PM-Kisan amount- 9.3 ಕೋಟಿ ರೈತರ ಖಾತೆಗೆ ಪಿ ಎಂ ಕಿಸಾನ್ ಹಣ! ಇಲ್ಲಿದೆ ಸ್ಟೇಟಸ್ ಚೆಕ್ ಮಾಡುವ ವಿಧಾನ!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 17ನೇ ಕಂತಿನ ಹಣವನ್ನು(PM-Kisan amount) ಇಂದು(18-06-2024) ಕೇಂದ್ರ ಸರಕಾರದಿಂದ ಸಂಜೆ 5-00 ಗಂಟೆಗೆ ರೈತರ ಖಾತೆಗೆ ನೇರ ನಗದು ವರ್ಗಾವಣೆ(DBT) ಮೂಲಕ ಅರ್ಥಿಕ ನೆರವು ಜಮಾ ಅಗಲಿದೆ.

PM-Kisan amount- 9.3 ಕೋಟಿ ರೈತರ ಖಾತೆಗೆ ಪಿ ಎಂ ಕಿಸಾನ್ ಹಣ! ಇಲ್ಲಿದೆ ಸ್ಟೇಟಸ್ ಚೆಕ್ ಮಾಡುವ ವಿಧಾನ!
PM-Kisan amount- 2024

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 17ನೇ ಕಂತಿನ ಹಣವನ್ನು(PM-Kisan amount) ಇಂದು(18-06-2024) ಕೇಂದ್ರ ಸರಕಾರದಿಂದ ಸಂಜೆ 5-00 ಗಂಟೆಗೆ ರೈತರ ಖಾತೆಗೆ ನೇರ ನಗದು ವರ್ಗಾವಣೆ(DBT) ಮೂಲಕ ಅರ್ಥಿಕ ನೆರವು ಜಮಾ ಅಗಲಿದೆ.

ಕೇಂದ್ರ ಸರಕಾರದ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯ ಇಲಾಖೆಯಿಂದ ಉತ್ತರಪ್ರದೇಶದ ವಾರಣಾಸಿಯಲ್ಲಿ ಪಿ ಎಂ ಕಿಸಾನ್ ಯೋಜನೆಯ ಹಣ ಬಿಡುಗಡೆ ಕಾರ್ಯಕ್ರಮವನ್ನು(pm kisan 17th installment date 2024) ಆಯೋಜನೆ ಮಾಡಲಾಗಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರೈತರ ಖಾತೆಗೆ ಹಣ ಬಿಡುಗಡೆ ಮಾಡಲಿದ್ದಾರೆ ಎಂದು ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

ರೈತರು ತಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಅಗಿರುವ ವಿವರವನ್ನು ಯಾವೆಲ್ಲ ವಿಧಾನ ಅನುಸರಿಸಿ ಚೆಕ್ ಮಾಡಿಕೊಳ್ಳಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Veterinary Doctor Recruitment-2024: ಕರ್ನಾಟಕ ಪಶುಪಾಲನೆ ಇಲಾಖೆಯಿಂದ 400 ಹುದ್ದೆಗಳ ನೇಮಕಾತಿ! ಇಲ್ಲಿದೆ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್!

PM-Kisan amount-2024: ಪಿ ಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡುವ ವಿಧಾನಗಳು:

ಕೇಂದ್ರದಿಂದ ಹಣ ಬಿಡುಗಡೆ ಬಳಿಕ ರೈತರು ತಮಗೆ ಪಿ ಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಬಂದಿರುವುದನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು.

ವಿಧಾನ-1: pm kisan 17th installment- ಬ್ಯಾಂಕ್ ಸಹಾಯವಾಣಿಗೆ ಮಿಸ್ ಕಾಲ್ ಮಾಡಿ ಬ್ಯಾಲೆನ್ಸ್ ಚೆಕ್ ಮಾಡುವುದರ ಮೂಲಕ:

ರೈತರು ತಾವು ಯಾವ ಬ್ಯಾಂಕ್ ಖಾತೆಯಲ್ಲಿ ಅಕೌಂಟ್ ಇರುತ್ತದೆಯೋ ಆ ಬ್ಯಾಂಕಿನ ಸಹಾಯವಾಣಿಗೆ ಮಿಸ್ ಕಾಲ್ ಮಾಡಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವುದರ ಮೂಲಕ ನಿಮಗೆ ಹಣ ಜಮಾ ಅಗಿದಿಯಾ? ಇಲ್ಲವಾ? ಎಂದು ಖಚಿತಪಡಿಸಿಕೊಳ್ಳಬಹುದು.

ಎಲ್ಲಾ ಬ್ಯಾಂಕಿನ ಬ್ಯಾಂಕ್ ಬ್ಯಾಲೆನ್ಸ್ ಸಹಾಯವಾಣಿ ಸಂಖ್ಯೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: Click here

ಇದನ್ನೂ ಓದಿ: PM-kisan status check-2024: ಇಲ್ಲಿಯವರೆಗೆ ಎಷ್ಟು ಕಂತು ಪಿ ಎಂ ಕಿಸಾನ್ ಹಣ ಬಂದಿದೆ ಎಂದು ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

ಗಮನಿಸಿ: ರೈತರು ತಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಅಗಿರುವ ಮೊಬೈಲ್ ಸಂಖ್ಯೆಯಿಂದ ಮಿಸ್ ಕಾಲ್ ಮಾಡಿದರೆ ಮಾತ್ರ ಬ್ಯಾಲೆನ್ಸ್ ತಿಳಿಯಬಹುದು.

ವಿಧಾನ-2: ಪಿ ಎಂ ಕಿಸಾನ್ ವೆಬ್ಸೈಟ್ ಅನ್ನು ಭೇಟಿ ಮಾಡಿ ಚೆಕ್ ಮಾಡಿಕೊಳ್ಳಬಹುದು:

ಅಧಿಕೃತ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪೋರ್ಟಲ್ ಅನ್ನು ಭೇಟಿ ಮಾಡಿ ರೈತರು ತಮಗೆ ಹಣ ಜಮಾ ಅಗಿರುವ ವಿವರವನ್ನು ಖಚಿತಪಡಿಸಿಕೊಳ್ಳಬಹುದು.

Step-1: ಪ್ರಥಮದಲ್ಲಿ ಈ pmkisan ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು. ಇದಾದ ಬಳಿಕ ಇಲ್ಲಿ ಮುಖಪುಟದಲ್ಲಿ ಕಾಣುವ "Know your status" ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

Step-2: ತದನಂತರ ನಿಮಗೆ ನಿಮ್ಮ ಅರ್ಜಿಯ ನೋಂದಣಿ ಸಂಖ್ಯೆ ಗೊತ್ತಿದ್ದರೆ ನೇರವಾಗಿ ನಂಬರ್ ಹಾಕಿ ಹಣ ಜಮಾ ವಿವರವನ್ನು ಪಡೆಯಬಹುದು ಒಂದೊಮ್ಮೆ ಗೊತ್ತಿಲ್ಲದಿದ್ದರೆ "Know your registration no" ಬಟನ್ ಮೇಲೆ ಕ್ಲಿಕ್ ಮಾಡಿ ಬಳಿಕ ಅರ್ಜಿದಾರರ ಮೊಬೈಲ್ ಸಂಖ್ಯೆಯನ್ನು ಹಾಕಿ ಪಕ್ಕದಲ್ಲಿ ಕಾಣುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ "Get mobile" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Bele nashta parihara-2024: ಈ ಪಟ್ಟಿಯಲ್ಲಿರುವ ರೈತರಿಗೆ ಸಿಗಲಿದೆ 3,000/- ಜೀವನೋಪಾಯ ನಷ್ಟ ಪರಿಹಾರ!

ಒಟಿಪಿ ಬರದೇ ಇದ್ದಲ್ಲಿ ಪುನಃ ಮತ್ತೊಮ್ಮೆ "Resend OTP" ಬಟನ್ ಮೇಲೆ ಕ್ಲಿಕ್ ಮಾಡಿ ಒಟಿಪಿಯನ್ನು ಪಡೆಯಬಹುದು, ನಿಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ ಒಟಿಪಿ ಅನ್ನು "Enter OTP" ಕಾಲಂ ನಲ್ಲಿ ಹಾಕಿ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪಿ ಎಂ ಕಿಸಾನ್ ಅರ್ಜಿಯ ಸಂಖ್ಯೆ ತೋರಿಸುತ್ತದೆ ಅದನ್ನು ಒಂದು ಕಡೆ ಬರೆದುಕೊಳ್ಳಬೇಕು.

Step-3: ನಂತರ "BACK" ಬಟನ್ ಅಥವಾ ಮುಖಪುಟ ಭೇಟಿ ಮಾಡಿ Know your status ಬಟನ್ ಮೇಲೆ ಕ್ಲಿಕ್ ಮಾಡಿ ನೋಂದಣಿ ಸಂಖ್ಯೆಯನ್ನು(Registration No) ಹಾಕಿ ಅಲ್ಲೇ ಪಕ್ಕದಲ್ಲಿ ಕಾಣುವ ಕ್ಯಾಪ್ಚ್ ಕೋಡ್ ಅನ್ನು ಹಾಕಿ "Get OTP" ಬಟನ್ ಮೇಲೆ ಕ್ಲಿಕ್ ಮಾಡಿದರೆ ಒಟಿಪಿ ಬರುತ್ತದೆ ಅದನ್ನು ನಮೂದಿಸಿ "Get Data" ಬಟನ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿದಾರರ ವೈಯಕ್ತಿಕ ವಿವರ, ಕಂತಿನವಾರು ಹಣ ಜಮಾ ದಿನಾಂಕ, ಬ್ಯಾಂಕ್ ಖಾತೆಗೆ ಕೊನೆಯ ನಾಲ್ಕು ಅಕೌಂಟ್ ನಂಬರ್ ಸಂಪೂರ್ಣ ವಿವರ ತೋರಿಸುತ್ತದೆ.

ಇಲ್ಲಿ ಕಂತುಗಳನ್ನು ಹಾಕಿ ಮಾಡಿಕೊಂಡು ನಿಮಗೆ 17ನೇ ಕಂತಿನ ಹಣ ಜಮಾ ಅಗಿದಿಯಾ? ಎಂದು ಚೆಕ್ ಮಾಡಿಕೊಳ್ಳಬಹುದು.