Weather- ಮಳೆ ಮುನ್ಸೂಚನೆ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ!

ರಾಜ್ಯದ್ಯಂತ 2023 ರ  ಮುಂಗಾರು ಹಂಗಾಮಿನಲ್ಲಿ(Weather forecast) ತೀರ್ವ ಮಳೆ ಕೊರತೆಯಿಂದಾಗಿ ಬಹುತೇಕ ಜಿಲ್ಲೆಗಳಲ್ಲಿ ಕುಡಿಯಲು ಮತ್ತು ಕೃಷಿ ಚಟುವಟಿಕೆಗೆ ನೀರಿನ ಅಭಾವ ಉಂಟಾಗಿದ್ದು ಜನರು ಮಳೆರಾಯನ ಬರುವಿಕೆಗಾಗಿ ಕಾಯುತ್ತಿದ್ದಾರೆ.

Weather- ಮಳೆ ಮುನ್ಸೂಚನೆ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ!
Weather report-2024

ರಾಜ್ಯದ್ಯಂತ 2023 ರ  ಮುಂಗಾರು ಹಂಗಾಮಿನಲ್ಲಿ(Weather forecast) ತೀರ್ವ ಮಳೆ ಕೊರತೆಯಿಂದಾಗಿ ಬಹುತೇಕ ಜಿಲ್ಲೆಗಳಲ್ಲಿ ಕುಡಿಯಲು ಮತ್ತು ಕೃಷಿ ಚಟುವಟಿಕೆಗೆ ನೀರಿನ ಅಭಾವ ಉಂಟಾಗಿದ್ದು ಜನರು ಮಳೆರಾಯನ ಬರುವಿಕೆಗಾಗಿ ಕಾಯುತ್ತಿದ್ದಾರೆ.

ಇಂದು ಈ ಲೇಖನದಲ್ಲಿ ನಾಳೆವರೆಗಿನ ಮಳೆ ಮುನ್ಸೂಚನೆ ಮತ್ತು ಮುಂದಿನ 2 ವಾರದ ಸಂಚಿತ ಮಳೆ ಮುನ್ಸೂಚನೆ(Rain forecast) ಮಾಹಿತಿ ಜೊತೆಗೆ ರೈತರು ಮಳೆ ಮುನ್ಸೂಚನೆಯನ್ನು ಪಡೆಯಲು ಇರುವ ಸುಲಭ ಮಾರ್ಗಗಳ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: Bele vime Claim enquiry- ನಿಮ್ಮ ಬೆಳೆ ವಿಮೆ ಅರ್ಜಿ ಸ್ಥಿತಿ ಕುರಿತು ಯಾರಲ್ಲಿ ವಿಚಾರಿಸಬೇಕು?

Weather forecast:12-04-2024ರ ಬೆಳಿಗ್ಗೆ 8 ಗಂಟೆವರೆಗಿನ ರಾಜ್ಯದ ಹವಾಮಾನ ಮುನ್ಸೂಚನೆ ಈ ಕೆಳಗಿನಂತಿದೆ:

ಹವಾಮಾನ ಮುನ್ಸೂಚನೆ ನೀಡುವ ಪರಿಣಿತರ ಮಾಹಿತಿಯ ಪ್ರಕಾರದ ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಸಂಜೆ, ರಾತ್ರಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.  ವಾತಾವರಣದ ತೇವಾಂಶ ಕಡಿಮೆಯಾಗಿರುವುದರಿಂದ ಮಳೆಯ ಸಾಧ್ಯತೆ ಇರುವುದಿಲ್ಲ ಎಂದು ತಿಳಿಸಿದ್ದಾರೆ. 

ಕೊಡಗು, ಹಾಸನ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಚಿಕ್ಕಮಗಳೂರಿನ ಅಲ್ಲಲ್ಲಿ ಮೋಡ ಅಥವಾ ತುಂತುರು ತುಂತುರು ಮಳೆಯ ಮುನ್ಸೂಚನೆ ಇರುತ್ತದೆ. 

ಕಲಬುರ್ಗಿ, ಬೀದರ್ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ಇದನ್ನೂ ಓದಿ: Bele vime status-2024: ಇಲ್ಲಿದೆ ಸರ್ವೆ ನಂಬರ್ ಹಾಕಿ ಎಷ್ಟು? ಬೆಳೆ ವಿಮೆ ಬಂದಿದೆ ಎಂದು ಚೆಕ್ ಮಾಡುವ ವಿಧಾನ! 

ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. 

ಈಗಿನಂತೆ ಮೇಲಿನ ನಕ್ಷೆಯಲ್ಲಿ ಗುರುತಿಸಿದ ಭಾಗಗಳಲ್ಲಿ ಅನಿರೀಕ್ಷಿತ ಮಳೆಯ ಸಾಧ್ಯತೆ ಇದೆ. ಸಂಜೆಯ ವೇಳೆಗೆ ಪೂರ್ವ ಹಾಗೂ ಪಶ್ಚಿಮದ ಗಾಳಿಯೂ ಸಂಧಿಸುವ ಕಾರಣದಿಂದ ಒತ್ತಡ ಹೆಚ್ಚಾಗಿ ಮಳೆಯ ವಾತಾವರಣ ಸೃಷ್ಟಿಯಾಗಿದೆ. ಈ ಪ್ರಕ್ರಿಯೆಯೂ ಎಪ್ರಿಲ್ 14ರ ನಂತರ ಕಡಿಮೆಯಾಗಲಿದ್ದು, ಎಪ್ರಿಲ್ 17ರಿಂದ ಕರಾವಳಿ, ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. 

ಇದರ ಮೊದಲು ಎಪ್ರಿಲ್. 12 ಹಾಗೂ 13ರಂದು ಕೊಡಗು, ಹಾಸನ, ಚಿಕ್ಕಮಗಳೂರಿನ  ಅಲ್ಲಲ್ಲಿ, ದಕ್ಷಿಣ ಕನ್ನಡ, ಕಾಸರಗೋಡು ಭಾಗಗಳಲ್ಲಿ ಒಂದೆರಡು ಕಡೆ ಹಾಗೂ ದಕ್ಷಿಣ ಮತ್ತು ಉತ್ತರ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ಇದನ್ನೂ ಓದಿ: Crop insurance amount-2024: ಈ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ.

Next 2 week rain forecast-  ಮುಂದಿನ 2 ವಾರದ ಸಂಚಿತ ಮಳೆ ಮುನ್ಸೂಚನೆ ಮಾಹಿತಿ:

ಕರ್ನಾಟಕ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಮುಂದಿನ 2 ವಾರದ ಸಂಚಿತ ಮಳೆ ಮುನ್ಸೂಚನೆ ನಕ್ಷೆಯ ಪ್ರಕಾರದ ದಿನಾಂಕ: 11-04-2024 ರಿಂದ 18-04-2024 ರವರೆಗೆ ಕೊಡಗು, ಬೀದರ್, ಬೆಳಗಾವಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಯ ಅಲ್ಲಲ್ಲಿ (2.5-5 ಮಿ ಮೀ) ಸಾಧಾರಣ ಮಳೆ ಮುನ್ಸೂಚನೆ ನೀಡಲಾಗಿದೆ.

ದಿನಾಂಕ: 18-04-2024 ರಿಂದ 26-04-2024 ರವರೆಗೆ ಚಿಕ್ಕಮಗಳೂರು, ಕೊಡಗು, ಮೈಸೂರು, ದಕ್ಷಿಣಕನ್ನಡ,ಉಡುಪಿ, ಶಿವಮೊಗ್ಗದ ಕೆಲವು ತಾಲ್ಲೂಕುಗಳಲ್ಲಿ ಮಧ್ಯಮ(25-40 ಮಿ ಮೀ)  ಮಳೆ ಮುನ್ಸೂಚನೆ ನೀಡಲಾಗಿದ್ದು ಉಳಿದ ಜಿಲ್ಲೆಗಳಲ್ಲಿ ಅಲ್ಲಲ್ಲಿ (2.5-5 ಮಿ ಮೀ) ಸಾಧಾರಣ ಮಳೆ ಮುನ್ಸೂಚನೆ ನೀಡಲಾಗಿದೆ.

ಮುಂದಿನ 2 ವಾರದ ಸಂಚಿತ ಮಳೆ ಮುನ್ಸೂಚನೆ ನಕ್ಷೆಗಳು:

11-04-2024 ರಿಂದ 18-04-2024 ರವರೆಗೆ

ಇದನ್ನೂ ಓದಿ: Krishi Honda subsidy- ಶೇ 90 ರಷ್ಟು ಸಹಾಯಧನದಲ್ಲಿ ಕೃಷಿ ಹೊಂಡವನ್ನು ಹೇಗೆ ಮಾಡಿಕೊಳ್ಳಬಹುದು?

18-04-2024 ರಿಂದ 26-04-2024

ರೈತರು/ಸಾರ್ವಜನಿಕರು ಮಳೆ ಮುನ್ಸೂಚನೆ ಪಡೆಯಲು ಇರುವ ಸುಲಭ ಮಾರ್ಗಗಳ ವಿವರ ಹೀಗಿದೆ:

Weather forecast channel- ಮಳೆ ಮುನ್ಸೂಚನೆ ನೀಡುವ ವಾಟ್ಸಾಪ್ ಚಾನೆಲ್- Join Now

KSNDMC, Bengalore ಅಧಿಕೃತ ಎಕ್ಸ್ ಖಾತೆ- Follow Now

Rain forecast helpline- ವರುಣಮಿತ್ರ ಸಹಾಯವಾಣಿ- "9243345433" ಈ ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಹೆಸರು, ಜಿಲ್ಲೆ, ತಾಲ್ಲೂಕು, ಗ್ರಾಮದ ಹೆಸರು ಹೇಳಿ ಮಳೆ ಮುನ್ಸೂಚನೆ ಮಾಹಿತಿಯನ್ನು ಮೊಬೈಲ್ ಮೂಲಕವೇ ಪಡೆದುಕೊಳ್ಳಬಹುದು.

ಮಾಹಿತಿ ಕೃಪೆ: ಸಾಯಿಶೇಖರ್ ಬಿ & KSNDMC, Bengalore