Mushroom training-2024: ಅಣಬೆ ಕೃಷಿ ಮಾಡುವವರಿಗೆ ಇಲ್ಲಿದೆ ಉತ್ತಮ ಅವಕಾಶ!

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರೈತ ತರಬೇತಿ ಸಂಸ್ಥೆ, ವಿಸ್ತರಣಾ ನಿರ್ದೇಶನಾಲಯ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರದಿಂದ 'ಅಣಬೆ ಉತ್ಪಾದನಾ ತಂತ್ರಜ್ಞಾನ'(Mushroom training-2024) ಕುರಿತ ಐದು ದಿನಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Mushroom training-2024: ಅಣಬೆ ಕೃಷಿ ಮಾಡುವವರಿಗೆ ಇಲ್ಲಿದೆ ಉತ್ತಮ ಅವಕಾಶ!
Mushroom training-2024

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರೈತ ತರಬೇತಿ ಸಂಸ್ಥೆ, ವಿಸ್ತರಣಾ ನಿರ್ದೇಶನಾಲಯ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರದಿಂದ 'ಅಣಬೆ ಉತ್ಪಾದನಾ ತಂತ್ರಜ್ಞಾನ'(Mushroom training-2024) ಕುರಿತ ಐದು ದಿನಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರೈತ ತರಬೇತಿ ಸಂಸ್ಥೆ, ವಿಸ್ತರಣಾ ನಿರ್ದೇಶನಾಲಯ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರ (ಅಣಬೆ ಬೇಸಾಯ), ಕೃಷಿ ಸೂಕ್ಷ್ಮಜೀವಿಶಾಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲಯ, ಜಿಕೆವಿಕೆ ಇವರ ಸಹಯೋಗದೊಂದಿಗೆ 'ಅಣಬೆ ಉತ್ಪಾದನಾ ತಂತ್ರಜ್ಞಾನ' ಕುರಿತ ಐದು ದಿನಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿಯಲ್ಲಿ ಯಾವೆಲ್ಲ ವಿಷಯಗಳ ಕುರಿತು ತಿಳಿಸಲಾಗುತ್ತದೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಇತ್ಯಾದಿ ವಿಷಯಗಳ ಕುರಿತು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: PNB Recruitment 2024 - ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 7ನೇ ತರಗತಿ ಪಾಸಾದವರಿಗೆ ಅವಕಾಶ!

Mushroom training Method-ತರಬೇತಿ ವಿಧಾನ:

ಈ ತರಬೇತಿಯು ನಾಲ್ಕು ಹಂತಗಳನ್ನು ಒಳಗೊಂಡಿದ್ದು ಅವುಗಳ ವಿವರ ಹೀಗಿದೆ:

1) ಉಪನ್ಯಾಸ, 
2) ಕೌಶಲ್ಯ ತರಬೇತಿ, 
3) ಪ್ರಾತ್ಯಕ್ಷಿಕೆ, 
4) ಕ್ಷೇತ್ರ ಭೇಟಿ,

Mushroom training date-ತರಬೇತಿ ಅವಧಿ:

15-07-2024 ರಿಂದ 19-07-2024 ರವರೆಗೆ ಒಟ್ಟು ಐದು ದಿನ ತರಬೇತಿ ನಡೆಯಲಿದೆ.
ಸಮಯ ಬೆಳಿಗ್ಗೆ 10.00 ರಿಂದ ಸಾಯಂಕಾಲ 05.00 ರವರೆಗೆ

ಇದನ್ನೂ ಓದಿ: Birth certificate-ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರ ಪಡೆಯುವುದು ಭಾರೀ ಸುಲಭ!

How can apply-ಯಾರೆಲ್ಲ ತರಬೇತಿಯಲ್ಲಿ ಭಾಗವಹಿಸಬಹುದು?

ಆಸಕ್ತ ಕೃಷಿಕರು / ಕೃಷಿಕ ಮಹಿಳೆಯರು / ಗ್ರಾಮೀಣ  ಭಾಗದ ಯುವಕರು / ಯುವತಿಯರು ಮತ್ತು ಅಣಬೆ ಉದ್ಯಮದಲ್ಲಿ ಆಸಕ್ತಿ ಇರುವ ನಗರವಾಸಿಗಳು ಈ ತರಬೇತಿಯಲ್ಲಿ ಭಾಗವಹಿಸಬಹುದು.

Mushroom training fee-ತರಬೇತಿ ಶುಲ್ಕ : ರೂ. 4,000/- (ವಸತಿ ರಹಿತ) ರೂ 5,200/-(ವಸತಿ ಸಹಿತ)

Account No: 0425101030797

Canara Bank, GKVK, Bengaluru

IFSC Code: CNRB0002737

ಇವರಿಗೆ ದಿನಾಂಕ 10-07-2024 ರೊಳಗೆ ಸಲ್ಲಿಸತಕ್ಕದ್ದು,

ಇದನ್ನೂ ಓದಿ: Free beauty parlour training-30 ದಿನದ ಉಚಿತ ಬ್ಯೂಟಿ ಪಾರ್ಲರ್ ಮ್ಯಾನೇಜಮೆಂಟ್ ತರಬೇತಿಗೆ ಅರ್ಜಿ ಆಹ್ವಾನ!

ವಿಶೇಷ ಸೂಚನೆ:

  • 10-07-2024 ರ ನಂತರ ಬಂದ ಮೊತ್ತವನ್ನು ಮುಂದಿನ ತಂಡಕ್ಕೆ ಪರಿಗಣಿಸಲಾಗುವುದು.
  • ಮೊತ್ತವನ್ನು ಪಾವತಿಸಿದ ನಂತರ ಸ್ಟೀನ್‌ಶಾಟ್‌ನ್ನು ಈ ಕೆಳಕಂಡ ಮೊಬೈಲ್ ನಂಬರ್‌ಗೆ ಕಳುಹಿಸತಕ್ಕದ್ದು
  • ಒಮ್ಮೆ ಬಂದ ಮೊತ್ತವನ್ನು ಯಾವುದೇ ಕಾರಣಕ್ಕೂ ಮರುಪಾವತಿ ಮಾಡಲಾಗುವುದಿಲ್ಲ.

ತರಬೇತಿ ಉದ್ದೇಶಗಳು:

ಆಣಬೆ ಉತ್ಪಾದನಾ ಕೌಶಲ್ಯವನ್ನು ತಿಳಿಸಿಕೊಡುವುದು.

ಪ್ರಾತ್ಯಕ್ಷಿಕೆಯ ಮೂಲಕ ಅಣಬೆ ಬೇಸಾಯದ ಹಂತಗಳನ್ನು ಪರಿಚಯಿಸುವುದು.

ಅಣಬೆಯ ಪೌಷ್ಟಿಕತೆ ಮತ್ತು ಮೌಲ್ಯವರ್ಧನೆ ಕುರಿತು ತಿಳಿಸುವುದು ಮಾರುಕಟ್ಟೆ ತಾಂತ್ರಿಕತೆ & ಉದ್ಯಮಶೀಲತೆ ಅಭಿವೃದ್ಧಿ ಕುರಿತು ಮಾಹಿತಿ.

ಇದನ್ನೂ ಓದಿ: Guarantee Yojana-2024: ಗೃಹಲಕ್ಷ್ಮಿ ಹಣ ಬಿಡುಗಡೆ ದಿನಾಂಕ ಪ್ರಕಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!

ತರಬೇತಿಯಲ್ಲಿ ಯಾವೆಲ್ಲ ವಿಷಯಗಳ ಕುರಿತು ತಿಳಿಸಲಾಗುತ್ತದೆ?

  • ಅಣಬೆ ಕೃಷಿ ಪರಿಚಯ ಮತ್ತು ಮಹತ್ವ
  • ಆಯಿಸ್ಟರ್, ಬಟನ್ ಮತ್ತು ಮಿಲ್ಕಿ ಅಣಬೆಯ ಉತ್ಪಾದನಾ ತಂತ್ರಜ್ಞಾನಗಳು
  • ಅಣಬೆ ಬೀಜ ಉತ್ಪಾದನೆ
  • ಆಯಿಸ್ಟ‌ರ್ ಅಣಬೆ ಕೃಷಿ ಉತ್ಪಾದನಾ ತಂತ್ರಜ್ಞಾನಗಳು
  • ಇತರೆ ಅಣಬೆ ಕೃಷಿ ಉತ್ಪಾದನಾ ತಂತ್ರಜ್ಞಾನಗಳು
  • ಅಣಬೆ ಉದ್ಯಮಿಯೊಂದಿಗೆ ಚರ್ಚೆ ಮತ್ತು ಅವರ ಘಟಕಕ್ಕೆ ಕ್ಷೇತ್ರ ಭೇಟಿ
  • ಅಣಬೆಯ ಸಂಸ್ಕರಣೆ, ಸಂರಕ್ಷಣೆಯಲ್ಲಿ ಸುರಕ್ಷತಾ ವಿಧಾನಗಳು
  • ಅಣಬೆ ವೈವಿಧ್ಯತೆ ಮತ್ತು ಮೌಲ್ಯವರ್ಧನೆ
  • ಅಣಬೆ ಉತ್ಪಾದನೆಯ ಆರ್ಥಿಕತೆ ಹಾಗೂ ಮಾರುಕಟ್ಟೆ ನಿರ್ವಹಣೆ
  • ಅಣಬೆಯಲ್ಲಿ ರೋಗ ಮತ್ತು ಕೀಟಗಳ ನಿರ್ವಹಣೆ
  • ಅಣಬೆ ಬೆಳೆಗಾರರಲ್ಲಿ ಉದ್ಯಮಶೀಲತೆ ಅಭಿವೃದ್ಧಿಗೆ ಪ್ರೇರಣೆ
  • ಅಣಬೆ ಉದ್ಯಮ ಆರಂಭಿಸಲು ಧನ ಸಹಾಯಕ್ಕಾಗಿ ಪ್ರಾಯೋಜನಾ ವರದಿ ತಯಾರಿಕೆ ಹಾಗೂ ನಿರ್ವಹಣೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 080-23626455 / 9620459342 / 9742988880 (9.00 0 4.00)