Ujjwala Yojana-2023: ಉಜ್ವಲ ಯೋಜನೆಯಡಿ ಗ್ಯಾಸ್ ಸಬ್ಸಿಡಿ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!

November 28, 2023 | Siddesh

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಪ್ರತಿ ಬಾರಿ ಗ್ರಾಹಕರು ಖರೀದಿ ಮಾಡುವ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಗೆ ಸಹಾಯಧನ ಪಡೆಯಲು ಮತ್ತು ಹೊಸದಾಗಿ ಕನೆಕ್ಷನ್ ಪಡೆಯುತ್ತಿರುವ ಫಲಾನುಭವಿಗಳು ತಪ್ಪದೇ ಇ-ಕೆವೈಸಿ ಮಾಡಿಕೊಳ್ಳುವಂತೆ ಪ್ರಕಟಣೆ ಹೊರಡಿಸಲಾಗಿದೆ.

ಕೇಂದ್ರ ಸರಕಾರದಿಂದ ಹಿಂದುಳಿದ ವರ್ಗಕ್ಕೆ ಸೇರಿದ ನಾಗರಿಕರಿಗೆ ಮನೆಯಲ್ಲಿ ಆಹಾರ ತಯಾರಿಕೆಗೆ ಎಲ್ ಪಿ ಜಿ ಗ್ಯಾಸ್ ಅನ್ನು ಬಳಕೆ ಮಾಡಲು ಅರ್ಥಿಕವಾಗಿ ನೆರವಾಗಲು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಸಹಾಯಧನದಲ್ಲಿ ಗ್ಯಾಸ್ ಸಿಲಿಂಡರ್ ಒದಗಿಸಲಾಗುತ್ತದೆ.

ಈಗಾಗಲೇ ಈ ಯೋಜನೆಯಡಿ  ಗ್ಯಾಸ್ ಏಜೆನ್ಸಿ ಮುಖಾಂತರ ಕನೆಕ್ಷನ್ ಪಡೆದಿರುವವರು ಮತ್ತು ಹೊಸದಾಗಿ ಕನೆಕ್ಷನ್ ಪಡೆಯಲು ಅರ್ಜಿ ಸಲ್ಲಿಸಿ ಮಂಜೂರಾತಿ ಮಾಡಿಕೊಂಡಿರುವ ಗ್ರಾಹಕರು ಇ-ಕೆವೈಸಿ ಮಾಡಿಕೊಂಡಲ್ಲಿ ಮಾತ್ರ ನಿಮ್ಮ ಖಾತೆಗೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಜಮಾ ಅಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: PM-kisan state installment-ರಾಜ್ಯ ಸರಕಾರದ ಪಿ ಎಂ ಕಿಸಾನ್ ಯೋಜನೆಯ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವುದು ಹೇಗೆ?

Ujjwala Yojana 2023- ಇ-ಕೆವೈಸಿ ಎಲ್ಲಿ ಮಾಡಿಸಬೇಕು?

ಈಗಾಗಲೇ ಈ ಯೋಜನೆಯಡಿ ಸಹಾಯಧನ ಪಡೆಯುತ್ತಿರುವ ಗ್ರಾಹಕರು ನಿಮಗೆ ಗ್ಯಾಸ್ ಸಿಲಿಂಡರ್ ಖಾಲಿಯಾದ ಬಳಿಕ ತುಂಬಿದ ಸಿಲಿಂಡರ್ ನೀಡುವ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿ ಕಚೇರಿಯನ್ನು ಅರ್ಜಿದಾರ ಮಹಿಳೆಯು ಆಧಾರ್ ಕಾರ್ಡ ಮತ್ತು ಬ್ಯಾಂಕ್ ಪಾಸ್ ಬುಕ್ ದಾಖಲಾತಿಗಳೊಂದಿಗೆ ಭೇಟಿ ಮಾಡಿ ಬಯೋಮೇಟ್ರಿಕ್ ನೀಡಿ ಇ-ಕೆವೈಸಿ ಮಾಡಿಕೊಳ್ಳಬೇಕು. ಈ ರೀತಿ ವಿಧಾನವನ್ನು ಅನುಸರಿಸಿ ಇ-ಕೆವೈಸಿ ಮಾಡಿಕೊಂಡಾಗ ಮಾತ್ರ ನಿಮಗೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಅಗುತ್ತದೆ.

ಹೊಸ ಕನೆಕ್ಷನ್ ಪಡೆಯುತ್ತಿರುವವರು?

ಹೊಸದಾಗಿ ಉಜ್ವಲ ಯೋಜನೆಯಡಿ ಕನೆಕ್ಷನ್ ಪಡೆಯುತ್ತಿರುವವರು ನಿಮ್ಮ ಮನೆಗೆ ಗ್ಯಾಸ್ ಏಜೆನ್ಸಿಯ ಸಿಬ್ಬಂದಿಗಳು ಗ್ಯಾಸ್ ಸಿಲಿಂಡರ್ ಅಳವಡಿಸಲು ಬಂದಾಗ ಅವರ ಮೊಬೈಲ್ ಅಪ್ಲಿಕೇಶನ್ ಮೂಲಕ ಫಲಾನುಭವಿಯ ಅಗತ್ಯ ದಾಖಲಾತಿ ಸಲ್ಲಿಸಿ ಬಯೋಮೇಟ್ರಿಕ್ ನೀಡಿ ಇ-ಕೆವೈಸಿ ಮಾಡಿಕೊಳ್ಳಬೇಕಾಗುತ್ತದೆ ಈ ವಿಧಾನ ಅನುಸರಿಸಿದ ಬಳಿಕ ಅಂತಹ ಫಲಾಣುಭವಿಗಳಿಗೆ ಸಹಾಯಧನ ಹಣ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಅಗುತ್ತದೆ.

ಇದನ್ನೂ ಓದಿ: Parihara list-ಬರ ಪರಿಹಾರ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ! ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಹೆಸರಿದ್ಯಾ? ಚೆಕ್ ಮಾಡಿ.

Ujjwala Yojana e-KYC: ಇ-ಕೆವೈಸಿ ಅರ್ಜಿ ನಮೂನೆಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ: Download Now 

Ujjwala Yojana application-ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಹೊಸ ಅರ್ಜಿ ಸಲ್ಲಿಸಲು ಅವಕಾಶ:

ಅರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ನಾಗರಿಕರು ಇಲ್ಲಿಯವರೆಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ,ಸ್ಟಾವ್ ತೆಗೆದುಕೊಳ್ಳದಿರುವವರು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಹೊಸ ಕನೆಕ್ಷನ್ ಪಡೆಯಬವುದು.

ಇದನ್ನೂ ಓದಿ: Sprinkler set Subsidy-ಕೃಷಿ ಇಲಾಖೆಯಿಂದ ಶೇ 90 ರಷ್ಟು ಸಹಾಯಧನದಲ್ಲಿ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

ಅಥವಾ ನಿಮ್ಮ ಹತ್ತಿರದ ಗ್ಯಾಸ್ ಸಿಲಿಂಡರ್ ಸರಬರಾಜು ಏಜೆನ್ಸಿಯ ಕಚೇರಿಯನ್ನು ಅಗತ್ಯ ದಾಖಲಾತಿಗಳ ಸಮೇರ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಹೊಸ ಕನೆಕ್ಷನ್ ಪಡೆಯಬವುದು.

ಅಗತ್ಯ ದಾಖಲಾತಿ ಮಾಹಿತಿ:

  • ಅರ್ಜಿದಾರರ ಆಧಾರ್ ಕಾರ್ಡ ಪ್ರತಿ.
  • ಬ್ಯಾಂಕ್ ಪಾಸ್ ಬುಕ್ ಪ್ರತಿ.
  • ಪೋಟೋ
  • ಕುಟುಂಬದ ರೇಷನ್ ಕಾರ್ಡ ಪ್ರತಿ.
  • ವಿಳಾಸ ದೃಡೀಕರಣಕ್ಕಾಗಿ ವಿದ್ಯುತ್ ಬಿಲ್ 

ಅಂಕಿ-ಸಂಖ್ಯೆ ವಿವರ:

ಪ್ರಸ್ತುತ ದೇಶದಾದ್ಯಂತ ನವೆಂಬರ್-2023 ತಿಂಗಳವರೆಗೆ ಈ ಯೋಜನೆಯಡಿ ಒಟ್ಟು 98,136,985 ಕನೆಕ್ಷನ್ ಗಳನ್ನು ನೀಡಲಾಗಿರುತ್ತದೆ.

Ujjwala Yojana  website-ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್ಸೈಟ್: Click here 

ಉಜ್ವಲ ಯೋಜನೆ ಸಹಾಯವಾಣಿ ಸಂಖ್ಯೆ: 1800-266-6696 (Ujjwala Helpline)

ಇದನ್ನೂ ಓದಿ: New ration shop- ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬವುದು?

Tags:
WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: