Hakku patra-7 ಸಾವಿರ ರೈತರಿಗೆ ಹಕ್ಕು ಪತ್ರ: ಅರಣ್ಯ ಸಚಿವ ಈಶ್ವರ ಖಂಡ್ರೆ

Facebook
Twitter
Telegram
WhatsApp

ಕರಾವಳಿ ಮತ್ತು ಮಲೆನಾಡು ಇತರೆ ಭಾಗದ ರೈತರ ಹಕ್ಕು ಪತ್ರ ಅರ್ಜಿ ವಿಲೇವಾರಿಯು ಕಳೆದ ಹಲವು ವರ್ಷಗಳಿ ಹಾಗೆಯೇ ಉಳಿದ್ದು ಈ ಅರ್ಜಿಯ ವಿಲೇವಾರಿ ಕುರಿತು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈಗಾಗಲೇ ಹುಕ್ಕಪತ್ರ ಪಡೆಯಲು ಅರ್ಜಿ ಸಲ್ಲಿಸಿರುವ ರೈತರಿಗೆ ಈ ಯೋಜನೆಯ ಪ್ರಯೋಜನ ದೊರೆಯಲಿದ್ದು ಇಲಾಖೆಯ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ ಒಟ್ಟು 13,750 ಅರ್ಜಿಗಳು ಸಲ್ಲಿಕೆಯಾಗಿದ್ದು.

ಒಟ್ಟು ಸಲ್ಲಿಕೆಯಾದ ಅರ್ಜಿಯ ಪ್ರಕಾರ 31,864 ಎಕರೆ ಭೂಮಿಯನ್ನು ಹೊಂದಿರುತ್ತದೆ ಈ ಅರ್ಜಿಯಲ್ಲಿ ಮಾರ್ಗಸೂಚಿ ಪ್ರಕಾರ ಅರ್ಹ ರೈತರನ್ನು ಗುರುತಿಸುವ ಪ್ರಕ್ರಿಯೆ ಇಲಾಖೆ ನಡೆಯುತ್ತಿದೆ.

ಇದನ್ನೂ ಓದಿ: Home Subsidy scheme-ವಸತಿ ಯೋಜನೆಯಡಿ 1 ಲಕ್ಷಕ್ಕೆ ಮನೆ ಇಲ್ಲಿದೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್!

7 ಸಾವಿರ ರೈತರಿಗೆ ಹಕ್ಕು ಪತ್ರ: ಅರಣ್ಯ ಸಚಿವ ಈಶ್ವರ ಖಂಡ್ರೆ:

ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿರುವ 13,750 ಪ್ರಕರಣಗಳ 31,864 ಎಕರೆ ಭೂಮಿ ಇದೆ. ಈ ಪೈಕಿ 7 ಸಾವಿರ ಪ್ರಕರಣಗಳಿಗೆ ಹಕ್ಕು ಪತ್ರ ನೀಡಲಾಗುವುದು. ಆದರೆ 3 ಎಕರೆಗಿಂತ ಹೆಚ್ಚಿನ ಭೂಮಿ ನೀಡುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

Hakku patra-ಯಾರೆಲ್ಲ ಹಕ್ಕುಪತ್ರ ಪಡೆಯಲು ಅರ್ಹರು?

ಸಚಿವರು ಹಂಚಿಕೊಂಡಿರುವ ಮಾಹಿತಿಯನ್ವಯ ಅರಣು ಇಲಾಖೆಗೆ ಸೇರಿದ ಭೂಮಿಯಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆ 1980 ಜಾರಿಗೂ ಮುನ್ನ ಕೃಷಿ ಮಾಡುತ್ತಿರುವವರಿಗೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: DBT amount status-ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ನಿಮಗೆ ಈ ತಿಂಗಳ ಅನ್ನಭಾಗ್ಯ ಹಣ ಎಷ್ಟು? ಬರುತ್ತದೆ ಎಂದು ಚೆಕ್ ಮಾಡಿ

Forest department- ಜನವರಿ ತಿಂಗಳ ಒಳಗಾಗಿ 7 ಸಾವಿರ ರೈತರಿಗೆ ಹಕ್ಕುಪತ್ರ:

ಅರ್ಜಿ ವಿಲೇವಾರಿ ಪ್ರಕ್ರಿಯೆಯು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ನಡೆಯುತ್ತಿದ್ದು ಅರ್ಹ ಫಲಾನುಭವಿ ರೈತರಿಗೆ ಈ ತಿಂಗಳ ಒಳಗಾಗಿ ಅಂದರೆ ಜನವರಿ-2024ರ ಒಳಗಾಗಿ 7 ಸಾವಿರ ರೈತರಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಹಕ್ಕು ಪತ್ರ ಎಂದರೇನು?

ಒಬ್ಬ ವ್ಯಕ್ತಿ ಅಥವಾ ನಾಗರಿಕನು ಆಸ್ತಿಯನ್ನು ಹೊಂದಿದ್ದರೂ ಅದನ್ನು ಕಾನೂನಾತ್ಮಕವಾಗಿ ಸಾಬೀತುಪಡಿಸಲು ದಾಖಲೆಗಳನ್ನು ಹೊಂದಿಲ್ಲದಂತಹ ಸನ್ನಿವೇಶದಲ್ಲಿ ಆ ವ್ಯಕ್ತಿಗೆ ತನ್ನ ಜಮೀನನ್ನ ಕಾನೂನಾತ್ಮಕವಾಗಿ ಹಕ್ಕನ್ನು ಸಾಬೀತುಪಡಿಸಲು ಸರಕಾರದಿಂದ ನೀಡುವ ಪ್ರತ್ರಕ್ಕೆ ಹಕ್ಕು ಪತ್ರ ಎಂದು ಕರೆಯುತ್ತಾರೆ.

ಹಕ್ಕು ಪತ್ರ ಪ್ರಯೋಜನವೇನು?

ವ್ಯಕ್ತಿಗೆ ಭೂಮಿಯನ್ನು ಹೊಂದಿರುವ ಕುರಿತು ಅಧಿಕೃತ ದಾಖಲೆ ಇದಾಗಿರುತ್ತದೆ. ಸರಕಾರವೇ ಈ ದಾಖಲೆಯನ್ನು ನೀಡುವುದರಿಂದ ಯಾವುದೇ ರೀತಿಯ ದಾಖಲೆ ಸಂಶೋಧನೆ ಮಾಡುವುದು ಅವಶ್ಯವಿರುವುದಿಲ್ಲ.

ಇದನ್ನೂ ಓದಿ: PMEGP Scheme: ಗರಿಷ್ಠ 50 ಲಕ್ಷಗಳವರೆಗೆ 250 ಬಗ್ಗೆಯ ಸ್ವ-ಉದ್ಯೋಗ ಪ್ರಾರಂಭಿಸಲು ಸಾಲಕ್ಕೆ ಸಹಾಯಧನ ಪಡೆಯಲು ಅರ್ಜಿ ಅಹ್ವಾನ!

ಅರಣ್ಯ ಸಂರಕ್ಷಣಾ ಕಾಯಿದೆ-1980 ಪ್ರತಿ- Download Now

ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿರುವ 13,750 ಪ್ರಕರಣಗಳ 31,864 ಎಕರೆ ಭೂಮಿ ಇದೆ. ಈ ಪೈಕಿ 7 ಸಾವಿರ ಪ್ರಕರಣಗಳಿಗೆ ಹಕ್ಕು ಪತ್ರ ನೀಡಲಾಗುವುದು. ಆದರೆ 3 ಎಕರೆಗಿಂತ ಹೆಚ್ಚಿನ ಭೂಮಿ ನೀಡುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.#landregistration @eshwar_khandre pic.twitter.com/1moD0XRKbj — DIPR Karnataka (@KarnatakaVarthe) January 3, 2024

Facebook
Twitter
Telegram
WhatsApp
Picture of siddesh

siddesh

Leave a Comment

Top Stories

Dishank mobile app

Dishank mobile app- ಕರ್ನಾಟಕದ ಯಾವುದೇ ಸ್ಥಳದ ಸರ್ವೆ ನಂಬರ್ ಮತ್ತು ಮಾಲೀಕರ ವಿವರ ಪಡೆಯಬಹುದು!

ಸಾರ್ವಜನಿಕರು/ರೈತರು ತಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್(Google play store) ಭೇಟಿ ಮಾಡಿ ಈ ಕೆಳಗೆ ತಿಳಿಸಿರುವ ಮೊಬೈಲ್ ಅಪ್ಲಿಕೇಶನ್ ಅನ್ನು(Dishank mobile app) ತಮ್ಮ ಮೊಬೈಲ್ ನಲ್ಲಿ ಹಾಕಿಕೊಂಡು ಕುಳಿತಲೇ ರಾಜ್ಯದ

Google Pay loan

Google Pay loan-ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ 9.0 ಲಕ್ಷದವರೆಗೆ ಲೋನ್!

ಗೂಗಲ್ ಪೇ ಮೊಬೈಲ್ ಅಪ್ಲಿಕೇಶನ್ ನಲ್ಲಿ ಬಳಕೆದಾರರು ವೈಯಕ್ತಿಕ ಸಾಲ(Google Pay loan) ಪಡೆಯಲು ಅವಕಾಶವಿದ್ದು, ಲೋನ್ ಪಡೆಯಲು ಅರ್ಜಿಯನ್ನು ಸಲ್ಲಿಸುವುದು ಹೇಗೆ? ಇತರೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಸಾರ್ವಜನಿಕರು ಲೋನ್

D.Pharm. Admission

D.Pharm admission-2024: ಡಿ.ಫಾರ್ಮ ಕೋರ್ಸ್ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ!

ಕರ್ನಾಟಕ ಸರ್ಕಾರ ಔಷಧ ನಿಯಂತ್ರಣ ಇಲಾಖೆ ಪರೀಕ್ಷಾ ಪ್ರಾಧಿಕಾರ ಮಂಡಳಿಯಿಂದ ಡಿ.ಫಾರ್ಮಸಿ(D.Pharmacy ) ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಔಷಧ ನಿಯಂತ್ರಣ ಇಲಾಖೆಯ ಪರೀಕ್ಷಾ ಪ್ರಾಧಿಕಾರ ಮಂಡಳಿಯಿಂದ(D.Pharm. Admission) 2024-25 ನೇ ಶೈಕ್ಷಣಿಕ