- Advertisment -
HomeNew postsDrought relief amount: ನವೆಂಬರ್ 30ರ ಒಳಗಾಗಿ ಈ ಕೆಲಸ ಮಾಡಿದರೆ ಮಾತ್ರ ಬರ ಪರಿಹಾರ...

Drought relief amount: ನವೆಂಬರ್ 30ರ ಒಳಗಾಗಿ ಈ ಕೆಲಸ ಮಾಡಿದರೆ ಮಾತ್ರ ಬರ ಪರಿಹಾರ ಹಣ ಬರುತ್ತದೆ: ಸಚಿವ ಕೃಷ್ಣ ಬೈರೇಗೌಡ

Last updated on September 29th, 2024 at 11:51 am

ಈ ಬಾರಿ ಮಾನ್ಸೂನ್ ಮಳೆಯ ಕೊರತೆಯಿಂದ ರಾಜ್ಯದಲ್ಲಿ ಬೀಕರ ಬರದ ಛಾಯೆ ರೈತಾಪಿ ವರ್ಗಕ್ಕೆ ಅವರಿಸಿದ್ದು, ದೊಡ್ಡ ಮಟ್ಟದ ವಿಸ್ತೀರ್ಣದಲ್ಲಿ ರಾಜ್ಯದ್ಯಂತ ಬೆಳೆ ಹಾನಿಯಾಗಿ ರೈತರಿಗೆ ಹಾಕಿದ ಬಂಡವಾಳವು ವಾಪಸ್ ಬರದಂತಹ ಪರಿಸ್ಥಿತಿ ಉಂಟಾಗಿದೆ.

ರೈತರಿಗೆ ಅರ್ಥಿಕವಾಗಿ ಸ್ವಲ್ಪ ಮಟ್ಟಿಗೆ ನೆರವು ನೀಡಲು ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಬರ ಪರಿಹಾರದ ಹಣವನ್ನು ಒದಗಿಸಲು ಸಂಬಂಧಪಟ್ಟ ಇಲಾಖೆ  ಅಧಿಕಾರಿಗಳು ಈಗಾಗಲೇ ಪರಿಹಾರದ ಹಣ ವರ್ಗಾವಣೆಗೆ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದು. ಈ ಬಾರಿ ನೇರ ನಗದು ವರ್ಗಾವಣೆ ಮೂಲಕ ರೈತರಿಗೆ ಪರಿಹಾರದ ಹಣವನ್ನು fruits ತಂತ್ರಾಶದಲ್ಲಿ ದಾಖಲಾಗಿರುವ ವಿವರದ ಆಧಾರದ ಮೇಲೆ ವರ್ಗಾವಣೆ ಮಾಡಲು ಯೋಜನೆಯನ್ನು ಹಾಕಿಕೊಂಡಿದ್ದಾರೆ.

ಈ ಕಾರಣದಿಂದ ಕೃಷಿ ಇಲಾಖೆಯೆ ಫ್ರೂಟ್ಸ್(FID) ತಂತ್ರಾಂಶದಲ್ಲಿ ದಾಖಲಾಗಿರುವ ರೈತರ ವಿವರ ಸರಿಯಾಗಿದಿಯೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಕಂದಾಯ ಸಚಿವರು ಆದೇಶ ಹೊರಡಿಸಿದ್ದಾರೆ. ಈ ಆದೇಶದ್ವಯ FID ಯಲ್ಲಿ ರೈತರ ಎಲ್ಲಾ ಸರ್ವೆ ನಂಬರ್ ದಾಖಲಾಗಿದಿಯೆ ಇಲ್ಲವೋ ಎಂದು ಚೆಕ್ ಮಾಡುವುದು ಮತ್ತು FID ಅಗದ ರೈತರಿಗೆ FID ಮಾಡಿಕೊಳ್ಳುವಂತೆ ತಿಳಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

Ration card cancellation: ಈ ನಿಯಮ ಪಾಲನೆ  ಮಾಡದಿದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ! ಇಲ್ಲಿದೆ ಸಂಪೂರ್ಣ ವಿವರ.

Drought relief amount- ನವೆಂಬರ್ 30ರ ಒಳಗಾಗಿ ಈ ಕೆಲಸ ಮಾಡಿದರೆ ಮಾತ್ರ ಬರ ಪರಿಹಾರ ಹಣ:

ಕಂದಾಯ ಸಚಿವ ಕೃಷ್ಣ ಬೈರೇಗೌಡರವರು ಎಲ್ಲಾ ಜಿಲ್ಲಾಧಿಕಾರಿಗಳಿಗೆ  ನವೆಂಬರ್ 30 ರ ಒಳಗಾಗಿ ಗ್ರಾಮ ಮಟ್ಟದಲ್ಲಿ FID ಕುರಿತು ಆಭಿಯಾನ ಮಾಡಿ ಬರ ಪರಿಹಾರದ ಹಣವನ್ನು ಶೀಘ್ರದಲ್ಲಿ ರೈತರ ಖಾತೆಗೆ ನೇರ ನಗದು ವರ್ಗಾವಣೆ(DBT) ಮೂಲಕ ವರ್ಗಾವಣೆಯನ್ನು ಫ್ರೂಟ್ಸ್(FID) ತಂತ್ರಾಂಶದಲ್ಲಿ ದಾಖಲಾಗಿರುವ ರೈತರ ವಿವರದ ಆಧಾರದ ಮೇಲೆ ಜಮಾ ಮಾಡಬೇಕಿರುವುದರಿಂದ ರೈತರಿಗೆ ತಮ್ಮ FID ಯಲ್ಲಿ ಎಲ್ಲಾ ಸರ್ವೆ ನಂಬರ್ ಅನ್ನು ಸೇರಿಸಲು ತಿಳಿಸುವುದು ಮತ್ತು FID ಮಾಡಿಕೊಳ್ಳದೇ ಇರುವವರು ಕೂಡಲೇ FID ಮಾಡಿಕೊಳ್ಳುವಂತೆ ತಿಳಿಸುವುದು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: November pension amount: ರಾಜ್ಯ ಸರಕಾರದಿಂದ 77 ಲಕ್ಷ ಜನರಿಗೆ ನವೆಂಬರ್ ತಿಂಗಳ ಪಿಂಚಣಿ ಹಣ ವರ್ಗಾವಣೆ! ಹಣ ಬಂದಿರುವುದನ್ನು ಚೆಕ್ ಮಾಡಲು ಈ ವೆಬ್ಸೈಟ್ ಭೇಟಿ ಮಾಡಿ.

ಡಿಸೆಂಬರ್ ಅಂತ್ಯದ ವೇಳೆಗೆ ಬರ ಪರಿಹಾರದ ಹಣ ರೈತರ ಖಾತೆಗೆ!

ಪ್ರಸ್ತುತ ರಾಜ್ಯದ ಶೇಕಡ 95 ರಷ್ಟು ರೈತರ ಮಾಹಿತಿಯು fruits ತಂತ್ರಾಶದಲ್ಲಿ ದಾಖಲಾಗಿದ್ದು ಆದರೆ ಒಟ್ಟು ಸಾಗುವಳಿ ವಿಸ್ತೀರ್ಣದಲ್ಲಿ ಶೇಕಡ 63ರಷ್ಟು ಸರ್ವೆ ನಂಬರ್ ವಿವರ ಮಾತ್ರ ಈ ತಂತ್ರಾಶದಲ್ಲಿ ದಾಖಲಾಗಿದೆ ಈ ಕಾರಣದಿಂದ ಬಾಕಿ ಉಳಿದ ಸಾಗುವಳಿ ಜಮೀನಿನ ಸರ್ವೆ ನಂಬರ್ ವಿವರವನ್ನು ದಾಖಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದ್ದು,

ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಲ್ಲವೂ ಅಂದುಕೊಂಡಂತೆ ಆದರೆ ಡಿಸೆಂಬರ್ ನಲ್ಲಿ ಅಂತ್ಯದ ಒಳಗಾಗಿ ರೈತರ ಖಾತೆಗೆ ಬರ ಪರಿಹಾರದ ಹಣ ಸಿಗಲಿದೆ ಎಂದು  ಸಚಿವ ಕೃಷ್ಣ ಬೈರೇಗೌಡ ಮಾಹಿತಿ ಹಂಚಿಕೊಂಡಿದ್ದಾರೆ.

FID/fruits ತಂತ್ರ‍ಾಶದ ಕುರಿತು ಸಂಪೂರ್ಣ ಮಾಹಿತಿ ತಿಳಿಯಲು  ಈ ಕೆಳಗಿನ ಅಂಕಣಗಳನ್ನು ಓದಿ:

Fruits ID: ಸರಕಾರದ ಎಲ್ಲಾ ಬಗ್ಗೆಯ ಬೆಳೆ ಪರಿಹಾರ ಪಡೆಯಲು ಈ ವೆಬ್ಸೈಟ್ ನಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಸೇರಿಸುವುದು ಕಡ್ಡಾಯ!

FID Number-2023: ಈ ನಂಬರ್ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ ಮೊತ್ತ ಜಮೆ! ಕೂಡಲೇ FID ಮಾಡಿಸಿಕೊಳ್ಳಿ.

FID Number: ರೈತರು ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಎಫ್.ಐ.ಡಿ. (FID) ನಂಬರ್ ಕಡ್ಡಾಯ!

FID number: ಬೆಳೆ ವಿಮೆ ,ಬೆಳೆ ಸಾಲ ಪಡೆಯಲು ರೈತರಿಗೆ ಕಡ್ಡಾಯ ಈ ಐಡಿ! ಇದನ್ನು ನಿಮ್ಮ ಮೊಬೈಲ್ ನಲ್ಲಿ ಹೇಗೆ ಪಡೆಯುವುದು?

- Advertisment -
LATEST ARTICLES

Related Articles

- Advertisment -

Most Popular

- Advertisment -