Weather tomorrow: ಮಳೆ ಮುನ್ಸೂಚನೆ ಈ ಜಿಲ್ಲೆಗಳಲ್ಲಿ ಅಧಿಕ ಮಳೆ ಸಾಧ್ಯತೆ!
Weather tomorrow: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(KSNDMC)ದ ಮಳೆ ಮುನ್ಸೂಚನೆ ನಕ್ಷೆಯ ಪ್ರಕಾರ: ರಾಜ್ಯದ ಉತ್ತರ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಜೊತೆಗೆ ಅಲ್ಲಲ್ಲಿ ಭಾರಿ ಮಳೆ ಸಾಧ್ಯತೆಯು ಸಹ ಇರುತ್ತದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(KSNDMC), ಬೆಂಗಳೂರಿನ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 4th (ಸೆಪ್ಟೆಂಬರ್ 8.30AM ರಿಂದ 5th ಸೆಪ್ಟೆಂಬರ್ 2023 ರ 8.30AM ರವರೆಗೆ) ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಅತ್ಯಧಿಕ 78.5 ಮಿಮೀ ಮಳೆ ದಾಖಲಾಗಿರುತ್ತದೆ.
ರಾಜ್ಯದಲ್ಲಿ ಜೂನ ನಿಂದ ಸೆಪ್ಟೆಂಬರ್ ತಿಂಗಳ ನಡುವೆ ವಾಡಿಕೆ ಪ್ರಕಾರ 839 ಮಿಮೀ ಮಳೆ ಬರಬೇಕಿತ್ತು ಅದರೆ ವಾಸ್ತವವಾಗಿ ಕೇವಲ 524.8 ಮಿಮೀ ಮಳೆ ದಾಖಲಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕೃತ ವೆಬ್ಸೈಟ್ ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ ಇದರ ಪ್ರಕಾರವಾಗಿ ಶೇ 35% ಹೆಚ್ಚಿನ ಮಳೆ ಕೊರತೆಯನ್ನು ನಾವು ಎದುರಿಸುತ್ತಿದ್ದೆವೆ.
ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಹಲವು ಕೃಷಿ ಬೆಳೆಗಳನ್ನು ರೈತರು ಮಳೆ ಕೊರತೆಯಿಂದ ನಾಶ ಪಡಿಸುವ ಹಂತಕ್ಕೆ ತಲುಪಿವೆ ಉದಾಹರಣೆಗೆ ಮೆಕ್ಕೆಜೋಳ, ಹತ್ತಿ ಇತ್ಯಾದಿ ಬೆಳೆಗಳು.
ಹೀಗೆಯೇ ಮಳೆ ಕೊರತೆ ಮುಂದುವರೆದರೆ ಕೊಳವೆ ಬಾವಿಯಿಂದ ನೀರು ಹಾಯಿಸಿ ಬೆಳೆ ಬೆಳೆಯುವ ರೈತರಿಗೂ ತೊಂದರೆಯಾಗುತ್ತದೆ. ಇದರ ಜೊತೆಗೆ ಈಗಾಗಲೇ ಪಂಪ್ ಸೆಟ್ ಗಳಿಗೆ ಎಸ್ಕಾಂ ಗಳಿಂದ ಸರಿಯಾದ ಸಮಯಕ್ಕೆ ನಿಗದಿತ ವಿದ್ಯುತ್ ಪೂರೈಕೆಯು ಸಹ ಅಗುತ್ತಿಲ್ಲ.
ಇದನ್ನೂ ಓದಿ: ಪ್ರತಿ ದಿನ ನಿಮ್ಮ ಸ್ಥಳದ ಮಳೆ ಮುನ್ಸೂಚನೆ ತಿಳಿಯಬೇಕೆ? ಈ ಆ್ಯಪ್ ಬಳಕೆ ಮಾಡಿ.
ಇನ್ನಾದರು ಈ ತಿಂಗಳಿನಲ್ಲಿ ಉತ್ತಮ ಮಳೆ ಅದರೆ ಮುಂದಿನ ದಿನಗಳಲ್ಲಿ ಇತರೆ ಬೆಳೆಗಳನ್ನು ಬೆಳೆಯಲು ರೈತರಿಗೆ ಸಹಕಾರ ಅಗಲಿದೆ, ಬಂಗಾಲಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕಳೆದ 2-3 ದಿನಗಳಿಂದ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅಧಿಕ ಮಳೆ ದಾಖಲಾಗಿರುತ್ತದೆ. ಉಳಿದಂತೆ ರಾಜ್ಯದ್ಯಂತ ಅಲ್ಲಲ್ಲಿ ಉತ್ತಮ ಮಳೆ ಮತ್ತು ಮೋಡ ಕವಿದ ವಾತಾವರಣದಿಂದ ಕೂಡಿರುತ್ತದೆ.
Weather tomorrow: ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ!
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(KSNDMC)ದ ಮಳೆ ಮುನ್ಸೂಚನೆ ನಕ್ಷೆಯ ಪ್ರಕಾರ: ರಾಜ್ಯದ ಉತ್ತರ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಜೊತೆಗೆ ಅಲ್ಲಲ್ಲಿ ಭಾರಿ ಮಳೆ ಸಾಧ್ಯತೆಯು ಸಹ ಇರುತ್ತದೆ.
ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
Karnataka weather map- ಕರ್ನಾಟಕ ಮಳೆ ಮುನ್ಸೂಚನೆ ನಕ್ಷೆ:
ಈ ಮೇಲಿನ ನಕ್ಷೆಯಲ್ಲಿ ನೀಲಿ ಬಣ್ಣದಿಂದ ಗುರುತಿಸಿದ ಭಾಗಗದಲ್ಲಿ ಅತೀ ಹೆಚ್ಚು ಮಳೆ ಮುನ್ಸೂಚನೆ ನೀಡಲಾಗಿದೆ ಇದೇ ರೀತಿ ಹಸಿರು ಬಣ್ಣ ಹೆಚ್ಚು ಮಳೆ ಮುನ್ಸೂಚನೆಯನ್ನು ಸೂಚಿಸುತ್ತದೆ. ಹಳದಿ ಬಣ್ಣ ಮಧ್ಯಮದಿಂದ ಸಾದಾರಣ ಮಳೆ ಮುನ್ಸೂಚನೆಯನ್ನು ಸೂಚಿಸುತ್ತದೆ. ಕೇಸರಿ ಬಣ್ಣ ಸಾಮಾನ್ಯ ಮಳೆ, ಬಿಳಿ ಬಣ್ಣ ಮಳೆ ಬರುವುದಿಲ್ಲ ಎಂದು ಸೂಚಿಸುತ್ತದೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ್ಯಂತ ಮೋಡ ಹಾಗೂ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಘಟ್ಟದ ಕೆಳಗಿನ ತಪ್ಪಲು ಪ್ರದೇಶಗಳಲ್ಲಿ ಸ್ವಲ್ಪ ಹೆಚ್ಚಿರುವ ಮಳೆ ಬೀಳುವ ಸಾಧ್ಯತೆ ಇರುತ್ತದೆ.
ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಕರಾವಳಿ ಭಾಗಗಳಲ್ಲಿ ಹೊಂದಿಕೊಂಡಿರುವ ಭಾಗಗಳಲ್ಲಿ ಒಂದೆರಡು ಕಡೆ ಮಳೆಯ ಮುನ್ಸೂಚನೆ ಇದೆ.
ಇದನ್ನೂ ಓದಿ: BPL ration card: ಬಿ.ಪಿ. ಎಲ್ ರೇಷನ್ ಕಾರ್ಡದಾರರಿಗೆ ಮತ್ತೊಂದು ಶಾಕ್ ನೀಡಿದ ಆಹಾರ ಇಲಾಖೆ!
ಚಿತ್ರದುರ್ಗದ ಒಂದೆರಡು ಕಡೆ (ದಾವಣಗೆರೆ ಗಡಿ ಭಾಗಗಳಲ್ಲಿ), ಬಳ್ಳಾರಿ - ಆಂದ್ರಾ ಗಡಿಭಾಗಗಳಲ್ಲಿ, ರಾಯಚೂರು, ಕೊಪ್ಪಳ, ಯಾದಗಿರಿ, ವಿಜಾಪುರ, ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇರುತ್ತದೆ ಕರಾವಳಿಯಲ್ಲಿ ಮುಂಗಾರು ಸ್ವಲ್ಪ ಚುರುಕಾಗಿದ್ದು, ಮುಂದಿನ 10 ದಿನಗಳವರೆಗೂ ಈ ಮಳೆಯ ವಾತಾವರಣವು ಮುಂದುವರಿಯುವ ಲಕ್ಷಣಗಳಿವೆ.
Next 7 days weather report: ಮುಂದಿನ ಒಂದು ವಾರದ ಕರ್ನಾಟಕ ಮಳೆ ಮುನ್ಸೂಚನೆ:
ಮೇಲಿನ ನಕ್ಷೆಯಲ್ಲಿ ತೋರಿಸಿರುವ ಅಗಿ ಮುಂದಿನ ಒಂದು ವಾರದವರೆಗೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಉತ್ತಮ ಮೆಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ ಎಷ್ಟು ಪ್ರಮಾಣದ ಮಳೆ ಅಗಲಿದೆ ಎಂದು ವಿವಿಧ ಬಣ್ಣಗಳಿಂದ ಸೂಚಿಸಲಾಗಿದೆ.
ಕೃಷಿಕರಿಗೆ ಸಂಬಧಿಸಿದ ಇತರೆ ಯೋಜನೆಗಳ ಅಂಕಣಗಳು:
ಇದನ್ನೂ ಓದಿ: ನಿಮ್ಮ ಹಳ್ಳಿಯಲ್ಲಿ ಯಾವ ಸರ್ವೆ ನಂಬರ್ ಎಲ್ಲಿ ಬರುತ್ತದೆ ಎಂದು ಹೇಗೆ ತಿಳಿಯುವುದು?
ಇದನ್ನೂ ಓದಿ: ಮೀನುಗಾರಿಕೆ ಇಲಾಖೆಯಿಂದ ಶೇ. 40% ಮತ್ತು ಶೇ. 60% ರಷ್ಟು ಸಹಾಯಧನ ಯೋಜನೆಗಳಿಗೆ ಅರ್ಜಿ ಅಹ್ವಾನ.
ಇದನ್ನೂ ಓದಿ: Sheep Farming schemes: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆಯಬವುದು?
ಇದನ್ನೂ ಓದಿ: ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು
ಇದನ್ನೂ ಓದಿ: Chaff cutter subsidy: ಶೇ 50% ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ.
ಇದನ್ನೂ ಓದಿ: ರೇಷ್ಮೆ ಕೃಷಿ ಆರಂಭಿಸಲು ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಬವುದು!