RTC aadhar card link- ನಿಮ್ಮ ಜಮೀನಿನ ಪಹಣಿಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ! ಇಲ್ಲಿದೆ ಲಿಂಕ್ ಮಾಡಲು ಅಧಿಕೃತ ವೆಬ್ಸೈಟ್ ಲಿಂಕ್.
ಜಮೀನು ಹೊಂದಿರುವವರು ತಮ್ಮ ಪಹಣಿಗಳಿಗೆ(RTC) ಆಧಾರ್ ಸೀಡಿಂಗ್/ಲಿಂಕ್ ಮಾಡುವುದನ್ನು(RTC aadhar card link) ಕಂದಾಯ ಇಲಾಖೆಯಿಂದ ಕಡ್ಡಾಯ ಮಾಡಲಾಗಿದೆ.
ಜಮೀನು ಹೊಂದಿರುವವರು ತಮ್ಮ ಪಹಣಿಗಳಿಗೆ(RTC) ಆಧಾರ್ ಸೀಡಿಂಗ್/ಲಿಂಕ್ ಮಾಡುವುದನ್ನು(RTC aadhar card link) ಕಂದಾಯ ಇಲಾಖೆಯಿಂದ ಕಡ್ಡಾಯ ಮಾಡಲಾಗಿದೆ. ಆದ್ದರಿಂದ ಇಂದು ಈ ಅಂಕಣದಲ್ಲಿ ಸಾರ್ವಜನಿಕರಿಗೆ ಸೂಕ್ತ ಉಪಯುಕ್ತ ಮಾಹಿತಿ ನೀಡುವ ದೇಸೆಯಲ್ಲಿ ಪಹಣಿಗಳಿಗೆ ಆಧಾರ್ ಲಿಂಕ್ ಏಕೆ? ಮಾಡಬೇಕು, ಆಧಾರ್ ಲಿಂಕ್ ಎಲ್ಲಿ ಮಾಡಿಸಬೇಕು? ಮೊಬೈಲ್ ನಲ್ಲೇ ಲಿಂಕ್ ಹೇಗೆ ಮಾಡುವುದು ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.
ರೈತರು ತಮ್ಮ ಜಮೀನಿನ ಪಹಣಿ ಹಾಗೂ ಆಧಾರ್ ದಾಖಲಾತಿಗಳೊಂದಿಗೆ ಸ್ವಯಂ ಪ್ರೇರಣೆಯಿಂದ ಇಲಾಖೆಯ ವೆಬ್‌ಸೈಟ್(ಜಾಲತಾಣ) https://landrecords.karnataka.gov.in/service4 ನಲ್ಲಿ ಲಾಗಿನ್ ಮಾಡಿಕೊಂಡು ಆಧಾರ್‌ನೊಂದಿಗೆ ಲಿಂಕ್ ಮಾಡಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಅಥವಾ ಪಹಣಿ ಹಾಗೂ ಆಧಾರ್ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಯವರನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಿಕೊಳ್ಳಬಹುದಾಗಿದೆ ಎಂದು ಕಂದಾಯ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
RTC aadhar card link-2024: ಪಹಣಿಗಳಿಗೆ ಆಧಾರ್ ಲಿಂಕ್ ಏಕೆ? ಮಾಡಬೇಕು:
ರೈತರಿಗೆ ನಿಗದಿತ ಸಮಯದಲ್ಲಿ ಸರಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಧಾರ್ ಕಾಯ್ದೆಯ ಕಲಂ 4(4)(ಬಿ)(2)ರ ಅಡಿ ಪಹಣಿಗಳಿಗೆ ಆಧಾರ್ ಸೀಡಿಂಗ್ ಮಾಡಲು ಸರಕಾರದಿಂದ ಅನುಮತಿಯನ್ನು ನೀಡಲಾಗಿದೆ.
ಅಂದರೆ ಸರಕಾರಿ ಯೋಜನೆಗಳನ್ನು ಜಾರಿಗೊಳಿಸಲು ಅಥವಾ ಆ ಯೋಜನೆಯ ಸೌಲಭ್ಯವನ್ನು ತ್ವರಿತವಾಗಿ ಸಾರ್ವಜನಿಕರು ತಲುಪಿಸಲು ಮತ್ತು ನೈಜ ಅರ್ಹ ಫಲಾನುಭವಿಗಳಿಗೆಯೇ ವಿವಿಧ ಯೋಜನೆಯ ಪ್ರಯೋಜನ ಪಡೆಯಲು ಪರಿಣಾಮಕಾರಿಯಾಗಿ ಯೋಜನೆಗಳನ್ನು ಅನುಷ್ಠಾನ ಮಾಡಲು ಪಹಣಿಗಳಿಗೆ ಆಧಾರ್ ಲಿಂಕ್ ಮಾಡುವ ವ್ಯವಸ್ಥೆಯನ್ನು ಕಡ್ಡಾಯ ಮಾಡಲಾಗಿದೆ.
ಸಾರ್ವಜನಿಕರು ಎರಡು ವಿಧಾನವನ್ನು ಅನುಸರಿಸಿ ತಮ್ಮ ಜಮೀನಿನ ಪಹಣಿ/ಉತಾರ್/RTC ಗಳಿಗೆ ಆಧಾರ್ ಲಿಂಕ್ ಅನ್ನು ಮಾಡಿಸಿಕೊಳ್ಳಬಹು ಒಂದನೇ ವಿಧಾನ ತಮ್ಮ ಮೊಬೈಲ್ ನಲ್ಲೇ ಮಾಡಬಹುದು ಎರಡನೇ ವಿಧಾನ ನಿಮ್ಮ ಹಳ್ಳಿಯ ಗ್ರಾಮ ಆಡಳಿತ ಅಧಿಕಾರಿ/VA ಅವರನ್ನು ಭೇಟಿ ಮಾಡಿ ಲಿಂಕ್ ಮಾಡಿಕೊಳ್ಳಬಹುದು ಈ ಎರಡು ವಿಧಾನದ ಕುರಿತು ಈ ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ.
RTC aadhar card link website: ವಿಧಾನ-1: ನಿಮ್ಮ ಮೊಬೈಲ್ ನಲ್ಲೇ ಪಹಣಿಗೆ ಆಧಾರ್ ಲಿಂಕ್ ಮಾಡುವ ವಿಧಾನ:
ಜಮೀನು ಹೊಂದಿರುವ ಸಾರ್ವಜನಿಕರು ಕಂದಾಯ ಇಲಾಖೆಯ ಅಧಿಕೃತ ಭೂಮಿ ಜಾಲತಾಣವನ್ನು ಭೇಟಿ ಮಾಡಿ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಪಹಣಿ/ಉತಾರ್/RTC ಗೆ ಆಧಾರ್ ಲಿಂಕ್ ಮಾಡಬಹುದಾಗಿದೆ.
Step-1: ಮೊದಲಿಗೆ ಈ ಲಿಂಕ್ RTC aadhar card link ಮೇಲೆ ಕ್ಲಿಕ್ ಮಾಡಿ ಅಧಿಕೃತ ಭೂಮಿ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು. ಇದಾದ ಬಳಿಕ ಈ ಪೇಜ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ಅಲ್ಲೇ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ನಮೂದಿಸಬೇಕು.
Step-2: ಕ್ಯಾಪ್ಚ್ ಕೋಡ್ ನಮೂದಿಸಿದ ಬಳಿಕ ಇದೇ ಪುಟದಲ್ಲಿ ಕೆಳಗೆ ಕಾಣುವ "Send OTP" ಬಟನ್ ಮೇಲೆ ಕ್ಲಿಕ್ ಮಾಡಬೇಕು ಆಗ ನೀವು ನಮೂದಿಸಿರುವ ಮೊಬೈಲ್ ಸಂಕ್ಯೆಗೆ 4 ಅಂಕಿಯ OTP ಬರುತ್ತದೆ ಅದನ್ನು ಹಾಕಿ "Login" ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: ಈ ರೀತಿ ಮೇಲಿನ ವಿಧಾನವನ್ನು ಅನುಸರಿಸಿ ಲಾಗಿನ್ ಅದ ಬಳಿಕ ಇಲ್ಲಿ "ನಿಮ್ಮ ಪಹಣಿಗೆ ನಿಮ್ಮ ಆಧಾರ್ ಲಿಂಕ್ ಮಾಡಿ" ಎನ್ನುವ ಆಯ್ಕೆಯನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಕೇಳುವ ಅಗತ್ಯ ಅಧಾರ್ ಕಾರ್ಡ ವಿವರಗಳನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ.
ವಿಧಾನ-2: ಗ್ರಾಮ ಆಡಳಿತ ಅಧಿಕಾರಿಯವರನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಕೊಳ್ಳುವುದು:
ಸಾರ್ವಜನಿಕರು ಪಹಣಿಗಳಿಗೆ ಆಧಾರ್ ಲಿಂಕ್ ಮಾಡಿಕೊಳ್ಳಲು ನಿಮ್ಮ ಹಳ್ಳಿಯ ಗ್ರಾಮ ಆಡಳಿತ ಅಧಿಕಾರಿಯವರನ್ನು ಸಂಪರ್ಕಿಸಿ ಅಗತ್ಯ ದಾಖಲಾತಿಗಲಾದ ಆಧಾರ್ ಕಾರ್ಡ ಪ್ರತಿ ಮತ್ತು ಖುದ್ದು ಮೊಬೈಲ್ ಅನ್ನು ತೆಗೆದುಕೊಂಡು ಹೋಗಿ ಪಹಣಿಗಳಿಗೆ ಆಧಾರ್ ಲಿಂಕ್ ಮಾಡಿಕೊಳ್ಳಬಹುದು ಎಂದು ಕಂದಾಯ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಉಪಯುಕ್ತ ಕೊಂಡಿಗಳು:
ಪಹಣಿ/ಉತಾರ್/RTC ಗಳಿಗೆ ಆಧಾರ್ ಲಿಂಕ್ ಮಾಡಲು ವೆಬ್ಸೈಟ್: Click here
ಕಂದಾಯ ಇಲಾಖೆಯ ಭೂಮಿ ವೆಬ್ಸೈಟ್: Click here
ಪ್ರಕಟಣೆ ಪ್ರತಿ: