Veterinary Doctor Recruitment-2024: ಕರ್ನಾಟಕ ಪಶುಪಾಲನೆ ಇಲಾಖೆಯಿಂದ 400 ಹುದ್ದೆಗಳ ನೇಮಕಾತಿ! ಇಲ್ಲಿದೆ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್!

ಕರ್ನಾಟಕ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ಖಾಲಿ ಇರುವಂತಹ 400 ಪಶು ವೈದ್ಯಾಧಿಕಾರಿಗಳ ನೇಮಕಾತಿಗೆ(Karnataka Veterinary Doctor Recruitment 2024)ಅಧಿಸೂಚನೆಯನ್ನು ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ. 

Veterinary Doctor Recruitment-2024: ಕರ್ನಾಟಕ ಪಶುಪಾಲನೆ ಇಲಾಖೆಯಿಂದ 400 ಹುದ್ದೆಗಳ ನೇಮಕಾತಿ! ಇಲ್ಲಿದೆ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್!
Veterinary Doctor Recruitment-2024

ಕರ್ನಾಟಕ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ಖಾಲಿ ಇರುವಂತಹ 400 ಪಶು ವೈದ್ಯಾಧಿಕಾರಿಗಳ ನೇಮಕಾತಿಗೆ(Karnataka Veterinary Doctor Recruitment 2024)ಅಧಿಸೂಚನೆಯನ್ನು ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ. 

ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದ್ದು ಅರ್ಜಿ ಸಲ್ಲಿಸುವ ಡೈರೆಕ್ಟರ್ ಲಿಂಕ್ ಅನ್ನು ಇಲ್ಲಿ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಲೇಖನವನ್ನು ಕೊನೆಯ ಭಾಗದವರೆಗೂ ಓದಿ ಅರ್ಜಿ ಸಲ್ಲಿಸಿ.

ರಾಜ್ಯದ್ಯಂತ ನೇಮಕಾತಿ ಮಾಡಿಕೊಳ್ಳುತ್ತಿರುವ ಪಶು ವೈದ್ಯಾಧಿಕಾರಿಗಳ ನೇಮಕಾತಿಯ ಕುರಿತು ಅರ್ಹತೆ, ಅರ್ಜಿ ಸಲ್ಲಿಸುವ ಮಾಹಿತಿ, ನೇಮಕಾತಿಯ ಪ್ರಮುಖ ದಿನಾಂಕಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿಯೇ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: PM-kisan status check-2024: ಇಲ್ಲಿಯವರೆಗೆ ಎಷ್ಟು ಕಂತು ಪಿ ಎಂ ಕಿಸಾನ್ ಹಣ ಬಂದಿದೆ ಎಂದು ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

Veterinary Doctor Recruitment- ನೇಮಕಾತಿಯ ಸಂಕ್ಷಿಪ್ತ ವಿವರ : 

• ನೇಮಕಾತಿ ಇಲಾಖೆ : ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ 
• ಒಟ್ಟು ಹುದ್ದೆಗಳ ಸಂಖ್ಯೆ : 400
• ಹುದ್ದೆಗಳ ಹೆಸರು : ಪಶು ವೈದ್ಯಾಧಿಕಾರಿಗಳು 
• ನೇಮಕಾತಿ ವಿಧ : ಗುತ್ತಿಗೆ ಆಧಾರ 
• ಅರ್ಜಿ ಸಲ್ಲಿಕೆ : ಆನ್ಲೈನ್ ಮುಖಾಂತರ 

ಹುದ್ದೆಗಳ ವಿಂಗಡಣೆ : 

ಒಟ್ಟು 400 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು ಕಲ್ಯಾಣ ಕರ್ನಾಟಕ ವಿಭಾಗಕ್ಕೆ ಮತ್ತು ಸ್ಥಳೀಯ ವೃಂದ ವಿಭಾಗಕ್ಕೆ ಈ ಕೆಳಗಿನಂತೆ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ.

• ಸ್ಥಳೀಯ ವೃಂದ ವಿಭಾಗ (RPC) - 386 ಹುದ್ದೆಗಳು 
• ಕಲ್ಯಾಣ ಕರ್ನಾಟಕ ವಿಭಾಗ (HK) - 14 ಹುದ್ದೆಗಳು

ಇದನ್ನೂ ಓದಿ: RTC crop details-ಮೊಬೈಲ್ ನಲ್ಲೇ ಪಹಣಿಯಲ್ಲಿ ದಾಖಲಿಸಿದ ಬೆಳೆ ಮಾಹಿತಿ ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

ನೇಮಕಾತಿ ಶೈಕ್ಷಣಿಕ ಅರ್ಹತೆಗಳು - 

ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಯಾವುದೇ ಒಂದು ಪಶು ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಅಥವಾ ಕೃಷಿ ವಿಶ್ವವಿದ್ಯಾಲಯದಿಂದ B. Vsc ಅಥವಾ B. Vsc/AH ಪದವಿ ಮುಗಿಸಿರುವವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ ಅರ್ಹತೆಗಳು -

ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹೊಂದಿರಬೇಕು ಮತ್ತು ಗರಿಷ್ಠ 35 ವರ್ಷದ ಒಳಗಿರಬೇಕು. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ಇದನ್ನೂ ಓದಿ: Bele nashta parihara-2024: ಈ ಪಟ್ಟಿಯಲ್ಲಿರುವ ರೈತರಿಗೆ ಸಿಗಲಿದೆ 3,000/- ಜೀವನೋಪಾಯ ನಷ್ಟ ಪರಿಹಾರ!

Salary Range - ಆಯ್ಕೆಯಾದವರಿಗೆ ಮಾಸಿಕ ₹52,640/- ವೇತನ ನಿಗದಿಪಡಿಸಲಾಗಿದೆ.

ನೇಮಕಾತಿಯ ಪ್ರಮುಖ ದಿನಾಂಕಗಳು - 

• ಆನ್ಲೈನ್ ಅರ್ಜಿ ನೋಂದಣಿ ಆರಂಭ : 14ನೇ ಜೂನ್ 2024
• ಆನ್ಲೈನ್ ಅರ್ಜಿ ನೋಂದಣಿ ಮುಕ್ತಾಯ : 24ನೇ ಜೂನ್ 2024

ನೇಮಕಾತಿ ಪ್ರಮುಖ ಲಿಂಕ್ ಗಳು : 

• ಅರ್ಜಿ ಸಲ್ಲಿಕೆ ಡೈರೆಕ್ಟ್ ಲಿಂಕ್ : Click here
• ಅಧಿಸೂಚನೆ : ವೀಕ್ಷಿಸಿ