HomeGovt SchemesYuva nidhi application link-ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಬಿಡುಗಡೆ!

Yuva nidhi application link-ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಬಿಡುಗಡೆ!


ರಾಜ್ಯ ಸರಕಾರದ ಐದನೇ ಗ್ಯಾರಂಟಿ ಯೋಜನೆಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಂಬಂಧಪಟ್ಟ ಇಲಾಖೆಯಿಂದ ಅದಿಕೃತ ಲಿಂಕ್ ಅನ್ನು ಬಿಡುಗಡೆ ಮಾಡಲಾಗಿದೆ.

ಈ ಲಿಂಕ್ ಅನ್ನು ಬಳಸಿಕೊಂಡು ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಪ್ಲೇಸ್ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಯುವ ನಿಧಿ ಯೋಜನೆಗೆ ನಿಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಬಹುದಾಗಿದೆ.

ಯುವ ನಿಧಿ ಯೋಜನೆಗೆ ಮೊಬೈಲ್ ನಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು ಎನ್ನುವ ಹಂತವಾರು ವಿಧಾನವನ್ನು ಸಂಪೂರ್ಣವಾಗಿ ಈ ಅಂಕಣದಲ್ಲಿ ವಿವರಿಸಲಾಗಿದೆ ಈ ಮಾಹಿತಿ ಉಪಯುಕ್ತ ಅನಿಸಿದರೆ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಸಹಕರಿಸಿ.

ಇದನ್ನೂ ಓದಿ: Adhar address-ಆಧಾರ್ ಕಾರ್ಡನಲ್ಲಿ ವಿಳಾಸ ಬದಲಾವಣೆಗೆ ನೂತನ ವ್ಯವಸ್ಥೆ ಜಾರಿ

About Yuva Nidhi Yojana-ಏನಿದು ಯುವನಿಧಿ ಯೋಜನೆ?

2023 ನೇ ಶೈಕ್ಷಣಿಕ ವರ್ಷದಲ್ಲಿ ಪದವಿ ಅಥವಾ ಡಿಪ್ಲೋಮಾ ಪಡೆದು ನಿರುದ್ಯೋಗಿಗಳು ಅಂದರೆ ಈ ಪದವಿಗಳನ್ನು ಪಡೆದು 180 ದಿನಗಳು(6 ತಿಂಗಳು) ನಂತರವೂ ಉದ್ಯೋಗ ಪಡೆಯದ ನಿರುದ್ಯೋಗಿಗಳಿಂದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ನಿರುದ್ಯೋಗ ಭತ್ಯೆಯನ್ನು ಈ ಯೋಜನೆಯಡಿ ನೀಡಲಾಗುತ್ತದೆ.

ಈ ಯೋಜನೆಯಡಿ ಪದವೀದರರಿಗೆ ರೂ 3,000 ಡಿಪ್ಲೋಮಾ ಮುಗಿಸಿದವರಿಗೆ ರೂ 1,500 ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.

ಇದನ್ನೂ ಓದಿ: PM-Vishwakarma Yojana-ಸ್ವ-ಉದ್ಯೋಗ ಆರಂಭಿಸಲು ಈ ಯೋಜನೆಯಡಿ ಯಾವುದೇ ಗ್ಯಾರಂಟಿಯಿಲ್ಲದೇ 3 ಲಕ್ಷ ಸಾಲ ಸಿಗುತ್ತದೆ!

Yuva nidhi application link-ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಬಿಡುಗಡೆ:

ಅರ್ಹ ಅಭ್ಯರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯಲು ತಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ಸರಕಾರದಿಂದ ಅಧಿಕೃತ ಲಿಂಕ್ ಅನ್ನು ಬಿಡುಗಡೆ ಮಾಡಲಾಗಿದೆ.

ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಯಾವೆಲ್ಲ ವಿಧಾನಗಳನ್ನು ಅನುಸರಿಸಬೇಕು ಎಂದು ಈ ಕೆಳಗೆ ಹಂತ ಹಂತವಾಗಿ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.

Step-1: ಮೊದಲಿಗೆ ಈ ಲಿಂಕ್ Yuva nidhi application link ಮೇಲೆ ಕ್ಲಿಕ್ ಮಾಡಿ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು. ಬಳಿಕ “Register here” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ಬಳಿಕ ಅರ್ಜಿದಾರರ ಆಧಾರ್ ಕಾರ್ಡ ಸಂಖ್ಯೆಯನ್ನು ಮತ್ತು ಕ್ಯಾಪ್ಚ ಕೋಡ್ ಅನ್ನು ಹಾಕಿ “Next” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಇದಾದ ಬಳಿಕ ನಿಮ್ಮ ಆಧಾರ್ ಕಾರ್ಡನಲ್ಲಿರುವ ಮೊಬೈಲ್ ಸಂಖ್ಯೆಗೆ ಬರುವ 6 ಅಂಕಿಯ OTP ಅನ್ನು ನಮೂದಿಸಿ “Continue” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Gruhalakshmi Camp-ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ? ಹಣ ಬರದವರು ತಪ್ಪದೇ ಈ ದಿನ ನಿಮ್ಮ ಗ್ರಾಮ ಪಂಚಾಯತ್ ಭೇಟಿ ಮಾಡಿ.

Step-3: ಇದಾದ ಬಳಿಕ ಈ ವೆಬ್ಸೈಟ್ ಗೆ ಲಾಗಿನ್ ಮಾಡುವುದಕ್ಕೆ ಈ ಪೇಜ್ ನಲ್ಲಿ ನಿಮ್ಮ ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಹಾಕಿ ಪಾಸ್ವರ್ಡ ರಚನೆ ಮಾಡಿಕೊಂಡು ಕ್ಯಾಪ್ಚ ಕೋಡ್ ಸಂಖ್ಯೆಯನ್ನು ಹಾಕಿ “Submit” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಗಮನಿಸಿ: ನೀವು ಇಲ್ಲಿ ಹಾಕುವ ಮೇಲ್ ವಿಳಾಸ ಮತ್ತು ಪಾಸ್ವರ್ಡ ಅನ್ನು ತಪ್ಪದೇ ಒಂದು ಕಡೆ ಸರಿಯಾಗಿ ಬರೆದು ಇಟ್ಟುಕೊಳ್ಳಿ ಮುಂದೆ ಲಾಗಿನ್ ಅಗಲು ಈ ವಿವರ ಬೇಕಾಗುತ್ತದೆ.

Step-4: ಈ ಮೇಲಿನ ವಿಧಾನವನ್ನು ಅನುಸರಿಸಿದ ಬಳಿಕ ನೀವು ನಮೂದಿಸಿರುವ ಮೇಲ್ ಐಡಿಗೆ ಒಂದು ವೇರಿಪಿಕೇಶನ್ ಲಿಂಕ್ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಬಳಕೆದಾರ ಐಡಿಯನ್ನು ವೇರಿಪಿಕೇಶನ್ ಮಾಡಿಕೊಳ್ಳಬೇಕು.

Step-5: ತದನಂತರ ಈ ಲಿಂಕ್ Yuva nidhi application ಮೇಲೆ ಕ್ಲಿಕ್ ಮಾಡಿ ನಿಮ್ಮ ಮೇಲ್ ಐಡಿ ಮತ್ತು ಪಾಸ್ವರ್ಡ ಅನ್ನು ನಮೂದಿಸಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ಯುವನಿಧಿ ಯೋಜನೆಯ ಅರ್ಜಿ ತೆರೆದುಕೊಳ್ಳುತ್ತದೆ. ಈಗಾಗಲೇ ಸೇವಾ ಸಿಂದು ಪೋರ್ಟಲ್ ಬಳಕೆದಾರರು ಈ ಮೇಲಿನ ವಿಧಾನ ಅನುಸರಿಸುವ ಅವಶ್ಯಕತೆ ಇರುವುದಿಲ್ಲ ನೇರವಾಗಿ ನಿಮ್ಮ ಯುಸರ್ ಐಡಿ ಮತ್ತು ಪಾಸ್ವರ್ಡ ಹಾಕಿ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: 1st installment-ಮೊದಲ ಕಂತಿನ ರೂ 2,000 ಹಣ ಬರ ಪರಿಹಾರ‍ ವರ್ಗಾವಣೆ ಪ್ರಾರಂಭ! ನಿಮಗೆ ಜಮಾ ಅಗಿದಿಯಾ? ಚೆಕ್ ಮಾಡಿ.

Step-6: ಯುವನಿಧಿ ಯೋಜನೆ ಅರ್ಜಿ ತೆರೆದುಕೊಂಡ ಬಳಿಕ ಮೊದಲಿಗೆ ಕಾಣುವ Self Declaration Consent / ಸ್ವಯಂ ಘೋಷಣೆ ಒಪ್ಪಿಗೆ ಆಯ್ಕೆಯ ಮೇಲೆ “ಹೌದು” ಎಂದು ಕ್ಲಿಕ್ ಮಾಡಿಕೊಂಡು ಬಳಿಕ “ಆಧಾರ್ ದೃಡೀಕರಣ” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಬೇಕು.

ಇದಾದ ಬಳಿಕ ಆಧಾರ್ ವಿವರಗಳನ್ನು ಪಡೆಯಿರಿ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ತೆಗೆದುಕೊಳ್ಳಬೇಕು.

ಬಳಿಕ ನಿಮ್ಮ ವಿದ್ಯಾರ್ಹತೆಯ ವಿವರ ಮತ್ತು ಗೃಹವಾಸಿ ಪರಿಶೀಲನೆ, ಅರ್ಜಿದಾರರ ಸಂಪರ್ಕ ವಿವರ, ಹೆಚ್ಚುವರಿ ವಿವರ ಭರ್ತಿ ಮಾಡಿ ಕೊನೆಯಲ್ಲಿ ಕಾಣುವ ಕ್ಯಾಪ್ಚ ಕೋಡ್ ಸಂಕ್ಯೆಯನ್ನು ಹಾಕಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗುತ್ತದೆ.

ಸಹಾಯವಾಣಿ: 18005999918
ಅರ್ಜಿ ಸಲ್ಲಿಸಲು ಲಿಂಕ್: Apply Now

Most Popular

Latest Articles

Related Articles