Aadhar QR Code-ಶೀಘ್ರದಲ್ಲೇ ಆಧಾರ್ ಕಾರ್ಡಗೆ ಕ್ಯೂಆರ್ ಕೋಡ್ ಅಳವಡಿಕೆ!

April 9, 2025 | Siddesh
Aadhar QR Code-ಶೀಘ್ರದಲ್ಲೇ ಆಧಾರ್ ಕಾರ್ಡಗೆ ಕ್ಯೂಆರ್ ಕೋಡ್ ಅಳವಡಿಕೆ!
Share Now:

ಇನ್ನು ಮುಂದೆ ಆಧಾರ್ ಕಾರ್ಡ ಸಹ ಫೋನ್ ಪೇ ಮತ್ತು ಗೂಗಲ್ ಪೇ ಅಪ್ಲಿಕೇಶನ್ ಮೂಲಕ ಹಣ(Aadhaar Card)ದಾಯ ಮಾಡುವಾಗ ಸ್ಕ್ಯಾನ್ ಮಾಡುವ ರೀತಿಯಲ್ಲಿ ಕ್ಯೂಆರ್ ಕೋಡ್ ಅಪ್ಲಿಕೇಶನ್ ಅನ್ನು ಕೇಂದ್ರ ಸರಕಾರವು ಬಿಡುಗಡೆ ಮಾಡಲು ಸಿದ್ದತೆಯನ್ನು ನಡೆಸಿದೆ.

ಏನಿದು ಆಧಾರ್ ಕಾರ್ಡಗೆ(Aadhaar Card) ಕ್ಯೂಆರ್ ಕೋಡ್ ವ್ಯವಸ್ಥೆ? ಇದರ ವಿಶೇಷತೆಗಳೇನು? ಇದರ ಬಗ್ಗೆ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಯಾವೆಲ್ಲ ಮಾಹಿತಿಯನ್ನು ತಿಳಿಸಿದ್ದಾರೆ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Mudra Loan-52 ಕೋಟಿ ಫಲಾನುಭವಿಗಳಿಗೆ ಮುದ್ರಾ ಲೋನ್ ಮಂಜೂರು! ಇಲ್ಲಿದೆ ಸಂಪೂರ್ಣ ವಿವರ!

ಇಂದಿನ ಡಿಜಿಟಲ್ ಯುಗದಲ್ಲಿ ಮಾನವನ ದೈನಂದಿನ ಜೀವನದಲ್ಲಿ ತಂತ್ರಜ್ಞಾನ ಬಳಕೆಯು ದಿನದಿಂದ ದಿನಕ್ಕೆ ಹೆಚ್ಚುತಲ್ಲೇ ಸಾಗುತ್ತಿದ್ದು ಈ ನಿಟ್ಟಿನಲ್ಲಿ ಆಧಾರ್ ಕಾರ್ಡ ಅನ್ನು ಬಳಕೆ ಮಾಡುವ ಸರ್ಕಾರಿ ಕಚೇರಿ ಇನ್ನಿತರೆ ಸ್ಥಳಗಳಲ್ಲಿ ಅಂದರೆ ಹೋಟೆಲ್, ವಿಮಾನ ನಿಲ್ದಾಣ ಅಥವಾ ರೈಲು ಟಿಕೆ ಪರೀಕ್ಷಕರ ಬಳಿಯಲ್ಲಿ ಆಧಾರ್ ಮುದ್ರಿತ ಕಾರ್ಡನ್ನು ಅಥವಾ ಜೆರಾಕ್ಸ್ ಪ್ರತಿಯನ್ನು ತೋರಿಸುವುದು ಈಗಾಗಲೇ ಕಡ್ಡಾಯವಾಗಿದ್ದು ಇದಕ್ಕೆ ಪರ್ಯಾಯವಾಗಿ ಈ ಡಿಜಿಟಲ್ ಕ್ಯೂಆರ್ ಕೋಡ್ ಕೆಲಸ ಮಾಡಲಿದೆ.

Aadhaar Card Latest Updates-ಆಧಾರ್ ಕಾರ್ಡ ಬಳಕೆಗೆ ಕ್ಯೂಆರ್ ಕೋಡ್(QR Code) ಅಳವಡಿಕೆಯ ಉದ್ದೇಶ ಮತ್ತು ಪ್ರಯೋಜನಗಳ ವಿವರ:

ಕ್ಯೂಆರ್ ಕೋಡ್ ಒಂದು ಡಿಜಿಟಲ್ ಕೋಡ್ ಆಗಿದ್ದು, ಇದನ್ನು ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಅಥವಾ ಸ್ಕ್ಯಾನರ್ ಮೂಲಕ ಸುಲಭವಾಗಿ ಓದಬಹುದು. ಆಧಾರ್ ಕಾರ್ಡ್‌ಗೆ ಕ್ಯೂಆರ್ ಕೋಡ್ ಅಳವಡಿಸುವ ಮೂಲ ಉದ್ದೇಶವು ಆಫ್‌ಲೈನ್ ಮತ್ತು ಆನ್‌ಲೈನ್ ರೀತಿಯಲ್ಲಿ ಗುರುತಿನ ಪರಿಶೀಲನೆಯನ್ನು ವೇಗಗೊಳಿಸುವುದು.

ಪ್ರಸ್ತುತ, ಆಧಾರ್ ಪರಿಶೀಲನೆಗೆ ಬಯೋಮೆಟ್ರಿಕ್ ಡೇಟಾ ಅಥವಾ ಒಟಿಪಿ (OTP) ಬಳಕೆ ಅಗತ್ಯವಾಗುತ್ತದೆ. ಆದರೆ ಕ್ಯೂಆರ್ ಕೋಡ್ ಸಹಾಯದಿಂದ, ಯಾವುದೇ ಟೆಕ್ನಾಲಜಿ ಆಧಾರಿತ ಡಿವೈಸ್ ಮೂಲಕ ಕ್ಷಣಿಕವಾಗಿ ವ್ಯಕ್ತಿಯ ಆಧಾರ್ ವಿವರಗಳನ್ನು ಪರಿಶೀಲಿಸಬಹುದು.

ಇದನ್ನೂ ಓದಿ: PUC Result-2025: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ!ಇಲ್ಲಿದೆ ವೆಬ್ಸೈಟ್ ಲಿಂಕ್!

ಇದರ ಪ್ರಯೋಜನಗಳು ಏನೆಂದರೆ, ಈ ಕೋಡ್ ಸಹಾಯದಿಂದ ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು, ವಿಮಾನ ನಿಲ್ದಾಣಗಳು ಮತ್ತು ಇತರ ಸೇವಾ ಕೇಂದ್ರಗಳಲ್ಲಿ ಗುರುತಿನ ಪ್ರಮಾಣಪತ್ರವನ್ನು ತ್ವರಿತಗತಿಯಲ್ಲಿ ಪರಿಶೀಲಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿ ವಿಮಾನ ನಿಲ್ದಾಣದಲ್ಲಿ ತನ್ನ ಆಧಾರ್ ಕಾರ್ಡ್‌ನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ, ಅವರ ಗುರುತು ಮತ್ತು ಪ್ರಯಾಣ ವಿವರಗಳು ತಕ್ಷಣ ಪರಿಶೀಲನೆಗೆ ಲಭ್ಯವಾಗುತ್ತದೆ.

ಇದು ಸಮಯ ಉಳಿಸುವುದನ್ನು ಮಾತ್ರವಲ್ಲದೆ, ಮಾನವ ದಕ್ಷತೆಯ ಮೇಲೆ ಅವಲಂಬಿತವಾಗಿರುವ ಪ್ರಕ್ರಿಯೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೇ, ಕ್ಯೂಆರ್ ಕೋಡ್ ಸಹಾಯದಿಂದ ಆಧಾರ್ ಕಾರ್ಡ್‌ನ ನಕಲಿ ಬಳಕೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇಂದು ನಕಲಿ ಆಧಾರ್ ಕಾರ್ಡ್‌ಗಳು ಮತ್ತು ವಂಚನೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ತಕ್ಷಣವೇ ಮೂಲ ದಾಖಲೆಯ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬಹುದು. ಈ ರೀತಿಯಲ್ಲಿ, ಇದು ಸುರಕ್ಷತೆಗೆ ಹೆಚ್ಚಿನ ಗಟ್ಟಿಗಳನ್ನು ಸೇರಿಸುತ್ತದೆ.

ಇದನ್ನೂ ಓದಿ: New BPL Card-ಹೊಸ ಬಿಪಿಎಲ್ ಕಾರ್ಡ ವಿತರಣೆ! ಇಲ್ಲಿದೆ ನೂತನ ಅಪ್ಡೇಟ್!

What Is Aadhar QR Code-ಏನಿದು ಆಧಾರ್ ಕಾರ್ಡ ಕ್ಯೂಆರ್ ಕೋಡ್?

ಉದಾಹರಣೆ ಸಮೇತ ಹೇಳುವುದಾದರೆ ನಾವು ಯಾವುದಾದರು ಒಂದು ಅಂಗಡಿ ಅಲ್ಲಿ ವಸ್ತುವನ್ನು ಖರೀದಿ ಮಾಡಿದಾಗ ಗೂಗಲ್ ಪೇ/ಪೋನ್ ಪೇ ಅಪ್ಲಿಕೇಶನ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡುವ ರೀತಿಯಲ್ಲೇ ಇನ್ನು ಮುಂದೆ ಆಧಾರ್ ಕಾರ್ಡ ವಿವರವನ್ನು ದೃಡೀಕರಣ ಮಾಡುವ ಸಮಯದಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಆಧಾರ್ ವಿವರವನ್ನು ಮೊಬೈಲ್ ನಲ್ಲೇ ದೃಡೀಕರಣ ಮಾಡಿಕೊಳ್ಳಬಹುದು.

Aadhar QR Code Information-ಆಧಾರ್ ಕಾರ್ಡಗೆ ಕ್ಯೂಆರ್ ಕೋಡ್ ಇದರ ವಿಶೇಷತೆಗಳೇನು?

1) ತ್ವರಿತವಾಗಿ ಮಾಹಿತಿ ಪರಿಶೀಲನೆ ಸಾಧ್ಯ.

2) ನಕಲಿ ಆಧಾರ್ ಬಳಸುವ ಸಂಭವ ಕಡಿಮೆ.

3) ಈ ವ್ಯವಸ್ಥೆ ಜಾರಿಯಿಂದ ಸೈಬರ್ ದಾಳಿಕೋರರಿಂದ ಸಾರ್ವಜನಿಕರ ಮಾಹಿತಿಯು ಹೆಚ್ಚುವರಿ ಸುರಕ್ಷತೆಯಾಗಿರುತ್ತದೆ.

4) ಸರ್ವರ್ ಸಂಪರ್ಕವಿಲ್ಲದಿದ್ದರೂ ಆಫ್‌ಲೈನ್‌ನಲ್ಲಿ ಮಾಹಿತಿ ದೃಢೀಕರಣ ಸಾಧ್ಯ.

ಇದನ್ನೂ ಓದಿ: Bangalore Weather-ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ! ಕರ್ನಾಟಕ ಹವಾಮಾನ ಮುನ್ಸೂಚನೆ!

ಇದರ ಬಗ್ಗೆ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಮಾಹಿತಿ:

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: