HomeAgricultureMini Tractor- ಬೈಕ್ ಬೆಲೆಯಲ್ಲಿ ಮಿನಿ ಟ್ರ್ಯಾಕ್ಟರ್! ಏನಿದರ ವಿಶೇಷತೆ?

Mini Tractor- ಬೈಕ್ ಬೆಲೆಯಲ್ಲಿ ಮಿನಿ ಟ್ರ್ಯಾಕ್ಟರ್! ಏನಿದರ ವಿಶೇಷತೆ?

ಆತ್ಮೀಯ ರೈತ ಬಾಂಧವರೇ ಇಂದು ಈ ಅಂಕಣದಲ್ಲಿ ತಮ್ಮ ಕೃಷಿ ಕೆಲಸಗಳಿಗೆ ಅಗತ್ಯಕ್ಕೆ ತಕ್ಕಂತೆ ಪವರ್ ವೀಡರ್ ಯಂತ್ರವನ್ನು ಬಳಕೆ ಮಾಡಿಕೊಂಡು ಮಿನಿ ಟ್ರ್ಯಾಕ್ಟರ್ ತಯಾರಿ ಮಾಡಿಕೊಂಡಿರುವ ರೈತ ಮತ್ತು ಉಪಕರಣದ(modified power weeder) ಕುರಿತು ಮಾಹಿತಿಯನ್ನು ಪ್ರಕಟಿಸಿದ್ದೆವೆ. ಇಂದಿನ ದಿನಮಾನಗಳಲ್ಲಿ ಕೃಷಿ ಕಾರ್ಯಗಳನ್ನು ಮಾಡಲು ಯಂತ್ರೋಪಕರಣಗಳು ಅತ್ಯಗತ್ಯ ಬೇಕಾಗುತ್ತದೆ.                     

ಈ ನಿಟ್ಟಿನಲ್ಲಿ ಗುಲ್ಬರ್ಗ ಜಿಲ್ಲೆ ಗುಲ್ಬರ್ಗ ತಾಲೂಕಿನ ಬೀಮಶಂಕರ್ ಎನ್ನುವ ರೈತರು  ಮಾಡಿಫೈಡ್ ಮಿನಿ ಟ್ರ್ಯಾಕ್ಟರ್ ಸಹಾಯದಿಂದ ತಮ್ಮ ದೈನಂದಿನ ಕೃಷಿ ಚಟುವಟಿಯನ್ನು ಸುಲಭವಾಗಿದೆ ನಿರ್ವಹಿಸುತ್ತಿದ್ದಾರೆ. 7 ಎಚ್ ಪಿ ಪವರ್ ವೀಡರ್ ಗೆ ಮಾಡಿ ಫೈಡ್ ಟ್ರಾಲಿ ಜೋಡಣೆ ಮಾಡಿಕೊಂಡು ದನ-ಕರುಗಳಿಗೆ ಬೇಕಾದ ಮೇವು,ಹೊಲಕ್ಕೆ ಬೇಕಾದ ಕೃಷಿ ಪರಿಕರ ಸಾಗಾಣಿಕೆ ಜೊತೆಗೆ ಕೆಲಸಗಾರರನ್ನು ಸಹ ಇದರಲ್ಲೆ ಕರೆದುಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ: RTC Name correction- ಪಹಣಿಯಲ್ಲಿ ಹೆಸರು ತಿದ್ದುಪಡಿ  ಮಾಡುವುದು ಹೇಗೆ?  ಪಹಣಿಯನ್ನು ನಿಮ್ಮ ಮೊಬೈನಲ್ಲೇ ಡೌನ್ಲೋಡ್ ಮಾಡಿ.

ಇವರು ಹೇಳುವಂತೆ ಈ ಯಂತ್ರವು ಅತೀ ಉತ್ತಮವಾಗಿದ್ದು ಒಂದು ಗಂಟೆಗೆ ಕೆಲಸಕ್ಕೆ ಒಂದು ಲೀಟರ್ ಪೇಟ್ರೋಲ್ ಬೇಕಾಗುತ್ತದೆ ಯಾವುದೇ ಮಿನಿ ಟ್ರ್ಯಾಕ್ಟರ್ ಗಿಂತಲೂ ಕಮ್ಮಿ ಇಲ್ಲ ಮಿನಿ ಟ್ರ್ಯಾಕ್ಟರ್ ನಲ್ಲಿ ಮಾಡುವಂತಹ ಎಲ್ಲಾ ಕೆಲಸಗಳನ್ನು ನಾವು ಇದರಲ್ಲಿ ಮಾಡಬವುದು ಎಂದು ಹೇಳುತ್ತಾರೆ. ಈ ಯಂತ್ರದಲ್ಲಿ 3.5-4 ಕ್ವಿಂಟಾಲ್ ವರೆಗೆ ಸರಕನ್ನು ಸಾಗಾಣಿಕೆ ಮಾಡಬವುದಾಗಿದೆ.

ಕಡಿಮೆ ಜಮೀನು ಇರುವಂತಹ ರೈತರಿಗೆ ಈ ಯಂತ್ರ ಉಪಯುಕ್ತವಾಗಿದೆ. ಹೆಚ್ಚು ಖರ್ಚು ಮಾಡಿ ಟ್ರ್ಯಾಕ್ಟರ್ ಖರೀದಿ ಮಾಡಲಾಗದವರು ಈ ಯಂತ್ರ ಬಳಕೆ ಮಾಡಿಕೊಳ್ಳಬವುದು ಎನ್ನುತ್ತಾರ‍ೆ ರೈತ ಬೀಮಶಂಕರ್. ಕೇವಲ ಪವರ್ ವೀಡರ್ ಇದಲ್ಲಿ ಅದನ್ನು ಚಲಾಯಿಸಿ ಕೊಂಡು ನಡೆದು ಹೋಗಬೇಕಾಗುತ್ತದೆ ಅದರೆ ಟ್ರಾಲಿ ಜೋಡಣೆ ಮಾಡಿದಲ್ಲಿ ರೈತ ಕುಳಿತುಕೊಂಡು ಅರಾಮಗಿ ಚಲಾಯಿಸಿ ಕೊಂಡು ಹೋಗಬವುದಾಗಿದೆ.

ಇದಲ್ಲಿ ಟ್ರ‍ಾಲಿಯನ್ನು ನಿಯಂತ್ರಿಸಲು ಬ್ರೇಕ್ ವ್ಯವಸ್ಥೆ ಮಾಡಲಾಗಿದ್ದು ಯಾವುದೇ ಅಡೆತಡೆಯಿಲ್ಲದೆ, ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗಬವುದು. ಪವರ್ ವೀಡರ್ ಗೆ  ಸಂಬಂದಿಸಿದ ಇತರೆ ಜೋಡಣೆಗಳಾದ ರೂಟರ್, ನೇಗಿಲು, ಇತ್ಯಾದಿ ಪರಿಕರಗಳನ್ನು ತೆಗೆದುಕೊಂಡು ಹೋಗುವುದಕ್ಕೂ ಸಹಕಾರಿಯಾಗಿದೆ.

ಮಾಡಿಫೈಡ್ ಮಿನಿ ಟ್ರ್ಯಾಕ್ಟರ್  ವೀಡಿಯೋ:
https://youtu.be/u-QuNhsIOIc
ಕೃಷಿ ಯಂತ್ರೋಪಕರಣಗಳ ಖರೀದಿಗಾಗಿ ಸಂಪರ್ಕಿಸಿ: 9901876682

ಮಾಹಿತಿ ಕೃಪೆ: Farming business kannada

Most Popular

Latest Articles

- Advertisment -

Related Articles