Voter ID list-2023: ಚುನಾವಣಾ ಆಯೋಗದಿಂದ ಪರಿಷ್ಕೃತ ಮತದಾರರ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರು ಸರಿ ಇದೆಯೇ ಚೆಕ್ ಮಾಡಿ.
Voter ID list: ಭಾರತೀಯ ಚುನಾವಣಾ ಆಯೋಗದಿಂದ ಮತದಾರರ ಪರಿಷ್ಕೃತ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ಹೊಸ ಮತದಾರರ ನೋಂದಣಿ, ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು,ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಲಿಂಕ್ ಮಾಡಲು. ಇತರೆ ತಿದ್ದುಪಡಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಭಾರತೀಯ ಚುನಾವಣಾ ಆಯೋಗದಿಂದ ಮತದಾರರ ಪರಿಷ್ಕೃತ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ಹೊಸ ಮತದಾರರ ನೋಂದಣಿ, ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು,ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಲಿಂಕ್ ಮಾಡಲು. ಇತರೆ ತಿದ್ದುಪಡಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಈ ಆದೇಶದನ್ವಯ ಈಗಾಗಲೇ ವೋಟರ್ ಐಡಿ/ಮತದಾರರ ಗುರುತಿನ ಚೀಟಿ ಹೊಂದಿರುವವರು ತಮ್ಮ ವಿವರ ಈ ಪರಿಷ್ಕೃತ ಮತದಾರರ ಪಟ್ಟಿ ಸರಿಯಾಗಿದಿಯೇ? ಎಂದು ಒಮ್ಮೆ ಆಯೋಗ ಅಧಿಕೃತ ಜಾಲತಾಣ ಭೇಟಿ ಮಾಡಿ ಚೆಕ್ ಮಾಡಿಕೊಳ್ಳಬೇಕು.
Voter ID list-2023: ಪರಿಷ್ಕೃತ ಮತದಾರರ ಪಟ್ಟಿ ಬಿಡುಗಡೆ ಚೆಕ್ ಮಾಡುವ ವಿಧಾನ:
ಇಲ್ಲಿ ಕ್ಲಿಕ್ ಮಾಡಿ: Voterportal ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡು(Register online and check your details) ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ನಿಮ್ಮ ವಿವರವನ್ನು ಚೆಕ್ ಮಾಡಿಕೊಳ್ಳಬವುದು.
ಅಥವಾ ಗೂಗಲ್ ಪ್ಲೇ ಸ್ಟೋರ್ ನಲ್ಲಿ Voter helpline ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಸಹ ನಿಮ್ಮ ಮತದಾರ ಗುರುತಿನ ಚೀಟಿಯ ಕುರಿತು ಸಂಪೂರ್ಣ ಮಾಹಿತಿಯನ್ನು ನೋಡಬವುದು.
ಇದನ್ನೂ ಓದಿ: Karnataka Drought Fund : ರಾಜ್ಯ ಸರಕಾರದಿಂದ 324 ಕೋಟಿ ರೂ. ಬರ ಪರಿಹಾರ ಬಿಡುಗಡೆ! ಯಾವ ಜಿಲ್ಲೆಗೆ ಎಷ್ಟು ಹಣ ಬಿಡುಗಡೆ?
Voter helpline app link: click here
Voter ID Application: ಯಾವುದಕ್ಕೆಲ್ಲ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ?
ಆಯೋಗದಿಂದ ಈ ಕೆಳಗೆ ತಿಳಿಸಿರುವ ನಮೂನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
- ನಮೂನೆ 7: ಹೊಸ ಮತದಾರರ ನೋಂದಣಿಗಾಗಿ
- ನಮೂನೆ 6: ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು
- ನಮೂನೆ 6ಬಿ: ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಲಿಂಕ್ ಮಾಡಲು
- ನಮೂನೆ 8: ವಿಳಾಸ ಬದಲಾವಣೆ, ಬದಲಿ ಮತದಾರರ ಗುರುತಿನ ಚೀಟಿ ನೀಡುವಿಕೆಗಾಗಿ, ಮತದಾರರ ಪಟ್ಟಿಯಲ್ಲಿನ ನಮೂದುಗಳ ತಿದ್ದುಪಡಿಗಳಿಗಾಗಿ, ಅಂಗವಿಕಲ ವ್ಯಕ್ತಿಯನ್ನು ಮತದಾರರ ಪಟ್ಟಿಯಲ್ಲಿ ಗುರುತಿಸಲು.
ಸುದ್ದಿ ವಿವರ | ಪರಿಷ್ಕೃತ ಮತದಾರರ ಪಟ್ಟಿ ಬಿಡುಗಡೆ ಮತ್ತು ಹೊಸ ಮತದಾರರ ಸೇರ್ಪಡೆ ಮತ್ತು ತಿದ್ದುಪಡಿಗೆ ಅರ್ಜಿ ಆಹ್ವಾನ |
ಪ್ರಮುಖ ವೆಬ್ಸೈಟ್ ಲಿಂಕ್ | http://www.ceokarnataka.kar.nic.in ಮತ್ತು https://voterportal.eci.gov.in/ |
ಸಹಾಯವಾಣಿ | 1950 |
Voter Helpline App | Donwload Now |
ಇದನ್ನೂ ಓದಿ: farm mechanization- ತೋಟಗಾರಿಕೆ ಇಲಾಖೆ ಈ ಯಂತ್ರ ಪಡೆಯಲು 60 % ಸಹಾಯಧನ ನೀಡಲು ಅರ್ಜಿ ಆಹ್ವಾನ!
Online Voter ID Application: ಹೊಸ ಮತದಾರರ ಸೇರ್ಪಡೆಗೆ ಮತ್ತು ತಿದ್ದುಪಡಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ/ಬದಲಾವಣೆ ಮಾಡಬಯಸಿದ್ದಲ್ಲಿ Voter Helpline Application ಡೌನ್ ಲೋಡ್ ಮಾಡಿಕೊಂಡು ಅಥವಾ https://voters.eci.gov.in ವೆಬ್ ಸೈಟ್ ಗೆ ಲಾಗಿನ್ ಆಗಿ ಆನ್ ಲೈನ್ ಮೂಲಕ ಸಲ್ಲಿಸಬಹುದು ಅಥವಾ ಸಂಬಂಧಿಸಿದ ಬೂತ್ ಮಟ್ಟದ ಅಧಿಕಾರಿ ಅಥವಾ ಮತದಾರರ ನೋಂದಣಾಧಿಕಾರಿ ಕಛೇರಿಗೆ ಭೇಟಿ ನೀಡಿ ಸಂಪರ್ಕಿಸಬಹುದು.
ಅಥವಾ ಈ 18-11-2023 (ಶನಿವಾರ), 19-11-2023 (ಭಾನುವಾರ), 02-12-2023 (ಶನಿವಾರ), 03-12-2023 (ಭಾನುವಾರ) ದಿನಾಂಕದಂದು ನಿಮ್ಮ ಹತ್ತಿರದ ಮತಗಟ್ಟೆ ಕೇಂದ್ರಗಳಲ್ಲಿ, ಸಮಯ : ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಖುದ್ದು ಭೇಟಿ ಮಾಡಿ ಅರ್ಜಿ ಸಲ್ಲಿಸಬವುದು.
ಮತದಾರರ ಪಟ್ಟಿಗೆ ಸೇರ್ಪಡೆಗೆ ವರ್ಷಕ್ಕೆ ನಾಲ್ಕು ಬಾರಿ ಅವಕಾಶ:
ಇನ್ನು ಮುಂದೆ ಮತದಾರರ ಪಟ್ಟಿಗೆ ಹೊಸ ಸದಸ್ಯರನ್ನು ಸೇರಿಸಲು ಒಂದು ವರ್ಷಕ್ಕೆ ನಾಲ್ಕು ಅರ್ಹತಾ ದಿನಾಂಕಗಳನ್ನು ನಿಗದಿ ಮಾಡಲಾಗಿದ್ದು, 01-ಜನವರಿ, 01-ಏಪ್ರಿಲ್, 01-ಜುಲೈ, 01-ಅಕ್ಟೋಬರ್ ತಿಂಗಳನ್ನು ನಿಗದಿಪಡಿಸಲಾಗಿದೆ.
Voter helpline number- ಮತದಾರರು ಈ ಕುರಿತು ಇನ್ನು ಹೆಚ್ಚಿನ ವಿವರ ಪಡೆಯಲು:
ವೆಬ್ಸೈಟ್ ಲಿಂಕ್: http://www.ceokarnataka.kar.nic.in ಅಥವಾ https://voterportal.eci.gov.in/
ಮತದಾರರ ಉಚಿತ ಸಹಾಯವಾಣಿ 1950 ಗೆ ಸಂಪರ್ಕಿಸಬವುದು.
ಇದನ್ನೂ ಓದಿ: Vehicle subsidy loan: ಈ ಯೋಜನೆಯಡಿ ನಾಲ್ಕು ಚಕ್ರದ ವಾಹನ ಖರೀದಿಗೆ ಸಿಗುತ್ತೆ 3 ಲಕ್ಷ ಸಹಾಯಧನ!