HomeGovt SchemesCrop insurance-2024: ಮುಂಗಾರು ಹಂಗಾಮಿಗೆ ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬಹುದು ಎನ್ನುವ ವಿವರ ಬಿಡುಗಡೆ!

Crop insurance-2024: ಮುಂಗಾರು ಹಂಗಾಮಿಗೆ ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬಹುದು ಎನ್ನುವ ವಿವರ ಬಿಡುಗಡೆ!

ರೈತರು ಅಧಿಕೃತ ಬೆಳೆ ವಿಮಾ ಪೋರ್ಟಲ್ ಭೇಟಿ ಮಾಡಿ  ನಿಮ್ಮ ಹಳ್ಳಿಯ ಹೆಸರನ್ನು ಆಯ್ಕೆ ಮಾಡಿಕೊಂಡು ಈ ವರ್ಷ ಮುಂಗಾರು ಹಂಗಾಮಿಗೆ ಯಾವೆಲ್ಲ ಬೆಳೆಗೆ ಬೆಳೆ ವಿಮೆ(Crop insurance details-2024) ಮಾಡಿಸಬಹುದು? ಎಂದು ಹೇಗೆ ಚೆಕ್ ಮಾಡುವುದು? ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ರಾಜ್ಯ ಸರಕಾರದ ಸಂರಕ್ಷಣೆ(Samrakshane) ಪೋರ್ಟಲ್ ಭೇಟಿ ಮಾಡಿ ರೈತರು ತಮ್ಮ ಜಿಲ್ಲೆ,ತಾಲ್ಲೂಕು,ಹೋಬಳಿ,ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ಈ ವರ್ಷದ ಮುಂಗಾರು ಹಂಗಾಮಿಗೆ ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬಹುದು ಎಂದು ಮೊಬೈಲ್ ನಲ್ಲಿ ಚೆಕ್ ಮಾಡಬಹುದು.

samrakshane.karnataka.gov.in ವೆಬ್ಸೈಟ್ ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಮುಂಗಾರು ಹಂಗಾಮಿಗೆ ಯಾವೆಲ್ಲ ಬೆಳೆಗಳಿಗೆ ನೀವು ಬೆಳೆ ವಿಮೆ ಮಾಡಿಸಬಹುದು ಎಂದು ತಿಳಿದುಕೊಳ್ಳಬಹುದು.

ಇದನ್ನೂ ಓದಿ: Gruhalakshmi status-2024: ಇನ್ನು ಮುಂದೆ ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಜಮಾ ಆಗಿರುವುದನ್ನು ತಿಳಿಯುವುದು ಭಾರೀ ಸುಲಭ!

Crop insurance kharif crop details-2024-25: ಮುಂಗಾರು ಹಂಗಾಮಿಗೆ ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬಹುದು ಎಂದು ತಿಳಿಯುವ ವಿಧಾನ:

ಅಧಿಕೃತ samrakshane.karnataka.gov.in ವೆಬ್ಸೈಟ್ ಅನ್ನು ಭೇಟಿ ಮಾಡಿ ಕೆಳಗಿನ ವಿಧಾನವನ್ನು ಅನುಸರಿಸಿ ಮುಂಗಾರು ಹಂಗಾಮಿನ ಬೆಳೆ ವಿಮೆಯ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

Step-1: ಮೊದಲಿಗೆ Crop insurance kharif details ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ samrakshane ಪೋರ್ಟಲ್ ಅನ್ನು ಪ್ರವೇಶ ಮಾಡಬೇಕು.

Step-2: ತದನಂತರ “ವರ್ಷದ ಆಯ್ಕೆ / Select Insurance Year : 2024-25” ಮತ್ತು “ಋತು ಆಯ್ಕೆ / Select Insurance Season : Kharif” ಎಂದು ಆಯ್ಕೆ ಮಾಡಿಕೊಂಡು “ಮುಂದೆ/Go” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Bara parihara Status check-2024: ಬರ ಪರಿಹಾರ ಎಷ್ಟು ಜಮಾ ಅಗಿದೆ? ಯಾವ ಬ್ಯಾಂಕ್ ಖಾತೆಗೆ? ಸಂಪೂರ್ಣ ಮಾಹಿತಿ ಪಡೆಯಲು ಅಪ್ಲಿಕೇಶನ್ ಬಿಡುಗಡೆ!

Step-3: ಇದಾದ ನಂತರ ಇಲ್ಲಿ 2024-25 ನೇ ಸಾಲಿನ ಬೆಳೆ ವಿಮೆಯ ಮುಖಪುಟ ತೆರೆದುಕೊಳ್ಳುತ್ತದೆ ಈ ಪೇಜ್ ನಲ್ಲಿ ಕೆಳಗೆ “Farmers” ಕಾಲಂ ನಲ್ಲಿ “Crop You can Insure” ಎಂದು ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ಇಲ್ಲಿ ರೈತರು ನಿಮ್ಮ ಜಿಲ್ಲೆ,ತಾಲ್ಲೂಕು,ಹೋಬಳಿ,ಹಳ್ಳಿ ಅನ್ನು ಆಯ್ಕೆ ಮಾಡಿಕೊಂಡು “Display” ಬಟನ್ ಮೇಲೆ ಕ್ಲಿಕ್ ಮಾಡಬೇಕು ಅಗ ನೀವು ಈ ವರ್ಷ ಮುಂಗಾರು ಹಂಗಾಮಿಗೆ ಯಾವೆಲ್ಲ ಬೆಳೆಗಳಿಗೆ ವಿಮೆ ಮಾಡಿಸಬಹುದು ಮತ್ತು 2.5 ಎಕರೆಗೆ ಎಷ್ಟು ಪ್ರಿಮೀಯಂ ಪಾವತಿ ಮಾಡಬೇಕು? ಒಟ್ಟು ಎಷ್ಟು ಬೆಳೆ ವಿಮೆ ಬರುತ್ತದೆ ಇತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿ ಗೋಚರಿಸುತ್ತದೆ.

ಇದನ್ನೂ ಓದಿ: Land survey chian- ನಿಮ್ಮ ಜಮೀನಿನ ಸರ್ವೆ ಮಾಡಲು ಬಳಕೆ ಮಾಡುವ ಚೈನಿನ ಕುರಿತು ಈ ಮಾಹಿತಿ ನಿಮಗೆ ಗೊತ್ತೇ?

Most Popular

Latest Articles

- Advertisment -

Related Articles