Coffee board-ಕಾಫಿ ಮಂಡಳಿಯಿಂದ ವಿವಿಧ ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನ!
Coffee board schemes-2023: ಆತ್ಮೀಯ ಕಾಫಿ ಬೆಳೆಗಾರರೇ ಕಾಪಿ ಮಂಡಳಿಯಿಂದ ವಿವಿಧ ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ರೈತರು ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬವುದು.

ಆತ್ಮೀಯ ಕಾಫಿ ಬೆಳೆಗಾರರೇ ಕಾಪಿ ಮಂಡಳಿಯಿಂದ ವಿವಿಧ ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ರೈತರು ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬವುದು.
2023-24 ನೆ ಸಾಲಿಗೆ ICDP- MTF ಯೋಜನೆ ಅಡಿಯಲ್ಲಿ ಕಾಫಿ ಮಂಡಳಿಯು ಕಾಫಿ ಬೆಳೆಗಾರರಿಗೆ ಈ ಕೆಳಕಂಡ ಯೋಜನೆಗಳಿಗೆ ಸಹಾಯಧನ ನೀಡಲು ಅನುಮೋದನೆ ದೊರೆತಿದ್ದು ಅರ್ಹ ರೈತರಿಂದ ಈ ಕೆಳಗೆ ತಿಳಿಸಿರುವ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಂಡಳಿಯಿಂದ ಪ್ರಕಟಣೆ ಹೊರಡಿಸಲಾಗಿದೆ.
ಇದನ್ನೂ ಓದಿ: Viral video-ಪ್ರಾಣಿ-ಪಕ್ಷಿಗಳಿಂದ ತನ್ನ ಬೆಳೆ ರಕ್ಷಣೆಗೆ ರೈತ ಬಳಸಿದ ಐಡಿಯಾ ಸಖತ್ ವೈರಲ್!
Coffee board schemes-2023: ಯಾವೆಲ್ಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ರಿಪ್ಲಾಂಟೇಶನ್ (ಮರುನಾಟಿ)– 25 ವರ್ಷಕ್ಕೂ ಮೀರಿದ ಎತ್ತರದ ಅರೇಬಿಕಾ ಹಾಗೂ 15 ವರ್ಷ ಮೀರಿದ ಡ್ವಾರ್ಫ್ ಅರೇಬಿಕಾ ತಳಿಗಳು ಹಾಗೂ 40 ವರ್ಷ ಮೀರಿದ ರೊಬಸ್ಟಾ ಅನುತ್ಪಾದಕ ತೋಟಗಳಲ್ಲಿ, ಗಿಡಗಳನ್ನು ತೆಗೆದು ಹೊಸ ಗಿಡಗಳನ್ನು ಹಾಕಲು (ಮರುನಾಟಿ).
ಕೆರೆ, ತೆರೆದ ರಿಂಗ್ ಬಾವಿ, ನೀರಾವರಿ (ಸ್ಪ್ರಿಂಕ್ಲರ್/ ಡ್ರಿಪ್) ಉಪಕರಣಗಳು.
ಕಾಪಿ ಕಣ, ಗೊಡಾನ್ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರಿಗೆ ಮಾತ್ರ).
ಇದನ್ನೂ ಓದಿ: free fodder seeds kit: ಪಶುಸಂಗೋಪನೆ ಇಲಾಖೆಯಿಂದ ಉಚಿತ ಮೇವಿನ ಕಿಟ್ ವಿತರಣೆ!
ಸಹಾಯಧನವು ಕೆಳಕಂಡ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.
25 ಎಕರೆ ಒಳಗಿನ ವೈಯಕ್ತಿಕ ಸಣ್ಣ ಬೆಳೆಗಾರರಿಗೆ ಮಾತ್ರ ಅನ್ವಯವಾಗುವುದು.
ಕಳೆದ ಹತ್ತು ವರ್ಷಗಳಲ್ಲಿ ಅಂದರೆ 2013-14 ರಿಂದ ಕಾಫಿ ಮಂಡಳಿಯಿಂದ ಅರ್ಜಿ ಸಲ್ಲಿಸುವ ಕೆಲಸಕ್ಕೆ ಸಹಾಯಧನ ಪಡೆದಿರಬಾರದು.
Coffee board-ಸಹಾಯಧನಕ್ಕಾಗಿ ಸಲ್ಲಿಸಬೇಕಾದ ಅಗತ್ಯವಿರುವ ದಾಖಲೆಗಳು:
- ಅರ್ಜಿ (ಕಾಫಿ ಮಂಡಳಿಯ ಕಛೇರಿಯಲ್ಲಿ ಲಭ್ಯ) ಅಥವಾ www.indiacoffee.org ವೆಬ್ ಸೈಟ್ ನೋಡಬಹುದು
- ಸಹಿ ಮಾಡಿದ ಪಾಸ್ ಪೋರ್ಟ್ ಅಳತೆಯ ಫೋಟೊ
- ಆಧಾರ್ ಪ್ರತಿ
- ಬ್ಯಾಂಕ್ ಪಾಸ್ ಬುಕ್ ಪ್ರತಿ.
- ಹಿಡುವಳಿದಾರರ ಹೆಸರಲ್ಲಿ ಇರುವ ಎಲ್ಲಾ ಕಾಫಿ ತೋಟಗಳ ಪಹಣಿಗಳು (RTC)
- ಸ್ವಯಂ ಸಹಿ ಮಾಡಿದ ಅಂದಾಜು ನಕ್ಷೆ ಹಾಗೂ ಚಕ್ಕುಬಂದಿ
- ಖಾತಾ ನಕಲು/ಮ್ಯುಟೇಶನ್/ಪಟ್ಟೆ ಪುಸ್ತಕ
- ಕೆರೆ, ಬಾವಿ ತಗಲುವ ಅಂದಾಜು ವೆಚ್ಛ ಹಾಗೂ ಪ್ಲಾನ್
- ಸ್ಪ್ರಿಂಕ್ಲರ್ / ಡ್ರಿಪ್ ನೀರಾವರಿ ಉಪಕರಣಗಳಿಗೆ ಕೊಟೇಶನ್
ಇದನ್ನೂ ಓದಿ: fruits ID: ರೈತರಿಗೆ FID ನಂಬರ್ ರಚನೆ ಕುರಿತು ಮತ್ತೊಂದು ಹೊಸ ಪ್ರಕಟಣೆ!
ವಿಶೇಷ ಸೂಚನೆ: ಮೊದಲು ಬಂದವರಿಗೆ ಮೊದಲ ಆಧ್ಯತೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
application last date- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ನವೆಂಬರ್ 2023.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಾಫಿ ಮಂಡಳಿಯ ಕಛೇರಿಯನ್ನು ಸಂಪರ್ಕಿಸುವುದು.
Coffee board ವೆಬ್ಸೈಟ್: click here