November pension amount: ರಾಜ್ಯ ಸರಕಾರದಿಂದ 77 ಲಕ್ಷ ಜನರಿಗೆ ನವೆಂಬರ್ ತಿಂಗಳ ಪಿಂಚಣಿ ಹಣ ವರ್ಗಾವಣೆ! ಹಣ ಬಂದಿರುವುದನ್ನು ಚೆಕ್ ಮಾಡಲು ಈ ವೆಬ್ಸೈಟ್ ಭೇಟಿ ಮಾಡಿ.
November pension amount: ರಾಜ್ಯ ಸರಕಾರದಿಂದ ಪ್ರತಿ ತಿಂಗಳು ವಿವಿಧ ಯೋಜನೆಯಲ್ಲಿ ಮಾಸಿಕ ಪಿಂಚಣಿ ಹಣವನ್ನು ಪಡೆಯುವ 77 ಲಕ್ಷ ಜನರಿಗೆ ನವೆಂಬರ್ ತಿಂಗಳ ಹಣ ವರ್ಗಾವಣೆ ಮಾಡಲಾಗಿದೆ. ಫಲಾನುಭವಿಗಳು ಈ ಅಂಕಣದಲ್ಲಿ ವಿವರಿಸಿರುವ ವಿಧಾನವನ್ನು ಅನುಸರಿಸಿ ತಮಗೆ ಹಣ ಜಮಾ ಅಗಿರುವುದನ್ನು ಖಚಿತಪಡಿಸಿಕೊಳ್ಳಬವುದು.

ರಾಜ್ಯ ಸರಕಾರದಿಂದ ಪ್ರತಿ ತಿಂಗಳು ವಿವಿಧ ಯೋಜನೆಯಲ್ಲಿ ಮಾಸಿಕ ಪಿಂಚಣಿ ಹಣವನ್ನು ಪಡೆಯುವ 77 ಲಕ್ಷ ಜನರಿಗೆ ನವೆಂಬರ್ ತಿಂಗಳ ಹಣ ವರ್ಗಾವಣೆ ಮಾಡಲಾಗಿದೆ. ಫಲಾನುಭವಿಗಳು ಈ ಅಂಕಣದಲ್ಲಿ ವಿವರಿಸಿರುವ ವಿಧಾನವನ್ನು ಅನುಸರಿಸಿ ತಮಗೆ ಹಣ ಜಮಾ ಅಗಿರುವುದನ್ನು ಖಚಿತಪಡಿಸಿಕೊಳ್ಳಬವುದು.
ನಮ್ಮ ರಾಜ್ಯದಲ್ಲಿ ಕಂದಾಯ ಇಲಾಖೆಯ ಸಾಮಾಜಿಕ ನಿರ್ದೇಶನಾಲಯವು ಎಲ್ಲಾ ಮಾಸಿಕ ಪಿಂಚಣಿ ಯೋಜನೆಗಳ ಅನುಷ್ಥಾನ ಮತ್ತು ಹಣ ವರ್ಗಾವಣೆ ಉಸ್ತುವಾರಿಯನ್ನು ನಿರ್ವಹಿಸುತ್ತದೆ. ಸಾಮಾನ್ಯವಾಗಿ ಪ್ರತಿ ತಿಂಗಳ 9 ರಿಂದ 11 ನೇ ತಾರೀಖಿನ ಮಧ್ಯದಲ್ಲಿ ಫಲಾನುಭವಿಗಳಿಗೆ ಪಿಂಚಣಿ ಹಣ ಜಮಾ ಅಗುತ್ತದೆ.
ಫಲಾನುಭವಿಗಳು ಬ್ಯಾಂಕ್ ಭೇಟಿ ಮಾಡದೆ ಪಿಂಚಣಿ ಹಣ ನಿಮ್ಮ ಖಾತೆಗೆ ಜಮಾ ಅಗಿದಿಯೋ? ಇಲ್ಲವೋ? ಎಂದು ತಮ್ಮ ಮೊಬೈಲ್ ಮೂಲಕವೇ ತಿಳಿಯಬವುದು ಮಾಡಿಕೊಳ್ಳಬವುದು.
ಇದನ್ನೂ ಓದಿ: PM kisan e-KYC status : ಪಿ ಎಂ ಕಿಸಾನ್ ಯೋಜನೆಯ ಹಣ ಪಡೆಯಲು ಇ-ಕೆವೈಸಿ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿರುವುದನ್ನು ತಿಳಿಯುವುದು ಹೇಗೆ?
karnataka pension schemes-ಯಾವೆಲ್ಲ ಯೋಜನೆಯ ಪಿಂಚಣಿ ಹಣ ಜಮಾ ಮಾಡಲಾಗಿದೆ?
ವೃದ್ಧಾಪ್ಯ ಪಿಂಚಣಿ ಯೋಜನೆ, ವಿಧವಾ ಪಿಂಚಣಿ ಯೋಜನೆ, ಅಂಗವಿಕಲ ಪಿಂಚಣಿ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ ಯೋಜನೆ, ಮೈತ್ರಿ ಯೋಜನೆ, ಸಾಲದ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ ಪಿಂಚಣಿ ಯೋಜನೆ, ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಪಿಂಚಣಿ, ಎಂಡೋಸಲ್ಫಾನ್ ಸಂತ್ರಸ್ತರಿಗೆ ಪಿಂಚಣಿ ಯೋಜನೆಗಳ ಮಾಸಿಕ ಪಿಂಚಣಿ ಹಣವನ್ನು ಒಟ್ಟು 77,63,513 ಫಲಾನುಭವಿಗಳಿಗೆ ನವೆಂಬರ್ ತಿಂಗಳ ಹಣವನ್ನು ಜಮಾ ಮಾಡಲಾಗಿದೆ.
November pension amount- ಹಣ ಬಂದಿರುವುದನ್ನು ಚೆಕ್ ಮಾಡಲು ಈ ವೆಬ್ಸೈಟ್ ಭೇಟಿ:
ಅರ್ಜಿದಾರರು ಪಿಂಚಣಿ ಹಣ ಜಮಾ ವಿವರ ತಿಳಿಯಲು ಪಿಂಚಣಿ ಅರ್ಜಿಯ ಐಡಿ ಬೇಕಾಗುತ್ತದೆ ಇದಕ್ಕಾಗಿ ಮೊದಲು ನಾವು ಐಡಿ ನಂಬರ್ ಅನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ವಿವರಿಸಿ ನಂತರ ಹಣ ವರ್ಗಾವಣೆ ವಿವರ ತಿಳಿಯುವ ವಿಧಾನವನ್ನು ವಿವರಿಸಿದ್ದೇವೆ.
Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ ಮಾಡಿ> Pension ID ಫಲಾನುಭವಿಯ ಜಿಲ್ಲೆ, ತಾಲ್ಲೂಕು, ಗ್ರಾಮೀಣ/ನಗರ, ಹೋಬಳಿ, ಗ್ರಾಮದ ಹೆಸರನ್ನು ಕ್ಲಿಕ್ ಮಾಡಿಕೊಂಡು.ತದನಂತರ ಇದೇ ಪುಟದಲ್ಲಿ ತೋರಿಸುವ ಕ್ಯಾಪ್ಚರ್ ಕೋಡ್ ಅನ್ನು ನಮೂದಿಸಿ "Search" ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-2: ಈ ರೀತಿ ವಿಧಾನವನ್ನು ಅನುಸರಿಸಿದ ಬಳಿಕ ಗ್ರಾಮವಾರು ಎಲ್ಲಾ ಪಿಂಚಣಿದಾರರ ಐಡಿ ನಂಬರ್ ಮತ್ತು ಹೆಸರು ಇತರೆ ಪೂರಕ ವಿವರಗಳು ಗೋಚರಿಸುತ್ತವೆ. ಇದರಲ್ಲಿ ನಿಮ್ಮ ಹೆಸರನ್ನು ಹುಡುಕಿ ನಿಮ್ಮ ಹೆಸರಿನ ಮುಂದೆ ಕಾಣುವ 18 ಅಂಕಿಯ ಪಿಂಚಣಿದಾರರ Beneficiary ID ಅನ್ನು ಒಂದು ಕಡೆ ನಮೂದಿಸಿ ಇಟ್ಟುಕೊಳ್ಳಬೇಕು.
ಇದನ್ನೂ ಓದಿ: Farm pond: ರಾಜ್ಯ ಸರ್ಕಾರದಿಂದ ಮತ್ತೆ ಕೃಷಿ ಭಾಗ್ಯ ಯೋಜನೆಗೆ ಮರು ಚಾಲನೆ! ಅನುದಾನ ಎಷ್ಟು? ಎಷ್ಟು ಜಿಲ್ಲೆ ಆಯ್ಕೆ ಮಾಡಲಾಗಿದೆ?
Step-3: ಈ ಮೇಲಿನ ವಿಧಾನ ಅನುಸರಿಸಿ Beneficiary ID ಅನ್ನು ಪಡೆದುಕೊಂಡ ಬಳಿಕ ಇಲ್ಲಿ ಕ್ಲಿಕ್ ಮಾಡಿ> Pension status ಪಿಂಚಣಿದಾರರ Beneficiary ID ಅನ್ನು ಹಾಕಬೇಕು ನಂತರ ಇದೆ ಪುಟದಲ್ಲಿ ತೋರಿಸುವ ಕ್ಯಾಪ್ಚರ್ ಕೋಡ್ ಅನ್ನು ನಮೂದಿಸಿ "Search" ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-4: ಈ ಮೇಲಿನ ವಿಧಾನವನ್ನು ಅನುಸರಿಸಿದ ಬಳಿಕ ಇದೆ ಪುಟದ ಕೊನೆಯಲ್ಲಿ ತೋರಿಸುವ "Click here to get payment details from SSP portal" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ Beneficiary ID ಮತ್ತು ಕ್ಯಾಪ್ಚರ್ ನಮೂದಿಸಿ "Search" ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮಗೆ ಎಷ್ಟು ಹಣ ಜಮಾ ಅಗಿದೆ, ನಂವೆಬರ್ ತಿಂಗಳ ಹಣ ಜಮಾ ಅಗಿದಿಯೋ ಇಲ್ಲವೋ ಎಂದು ತಿಂಗಳುವಾರು ಯಾವ ದಿನ ಹಣ ಜಮಾ ಅಗಿದೆ ಎಂದು ತೋರಿಸುತ್ತದೆ. UTR ನಂಬರ್, ಬ್ಯಾಂಕ್ ಖಾತೆಯ ಮೊದಲ ಸಂಖ್ಯೆ, ಕೊನೆಯಲ್ಲಿ ಪಾವತಿ ಸ್ಥಿತಿ/Payment statu- "Success" ಎಂದು ತೋರಿಸುತ್ತದೆ.
ಇದನ್ನೂ ಓದಿ: Akrama-sakrama yojana: ಕೃಷಿ ಪಂಪ್ ಸೆಟ್ ಅಕ್ರಮ ಸಕ್ರಮ ಯೋಜನೆ ಕುರಿತು ಹೊಸ ಆದೇಶ ಹೊರಡಿಸಿದ ರಾಜ್ಯ ಸರಕಾರ!
helpline-ಈ ಇಲಾಖೆಯ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು:
ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ಕಂದಾಯ ಇಲಾಖೆ ,
5ನೇ ಮಹಡಿ ಕಂದಾಯ ಭವನ
ಕೆ.ಜಿ ರಸ್ತೆ ಬೆಂಗಳೂರು 560009.
ದೂರವಾಣಿ ಸಂಕ್ಯೆ: 080-22232040, 22232012
Email-id: dssp2008@gmail.com
website: click here
ದಿನನಿತ್ಯ ಈ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್> WhatsApp channel ಮಾಡಿ ಕೃಷಿಕಮಿತ್ರ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ.