HomeNew postsPulse polio- ಈ ದಿನದಂದು ರಾಜ್ಯಾದ್ಯಂತ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ!

Pulse polio- ಈ ದಿನದಂದು ರಾಜ್ಯಾದ್ಯಂತ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ!

ರಾಜ್ಯಾದ್ಯಂತ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ(pulse polio programme) ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜನೆ ಮಾಡಲಾಗಿದ್ದು ಈ ಕುರಿತು ಇಲಾಖೆಯಿಂದ ಹೊರಡಿಸಿರುವ ಪತ್ರಿಕಾ ಪ್ರಕಟಣೆ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

ಇದೇ ಮಾರ್ಚ್ 3 ರಂದು ರಾಜ್ಯಾದ್ಯಂತ 0-5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ(Pulse polio) ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಟಿ.ಕೆ.ಅನಿಲ್‌ ಕುಮಾ‌ರ್ ತಿಳಿಸಿದರು.

ವಿಕಾಸಸೌಧದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ದಡಾರ ರುಬೆಲ್ಲಾ ನಿರ್ಮೂಲನೆ ಹಾಗೂ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತಾದ ರಾಜ್ಯ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಡಾರ ಮಕ್ಕಳ ಮಾರಾಣಾಂತಿಕ ಕಾಯಿಲೆಯಾಗಿದ್ದು, ದಡಾರ ವಿರುದ್ಧ 

ಇದನ್ನೂ ಓದಿ: RTC aadhar card link- ನಿಮ್ಮ ಜಮೀನಿನ ಪಹಣಿಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ! ಇಲ್ಲಿದೆ ಲಿಂಕ್ ಮಾಡಲು ಅಧಿಕೃತ ವೆಬ್ಸೈಟ್ ಲಿಂಕ್.

ಲಸಿಕೆ ಪಡೆದರೆ ಇದರಿಂದ ಸಂಭವಿಸುವ ಸಾವನ್ನು ಶೇಕಡ 94 ರಷ್ಟು ತಡೆಯಬಹುದಾಗಿದೆ. ರಾಜ್ಯದಲ್ಲಿ 2023 ನೇ ಸಾಲಿನಲ್ಲಿ 4074 ದಡಾರ ಪ್ರಕರಣಗಳು ದಾಖಲಾಗಿವೆ ಎಂದರು.

ರುಬೆಲ್ಲಾ ಸಹ ಒಂದು ಬಗೆಯ ವೈರಾಣು ಬಗೆಯ ವೈರಾಣು ಸೋಕಿತ ಕಾಯಿಲೆಯಾಗಿದ್ದು, ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಈ ಸೋಂಕು ಸಂಭವಿಸಬಹುದಾಗಿದೆ. ಇದರಿಂದ ಹುಟ್ಟುವ ಮಕ್ಕಳಲ್ಲಿ ದೈಹಿಕ, ಮಾನಸಿಕ ನ್ಯೂನತೆ ಸಂಭವಿಸಬಹುದು ರಾಜ್ಯದಲ್ಲಿ 2023 ನೇ ಸಾಲಿನಲ್ಲಿ 231 ರುಬೆಲ್ಲಾ ಪ್ರಕರಣಗಳು ದಾಖಲಾಗಿವೆ ಎಂದರು.

Pulse polio-2024: ಮಾರ್ಚ್ 3 ರಂದು ರಾಜ್ಯಾದ್ಯಂತ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ:

ಇದೇ ಮಾರ್ಚ್ 3 ರಂದು ರಾಜ್ಯಾದ್ಯಂತ 0-5 ವಯೋಮಾನದ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನಿಗಧಿತ ಬೂತ್, ಅಂಗನವಾಡಿ ಮುಂತಾದ ಸ್ಥಳಗಳಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ, ನಗರ ಮಟ್ಟಗಳಲ್ಲೂ ಪೋಲಿಯೋ ಲಸಿಕೆ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: village administrative officer recruitment 2024: ಸರಕಾರಿ ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್! 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ!

ಮಾರ್ಚ್ 3 ರಂದು ಬೂತ್‌ಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುತ್ತದೆ. ನಂತರದ ಮೂರು ದಿನಗಳು ತಂಡಗಳು ಮನೆ ಮನೆಗೆ ತೆರಳಿ ಲಸಿಕೆ ನೀಡಲಿದೆ. 2008 ರಿಂದ ರಾಜ್ಯದಲ್ಲಿ ಯಾವುದೇ ಪೋಲಿಯೋ ಪ್ರಕರಣ ಸಂಭವಿಸಿಲ್ಲ ಎಂದರು.

ಸಭೆಯಲ್ಲಿ ಆರ್‌ಸಿಎಚ್ ಯೋಜನಾ ನಿರ್ದೇಶಕರು ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್ ವ್ಯವಸ್ಥಾಪಕ ನಿರ್ದೇಶಕರಾದ ನವೀನ್ ಭಟ್ ಉಪಸ್ಥಿತರಿದ್ದರು.

ಇನ್ನು ಹೆಚ್ಚಿನ ಮಾಹಿತಿಗಾಗಿ:

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ವೆಬ್ಸೈಟ್: Click here

ಇದನ್ನೂ ಓದಿ: Gruhalakshmi february amount- ಈ ಪಟ್ಟಿಯಲ್ಲಿರುವವರಿಗೆ ಫೆಬ್ರವರಿ-2024 ತಿಂಗಳ ಗೃಹಲಕ್ಷ್ಮಿ ಹಣ ಜಮಾ! ನಿಮ್ಮ ಖಾತೆಗೆ ಬಂತಾ ಚೆಕ್ ಮಾಡಿ.

Most Popular

Latest Articles

- Advertisment -

Related Articles