Guest Teachers Recruitment-2024: ಸರ್ಕಾರಿ ಶಾಲೆಗಳಲ್ಲಿ 35,000 ಅತಿಥಿ ಶಿಕ್ಷಕರ ಭರ್ತಿಗೆ ಅನುಮೋದನೆ!

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯು 2024-25 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ರಾಜ್ಯದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 35,000 ಅತಿಥಿ ಬೋಧಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸರ್ಕಾರದಿಂದ ಅನುಮತಿ ನೀಡಲಾಗಿದ್ದು, ಈ ನೇಮಕಾತಿಯ(Guest Teachers Recruitment) ಸಂಪೂರ್ಣ ವಿವರ ಇಲ್ಲಿದೆ.

Guest Teachers Recruitment-2024: ಸರ್ಕಾರಿ ಶಾಲೆಗಳಲ್ಲಿ 35,000 ಅತಿಥಿ ಶಿಕ್ಷಕರ ಭರ್ತಿಗೆ ಅನುಮೋದನೆ!
Guest Teachers Recruitment-2024

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯು 2024-25 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ರಾಜ್ಯದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 35,000 ಅತಿಥಿ ಬೋಧಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸರ್ಕಾರದಿಂದ ಅನುಮತಿ ನೀಡಲಾಗಿದ್ದು, ಈ ನೇಮಕಾತಿಯ(Guest Teachers Recruitment) ಸಂಪೂರ್ಣ ವಿವರ ಇಲ್ಲಿದೆ.

ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಖಾಯಂ ಶಿಕ್ಷಕರ ನೇಮಕಾತಿ ಆಗುವವರೆಗೆ ಅಥವಾ ಈ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಶಿಕ್ಷಕರ ಕೊರತೆಯನ್ನು ನೀಗಿಸಲು ಒಟ್ಟು 35,000 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಇದೀಗ ಸರ್ಕಾರ ಸಹಮತಿ ನೀಡಿದೆ.

Guest Teachers Recruitment - ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು PST ಮತ್ತು GPT ಹುದ್ದೆಗಳನ್ನು ಸೇರಿ ಒಟ್ಟು 33,863 ಹುದ್ದೆಗಳನ್ನು ಮೊದಲ ಹಂತದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳ ಜಿಲ್ಲಾವಾರು ಮತ್ತು ತಾಲೂಕವಾರು ಕಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗಳ ಸಂಖ್ಯೆ ಪಟ್ಟಿಯನ್ನು ಸರ್ಕಾರದಿಂದ ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯ ಪಿಡಿಎಫ್ ಅನ್ನು ಲೇಖನದ ಕೊನೆಯ ಭಾಗದಲ್ಲಿ ನೀಡಲಾಗಿದೆ.

ಇದನ್ನೂ ಓದಿ: mp election result-2024: ಲೋಕಸಭೆ ಚುನಾವಣೆ ಲೈವ್ ಫಲಿತಾಂಶ ನೋಡಲು ಮೊಬೈಲ್ ಅಪ್ಲಿಕೇಶನ್!

2024-25ನೇ ಶೈಕ್ಷಣಿಕ ವರ್ಷಕ್ಕೆ ಖಾಲಿ ಇರುವ 35,000 ಅತಿಥಿ ಬೋಧಕರ ಹುದ್ದೆಗಳ ನೇಮಕಾತಿಯು ಶೀಘ್ರದಲ್ಲಿಯೇ ಆರಂಭವಾಗುವ ಸಾಧ್ಯತೆಗಳಿವೆ. ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈಗಿನಿಂದಲೇ ಅರ್ಜಿ ಸಲ್ಲಿಕೆಯ ಬೇಕಾಗಿರುವ ದಾಖಲಾತಿಗಳನ್ನು ಹಾಗೂ ನೇಮಕಾತಿಗೆ ಬೇಕಾಗಿರುವಂತಹ ನಿಮ್ಮ ಎಲ್ಲಾ ಹಿಂದಿನ ಶೈಕ್ಷಣಿಕ ದಾಖಲಾತಿಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ.

ಸರ್ಕಾರದಿಂದ ಬಿಡುಗಡೆಯಾಗಿರುವ ಜಿಲ್ಲಾವಾರು ಖಾಲಿ ಹುದ್ದೆಗಳ ಸಂಖ್ಯೆ ಮತ್ತು ತಾಲೂಕಾವಾರು ಹುದ್ದೆಗಳ ಸಂಖ್ಯೆಯ ಪಟ್ಟಿಯನ್ನು ಕೆಳಗೆ ನೀಡಲಾಗಿದ್ದು ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಂಡು ಪರಿಶೀಲಿಸಿ.

ಇದನ್ನೂ ಓದಿ: Karmika card-ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯ ನೋಂದಾಯಿತ ಸದಸ್ಯರಾಗಲು ಅರ್ಜಿ ಆಹ್ವಾನ!

ಹುದ್ದೆಗಳ ಪಟ್ಟಿ : ಡೌನ್ಲೋಡ್