Pumpset adhar link-10 HP ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ ಜೋಡಣೆ! ಇಲ್ಲಿದೆ ಮಹತ್ವದ ಮಾಹಿತಿ!
ಕರ್ನಾಟಕ ವಿದ್ಯುತ್ ನಿಯಂತ್ರಣ(KEB) ಆಯೋಗದಿಂದ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿ(Escom) ಯಡಿ ಬರುವ ಎಲ್ಲಾ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಬಳಕೆ ಮಾಡುವ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ ಲಿಂಕ್ ಮಾಡಲು ಸೂಚನೆ ನೀಡಲಾಗಿತ್ತು, ಇದರಂತೆ ಕಳೆದ ಕೆಲವು ದಿನಗಳಿಂದ ರಾಜ್ಯದ್ಯಂತ ಪಂಪ್ ಸೆಟ್ ಗೆ ಆಧಾರ್ ಕಾರ್ಡ ಲಿಂಕ್(Agriculture pumpset adhar link)ಮಾಡುವ ಕಾರ್ಯ ನಡೆಯುತ್ತಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ(KEB) ಆಯೋಗದಿಂದ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿ(Escom) ಯಡಿ ಬರುವ ಎಲ್ಲಾ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಬಳಕೆ ಮಾಡುವ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ ಲಿಂಕ್ ಮಾಡಲು ಸೂಚನೆ ನೀಡಲಾಗಿತ್ತು, ಇದರಂತೆ ಕಳೆದ ಕೆಲವು ದಿನಗಳಿಂದ ರಾಜ್ಯದ್ಯಂತ ಪಂಪ್ ಸೆಟ್ ಗೆ ಆಧಾರ್ ಕಾರ್ಡ ಲಿಂಕ್(Agriculture pumpset adhar link)ಮಾಡುವ ಕಾರ್ಯ ನಡೆಯುತ್ತಿದೆ.
ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ ಲಿಂಕ್ ಮಾಡುವುದರ ಕುರಿತು ರೈತರಿಗೆ ಉಪಯುಕ್ತ ಮಹತ್ವದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದ್ದು, ಈ ಮಾಹಿತಿ ಇತರರಿಗೆ ಉಪಯುಕ್ತವಾಗಿರುವುದರಿಂದ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.
ಮುಖ್ಯವಾಗಿ ಫಲಾನುಭವಿಗಳ ನೈಜತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಾದ್ಯಂತ ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಇತರೆ ವಿದ್ಯುತ್ ಸರಬರಾಜು ಕಂಪನಿಗಳಿಂದ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ ಅನ್ನು ಲಿಂಕ್ ಮಾಡಲಾಗುತ್ತಿದೆ.
ಇದನ್ನೂ ಓದಿ: Uppara nigama yojane-2024: ಉಪ್ಪಾರ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗೆ ಅರ್ಜಿ ಆಹ್ವಾನ!
Agriculture pumpset adhar link- ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ ಲಿಂಕ್ ಕುರಿತು ಉಪಯುಕ್ತ ಮಾಹಿತಿ ವಿವರ ಹೀಗಿದೆ:
1) ಪಹಣಿ/RTC/ಉತಾರ್ ನಲ್ಲಿರುವ ಹೆಸರಿನ ವ್ಯಕ್ತಿಯು ಮರಣ ಹೊಂದಿದ್ದರೆ ಆರ್ ಆರ್ ಸಂಖ್ಯೆ/ಪಂಪ್ ಸೆಟ್ ಗೆ ಆಧಾರ್ ಕಾರ್ಡ ಲಿಂಕ್ ಹೇಗೆ ಮಾಡುವುದು?
ಒಂದೊಮ್ಮೆ ಜಮೀನಿನ ಪಹಣಿ/RTC ಅಲ್ಲಿ ಹೆಸರಿರುವ ವ್ಯಕ್ತಿಯು ಮರಣ ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ಮರಣ ಹೊಂದಿರುವ ವ್ಯಕ್ತಿಯ ಮರಣ ಪ್ರಮಾಣ ಪತ್ರ(Death certificate)ವನ್ನು ಸಲ್ಲಿಸಿ ಪ್ರಸ್ತುತ ವಾರಸುದಾರರ ಆಧಾರ್ ಕಾರ್ಡಗೆ ಪಂಪ್ ಸೆಟ್ ಲಿಂಕ್ ಮಾಡಿಕೊಳ್ಳಬೇಕು.
2) ಸಾಗುವಳಿ ಮಾಡುತ್ತಿರುವ ಜಮೀನು ಜಂಟಿ ಖಾತೆ ಹೊಂದಿದ್ದರೆ ಲಿಂಕ್ ಮಾಡುವುದು ಹೇಗೆ?
ರೈತರು ತಾವು ಸಾಗುವಳಿ ಮಾಡುತ್ತಿರುವ ಜಮೀನಿ ಜಂಟಿ ಖಾತೆ(Joint RTC) ಹೊಂದಿದ್ದ ಪಕ್ಷದಲ್ಲಿ ಛಾಪಾಕಾಗದವನ್ನು ತೆಗೆದುಕೊಂಡು ನಿಮ್ಮ ಜಂಟಿ ಖಾತೆ ಪಹಣಿ/RTC ಅಲ್ಲಿ ಬರುವ ಹೆಸರಿನವರ ಒಪ್ಪಿಗೆ ಪಡೆದು ಆಧಾರ್ ಕಾರ್ಡ ಲಿಂಕ್ ಮಾಡಿಸಿಕೊಳ್ಳಬೇಕು.
ಇದನ್ನೂ ಓದಿ: Greengram msp price-2024: ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್ ಗೆ ರೂ 8,682 ರಂತೆ ಹೆಸರುಕಾಳು ಖರೀದಿಗೆ ಆದೇಶ!
3) ಜಮೀನನ್ನು ಖರೀದಿ ಮಾಡಿದ್ದ ಸಮಯದಲ್ಲಿ ಲಿಂಕ್ ಮಾಡಿಕೊಳ್ಳುವುದು ಹೇಗೆ?
ಕೆಲವು ದಿನಗಳ ಹಿಂದೆಯಷ್ಟೆಯೇ ನಿವೇನಾದರು ಕೃಷಿ ಜಮೀನನ್ನು ಖರೀದಿ ಮಾಡಿದ್ದರೆ ಇದಕ್ಕೆ ಸಂಬಂಧಪಟ್ಟ ಕ್ರಯ ಪತ್ರಗಳನ್ನು ವಿದ್ಯುತ್ ಕಂಪನಿ ಕಚೇರಿಗೆ ಸಲ್ಲಿಸಿ ಆಧಾರ್ ಕಾರ್ಡ ಲಿಂಕ್ ಮಾಡಿಸಿಕೊಳ್ಳಬೇಕು.
Where to link aadhaar card to pump set- ಪಂಪ್ ಸೆಟ್ ಗೆ ಆಧಾರ್ ಕಾರ್ಡ ಲಿಂಕ್ ಎಲ್ಲಿ ಮಾಡಿಸಬೇಕು?
ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದ್ದು, ರೈತರು ತಮ್ಮ ಜಮೀನಿನಲ್ಲಿರುವ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ್ (RR number adn adhar card link)ಅನ್ನು ಜೋಡಣೆ ಮಾಡಲು ನಿಮ್ಮ ಹಳ್ಳಿಯ ಲೈನ್ ಮ್ಯಾನ್ ಅನ್ನು ಸಂಪರ್ಕಿಸಬೇಕು ಅಥವಾ ನಿಮ್ಮ ಹತ್ತಿರದ ವಿದ್ಯುತ್ ಸರಬರಾಜು ಕಂಪನಿ(Escom)ಭೇಟಿ ಮಾಡಿ ಲಿಂಕ್ ಮಾಡಿಕೊಳ್ಳಬೇಕು.
Pumpset RR number adhar link- ಪಂಪ್ ಸೆಟ್ ಗೆ ಆಧಾರ್ ಲಿಂಕ್ ಮಾಡಲು ಒದಗಿಸಬೇಕಾದ ದಾಖಲೆಗಳು:
1) ಜಮೀನಿನ ಪಹಣಿ/ಉತಾರ್/RTC
2) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ/Aadhar card
3) ಪಂಪ್ ಸೆಟ್ ಆರ್.ಆರ್ ಸಂಖ್ಯೆ/Pumpset RR number
ಇದನ್ನೂ ಓದಿ: krishi diploma- ಡಿಪ್ಲೊಮಾ (ಕೃಷಿ) ಕೋರ್ಸ್‌ಗೆ ಅರ್ಜಿ ಆಹ್ವಾನ!
Why Link Aadhaar Card to Pump Set?ಪಂಪ್ ಸೆಟ್ ಗೆ ಆಧಾರ್ ಕಾರ್ಡ ಲಿಂಕ್ ಏಕೆ ಮಾಡಬೇಕು?
1) ಮುಖ್ಯವಾಗಿ ಆಧಾರ್ ಕಾರ್ಡ ಅನ್ನು ಪಂಪ್ ಸೆಟ್ ಗೆ ಲಿಂಕ್ ಮಾಡಲು ಮುಖ್ಯ ಉದ್ದೇಶ ನೈಜ ಫಲಾನುಭವಿಗಳಿಗೆಯೇ ಅಂದರೆ ಅರ್ಹ ವಕ್ತಿಗಳಿಗೆಯೇ ಕೃಷಿ ಪಂಪ್ ಸೆಟ್ ಗಳಿಗೆ ನೀಡುತ್ತಿರುವ ವಿದ್ಯುತ್ ಬಿಲ್ ಸಹಾಯಧನ ಪಡೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಲು.
2) ಅಕ್ರಮವಾಗಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪಡೆಯುತ್ತಿರುವುದನ್ನು ತಡೆಗಟ್ಟಲು.
3) ನಕಲಿ ದಾಖಲೆಗಳನ್ನು ಸಲ್ಲಿಸಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪಡೆಯುವುದನ್ನು ತಡೆಗಟ್ಟಲು.
ಇದನ್ನೂ ಓದಿ: CISF Constable Jobs - ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ 1,130 ಕಾನ್ಸ್ಟೇಬಲ್ ಹುದ್ದೆಗಳ ಭರ್ತಿ!
ಹೆಚ್ಚಿನ ಮಾಹಿತಿಗಾಗಿ:
helpline- ಸಹಾಯವಾಣಿ: 1912
Energy Department- Click here
Bescom website: click here