Land purchase scheme- 25 ಲಕ್ಷದಲ್ಲಿ ಶೇ 50% ಸಬ್ಸಿಡಿಯಲ್ಲಿ ಕೃಷಿ ಜಮೀನು ಖರೀದಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

Facebook
Twitter
Telegram
WhatsApp

ಭೂ ಒಡೆತನ ಯೋಜನೆಯಡಿ(Land purchase scheme) ಕೃಷಿ ಜಮೀನು ಇಲ್ಲದ ಅಂದರೆ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಕೃಷಿ ಜಮೀನನ್ನು ಖರೀದಿ ಮಾಡಿ ಸ್ವಾವಲಂಬಿ ಜೀವನವನ್ನು ಕಟ್ಟಿಕೊಳ್ಳಲು ಅರ್ಹ ಅರ್ಜಿದಾರರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಏನಿದು ಭೂ ಒಡೆತನ ಯೋಜನೆ? ಯಾರೆಲ್ಲ ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬಹುದು? ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲೆಗಳೇನು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?(Land purchase yojana application) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಮತ್ತು  ಪರಿಶಿಷ್ಟ  ಪಂಗಡದವರ ಅರ್ಥಿಕ ಅಭಿವೃದ್ದಿಗಾಗಿ ಕಲ್ಯಾಣ ಯೋಜನೆಗಳಲ್ಲಿ ಒಂದಾದ ಭೂ ಒಡೆತನ ಯೋಜನೆಯ(bho odethana yojane) ಸೌಲಭ್ಯ  ಪಡೆಯಲು ವಿವಿಧ ನಿಗಮಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಇದನ್ನೂ ಓದಿ: Tractor subsidy-2024: ಟ್ರ್ಯಾಕ್ಟರ್, ಪವರ್ ಟಿಲ್ಲರ್ ಸೇರಿದಂತೆ ಸಬ್ಸಿಡಿಯಲ್ಲಿ ಯಾವೆಲ್ಲ ಯಂತ್ರ ಪಡೆಯಬಹುದು? ಇಲ್ಲಿದೆ ಸಂಪೂರ್ಣ ವಿವರ!

Bhoo odethana yojana application- ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ.
2) ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
3) ಭೂ ರಹಿತ ಕೃಷಿ ಕಾರ್ಮಿಕರ ಪ್ರಮಾಣ ಪತ್ರ(ತಹಸೀಲ್ದಾರರಿಂದ).
4) ರೇಷನ್ ಕಾರ್ಡ/ಪಡಿತರ ಚೀಟಿ ಪ್ರತಿ.
5) ಬ್ಯಾಂಕ್ ಪಾಸ್ ಬುಕ್ ಪ್ರತಿ.
6) ಪೋಟೋ.

ಇದನ್ನೂ ಓದಿ: Beautician training-ಉಚಿತ ಫಿಟ್ನೆಸ್ ಕೋಚ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ!

bhoo odethana scheme online application link-ಅರ್ಜಿ ಸಲ್ಲಿಕೆ ವಿಧಾನ:

ಅರ್ಹ ಅರ್ಜಿದಾರರು ಮೇಲೆ ತಿಳಿಸಿರುವ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಈ ಲಿಂಕ್ Apply Now ಮೇಲೆ ಕ್ಲಿಕ್ ಮಾಡಿ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ಕೊನೆಯ ದಿನಾಂಕ ಮುಗಿಯುವುದರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

bhoo odethana yojana last date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 

ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ದಿನಾಂಕ: 10 ಅಕ್ಟೋಬರ್ 2024 ರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು:

ಭೂ ಒಡೆತನ ಯೋಜನೆಯಡಿ ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿ ಮತ್ತು  ಪರಿಶಿಷ್ಟ  ಪಂಗಡ ವರ್ಗಕ್ಕೆ ಸೇರಿದ ಕೃಷಿ ಜಮೀನು ಇಲ್ಲದೇ ಇರುವ ಮಹಿಳಾ ಕೃಷಿ ಕಾರ್ಮಿಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Crop loan farmer list-ಬೆಳೆ ಸಾಲ ಮನ್ನಾ ಅಗಿರುವ ಪಟ್ಟಿಯನ್ನು ನೋಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

bhoo odethana yojana subsidy details- ಭೂ ಒಡೆತನ ಯೋಜನೆ ಸಹಾಯಧನ ವಿವರ ಹೀಗಿದೆ:

ಭೂ ಒಡೆತನ ಯೋಜನೆ ಸಹಾಯಧನ ಮಾಹಿತಿ ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸೀಮಿತಗೊಂಡಂತೆ ಈ ಯೋಜನೆಯಡಿ ಘಟಕ ವೆಚ್ಚವನ್ನು ರೂ.25.00 ಲಕ್ಷಗಳು ಮತ್ತು ಉಳಿದ 26 ಜಿಲ್ಲೆಗಳಲ್ಲಿ ಘಟಕ ವೆಚ್ಚವನ್ನು ರೂ.20.00 ಲಕ್ಷಗಳಿಗೆ ನಿಗದಿಪಡಿಸಲಾಗಿರುತ್ತದೆ. ಒಟ್ಟು ಘಟಕ ವೆಚ್ಚದಲ್ಲಿ ಶೇ.50 ರಷ್ಟು ಸಹಾಯಧನ ಮತ್ತು ಶೇ.50 ರಷ್ಟು ಅವಧಿಸಾಲವಾಗಿರುತ್ತದೆ. 

ಅವಧಿಸಾಲವನ್ನು ನಿಗಮದಿಂದಲೇ ಭರಿಸಲಾಗುತ್ತದೆ. ಇದಕ್ಕೆ ವಾರ್ಷಿಕ ಶೇ.6ರ ದರದಲ್ಲಿ ಬಡ್ಡಿ ವಿಧಿಸಲಾಗುತ್ತದೆ.  ಸಾಲ ಮತ್ತು ಬಡ್ಡಿಯನ್ನು 10 ವರ್ಷಗಳ ಅವಧಿಯಲ್ಲಿ ವಾರ್ಷಿಕ ಸಮ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗಿರುತ್ತದೆ.

ಇದನ್ನೂ ಓದಿ: Mini tractor subsidy- ಸಬ್ಸಿಡಿಯಲ್ಲಿ ಮಿನಿ ಟ್ರಾಕ್ಟರ್, ಪವರ್ ಟಿಲ್ಲರ್, ಪವರ್ ವೀಡರ್ ಇತರೆ ಯಂತ್ರಗಳನ್ನು ಪಡೆಯಲು ಅರ್ಜಿ ಆಹ್ವಾನ!

SC/ST nigamagalu- ಯಾವೆಲ್ಲ ನಿಗಮದಿಂದ ಅರ್ಜಿ ಆಹ್ವಾನಿಸಲಾಗಿದೆ?

1) ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ.

2) ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮ.

3) ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ.

4) ಕರ್ನಾಟಕ ಭೋವಿ ಅಭಿವೃದ್ದಿ ನಿಗಮ.

5) ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮ.

6) ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ.

useful website links-ಉಪಯುಕ್ತ ವೆಬ್ಸೈಟ್ ಲಿಂಕ್ ಗಳು:

ಭೂ ಒಡೆತನ ಯೋಜನೆ ಅರ್ಜಿ ಸಲ್ಲಿಸಲು ಜಾಲತಾಣದ ಲಿಂಕ್: Apply Now
ಭೂ ಒಡೆತನ ಯೋಜನೆ ಅಧಿಕೃತ ಮಾರ್ಗಸೂಚಿ/bho odethana yojana Guidelines:- Download Now
helpline- ಸಹಾಯವಾಣಿ: 9482300400

Facebook
Twitter
Telegram
WhatsApp
Picture of siddesh

siddesh

Leave a Comment

Top Stories

Dishank mobile app

Dishank mobile app- ಕರ್ನಾಟಕದ ಯಾವುದೇ ಸ್ಥಳದ ಸರ್ವೆ ನಂಬರ್ ಮತ್ತು ಮಾಲೀಕರ ವಿವರ ಪಡೆಯಬಹುದು!

ಸಾರ್ವಜನಿಕರು/ರೈತರು ತಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್(Google play store) ಭೇಟಿ ಮಾಡಿ ಈ ಕೆಳಗೆ ತಿಳಿಸಿರುವ ಮೊಬೈಲ್ ಅಪ್ಲಿಕೇಶನ್ ಅನ್ನು(Dishank mobile app) ತಮ್ಮ ಮೊಬೈಲ್ ನಲ್ಲಿ ಹಾಕಿಕೊಂಡು ಕುಳಿತಲೇ ರಾಜ್ಯದ

Google Pay loan

Google Pay loan-ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ 9.0 ಲಕ್ಷದವರೆಗೆ ಲೋನ್!

ಗೂಗಲ್ ಪೇ ಮೊಬೈಲ್ ಅಪ್ಲಿಕೇಶನ್ ನಲ್ಲಿ ಬಳಕೆದಾರರು ವೈಯಕ್ತಿಕ ಸಾಲ(Google Pay loan) ಪಡೆಯಲು ಅವಕಾಶವಿದ್ದು, ಲೋನ್ ಪಡೆಯಲು ಅರ್ಜಿಯನ್ನು ಸಲ್ಲಿಸುವುದು ಹೇಗೆ? ಇತರೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಸಾರ್ವಜನಿಕರು ಲೋನ್

D.Pharm. Admission

D.Pharm admission-2024: ಡಿ.ಫಾರ್ಮ ಕೋರ್ಸ್ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ!

ಕರ್ನಾಟಕ ಸರ್ಕಾರ ಔಷಧ ನಿಯಂತ್ರಣ ಇಲಾಖೆ ಪರೀಕ್ಷಾ ಪ್ರಾಧಿಕಾರ ಮಂಡಳಿಯಿಂದ ಡಿ.ಫಾರ್ಮಸಿ(D.Pharmacy ) ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಔಷಧ ನಿಯಂತ್ರಣ ಇಲಾಖೆಯ ಪರೀಕ್ಷಾ ಪ್ರಾಧಿಕಾರ ಮಂಡಳಿಯಿಂದ(D.Pharm. Admission) 2024-25 ನೇ ಶೈಕ್ಷಣಿಕ