HomeNew postsGruhalakshmi yojana-2024: ಈ ಪಕ್ರಿಯೆ ಪಾಲಿಸಿದರೆ ಮಾತ್ರ ಮುಂದಿನ ತಿಂಗಳ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ...

Gruhalakshmi yojana-2024: ಈ ಪಕ್ರಿಯೆ ಪಾಲಿಸಿದರೆ ಮಾತ್ರ ಮುಂದಿನ ತಿಂಗಳ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಜಮಾ ಅಗಲಿದೆ!

ರಾಜ್ಯ ಸರಕಾರದ ಗೃಹಲಕ್ಷ್ಮಿ(Gruhalakshmi yojana-2024) ಯೋಜನೆಯಡಿ 2,000 ರೂ ಪಡೆಯಲು ಮರು ಪರಿಶೀಲನೆ ಪ್ರಕ್ರಿಯೆಯನ್ನು ಸಂಬಂಧಪಟ್ಟ ಇಲಾಖೆಯಿಂದ ಪ್ರಾರಂಭಿಸಲಾಗಿದ್ದು ಈ ಯೋಜನೆಯಡಿ ಈಗಾಗಲೇ ಅರ್ಥಿಕ ನೆರವು ಪಡೆಯುತ್ತಿರುವವರು ಮುಂದಿನ ಕಂತಿನ ಹಣ ಪಡೆಯಲು ಈ ಪ್ರಕ್ರಿಯೆಯನ್ನು ಪಾಲಿಸಿದರೆ ಮಾತ್ರ ನಿಮ್ಮ ಖಾತೆಗೆ ಹಣ ಜಮಾ ಅಗಲಿದೆ.

ಗೃಹಲಕ್ಷ್ಮಿ ಯೋಜನೆಯಡಿ ಅರ್ಥಿಕ ನೆರವು ಪಡೆಯುತ್ತಿರುವ ಫಲಾನುಭವಿಗಳ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅರ್ಹ ಫಲಾನುಭವಿಗಳಿಗೆಯೇ ಈ ಯೋಜನೆಯಡಿ ಅರ್ಥಿಕ ನೆರವು ವರ್ಗಾವಣೆ ಅಗಿದಿಯೇ ಎಂದು ಖಚಿತಪಡಿಸಿಕೊಳ್ಳಲು ಗ್ರಾಮ ಮತ್ತು ಕರ್ನಾಟಕ ಒನ್ ಕೇಂದ್ರಗಳ ಮೂಲಕ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಇ-ಕೆವೈಸಿ ಮಾಡಲಾಗುತ್ತಿದೆ.

ಇದನ್ನೂ ಓದಿ: Bara Parihara-2024:ರಾಜ್ಯದ 29 ಲಕ್ಷ ರೈತರಿಗೆ 545 ಕೋಟಿ ಬರ ಪರಿಹಾರ !! ಪರಿಹಾರ ಹಣ ನಿಮಗೂ ಬಂದಿದೇ ಚೆಕ್ ಮಾಡಿ?

Gruhalakshmi yojana e-KYC: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರು ಪರಿಶೀಲನೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಈ ಯೋಜನೆಯಡಿ ಪ್ರಸ್ತುತ ಅರ್ಥಿಕ ನೆರವು ಪಡೆಯುತ್ತಿರುವ ಫಲಾನುಭವಿಗಳು ನಿಮ್ಮ ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕಂಪ್ಯೂಟರ್ ಕೇಂದ್ರವನ್ನು ರೇಷನ್ ಕಾರ್ಡ ಮತ್ತು ಆಧಾರ್ ಕಾರ್ಡ್ ಮತ್ತು ಅಧಾರ್ ನಲ್ಲಿರುವ ಮೊಬೈಲ್ ನಂಬರ್ ಪೋನ್ ತೆಗೆದುಕೊಂಡು ಭೇಟಿ ಮಾಡಿ ಒಟಿಪಿ ಆಧಾರಿತ ಇ-ಕೆವೈಸಿಯನ್ನು ಮಾಡುವ ಮೂಲಕ ನಿಮ್ಮ ಅರ್ಜಿಯ ಮರುಪರೀಶಿಲನೆ ಮಾಡಿಕೊಂಡು ಮುಂದಿನ ತಿಂಗಳ ರೂ 2,000 ಹಣವನ್ನು ಪಡೆಯಲು ಅರ್ಹರಾಗುತ್ತೀರಿ.

Gruhalakshmi- ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರು ಪರಿಶೀಲನೆ ಎಲ್ಲಿ ಮಾಡಿಸಬೇಕು?

ಈ ಯೋಜನೆಯ ಫಲಾನುಭವಿಗಳು ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರವನ್ನು ಭೇಟಿ ಮಾಡಿ ಇ-ಕೆವೈಸಿ ಮಾಡಿಸಿಕೊಳ್ಳಬವುದು.

ಇದನ್ನೂ ಓದಿ: Land Survey- ನಿಮ್ಮ ಜಮೀನಿನ ಹದ್ದುಬಸ್ತು ಮಾಡಿಸಿದಾಗ ಅಕ್ಕ-ಪಕ್ಕದವರು ಜಮೀನನ್ನು ಒತ್ತುವರಿ ಮಾಡಿದ್ದರೆ ತೆರವುಗೊಳಿಸುವುದು ಹೇಗೆ?

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರು ಪರಿಶೀಲನೆ ಯಾವ ಕಾರಣಕ್ಕೆ ಮಾಡಲಾಗುತ್ತದೆ?

ಈ ಯೋಜನೆ ಅನುಷ್ಥಾನ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನೇರ ನಗದು ವರ್ಗಾವಣೆ(DBT) ಮೂಲಕ ವರ್ಗಾವಣೆ ಮಾಡುತ್ತಿರುವ ರೂ 2,000 ಅರ್ಹ ಫಲಾನುಭವಿಗಳ ಖಾತೆಗೆಯೇ ಜಮಾ ಅಗಿತ್ತಿದೆಯೇ ಎಂದು ಫಲಾನುಭವಿಗಳ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಈಗ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರು ಪರಿಶೀಲನೆ ಮಾಡಲಾಗುತ್ತಿದೆ.

Gruhalakshmi new application- ಗೃಹಲಕ್ಷ್ಮಿ ಯೋಜನೆಯ ಹೊಸ ಅರ್ಜಿ:

ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಸಲ್ಲಿಸಲು ಅವಕಾಶ, ಕುಟುಂಬದ ಮುಖ್ಯಸ್ಥರನ್ನು ಬದಲಿಸಿದ ಕಾರ್ಡ್‌ಗಳು, ಹೊಸ ಪಡಿತರ ಚೀಟಿ ಕಾರ್ಡ್‌ಗಳು, ಇನ್ನಿತರ ಬದಲಾವಣೆ ಮಾಡಿಸಿದ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸದ ಎಲ್ಲಾ ಕಾರ್ಡದಾರರಿಗೂ ಅರ್ಜಿ ಸಲ್ಲಿಸಲು ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರದಲ್ಲಿ ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ: Swavalambi Yojana application-ಸ್ವಾವಲಂಬಿ ಯೋಜನೆಯಡಿ 1.00 ಲಕ್ಷದವರೆಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

Required Documents for gruhalakshmi- ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು:

1) ರೇಷನ್ ಕಾರ್ಡ್/ ಪಡಿತರ ಚೀಟಿ.

2) ಆಧಾರ್ ಕಾರ್ಡ್ ಮತ್ತು ಆಧಾರ್ ಲಿಂಕ್ ಮೊಬೈಲ್ ನಂಬರ್.

3) ಬ್ಯಾಂಕ್ ಪಾಸ್ ಬುಕ್ ಪ್ರತಿ.

Most Popular

Latest Articles

- Advertisment -

Related Articles