HomeAgricultureParihara status-ನಿಮ್ಮ ಸರ್ವೆ ನಂಬರ್ ಹಾಕಿ ಬರ ಪರಿಹಾರ ಎಷ್ಟು ಬಂದಿದೆ ಎಂದು ತಿಳಿಯಲು ವೆಬ್ಸೈಟ್...

Parihara status-ನಿಮ್ಮ ಸರ್ವೆ ನಂಬರ್ ಹಾಕಿ ಬರ ಪರಿಹಾರ ಎಷ್ಟು ಬಂದಿದೆ ಎಂದು ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

ರೈತರು ತಮ್ಮ ಜಮೀನಿನ ಸರ್ವೆ ನಂಬರ್ ಅನ್ನು ಹಾಕಿ ಬರ ಪರಿಹಾದ ಹಣ(Bara Parihara status)ಎಷ್ಟು ಜಮಾ ಅಗಿದೆ ಎನ್ನುವ ಮಾಹಿತಿಯನ್ನು ಹೇಗೆ ತಿಳಿದುಕೊಳ್ಳಬಹುದು ಎಂದು ಈ ಅಂಕಣದಲ್ಲಿ ತಿಳಿಸಲಾಗಿದೆ.

ನಮ್ಮ ಪುಟದ ಈ ಹಿಂದಿನ ಅಂಕಣದಲ್ಲಿ ಬರ ಪರಿಹಾರ ಪಡೆಯಲು ಅರ್ಹರಿರುವ ಹಳ್ಳಿವಾರು ಪಟ್ಟಿಯನ್ನು ಮೊಬೈಲ್ ನಲ್ಲಿ ಹೇಗೆ ನೋಡುವುದು? ಮತ್ತು ಬರ ಪರಿಹಾರ ಹಣ ಸಂದಾಯವಾಗಿರುವುದನ್ನು ಚೆಕ್ ಮಾಡುವ ವಿವಿಧ ವಿಧಾನಗಳನ್ನು ತಿಳಿಸಿಕೊಡಲಾಗಿತ್ತು ಇಂದು ಈ ಲೇಖನದಲ್ಲಿ ಸರ್ವೆ ನಂಬರ್ ಹಾಕಿ ಬರ ಪರಿಹಾರದ ಹಣ ಎಷ್ಟು ಜಮಾ ಅಗಿದೆ ಎಂದು ಹೇಗೆ ಚೆಕ್ ಮಾಡುವುದು ಎಂದು ತಿಳಿಸಿಕೊಡಲಾಗಿದೆ.

ಕಂದಾಯ ಇಲಾಖೆಯ Parihara ತಂತ್ರಾಂಶವನ್ನು ಭೇಟಿ ಮಾಡಿ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ರೈತರು ತಮ್ಮ ಮೊಬೈಲ್ ನಲ್ಲೇ ಪರಿಹಾರ ಜಮಾ ವಿವರದ ಸಂಪೂರ್ಣ ಮಾಹಿತಿಯನ್ನು ಬೆರಳ ತುದಿಯಲ್ಲಿ ಮನೆಯಲ್ಲೇ ಕುಳಿತು ತಿಳಿದುಕೊಳ್ಳಬಹುದು.

ಇದನ್ನೂ ಓದಿ: karnataka dam water level:ಕರ್ನಾಟಕ ಜಲಾಶಯಗಳ ಇಂದಿನ ನೀರಿನ ಮಟ್ಟ ಮತ್ತು ಸಂಗ್ರಹಣೆ ಮತ್ತು ಒಳ ಮತ್ತು ಹೊರ ಹರಿವು ಮಾಹಿತಿ!

Bara Parihara status-2024 ನಿಮ್ಮ ಸರ್ವೆ ನಂಬರ್ ಹಾಕಿ ಎಷ್ಟು ಪರಿಹಾರ ಬಂದಿದೆ ಎಂದು ತಿಳಿಯುವ ವಿಧಾನ:

Step-1: ಮೊದಲಿಗೆ ಈ Bara Parihara status check ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ Parihara ಜಾಲತಾಣವನ್ನು ಪ್ರವೇಶ ಮಾಡಬೇಕು. ಇದಾದ ಬಳಿಕ Parihara Payment Reports ಕಾಲಂ ನಲ್ಲಿ ತೋರಿಸುವ “2023 Kharif(Drought) season” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: crop survey app-2024: ರೈತರೇ ಬೆಳೆ ಮಾಹಿತಿಯನ್ನು ಪಹಣಿಯಲ್ಲಿ ದಾಖಲಿಸಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!

Step-2: “Year/ವರ್ಷ: 2023-24”, “Season/ಋತು: Kharif/ಮುಂಗಾರು”, “Calamity Type/ವಿಪತ್ತಿನ ವಿಧ: Drought/ಬರ” ಎಂದು ಆಯ್ಕೆ ಮಾಡಿಕೊಂಡು “Get Data/ಹುಡುಕು” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ:  North Eastern Railway Jobs : ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ!

Step-3: ನಂತರ “Search By/ಹುಡುಕು” ವಿಭಾಗದಲ್ಲಿ “Survey Number/ಸರ್ವೆ ನಂಬರ್” ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಇದೆ ಪೇಜ್ ನಲ್ಲಿ ಕೆಳಗೆ ಕಾಣುವ “Search By Survey Number/ಸರ್ವೆ ನಂಬರ್ ಮೂಲಕ ಹುಡುಕಿ” ವಿಭಾಗದಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಸರ್ ನಾಕ್, ಹಿಸ್ಸಾ ನಂಬರ್ ಹಾಕಿ “Fetch/ಪಡೆಯಿರಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: PM-kisan village list-ಪಿ ಎಂ ಕಿಸಾನ್ ಯೋಜನೆಯಡಿ ಹಣ ಪಡೆಯಲು ಅರ್ಹ ರೈತರ ಹಳ್ಳಿವಾರು ಪಟ್ಟಿ ಬಿಡುಗಡೆ!

Step-4: ಇದಾದ ಬಳಿಕ ಇಲ್ಲಿ ನಿಮ್ಮ ಆಧಾರ್ ಸಂಖ್ಯೆ ಕೊನೆಯ ನಾಲ್ಕು ಸಂಖ್ಯೆ ತೋರಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಿಮಗೆ ಈ ಸರ್ವೆ ನಂಬರ್ ಮೇಲೆ ಎಷ್ಟು ಬರ ಪರಿಹಾರ ಜಮಾ ಅಗಿದೆ? ಸಂದಾಯ ದಿನಾಂಕ, ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಸಂಖ್ಯೆ ಇತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿ ತೋರಿಸುತ್ತದೆ.

Most Popular

Latest Articles

- Advertisment -

Related Articles