HomeAgricultureRTC crop details-ಮೊಬೈಲ್ ನಲ್ಲೇ ಪಹಣಿಯಲ್ಲಿ ದಾಖಲಿಸಿದ ಬೆಳೆ ಮಾಹಿತಿ ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

RTC crop details-ಮೊಬೈಲ್ ನಲ್ಲೇ ಪಹಣಿಯಲ್ಲಿ ದಾಖಲಿಸಿದ ಬೆಳೆ ಮಾಹಿತಿ ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

ರೈತರು ತಮ್ಮ ಮೊಬೈಲ್ ನಲ್ಲೇ ಪಹಣಿಯಲ್ಲಿ ದಾಖಲಿಸಿದ ಬೆಳೆ ಮಾಹಿತಿ(RTC crop details-2024) ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ ಮಾಡಲಾಗಿದೆ. ಈ ವೆಬ್ಸೈಟ್ ಭೇಟಿ ಮಾಡಿ ತಮ್ಮ ಜಮೀನಿನ ಸರ್ವೆ ನಂಬರ್ ನ ಪಹಣಿ/RTC ಅಲ್ಲಿ ಯಾವ ಬೆಳೆ ವಿವರ ದಾಖಲೆ ಮಾಡಲಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆಯಿಂದ ಪ್ರತಿ ವರ್ಷ ಮುಂಗಾರು,ಹಿಂಗಾರು,ಬೇಸಿಗೆ ಹಂಗಾಮಿನಲ್ಲಿ ರಾಜ್ಯ ಎಲ್ಲಾ ರೈತರ ಜಮೀನುಗಳನ್ನು ನೇರವಾಗಿ ಭೇಟಿ ಮಾಡಿ Crop Survey ಮೊಬೈಲ್ ಅಪ್ಲಿಕೇಶನ್ ಮೂಲಕ ಬೆಳೆ ಸಮೀಕ್ಷೆಯನ್ನು ಕೈಗೊಂಡು ಬೆಳೆ ವಿವರವನ್ನು ಪಹಣಿಯಲ್ಲಿ ದಾಖಲೆ ಮಾಡಲಾಗುತ್ತದೆ.

ಇಂದು ಈ ಲೇಖನದಲ್ಲಿ ರೈತರು ತಮ್ಮ ಮೊಬೈಲ್ ನಲ್ಲಿ ಈ ವಿವರವನ್ನು ಹೇಗೆ ನೋಡುವುದು? ಮತ್ತು ಪಹಣಿಯಲ್ಲಿ ಬೆಳೆ ವಿವರ ಸರಿಯಾಗಿ ದಾಖಲೆ ಮಾಡುವುದು ಎಷ್ಟು ಮುಖ್ಯ? ಇದರ ಪ್ರಾಮುಖ್ಯತೆ ಇತ್ಯಾದಿ ವಿಷಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.

ಇದನ್ನೂ ಓದಿ: Bele nashta parihara-2024: ಈ ಪಟ್ಟಿಯಲ್ಲಿರುವ ರೈತರಿಗೆ ಸಿಗಲಿದೆ 3,000/- ಜೀವನೋಪಾಯ ನಷ್ಟ ಪರಿಹಾರ!

RTC crop details-ಪಹಣಿಯಲ್ಲಿ ಸರಿಯಾದ ಬೆಳೆ ವಿವರ ದಾಖಲೆ ಏಕೆ ಮಾಡಬೇಕು?

ಅನೇಕ ರೈತರಿಗೆ ಈ ಮಾಹಿತಿ ತಿಳಿದಿರುವುದಿಲ್ಲ ನಮಗೆ ಬೆಳೆ ವಿಮೆ, ಬೆಳೆ ಪರಿಹಾರ, ಬೆಳೆ ಸಾಲ, ಬೆಂಬಲ ಬೆಲೆ ಯೋಜನೆಗಳ ಲಾಭ/ಅರ್ಥಿಕ ನೆರವು ಸಿಗುದೇ ಇಲ್ಲ ಎಂದು ಹೇಳುತ್ತಾರೆ ಇದಕ್ಕೆ ಈ ಬೆಳೆ ಸಮೀಕ್ಷೆ ವಿವರಕ್ಕೂ ಯಾವ ರೀತಿಯ ಸಂಬಂಧ ಎಂದರೆ ಉದಾಹರಣೆಗೆ ನೀವು ಮೆಕ್ಕೆಜೋಳಕ್ಕೆ ಬೆಳೆ ವಿಮೆ ಮಾಡಿಸಿದ್ದರೆ ಬೆಳೆ ಸಮೀಕ್ಷೆ ವಿವರದಲ್ಲಿಯು ಅಂದರೆ ಪಹಣಿ/RTC ಯಲ್ಲಿಯೂ ಮೆಕ್ಕೆಜೋಳ ಎಂದು ದಾಖಲೆಯಾಗಿರಬೇಕು  ಒಂದೊಮ್ಮೆ ಸಮೀಕ್ಷೆ ಮಾಡುವವರು ರಾಗಿ ಎಂದು ದಾಖಲೆ ಮಾಡಿದರೆ ಬೆಳೆ ವಿವರ ತಾಳೆಯಾಗದೆ ವಿಮೆ ಪರಿಹಾರ ಜಮಾ ಅಗುವುದಿಲ್ಲ.

ಇದೆ ರೀತಿ ಬೆಂಬಲ ಬೆಲೆ ಯೋಜನೆಯಡಿ ನೀವು ರಾಗಿಯನ್ನು ಮಾರಾಟ ಮಾಡಲು ನೋಂದಣಿ ಮಾಡಿಸಲು ಖರೀದಿ ಕೇಂದ್ರಕ್ಕೆ ಭೇಟಿ ಮಾಡಿರುತ್ತಿರಿ ಅಲ್ಲಿ ಬೆಳೆ ಸಮೀಕ್ಷೆ ವಿವರದಲ್ಲಿ ನೀವು ಮೆಕ್ಕೆಜೋಳ ಬೆಳೆದಿದ್ದಿರಾ ಎಂದು ಬೆಳೆ ವಿವರ ದಾಖಲೆಯಾಗಿದರೆ ನಿಮಗೆ ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ.

ಇದೆ ಮಾದರಿಯಲ್ಲಿ ಬೆಳೆ ಸಾಲ, ವಿವಿಧ ಇಲಾಖೆಯಲ್ಲಿ ಬೆಳೆ ಆಧಾರಿತ ಸಹಾಯಧನ ಯೋಜನೆಗಳ ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆಯ ವಿವರವನೇ ಪರಿಗಣಿಸಲಾಗುತ್ತದೆ ಅದ್ದರಿಂದ ಬೆಳೆ ಸಮೀಕ್ಷೆಯ ವಿವರದಲ್ಲಿ ಬೆಳೆ ವಿವರವನ್ನು ರೈತರು ಸರಿಯಾಗಿ ದಾಖಲೆ ಮಾಡಿಸಿಕೊಳ್ಳುವುದು ಅತೀ ಮುಖ್ಯವಾಗಿದೆ.

ಇದನ್ನೂ ಓದಿ: BMRCL Recruitment 2024: ನಮ್ಮ ಮೆಟ್ರೋ ನೇಮಕಾತಿ!ಬೆಂಗಳೂರು ಮೆಟ್ರೋದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ ವೇತನ ₹62,500

Crop survey-ಬೆಳೆ ಸಮೀಕ್ಷೆಯನ್ನು ಯಾರು ಮಾಡುತ್ತಾರೆ? ಇಲ್ಲಿ ಬೆಳೆ ವಿವರವನ್ನು ಸರಿಯಾಗಿ ದಾಖಲಿಸಲು ಏನು ಮಾಡಬೇಕು?

ಪ್ರತಿ ಹಳ್ಳಿಯ ಬೆಳೆ ಸಮೀಕ್ಷೆಯನ್ನು ಖಾಸಗಿ ನಿವಾಸಿಗಳಿಂದ(PR) ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ಜೂನ್-ಆಗಸ್ಟ್ ತಿಂಗಳಲ್ಲಿ ಬೆಳೆ ಸಮೀಕ್ಷೆಯನ್ನು ಮಾಡಿಸಲಾಗುತ್ತದೆ.

ರೈತರು ಈ ಸಮಯದಲ್ಲಿ ನಿಮ್ಮ ಹಳ್ಳಿಗೆ ಬೆಳೆ ಸಮೀಕ್ಷೆ ಮಾಡಲು ಬರುವ ಖಾಸಗಿ ನಿವಾಸಿಯನ್ನು(PR) ಖುದ್ದು ಭೇಟಿ ಮಾಡಿ ನಿಮ್ಮ ಜಮೀನಿನಲ್ಲಿ ಯಾವ ಬೆಳೆ ಬೆಳೆದಿರುತ್ತಿರೋ ಅದೇ ಬೆಳೆಯನ್ನು ಸರಿಯಾಗಿ ತಪ್ಪಾಗದಂತೆ ದಾಖಲಿಸಿಕೊಳ್ಳಬೇಕು.

ನಿಮ್ಮ ಹಳ್ಳಿಗೆ ನೇಮಕ ಮಾಡಿರುವ ಖಾಸಗಿ ನಿವಾಸಿಯ(PR) ವಿವರವನ್ನು ಪಡೆಯಲು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ.

ಇದನ್ನೂ ಓದಿ: PM-kisan amount date-17ನೇ ಕಂತಿನ ಕಿಸಾನ್ ಸಮ್ಮಾನ್ ಹಣ ಬಿಡುಗಡೆಗೆ ಅಧಿಕೃತ ದಿನಾಂಕ ಪ್ರಕಟ!

How to check crop survey details-ಮೊಬೈಲ್ ನಲ್ಲೇ ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ವಿವರವನ್ನು ಪಡೆಯುವ ವಿಧಾನ:

ರೈತರು ಸರಕಾರದ ಇ-ಆಡಳಿತ ಇಲಾಖೆಯಿಂದ ಅಭಿವೃದ್ದಿಪಡಿಸಿರುವ ಅಧಿಕೃತ Cropsurvey.karnataka.gov.in ವೆಬ್ಸೈಟ್ ಅನ್ನು ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಜಮೀನಿನ ಸರ್ವೆ ನಂಬರ್ ನಲ್ಲಿ(RTC) ದಾಖಲೆ ಮಾಡಿರುವ ಬೆಳೆ ವಿವರದ ಮಾಹಿತಿಯನ್ನು ಪಡೆಯಬಹುದು.

Step-1: ಮೊದಲಿಗೆ ಈ ಲಿಂಕ್ Crop survey details ಮೇಲೆ ಕ್ಲಿಕ್ ಮಾಡಿ ಬೆಳೆ ಸಮೀಕ್ಷೆಯೆ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು. ಇದಾದ ಬಳಿಕ “View PR Uploaded Crop Info” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ತದನಂತರ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ ಆಯ್ಕೆ ಮಾಡಿಕೊಂಡು ನಿಮ್ಮ ಜಮೀನಿನ ಸರ್ವೆ ನಂಬರ್ ಅನ್ನು ಹಾಕಿ “Get Crop Survey Details” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: fasal bima yojana-ಈ ಒಂದು ತಪ್ಪಿನಿಂದ ಅನೇಕ ರೈತರಿಗೆ ಬೆಳೆ ವಿಮೆ ಜಮಾ ಅಗಿಲ್ಲ! ಇಲ್ಲಿದೆ ಸೂಕ್ತ ಪರಿಹಾರ!

Step-3: ಅಗ ನಿಮ್ಮ ಸರ್ವೆ ನಂಬರ್ ನಲ್ಲಿ ಎಷ್ಟು ಹಿಸ್ಸಾ ಇರುತ್ತವೆ ಆ ಎಲ್ಲಾ ರೈತರ ವಿವರ ತೋರಿಸುತ್ತದೆ ಇಲ್ಲಿ ನಿಮ್ಮ ಹೆಸರಿರುವ ಸರ್ವೆ ನಂಬರ್ ಮುಂದೆ ಕ್ಲಿಕ್ ನಿಮ್ಮ ಜಮೀನಿನ ಬೆಳೆ ಸಮೀಕ್ಷೆಯ ಬೆಳೆ ವಿವರ ತೋರಿಸುತ್ತದೆ. ಕೊನೆಯಲ್ಲಿ ಕಾಣುವ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಮೀನಿನ ಪೋಟೊವನ್ನು ಸಹ ನೋಡಬಹುದು.

ಒಂದೊಮ್ಮೆ ಬೆಳೆ ವಿವರ ತಪ್ಪಾಗಿ ದಾಖಲೆ ಮಾಡಿದ್ದರೆ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಬೆಳೆ ಮಾಹಿತಿಯನ್ನು ತಿದ್ದುಪಡಿ ಮಾಡಿಸಿಕೊಳ್ಳಬೇಕು ಇದಕ್ಕೆ ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿರುತ್ತದೆ ಆ ದಿನಾಂಕದ ಒಳಗಾಗಿ ನೀವು ಈ ಕಚೇರಿಯನ್ನು ಭೇಟಿ ಮಾಡಬೇಕು.

Most Popular

Latest Articles

- Advertisment -

Related Articles