PMFME ಯೋಜನೆಯಡಿ ಸ್ವ-ಉದ್ಯೋಗ ಆರಂಭಿಸಲು 15 ಲಕ್ಷ ದವರೆಗೆ ಶೇ 50% ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

PMFME ಯೋಜನೆಯಡಿ ಸ್ವ-ಉದ್ಯೋಗ ಆರಂಭಿಸಲು 15 ಲಕ್ಷ ದವರೆಗೆ ಶೇ 50% ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಸೌಲಭ್ಯ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

PMFME ಯೋಜನೆಯಡಿ ಸ್ವ-ಉದ್ಯೋಗ ಆರಂಭಿಸಲು 15 ಲಕ್ಷ ದವರೆಗೆ ಶೇ 50% ಸಹಾಯಧನ ಪಡೆಯಲು ಅರ್ಜಿ ಆಹ್ವಾನ!
PMFME yojana application-2024

PMFME ಯೋಜನೆಯಡಿ ಸ್ವ-ಉದ್ಯೋಗ ಆರಂಭಿಸಲು 15 ಲಕ್ಷ ದವರೆಗೆ ಶೇ 50% ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಸೌಲಭ್ಯ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಆತ್ಮೀಯ ರೈತ ಬಾಂಧವರಿಗೆ, ವೈಯಕ್ತಿಕವಾಗಿ ಸ್ವ-ಉದ್ಯೋಗ ಆರಂಭಿಸಲು ಆಸಕ್ತಿಯಿರುವವರಿಗೆ ಮತ್ತು ಸ್ವ-ಸಹಾಯ ಗುಂಪುಗಳಿಗೆ, ರೈತ ಉತ್ಪಾದಕ ಕಂಪನಿಗಳಿಗೆ, ಸಹಕಾರಿ ಸಂಘಗಳಿಗೆ- ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಯೋಜನೆ ಅಡಿಯಲ್ಲಿ ಯಾವುದೇ ಆಹಾರ ಪದಾರ್ಥಗಳ ಪ್ರಾಥಮಿಕ ಸಂಸ್ಕರಣೆ ಅಥವಾ ಮೌಲ್ಯವರ್ಧನಾ ಉತ್ಪನ್ನಗಳನ್ನು ತಯಾರಿಸುವ ಆಸಕ್ತಿ ಇದ್ದಲ್ಲಿ, ಅಂತವರಿಗೆ,

ಬ್ಯಾಂಕ್ ಮೂಲಕ ಸಾಲದ ರೂಪದಲ್ಲಿ ಯೋಜನೆಗೆ ಬೇಕಾಗುವ ಹಣಕಾಸಿನ ಸೌಲಭ್ಯ ಹಾಗೂ ಸರ್ಕಾರದಿಂದ ಶೇಕಡ ಶೇ 50% ಸಬ್ಸಿಡಿಯಲ್ಲಿ ಅಥವಾ ಗರಿಷ್ಠ 15 ಲಕ್ಷ ದವರೆಗೆ ಸಹಾಯಧನವನ್ನು  PMFME ಯೋಜನೆಯಡಿ ಪಡೆಯಬಹುದಾಗಿದೆ.

Free Sewing Machine- ಉಚಿತ ಹೋಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ! ಇಲ್ಲಿದೆ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್

ಯಾವೆಲ್ಲ ಸ್ವ-ಉದ್ಯೋಗ ಮಾಡಬಹುದು?

1) ಅಡಿಕೆಗೆ ಸಂಬಂಧಿಸಿದಂತೆ:

ಹಸಿ ಅಡಿಕೆ / ಒಣ ಅಡಿಕೆ ಸುಲಿಯುವ ಯಂತ್ರ |ಅಡಿಕೆ ಬೇಯಿಸುವ ಪಾತ್ರೆ| ಅಡಿಕೆ ಗೊನೆ ಬಿಡಿಸುವ ಯಂತ್ರ| ಗೊರಬಲು ಪಾಲಿಷರ್| ಡ್ರೈಯರ್| ತಕ್ಕಡಿ ಇತರೆ
ಉತ್ಪನ್ನ: ಸಿಹಿ ಅಡಿಕೆ ಪುಡಿ , ಅಡಿಕೆ ಟೀ, ಅಡಿಕೆ ಫ್ಲೇಕ್ಸ್ ತಯಾರಿಕಾ ಘಟಕ, ಇತರೆ

2) ಕಾಳು ಮೆಣಸು:

ಕಾಳು ಬೇರ್ಪಡಿಸುವ ಯಂತ್ರ, ಸ್ಪೈರಲ್ ಕ್ಲಿನರ್, ಬೊಳುಕಾಳುಮಾಡುವ ಯಂತ್ರ, ಗ್ರೇಡಿಂಗ್ ಯಂತ್ರ, ಇತರೆ
ಉತ್ಪನ್ನ: ಕಾಳುಮೆಣಸು ಪುಡಿ, ಬೋಳು ಕಾಳು, ಉಪ್ಪಿನಕಾಯಿ, ಇತರೆ

3) ಬಾಳೆ:

ಚೀಪ್ಸ್ ತಯಾರಾಕಾ ಯಂತ್ರ, ಹಪ್ಪಳ ತಯಾರಿಕಾ ಯಂತ್ರ, ಸುಕ್ಕೇಳಿ ತಯಾರಿಕಾ ಯಂತ್ರ, ಹಿಟ್ಟು ತಯಾರಿಕಾ ಯಂತ್ರ, ಜ್ಯೂಸ್ ತಯಾರಿಕಾ ಯಂತ್ರ, ಇತರೆ

4) ತೆಂಗು:

ಎಣ್ಣೆ ತೆಗೆಯುವ ಯಂತ್ರ, ತೆಂಗಿನ ತುರಿ ತಯಾರಿಸುವ ಯಂತ್ರ, ತೆಂಗಿನ ಹಾಲು ತಯಾರಿಸುವ ಯಂತ್ರ, ವರ್ಜಿನ್ ಎಣ್ಣೆ ಘಟಕ, 
ಇತರೆ

ಇದನ್ನೂ ಓದಿ: Nadakacheri- ನಾಡಕಚೇರಿಯಲ್ಲಿ ಯಾವೆಲ್ಲ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಬಹುದು? ಎಷ್ಟು ಶುಲ್ಕ ಪಾವತಿ ಮಾಡಬೇಕು?

5) ಮುರುಗಲು:

ಬೀಜ ಬೇರ್ಪಡಿಸುವ ಯಂತ್ರ, ಜ್ಯೂಸ್ ತೆಗೆಯುವ ಯಂತ್ರ, ಚಾಕೊಲೇಟ್ ತಯಾರಿಸುವ ಯಂತ್ರ, ಇತರೆ

6) ಹಲಸು:

ಹಪ್ಪಳ ತಯಾರಿಕಾ ಯಂತ್ರ, ಜ್ಯೂಸ್ ತಯಾರಿಕಾ ಯಂತ್ರ, ಚಾಕೋಲೇಟ್ ತಯಾರಿಕಾ ಯಂತ್ರ, ಪಲ್ಪ್ ತೆಗೆಯುವ ಯಂತ್ರ, ಚಿಪ್ಸ್ ತಯಾರಿಕಾ ಯಂತ್ರ

7) ಅರಿಶಿಣ ಮತ್ತು ಶುಂಠಿ:

ತೊಳೆಯುವ ಯಂತ್ರ, ಕೊಚ್ಚುವ ಯಂತ್ರ, ಡ್ರೈಯರ್, ಪ್ಯಾಕಿಂಗ್ ಯಂತ್ರ, ಇತರೆ
ಅರಿಸಿನ ಹಿಟ್ಟು, ಅರಿಶಿಣ ಎಣ್ಣೆ, ಶುಂಠಿ ಹಿಟ್ಟು, ಶುಂಠಿ ಕ್ಯಾಂಡಿ, ಶುಂಠಿ ಪೇಸ್ಟ್ ಇತರೆ

8) ಇತರೆ ಆಹಾರ ಉತ್ಪನ್ನ

ಅನ್ವಯ:, ಪಶು ಆಹಾರ, ಸೈಲೇಜ್, ಟೊಮೆಟೊ ಸಾಸ್, ಕೆಚಪ್, ಜ್ಯಾಮ್, ಜೆಲ್ಲಿ, ಶುಂಟಿ ಬೆಳ್ಳುಳ್ಳಿ ಪೇಸ್ಟ್, ಉಪ್ಪಾಗೆ ತುಪ್ಪ, ಕಷಾಯ ಪುಡಿ, ಚಟ್ನಿ ಪುಡಿ, ಮಸಾಲ ಉತ್ಪನ್ನ, ಬೇಕರಿ ಉತ್ಪನ್ನ, ಉಪ್ಪಿನಕಾಯಿ, ಉದ್ದಿನ ಹಪ್ಪಳ, ಜ್ಯುಸ್, ಅಕ್ಕಿ-ಗೋದಿ-ರಾಗಿ ಧಾನ್ಯಗಳ ಹಿಟ್ಟು, ಮೆಣಸಿನ ಹಿಟ್ಟು, ಬಟಾಟೆ-ಗೆಣಸು-ಕೆಸುವಿನ ಚಿಪ್ಸ್, ಚಕ್ಕುಲಿ, ರೊಟ್ಟಿ, ಪರೋಟ, ಹೋಳಿಗೆ, ಚಾಕೊಲೇಟ್, ಲಸ್ಸಿ, ಹಾಲಿನ ಪೇಡಾ, ತುಪ್ಪ, ಪನ್ನೀರ್, ಚೀಸ್, ಲಾಡು, ಚಿಕ್ಕಿ, ಹಲ್ವಾ, ತೊಡೆದೇವು, ಅತ್ರಸಾ, ಖಾರಾ, ಮಸಾಲ ಗೇರುಬೀಜ, ಸೂಪ್, ಬೆಲ್ಲ, ಆರೋಗ್ಯ ಪೇಯ, , ಇತರೇ ಆಹಾರ ಉತ್ಪನ್ನ ತಯಾರಿಕಾ ಘಟಕ.

ಇದನ್ನೂ ಓದಿ: HSRP number plate-ನಿಮ್ಮ ಮೊಬೈಲ್ ನಲ್ಲೇ HSRP ನಂಬರ್ ಪ್ಲೇಟ್ ಬುಕ್ ಮಾಡಲು ಲಿಂಕ್ ಬಿಡುಗಡೆ!

ಸಹಾಯಧನ ವಿವರ:

1) ಅಭ್ಯರ್ಥಿಗಳ ವಂತಿಗೆ ಶೇ 10% ಪರ್ಸೆಂಟ್
2) ಬ್ಯಾಂಕುಗಳಿಂದ ಶೇ 40% ಪರ್ಸೆಂಟ್ ಸಾಲ
3) ಶೇ 50% ಸರ್ಕಾರದಿಂದ ಸಹಾಯಧನ (ಕ್ರೆಡಿಟ್ ಲಿಂಕಡ್ ಬ್ಯಾಕೆಂಡ್ ಸಹಾಯಧನ)

ಯೋಜನೆಯ ಲಾಭ ಪಡೆಯಲು ರಾಷ್ಟ್ರೀಕೃತ ಬ್ಯಾಂಕ್ ಅಥವಾ ಖಾಸಗಿ ಬ್ಯಾಂಕ್ ನಲ್ಲಿ ಲೋನ್ ಪಡೆಯುವುದು ಕಡ್ಡಾಯ. ಸಾಲ ಪಡೆದ ನಂತರ 50% ಅಥವಾ ಗರಿಷ್ಟ 15ಲಕ್ಷ ರೂ ಸಹಾಯಧನವು ಸಾಲದ ಖಾತೆಗೆ ನೇರ ಜಮಾವಣೆಯಾಗುವುದು ಹಾಗೂ 2% ಬಡ್ಡಿ ವಿನಾಯತಿಯನ್ನು ನೀಡಲಾಗುತ್ತದೆ.

ಅರ್ಜಿ ಎಲ್ಲಿ ಸಲ್ಲಿಸಬೇಕು?

ಈ ಯೋಜನೆಗೆ ಸಂಬಂಧಪಟ್ಟ ನಿಮ್ಮ ಜಿಲ್ಲೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ (ಪಿಎಂಎಪ್ಎಂಇ ಯೋಜನೆ)ಅವರನ್ನು ಸಂಪರ್ಕಿಸಿ ಅಗತ್ಯ ದಾಖಲಾತಿ ಒದಗಿಸಿ ಅರ್ಜಿ ಸಲ್ಲಿಸಬೇಕು ಅಥವಾ ನೇರವಾಗಿ PMFME application ಈ ವೆಬ್ಸೈಟ್ ಭೇಟಿ ಮಾಡಿ ಅರ್ಜಿ ಸಲ್ಲಿಸಬವುದು.

ಇದನ್ನೂ ಓದಿ: ration card- ಇಂದು ಮತ್ತು ನಾಳೆ ಈ ಜಿಲ್ಲೆಗಳಲ್ಲಿ ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!

ಅಗತ್ಯ ದಾಖಲೆಗಳು:

1) PAN Card of concerned/all promoters
2) Aadhaar Copy & Photo of all promoters/guarantors
3) Address Proof: Any of Officially Valid Documents
(Utility bill, not more than two months old of any service provider)
(Electricity, telephone, post-paid mobile phone, piped gas, water bill or
 Property or Municipal tax paid receipt,Ration Card (Individual), iv. Driving Licence, Adhar Card
 Voter ID Card)
4) Detailes of site where Unit is to be established. Whether owned/rented/leased?
and Proof thereof. (Lease /rent agreement should be for more than loan
repayment period)
5) Photocopy of Bank Statement/ Bank Passbook for the last 6 months.
6) Estimates and Quotation of all capital expenditure and Machineries and
Equipment to be purchased

ಗಮನಿಸಿ: 1) ಯಾವುದಾದರೂ ಒಂದು ಪ್ರಾಥಮಿಕ ಸಂಸ್ಕರಿಸಿದ ಅಥವಾ ಮೌಲ್ಯವರ್ದಿತ ಆಹಾರ ಉತ್ಪನ್ನ ತಯಾರಿಸಿ ಬ್ರಾಡಿಂಗ್ ಹಾಗೂ ಪ್ಯಾಕಿಂಗ್ ಮಾಡಿ ಮಾರಾಟ ಮಾಡುವುದು ಕಡ್ಡಾಯ.
2) ಉದ್ಯಮ ರಜಿಸ್ಟ್ರೇಷನ್ ಮತ್ತು FSSAI ರಜಿಸ್ಟ್ರೇಷನ್ ಕಡ್ಡಾಯವಾಗಿರುತ್ತದೆ.

ಇದನ್ನೂ ಓದಿ: ಈ ಜಿಲ್ಲೆಗಳಲ್ಲಿ ಮೊದಲ ಕಂತಿನ ಬರ ಪರಿಹಾರ ರೈತರ ಖಾತೆಗೆ ಬಿಡುಗಡೆ!

ಹೆಚ್ಚಿನ ಮಾಹಿತಿಗಾಗಿ:

ಹತ್ತಿರದ ತೋಟಗಾರಿಕಾ ಇಲಾಖೆ ಅಥವಾ ಕೃಷಿ ಇಲಾಖೆ ಅಥವಾ PMFME ನಿಮ್ಮ ಜಿಲ್ಲೆಯ ಈ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿಯನ್ನು ಸಂಪರ್ಕಿಸಿ ಈ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು ಇವರ ಸಹಾಯ ಪಡೆಯಬಹುದು.