Crop insurance last date-2024: ಜಿಲ್ಲಾವಾರು ಬೆಳೆ ವಿಮೆ ಮಾಡಿಸಲು ಕೊನೆಯ ದಿನಾಂಕ ಬಿಡುಗಡೆ!

May 25, 2024 | Siddesh
Crop insurance last date-2024: ಜಿಲ್ಲಾವಾರು ಬೆಳೆ ವಿಮೆ ಮಾಡಿಸಲು ಕೊನೆಯ ದಿನಾಂಕ ಬಿಡುಗಡೆ!
Share Now:

ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮಾ ಪ್ರಿಮಿಯಂ ಅನ್ನು ಪಾವತಿ ಮಾಡಲು ಬೆಳೆವಾರು ಕೊನೆಯ ದಿನಾಂಕವನ್ನು(Crop insurance last date) ಬಿಡುಗಡೆ ಮಾಡಲಾಗಿದ್ದು ರೈತರು ತಮ್ಮ  ಮೊಬೈಲ್ ನಲ್ಲಿ ಕೊನೆಯ ದಿನಾಂಕದ ವಿವರವನ್ನು ಹೇಗೆ ಪಡೆಯಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಈ ವರ್ಷ ಅಂದರೆ 2024ರ ಮುಂಗಾರು ಹಂಗಾಮಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ತಾವು ಬೆಳೆದ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಕೊನೆಯ ದಿನಾಂಕವನ್ನು ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಕೆಳಗಡೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಅಧಿಕೃತ ಸರಕಾರದ ಸಂರಕ್ಷಣೆ(samrakshane.karnataka.gov.in) ವೆಬ್ಸೈಟ್ ಅನ್ನು ಭೇಟಿ ಮಾಡಿ ನಿಮ್ಮ ಜಿಲ್ಲೆಯಲ್ಲಿ ಬೆಳೆ ವಿಮೆ(Bele vime) ಅನ್ನು ಮಾಡಿಸಲು ಕೊನೆಯ ದಿನಾಂಕದ ವಿವರವನ್ನು ಮನೆಯಲ್ಲಿ ಕುಳಿತು ನಿಮ್ಮ ಮೊಬೈಲ್ ನಲ್ಲಿ ಪಡೆಯಬಹುದು.

ಇದನ್ನೂ ಓದಿ: Free mashroom training-ಉಚಿತ 10 ದಿನದ ಅಣಬೆ ಬೇಸಾಯ ತರಬೇತಿಗೆ ಅರ್ಜಿ ಆಹ್ವಾನ!

kharif crop insurance-2024: ನಿಮ್ಮ ಮೊಬೈಲ್ ನಲ್ಲಿ ಜಿಲ್ಲಾವಾರು ಬೆಳೆ ವಿಮೆ ಮಾಡಿಸಲು ಕೊನೆಯ ದಿನಾಂಕ ನೋಡುವ ವಿಧಾನ:

ರೈತರು ತಾವು ಬೆಳೆಯುವ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಕೊಳ್ಳಲು ಕೊನೆಯ ದಿನಾಂಕ ಯಾವುದು ಎಂದು ರಾಜ್ಯ ಸರಕಾರದ ಅಧಿಕೃತ ಸಂರಕ್ಷಣೆ(Samrakshane website) ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಈ Crop insurance last date ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಪೋರ್ಟಲ್ ಅನ್ನು ಪ್ರವೇಶ ಮಾಡಬೇಕು. ನಂತರ ಈ ಪೇಜ್ ನಲ್ಲಿ "ವರ್ಷ/Year: 2024-25" ಮತ್ತು "ಋತು: Kharif/ಮುಂಗಾರು" ಎಂದು ಆಯ್ಕೆ ಮಾಡಿಕೊಂಡು "ಮುಂದೆ/Go" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ತದನಂತರ "Farmers' ವಿಭಾಗದಲ್ಲಿ "View Cut Off Dates" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: BPNL Recruitment 2024: 10th ಪಾಸಾದವರಿಗೆ ಪಶುಪಾಲನಾ ನಿಗಮದಲ್ಲಿ 5250 ಹುದ್ದೆಗಳಿಗೆ ಬೃಹತ್ ನೇಮಕಾತಿಗೆ ಅರ್ಜಿ ಅಹ್ವಾನ!

Step-3: ನಂತರ ಇಲ್ಲಿ ಆಯ್ಕೆ ವಿಭಾಗದ "District/ಜಿಲ್ಲೆ" ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿಕೊಂಡರೆ ನಿಮ್ಮ ಜಿಲ್ಲೆಯಲ್ಲಿ ಬೆಳೆಯುವ ಬೆಳೆವಾರು ಬೆಳೆ ವಿಮೆ ಪ್ರಿಮಿಯಂ ಪಾವತಿ ಮಾಡಲು ಅಥವಾ ಕಟ್ಟಲು ಕೊನೆಯ ದಿನಾಂಕದ ಪಟ್ಟಿ ತೋರಿಸುತ್ತದೆ.

ಇದನ್ನೂ ಓದಿ: Agriculture land info-ನಿಮ್ಮ ಜಮೀನಿಗೆ ಹೋಗಲು ದಾರಿ ಸಮಸ್ಯೆಯೇ? ಇದನ್ನು ಹೇಗೆ ಸರಿಪಡಿಸಿಕೊಳ್ಳುವುದು?

ಈ ಮಾಹಿತಿಯನ್ನು ತಿಳಿದುಕೊಂಡು ಕೊನೆಯ ದಿನಾಂಕ ಮುಗಿಯುವುದರ ಒಳಗಾಗಿ ನಿಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು ಪಾವತಿ ಮಾಡಬೇಕು.

WhatsApp Group Join Now
Telegram Group Join Now
Share Now: