Agriculture Drone: ಕೃಷಿ, ತೋಟಗಾರಿಕೆಯಲ್ಲಿ ಡ್ರೋನ್ ಗಳ ಬಳಕೆ ತರಬೇತಿಗೆ ಅರ್ಜಿ ಆಹ್ವಾನ.

Agriculture Drone: ಕೃಷಿ, ತೋಟಗಾರಿಕೆಯಲ್ಲಿ ಡ್ರೋನ್ ಗಳ ಬಳಕೆ ತರಬೇತಿಗೆ ಅರ್ಜಿ ಆಹ್ವಾನ.

ಇತೀಚಿನ ದಿನಗಳಲ್ಲಿ ಕೃಷಿಯಲ್ಲಿ ಕಾರ್ಮಿಕರ ಕೊರತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ರೈತರಿಗೆ ಸಮಯಕ್ಕೆ ಸರಿಯಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ಕಾರ್ಮಿಕರ ಅವಲಂಬನೆಯನ್ನು ಕಡಿಮೆ ಮಾಡಲು ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಅನಿವಾರ್ಯವಾಗಿದೆ. ಇದಕ್ಕೆ ಪೂರಕವಾಗಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಬೀಜ ಬಿತ್ತನೆ ಮಾಡಲು, ಔಷಧಿ ಸಿಂಪರಣೆ, ಜಮೀನಿನ ನಕ್ಷೆ ತಯಾರಿಸಲು ಡ್ರೋನ್ ಗಳನ್ನು ಹೇಗೆ ಬಳಕೆ ಮಾಡಿಕೊಳ್ಳಬವುದು ಎಂದು,

ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಜೂನ್ 12 ರಿಂದ 26 ರವರೆಗೆ "ಕೃಷಿ ಮತ್ತು ತೋಟಗಾರಿಕೆಯಲ್ಲಿ ಡ್ರೋನ್ ಗಳ ಬಳಕೆ" ಎಂಬ ಶಿರ್ಷಿಕೆಯಡಿ ತರಬೇತಿ ನೀಡಲು ಅರ್ಜಿ ಆಹ್ವಾನ ಮಾಡಲಾಗಿದೆ.

ತರಬೇತಿ ನಡೆಯುವ ಸ್ಥಳ: UHS ಮುಖ್ಯ ಕ್ಯಾಂ ಪಸ್, ಬಾಗಲಕೋಟ

ಅರ್ಜಿ ಸಲ್ಲಿಕೆ ವಿಧಾನ:

https://forms.gle/Kc5ULRLPnZE6Wmo37 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು ವಿದ್ಯಾರ್ಹತೆ (ಗಮನಿಸಿ: ಕನಿಷ್ಠ ವಿದ್ಯಾರ್ಹತೆ ಪಿಯುಸಿ) ಇತ್ಯಾಧಿ ವಿವರ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.

ತರಬೇತಿಯಲ್ಲಿ ಯಾವೆಲ್ಲ ವಿಷಯ ತಿಳಿಸಲಾಗುತ್ತದೆ.

ಪ್ರಯೋಗಿಕವಾಗಿ ಡ್ರೋನ್ ಚಲಾವಣೆ ಕಲಿಕೆ.

ಕೀಟನಾಶಕ ಸಿಂಪರಣೆ ಮತ್ತು ಬೀಜ ಬಿತ್ತನೆ ಮಾಡುವ ವಿಧಾನ.

ಡ್ರೋನ್ ಬಳಸಿ ನಕ್ಷೆ ತಯಾರಿಸುವ ವಿಧಾನ.

ಸರಕಾರದಿಂದ ಕೃಷಿ ಕ್ಷೇತ್ರದಲ್ಲಿ ಡ್ರೋನ್ ಬಳಕೆಗೆ ಯೋಜನೆಗಳ ಮಾಹಿತಿ ಮತ್ತು ಮಾರುಕಟ್ಟೆಯಲ್ಲಿರುವ ಡ್ರೋನ್ ತಯಾರಿಸುವ ಕಂಪನಿಗಳ ವಿವರಣೆ ಇತ್ಯಾದಿ ಮಾಹಿತಿಯನ್ನು ಈ ತರಬೇತಿಯಲ್ಲಿ ಪಡೆಯಬವುದಾಗಿದೆ.

ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕೊನೆಯಲ್ಲಿ ಪ್ರಮಾಣ ಪತ್ರದ ಜೊತೆಗೆ ಅಧಿಕೃತ ಡ್ರೋನ್ ಪೈಲಟ್ ಲೆಸೆನ್ ನೀಡಲಾಗುತ್ತದೆ.

ಈ ತರಬೇತಿಯ ಪ್ರಕಟಣೆ ಕೈಪಿಡಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.