದಾಯ ಪ್ರಮಾಣ ಪತ್ರಕೆ ನೀವು ಸಲ್ಲಿಸಿದ ಅರ್ಜಿ ಯಾವ ಹಂತದಲ್ಲಿದೆ ಎಂದು ಹೇಗೆ ತಿಳಿಯುವುದು? ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

ಸಾಮಾನ್ಯವಾಗಿ ಪ್ರತಿಯೊಂದು ಕೆಲಸಕ್ಕೂ ಅಥವಾ ಪ್ರತಿಯೊಂದು ಸೌಲಭ್ಯಕ್ಕೂ ಅರ್ಜಿ ಸಲ್ಲಿಸಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಅತ್ಯಗತ್ಯವಾಗಿ ಸಲ್ಲಿಸಬೇಕಾಗುತ್ತದೆ ಈ ಪ್ರಮಾಣ ಪತ್ರವನ್ನು ಪಡೆಯಲು ಯಾವೆಲ್ಲ ದಾಖಲಾತಿ ಒದಗಿಸಬೇಕು ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಬಹಳಷ್ಟು ಜನರಿಗೆ ಸರಿಯಾದ ಮಾಹಿತಿ ಇರುವುದಿಲ್ಲ.

ಇದಷ್ಟೇ ಅಲ್ಲದೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗೆ ಅಗುತ್ತದೆ ಎಂದು ಸಹ ಈ ಕೆಳಗೆ ತಿಳಿಸಲಾಗಿದೆ. ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಿಗೆ ಶೇರ್ ಮಾಡಿ ಎಲ್ಲಾರಿಗೂ ಈ ಕುರಿತು ಮಾಹಿತಿ ತಿಳಿಯುವಂತಾಗಲಿ.

ಇದನ್ನೂ ಓದಿ: Shakti Yojana- ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯ ಅನುಷ್ಥಾನಕ್ಕೆ ರಾಜ್ಯ ಸರಕಾರದಿಂದ ಹೊಸ ಆದೇಶ!

Caste income certificate required documents-ಅರ್ಜಿ ಸಲ್ಲಿಸಬೇಕಾಗುವ ಅಗತ್ಯ ದಾಖಲಾತಿಗಳು:

  1. ಆಧಾರ್ ಕಾರ್ಡ್.
  2. ರೇಷನ್ ಕಾರ್ಡ್/ವೋಟರ್ ಕಾರ್ಡ್.
  3. ಅರ್ಜಿದಾರರ ಶಾಲಾ ದೃಡೀಕರಣ.
  4. ಅರ್ಜಿದಾರರ ತಂದೆಯ ಶಾಲಾ ದೃಡೀಕರಣ(ವಿದ್ಯಾರ್ಥಿ ಸ್ಕಾಲರ್ಷಿಪ್ ಅರ್ಜಿ ಸಲ್ಲಿಸುವವರಿಗೆ ಮಾತ್ರ)
  5. ಮೊಬೈಲ್ ಸಂಖ್ಯೆ.

ಯಾವೆಲ್ಲ ಸಂದರ್ಭದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಒದಗಿಸಬೇಕು?

ವಿದ್ಯಾರ್ಥಿಗಳು ಸ್ಕಾಲರ್ಷಿಪ್ ಪಡೆಯಲು ಅರ್ಜಿ ಸಲ್ಲಿಸಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಒದಗಿಸಬೇಕು.
ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ವಿವಿಧ ನಿಗಮಗಳಿಂದ ಪಡೆಯುವ ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸಲು. 
ಮಕ್ಕಳ ಆಧಾರ್ ಕಾರ್ಡ ಮಾಡಿಸಲು ಅರ್ಜಿ ಸಲ್ಲಿಸಲು ಬೇಕಾಗುತ್ತದೆ.
ವಿವಿಧ ಸರಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹೀಗೆ ಅನೇಕ ಯೋಜನೆಯಡಿ ಸೌಲಭ್ಯ ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಒದಗಿಸುವು ಕಡ್ಡಾಯವಾಗಿದೆ.

ಇದನ್ನೂ ಓದಿ: Drought relief amount: ನವೆಂಬರ್ 30ರ ಒಳಗಾಗಿ ಈ ಕೆಲಸ ಮಾಡಿದರೆ ಮಾತ್ರ ಬರ ಪರಿಹಾರ ಹಣ ಬರುತ್ತದೆ: ಸಚಿವ ಕೃಷ್ಣ ಬೈರೇಗೌಡ

How to apply for caste and income certificate-ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಜಿದಾರರು ಮೇಲೆ ತಿಳಿಸಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹೋಬಳಿಯ ನಾಡ ಕಚೇರಿ/ನೆಮ್ಮದಿ ಕೇಂದ್ರ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಸ್ವೀಕೃತಿಯನ್ನು ಪಡೆಯಬೇಕು.

Application status check-ಅರ್ಜಿ ಸ್ಥಿತಿ ಚೆಕ್ ಮಾಡುವ ವಿಧಾನ:

ಅರ್ಜಿ ಸಲ್ಲಿಸಿದ ಬಳಿಕ ನಾಡಕಚೇರಿಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಸ್ವೀಕೃತಿಯಲ್ಲಿರುವ ಅರ್ಜಿ ಸಂಖ್ಯೆಯನ್ನು ನಮೂದಿಸಿ ನೀವು ಸಲ್ಲಿಸಿದ ಅರ್ಜಿ ಯಾವ ಹಂತದಲ್ಲಿದೆ ಅಥವಾ ಯಶಸ್ವಿಯಾಗಿ ಸಲ್ಲಿಕೆಯಾಗಿದಿಯೇ ಎಂದು ನಿಮ್ಮ ಮೊಬೈಲ್ ನಲ್ಲೇ ತಿಳಿದುಕೊಳ್ಳಬವುದು.

Step-1: ಇಲ್ಲಿ ಕ್ಲಿಕ್ ಮಾಡಿ> Application status check ನಾಡಕಚೇರಿ ವೆಬ್ಸೈಟ್ ಭೇಟಿ ಮಾಡಬೇಕು ತದನಂತರ ನಿಮ್ಮ ಅರ್ಜಿಯ ಸ್ವೀಕೃತಿ ಸಂಖ್ಯೆಯನ್ನು ನಮೂದಿಸಿ “ಸ್ಥಿತಿಯನ್ನು ಪರಿಶೀಲಿಸಿ” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಬವುದು.

ಇದನ್ನೂ ಓದಿ: Invalid ration card list-ಈ ಪಟ್ಟಿಯಲ್ಲಿ ಹೆಸರಿರುವವರಿಗಿಲ್ಲ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ!

Caste income certificate: ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ?

ಅರ್ಜಿದಾರರು ನಾಡಕಚೇರಿಯಲ್ಲಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಆ ಅರ್ಜಿಯು ನಿಮ್ಮ ಗ್ರಾಮದ ಗ್ರಾಮ ಲೆಕ್ಕಾಧಿಕರಿಯವರ ಬಳಿ ಬರುತ್ತದೆ ನಂತರ ನಿಮ್ಮ ದಾಖಲಾತಿಗಳನ್ನು ಪರಿಶೀಲಿಸಿ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ಅನುಮೋದಿಸಿ ಮರಳಿ ನಾಡಕಚೇರಿ ಲಾಗಿನ್ ಗೆ ವರ್ಗಾಹಿಸುತ್ತಾರೆ ನೀವು ಅರ್ಜಿ ಸಲ್ಲಿಸಿದ 21 ದಿನದ ಬಳಿಕ ನಾಡಕಚೇರಿ ಭೇಟಿ ಮಾಡಿ ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬವುದು.

ನಾಡಕಚೇರಿಯಲ್ಲಿ ಯಾವೆಲ್ಲ ಯೋಜನೆಗಳಿಗೆ ಅರ್ಜಿ ಸಲ್ಲಿಸಬವುದು?

ಗ್ರಾಮೀಣ ಭಾಗದ ಜನರು ನಿಮ್ಮ ಹತ್ತಿರದ ನಾಡಕಚೇರಿ ಭೇಟಿ ಮಾಡಿ 40 ಕ್ಕೂ ಹೆಚ್ಚಿನ ಯೋಜನೆಗಳಿಗೆ/ಪ್ರಮಾಣ ಪತ್ರಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬವುದು ಅರ್ಜಿ ಸಲ್ಲಿಸಲು ಶುಲ್ಕ ಎಷ್ಟು? ಯಾವೆಲ್ಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬವುದು ಎನ್ನುವ ಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ> Nadakacheri Services 

Most Popular

Latest Articles

- Advertisment -

Related Articles