PMMSY Scheme-2023: ಮೀನುಗಾರಿಕೆ ಇಲಾಖೆಯಿಂದ ಶೇ. 40% ಮತ್ತು ಶೇ. 60% ರಷ್ಟು ಸಹಾಯಧನ ಯೋಜನೆಗಳಿಗೆ ಅರ್ಜಿ ಅಹ್ವಾನ.

PMMSY Yojana: ಮೀನುಗಾರಿಕೆ ಇಲಾಖೆ ವತಿಯಿಂದ 2023-24 ನೇ ಸಾಲಿನ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನಕ್ಕಾಗಿ ವಿವಿಧ ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿ¸ಲಾಗಿದೆ.

PMMSY Scheme-2023: ಮೀನುಗಾರಿಕೆ ಇಲಾಖೆಯಿಂದ ಶೇ. 40% ಮತ್ತು ಶೇ. 60% ರಷ್ಟು ಸಹಾಯಧನ ಯೋಜನೆಗಳಿಗೆ ಅರ್ಜಿ ಅಹ್ವಾನ.

ಮೀನುಗಾರಿಕೆ ಇಲಾಖೆ ವತಿಯಿಂದ 2023-24 ನೇ ಸಾಲಿನ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ(PMMSY Yojana) ವಿವಿಧ ಘಟಕಗಳಿಗೆ ಸಹಾಯಧನಕ್ಕಾಗಿ ವಿವಿಧ ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿ¸ಲಾಗಿದೆ.

ಮೀನು ಸಾಕಾಣಿಕೆ ಮಾಡುಲು ಮತ್ತು ಮೀನು ವ್ಯಾಪಾರ ಮಾಡಲು ಆಸಕ್ತಿಯಿರುವವರಿಗೆ ಮೀನುಗಾರಿಕೆ ಇಲಾಖೆಯಿಂದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಹಲವು ಬಗ್ಗೆಯ ಅರ್ಥಿಕ ಸಹಾಯಧನ ನೀಡುವ ಯೋಜನೆಗಳು ಇರುತ್ತವೆ.

ಮೀನು ಸಾಕಾಣಿಕೆ ಮಾಡುವವರಿಗೆ ಈ ಯೋಜನೆಯಡಿ ಮೀನು ಕೃಷಿ ಕೊಳಗಳ ನಿರ್ಮಾಣ, ಸಿಹಿ ನೀರು ಬಯೋಫ್ಲಾಕ್ ಘಟಕ ಸ್ಥಾಪನೆಗೆ ಸಹಾಯಧನ ಒದಗಿಸಲಾಗುತ್ತದೆ ಅದೇ ರೀತಿ ಮೀನಿನ ವ್ಯಾಪಾರ ಮಾಡಲು ಆಸಕ್ತಿಯಿರುವವರಿಗೆ ಇನ್ಸುಲೇಟೆಡ್ (ಶಾಖನಿರೋಧಕ) ವಾಹನ ಖರೀದಿಗೆ ಮತ್ತು ಯಾಂತ್ರೀಕೃತ ದೋಣಿ ಖರೀದಿಗೆ ಸಹಾಯಧನ ಒದಗಿಸಲಾಗುತ್ತದೆ.

ಈ ಯೋಜನೆಯಡಿ ಎಷ್ಟು ಸಹಾಯಧನ ಪಡೆಯಬವುದು?

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಬಯೋಫ್ಲಾಕ್ ಘಟಕ ಸ್ಥಾಪನೆ ಮಾಡಲು ಸಹಾಯಧನ ಪಡೆಯಬವುದಾಗಿದೆ. ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 40% ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ. 60% ರಷ್ಟು ಸಹಾಯಧನ ನೀಡಲಾಗುತ್ತದೆ.

ಯಾವೆಲ್ಲ ಘಟಕಗಳಿಗೆ ಸಹಾಯಧನ ನೀಡಲಾಗುತ್ತದೆ?

1) ಮೀನು ಕೃಷಿ ಕೊಳಗಳ ನಿರ್ಮಾಣ.
2) ಮೀನು ಕೃಷಿಕೊಳದ ಹೂಡಿಕೆ ವೆಚ್ಚಕ್ಕೆ ಸಹಾಯ.
3) ಸಿಹಿ ನೀರು ಬಯೋಫ್ಲಾಕ್ ಘಟಕ ಸ್ಥಾಪನೆಗೆ ಸಹಾಯಧನ.
4) ಇನ್ಸುಲೇಟೆಡ್ (ಶಾಖನಿರೋಧಕ) ವಾಹನ ಖರೀದಿಗೆ ಸಹಾಯಧನ.
5) ಯಾಂತ್ರೀಕೃತ ದೋಣಿ ಖರೀದಿಗೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಆಸಕ್ತರು 22 ಆಗಸ್ಟ್ 2023 ರೊಳಗಾಗಿ ಆಯಾ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿಗಳನ್ನು ಪಡೆದು ಅಗತ್ಯ ದಾಖಲಾತಿಗಳನ್ನು ಒದಗಿಸಿ ಅರ್ಜಿ ಸಲ್ಲಿಸಬವುದು.

ಇದನ್ನೂ ಓದಿ: ಹೊಸ ಪಡಿತರ ಚೀಟಿ ವಿತರಣೆ ಮತ್ತು ಹೆಸರು ಸೇರ್ಪಡೆ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ ಆಹಾರ ಇಲಾಖೆ!

ಈ ಯೋಜನೆಯಡಿ ಸಹಾಯಧನ ಪಡೆದ ರೈತನ ಅನಿಸಿಕೆ:

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಬಯೋಫ್ಲಾಕ್ ಘಟಕ ಸ್ಥಾಪನೆ ಮಾಡಲು ಸಹಾಯಧನ ಪಡೆದು 10 ಗುಂಟೆಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿರುವ ರೈತ ಶ್ರೀ ನಿರಂಜನ್. ಸಾಮಾನ್ಯರಿಗೆ ಸಬ್ಸಿಡಿ ಶೇ 40 ಮತ್ತು ಎಸ್ಸಿ, ಎಸ್ಟಿ ಮತ್ತು ಮಹಿಳೆಗೆ ಶೇ 60  ಸಬ್ಸಿಡಿ ದೊರೆಯುತ್ತದೆ.  ಹೊಂಡ ನಿರ್ಮಾಣ, ಟಾರ್ಪಲ್, ಏರಿಯೇಟರ್, ಬರ್ಡ್ ನೆಟ್, ಶೇಡ್ ನೆಟ್ ಕೂಲಿ ಒಟ್ಟೂ ಸೇರಿ ಸರಿ ಸುಮಾರು 5 ಲಕ್ಷ ಖರ್ಚು ಬರಬಹುದು. ಹ್ಕಕಿಗಳಿಂದ ರಕ್ಷಣೆ ಪಡೆಯಲು ಬರ್ಡ್ ನೆಟ್, ಹಾವು ಮತ್ತು ಕಪ್ಪೆಗಳಿಂದ ರಕ್ಷಿಸಲು ಶೇಡ್ ನೆಟ್ ಗಳನ್ನು ಬಳಸುವುದು ಉತ್ತಮ ಎನ್ನುತ್ತಾರ‍ೆ ರೈತ ಶ್ರೀ ನಿರಂಜನ್. 

ಇನ್ನು ಹೆಚ್ಚಿನ ಮಾಹಿತಿ ಪಡೆಯಲು:

ಮೀನುಗಾರಿಕೆ ಇಲಾಖೆ ಸಹಾಯವಾಣಿ: 8277200300

ಮೀನುಗಾರಿಕೆ ಇಲಾಖೆ ವೆಬ್ಸೈಟ್: https://fisheries.karnataka.gov.in/

ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯ ಸಂಪೂರ್ಣ ಮಾಹಿತಿಯುಳ್ಳ ಕೈಪಿಡಿ ಡೌನ್ಲೋಡ್ ಮಾಡಲು ಇಲ್ಲಿ ಒತ್ತಿ.

ಬಯೋಪ್ಲಕ್ ತಾಂತ್ರಿಕತೆಯ ಕೈಪಿಡಿ ಡೌನ್ಲೋಡ್ ಮಾಡಲು ಇಲ್ಲಿ ಒತ್ತಿ.

ಕೃಷಿಕರಿಗೆ ಸಂಬಧಿಸಿದ ಇತರೆ ಯೋಜನೆಗಳ ಅಂಕಣಗಳು:

ಇದನ್ನೂ ಓದಿ: Sheep Farming schemes: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆಯಬವುದು?

ಇದನ್ನೂ ಓದಿ: Nrega scheme Information-2023: ಉದ್ಯೋಗ ಖಾತರಿ ಯೋಜನೆ ವೈಯಕ್ತಿಕ ಕಾಮಗಾರಿಗಳಡಿ ಪ್ರತಿ ಕುಟುಂಬ ಗರಿಷ್ಠ ರೂ. 2.50 ಲಕ್ಷದವರೆಗೆ ಸೌಲಭ್ಯ!

ಇದನ್ನೂ ಓದಿ: ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು

ಇದನ್ನೂ ಓದಿ: Chaff cutter subsidy: ಶೇ 50% ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ.

ಇದನ್ನೂ ಓದಿ: ರೇಷ್ಮೆ ಕೃಷಿ ಆರಂಭಿಸಲು ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಬವುದು!