Crop survey- ನಿಮ್ಮ ಜಮೀನಿನ ಬೆಳೆ ಸಮೀಕ್ಷೆಯ ವರದಿ ಬಿಡುಗಡೆ! ಇಲ್ಲಿದೆ ಬೆಳೆ ಮಾಹಿತಿ ತಿಳಿಯಲು ವೆಬ್ಸೈಟ್ ಲಿಂಕ್

ರೈತರು ತಮ್ಮ ಜಮೀನಿನ ಬೆಳೆ ಸಮೀಕ್ಷೆಯ(Crop survey) ವಿವರವನ್ನು ತಿಳಿದುಕೊಳ್ಳಲು ರಾಜ್ಯ ಸರಕಾರದ ಅಧಿಕೃತ https://cropsurvey.karnataka.gov.in ವೆಬ್ಸೈಟ್ ನಲ್ಲಿ ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ.

Crop survey- ನಿಮ್ಮ ಜಮೀನಿನ ಬೆಳೆ ಸಮೀಕ್ಷೆಯ ವರದಿ ಬಿಡುಗಡೆ! ಇಲ್ಲಿದೆ ಬೆಳೆ ಮಾಹಿತಿ ತಿಳಿಯಲು ವೆಬ್ಸೈಟ್ ಲಿಂಕ್
Crop survey-2023

ರೈತರು ತಮ್ಮ ಜಮೀನಿನ ಬೆಳೆ ಸಮೀಕ್ಷೆಯ(Crop survey) ವಿವರವನ್ನು ತಿಳಿದುಕೊಳ್ಳಲು ರಾಜ್ಯ ಸರಕಾರದ ಅಧಿಕೃತ https://cropsurvey.karnataka.gov.in ವೆಬ್ಸೈಟ್ ನಲ್ಲಿ ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ.

ಈ ಬೆಳೆ ಸಮೀಕ್ಷೆಯ ಮಾಹಿತಿ ಏಕೆ ಅತೀ ಮುಖ್ಯ? ಬೆಳೆ ಸಮೀಕ್ಷೆಯ ಕುರಿತು ರೈತರು ತಪ್ಪದೇ ತಿಳಿದುಕೊಳ್ಳಬೇಕಾದ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದ್ದು ಈ ಮಾಹಿತಿ ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

2023 ರ ಮುಂಗಾರು/ಹಿಂಗಾರು/ಬೇಸಿಗೆ ಸಮಯದಲ್ಲಿ ನಿಮ್ಮ ಜಮೀನಿನಲ್ಲಿ ಯಾವ ಬೆಳೆ ಬೆಳೆದಿದ್ದಿರಾ? ಎಂದು ಖಾಸಗಿ ನಿವಾಸಿಗಳಿಂದ(PR) CROP SURVEY ಮೊಬೈಲ್ ಅಪ್ಲಿಕೇಶನ್ ಮೂಲಕ ನಿಮ್ಮ ಜಮೀನನ್ನು ಭೇಟಿ ಮಾಡಿ ದಾಖಲಿಸಿರುವ ಮಾಹಿತಿಯನ್ನು ಈ ಕೆಳಗೆ ನೀಡಿರುವ ವೆಬ್ಸೈಟ್ ಭೇಟಿ ಮಾಡಿ ಬೆಳೆ ವಿವರವನ್ನು ಪಡೆಯಬಹುದು.

ಇದನ್ನೂ ಓದಿ: PM-Kisan amount- 9.3 ಕೋಟಿ ರೈತರ ಖಾತೆಗೆ ಪಿ ಎಂ ಕಿಸಾನ್ ಹಣ! ಇಲ್ಲಿದೆ ಸ್ಟೇಟಸ್ ಚೆಕ್ ಮಾಡುವ ವಿಧಾನ!

Crop survey website- ಬೆಳೆ ಸಮೀಕ್ಷೆಯ ವಿವರ ಏಕೆ ಅತೀ ಮುಖ್ಯ?

ಹೌದು, ರೈತರ ಮಿತ್ರರೇ ಬೆಳೆ ಸಮೀಕ್ಷೆಯಲ್ಲಿ ಬೆಳೆ ವಿವರ ಸರಿಯಾಗಿ ದಾಖಲಾಗಿರಬೇಕು ಇಲ್ಲವಾದಲ್ಲಿ ಸರಕಾರದಿಂದ ಪಡೆಯಬವುದಾದ ಅನೇಕ ಯೋಜನೆಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಉದಾಹರಣೆಗೆ ಹೇಳುವುದಾದರೆ ಬೆಳೆ ವಿಮೆ ಪರಿಹಾರ, ಬೆಂಬಲ ಬೆಲೆ ಯೋಜನೆಯಡಿ ನೀವು ಬೆಳೆದ ಬೆಳೆ ಮಾರಾಟ ಮಾಡಲು, ಬೆಳೆ ಪರಿಹಾರ, ವಿವಿಧ ಇಲಾಖೆಗಳಿಂದ ಸಹಾಯಧನ ಪಡೆಯಲು/ನೀಡಲು ಈ ಬೆಳೆ ಸಮೀಕ್ಷೆಯ ಬೆಳೆ ವಿವರವನ್ನೇ ಪರಿಗಣಿಸುವುದರಿಂದ ಬೆಳೆ ಸಮೀಕ್ಷೆಯಲ್ಲಿ ಬೆಳೆ ವಿವರ ಸರಿಯಾಗಿ ದಾಖಲೆ ಅಗಿರುವುದು ಅತೀ ಮುಖ್ಯವಾಗಿದೆ.

ಇದನ್ನೂ ಓದಿ: Veterinary Doctor Recruitment-2024: ಕರ್ನಾಟಕ ಪಶುಪಾಲನೆ ಇಲಾಖೆಯಿಂದ 400 ಹುದ್ದೆಗಳ ನೇಮಕಾತಿ! ಇಲ್ಲಿದೆ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್!

last 6 years crop survey details- ಕಳೆದ ವರ್ಷದ ಬೆಳೆ ಸಮೀಕ್ಷೆಯ ವಿವರವನ್ನು ನಿಮ್ಮ ಮೊಬೈಲ್ ನಲ್ಲೇ ಪಡೆಯಬಹುದು:

ಸರಕಾರದ ಅಧಿಕೃತ ಈ ವೆಬ್ಸೈಟ್ ಅನ್ನು ಭೇಟಿ ಮಾಡಿ ನಿಮ್ಮ ಸರ್ವೆ ನಂಬರ್ ಹಾಕಿ ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಕಳೆದ ಆರು ವರ್ಷದ ಬೆಳೆ ಸಮೀಕ್ಷೆಯ ವಿವರವನ್ನು ನಿಮ್ಮ  ಮೊಬೈಲ್ ನಲ್ಲೇ ಪಡೆಯಬಹುದು.

Step-1: ಮೊದಲಿಗೆ ಈ Crop survey ಲಿಂಕ್ ಮೇಲೆ ಕ್ಲಿಕ್ ಮಾಡಿ ಬೆಳೆ ಸಮೀಕ್ಷೆ ಜಾಲತಾಣವನ್ನು ಭೇಟಿ ಮಾಡಬೇಕು. ನಂತರ ಮುಖಪುಟದಲ್ಲಿ ಕೆಳಗಡೆ ಬಲ ಬದಿಯಲ್ಲಿ ಕಾಣುವ ಆಯ್ಕೆಯಲ್ಲೊ ವರ್ಷ/Year: ಹಂಗಾಮು/Season: ಅನ್ನು ಆಯ್ಕೆ ಮಾಡಿಕೊಂಡು "GO" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ಇದಾದ ಬಳಿಕ ಈ ಪೇಜ್ ನಲ್ಲಿ "View PR Uploaded Crop Info" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಹಾಗೂ ಸರ್ವೆ ನಂಬರ್ ಅನ್ನು ಹಾಕಿ "Get Crop Survey Details" ಬಟನ್ ಮೇಲೆ ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ವರ್ಷದ ನಿಮ್ಮ ಜಮೀನ ಬೆಳೆ ಸಮೀಕ್ಷೆಯ ಬೆಳೆ ವಿವರ ತೋರಿಸುತ್ತದೆ.

ಇದನ್ನೂ ಓದಿ: PM-kisan status check-2024: ಇಲ್ಲಿಯವರೆಗೆ ಎಷ್ಟು ಕಂತು ಪಿ ಎಂ ಕಿಸಾನ್ ಹಣ ಬಂದಿದೆ ಎಂದು ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

Step-3: ಈ ಪೇಜ್ ನಲ್ಲಿ ಹಿಸ್ಸಾವಾರು ಎಲ್ಲಾ ಸರ್ವೆ ನಂಬರ್ ತೋರಿಸುತ್ತದೆ ನಿಮ್ಮಅ ಹೆಸರಿರುವ ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿದರೆ ಆ ಸರ್ವೆ ನಂಬರ್ ನ ಬೆಳೆ ಸಮೀಕ್ಷೆಯ ಬೆಳೆ ಮಾಹಿತಿ ಕೆಳಗೆ ಗೋಚರಿಸುತ್ತದೆ ಇದೆ ಕಾಲಂ ನಲ್ಲಿ ಕೊನೆಯಲ್ಲಿ ಕಾಣುವ View Photo ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ ಪೋಟೋ ಸಹ ನೋಡಬಹುದು.

ಇದನ್ನೂ ಓದಿ: Bele nashta parihara-2024: ಈ ಪಟ್ಟಿಯಲ್ಲಿರುವ ರೈತರಿಗೆ ಸಿಗಲಿದೆ 3,000/- ಜೀವನೋಪಾಯ ನಷ್ಟ ಪರಿಹಾರ!

Bele darshaka app-ಬೆಳೆ ಸಮೀಕ್ಷೆಯ ವಿವರದಲ್ಲಿ ಬೆಳೆ ತಪ್ಪಾಗಿದರೆ ಏನು ಮಾಡಬೇಕು?

ರೈತರು ತಮ್ಮ ಜಮೀನ ಬೆಳೆ ವಿವರ ತಪ್ಪಾಗಿ ಬೆಳೆ ಸಮೀಕ್ಷೆಯಲ್ಲಿ ದಾಖಲಿಸಿದರೆ ನೀವು "ಬೆಳೆ ದರ್ಶಕ" ಮೊಬೈಲ್ ಅಪ್ಲಿಕೇಶನ್ ಮೂಲಕ ಮರುಸಮೀಕ್ಷೆಗೆ ನಿಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಬಹುದು ಅಥವಾ ನೇರವಾಗಿ ನಿಮ್ಮ ಹೋಬಳಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಬೆಳೆ ವಿವರವನ್ನು ಸರಿಪಡಿಸಿಕೊಳ್ಳಬಹುದು.

ಬೆಳೆ ದರ್ಶಕ ಮೊಬೈಲ್ ಅಪ್ಲಿಕೇಶನ್ ಬಳಕೆ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: Click here