- Advertisment -
HomeNew postsFasal bima Yojana: ಈ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಇನ್ನು ಕೇವಲ 14 ದಿನ...

Fasal bima Yojana: ಈ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಇನ್ನು ಕೇವಲ 14 ದಿನ ಉಳಿದಿದೆ! ಮತ್ತು ಅರ್ಜಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್.

Last updated on October 1st, 2024 at 03:34 am

ರೈತರು ತಾವು ಬೆಳೆದ ಬೆಳೆಗಳಿಗೆ ಇನ್ಶೂರೆನ್ಸ್(crop insurance) ಮಾಡುವ ಸಲುವಾಗಿ ರಾಜ್ಯ ಮತ್ತು ಕೇಂದ್ರ ಸರಕಾರದಿಂದ “ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ” (fasa bhima yojane) ಯನ್ನು ಅನುಷ್ಥಾನ ಮಾಡಲಾಗುತ್ತಿದೆ. ಈ ಯೊಜನೆಯಡಿ ಬೆಳೆ ವಿಮೆ ಕಟ್ಟುಲು ಎಲ್ಲಾ ಬೆಳೆಗಳಿಗೆ 31 ಜುಲೈ 2023 ಕೊನೆಯ ದಿನವಾಗಿರುತ್ತದೆ ಈ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ರೈತರು ಈ ದಿನಾಂಕದ ಒಳಗೆ ತಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಬೇಕು.

ಈ ವರ್ಷ(2023) ಬೆಳೆ ವಿಮೆ(fasal bhima yojana) ಮಾಡಿಸಲು ಅವಕಾಶ ಮಾಡಿಕೊಟ್ಟ ಬೆಳೆಗಳ ವಿವರ ಈ ರೀತಿ ಇದೆ, ಭತ್ತ, ಮುಸುಕಿನಜೋಳ/ಮೆಕ್ಕೆಜೋಳ, ಜೋಳ, ರಾಗಿ, ಸಜ್ಜೆ, ನವಣೆ, ಸಾವೆ, ಉದ್ದು, ಹೆಸರು, ತೊಗರಿ, ಹುರುಳಿ, ಸೋಯಾ ಅವರೆ, ಸೂರ್ಯಕಾಂತಿ, ಎಳ್ಳು, ನೆಲಗಡಲೆ/ಶೇಂಗಾ, ಹತ್ತಿ, ಎಲೆಕೋಸು, ಈರುಳ್ಳಿ, ಅಲೂಗಡ್ಡೆ, ಅಡಿಕೆ ಬೆಳೆ ವಿಮೆ ಮಾಡಿಸಲು 15 ಜುಲೈ ಕೊನೆಯ ದಿನವಾಗಿದ್ದು ಈಗಾಗಲೇ ಮುಕ್ತಾಯವಾಗಿರುತ್ತದೆ. ಮಾವು ಬೆಳೆಗೆ 31 ಜುಲೈ 2023ರ ವರೆಗೆ(crop insurance last date) ಅವಕಾಶವಿರುತ್ತದೆ.

ಬೆಳೆ ವಿಮೆ(bele vime parihara) ಕಟ್ಟುವ ಬಹು ದೊಡ್ಡ ಸಂಖ್ಯೆಯ ರೈತರಲ್ಲಿ ಒಂದು ಪ್ರಶ್ನೆ ಯಾವಗಳು ಕೇಳುತ್ತಾರ‍ೆ ನಾವು ಪ್ರತಿ ವರ್ಷ ಬೆಳೆ ವಿಮೆ ಕಟ್ಟತ್ತೆವೆ ಅದರೆ ನಮಗೆ ಬೆಳೆ ವಿಮೆ ಪರಿಹಾರ‍ ಬರುವುದೇ ಇಲ್ಲವೆಂದು ಅದರೆ ಬೆಳೆ ವಿಮೆ ಕಟ್ಟವ ಎಲ್ಲಾ ಭಾಗದ ರೈತರಿಗೂ ಈ ಯೋಜನೆಯಡಿ ಪರಿಹಾರ‍ ದೊರೆಯುವುದಿಲ್ಲ ಬೆಳೆ ವಿಮೆ ಅಧಿಸೂಚಿತ ಘಟಕ ಅಂದರೆ ಒಂದು ಗ್ರಾಮ ಪಂಚಾಯತಗೆ ಒಂದು ಅಧಿಸೂಚಿತ ಘಟಕ ಎಂದು ಕರೆಯುತ್ತಾರೆ ಈ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಅತೀ ಹೆಚ್ಚು ಮತ್ತು ಅತೀ ಕಡಿಮೆ ಅದಾಗ, ಮತ್ತು ಶೇ 75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ಒಟ್ಟು ಬೆಳೆ ವಿಮೆ ಮೊತ್ತದ ಗರಿಷ್ಠ ಶೇ 25 ರಷ್ಟು ಪರಿಹಾರವನ್ನು ವಿಮಾ ಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ನೀಡಬೇಕು. 

ಇದೆ ರೀತಿ ವೈಯಕ್ತಿಕವಾಗಿ ರೈತರು ಬೆಳೆ ಕಟಾವು ಮಾಡಿದ ನಂತರ ಜಮೀನಿನಲ್ಲಿ ಒಣಗಲು ಬಿಟ್ಟಾಗ ಎರಡು ವಾರದ ಒಳಗಾಗಿ ಅಕಾಲಿಕ ಮಳೆ , ಚಂಡಮಾರುತದಿಂದ ಬೆಳೆ ನಷ್ಟವಾದಗ 48 ಗಂಟೆಯ ಒಳಗಾಗಿ ವಿಮೆ ಸಂಸ್ಥೆ(ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಮಾ ಸಂಸ್ಥೆಯ ಸಹಾಯವಾಣಿ ಸಂಖ್ಯೆಗಳನ್ನು ಪಡೆಯಬವುದು: https://samrakshane.karnataka.gov.in/ ಮತ್ತು ಸಂಬಂದಪಟ್ಟ ಇಲಾಖೆಗೆ(ಕೃಷಿ ಅಥವಾ ತೋಟಗರಿಕೆ) ಅರ್ಜಿ ಸಲ್ಲಿಸಿದ ನಂತರ ರೈತರ ಒಟ್ಟು  ನಷ್ಟ ಲೆಕ್ಕಾಚಾರ ಮಾಡಿ ವಿಮಾ ಸಂಸ್ಥೆಯು ರೈತರಿಗೆ ಬೆಳೆ ವಿಮೆ ಪಾವತಿಸಬೇಕು.

ಇದನ್ನೂ ಓದಿ: Ration Card: ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರು ಯಾರೆಂದು ಮತ್ತು ಯಾವ ಬ್ಯಾಂಕ್ ಅಕೌಂಟ್ ಗೆ ಆಧಾರ್ ಲಿಂಕ್ ಆಗಿದೆ ಎಂದು ತಿಳಿಯಲು ವೆಬ್ಸೈಟ್ ಲಿಂಕ್.

ಇದಲ್ಲದೇ ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿವಿಧ ಇಲಾಖೆ ಅಧಿಕಾರಿ ಮತ್ತು ವಿಮಾ ಸಂಸ್ಥೆಯ ಪ್ರತಿನಿಧಿ ಸಹಯೋಗದಲ್ಲಿ 4 ಕಡೆ ಬೆಳೆ ಅಂದಾಜು ಸಮೀಕ್ಷೆ(CCE-Crop Cutting Experiment) ಮಾಡಲಾಗುತ್ತದೆ ಈ ನಾಲ್ಕು ಸಮೀಕ್ಷೆಯಲ್ಲಿ ಅಧಿಸೂಚಿತ ಬೆಳೆ ವಿಮೆ ಜಮೀನಿನಲ್ಲಿ 5*5 ಮೀಟರ್ ಅಳತೆಯಲ್ಲಿ ಬೆಳೆಯನ್ನು ಕಟಾವು ಮಾಡಿ ಇಳುವರಿಯನ್ನು ಲೆಕ್ಕಾಚಾರ ಹಾಕಲಾಗುತ್ತದೆ ಕೊನೆಯಲ್ಲಿ ಸರಾಸರಿ ಇಳುವರಿ ಕಡಿಮೆ ಬಂದಲ್ಲಿ ಆ ಅಧಿಸೂಚಿತ ಘಟಕದಡಿ ಬರುವ ರೈತರಿಗೆ ಬೆಳೆ ವಿಮೆಯನ್ನು ವಿಮಾ ಕಂಪನಿಗಳು ಪಾವತಿ ಮಾಡಬೇಕು.

2023 ಮುಂಗಾರು ಹಂಗಾಮಿಗೆ ವಿವಿಧ ಬೆಳೆಗಳಿಗೆ ನಿಗದಿಪಡಿಸಲಾದ ವಿಮಾ ಮೊತ್ತ ಮತ್ತು ವಿಮಾ ಕಂತಿನ ವಿವರಗಳು(ಪ್ರತಿ ಹೆಕ್ಟೇರ್ ಗೆ- 2.5 ಎಕರೆಗೆ):

Bele vime Status check: ಬೆಳೆ ವಿಮೆ ಅರ್ಜಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್: 

ನಮ್ಮ ರಾಜ್ಯದಲ್ಲಿ ಇಲ್ಲಿಯವರೆಗೆ ರೈತರಿಂದ ಬೆಳೆ ವಿಮೆಗೆ ಸಲ್ಲಿಕೆಯಾದ ಒಟ್ಟು ಅರ್ಜಿಗಳು 5,74,830 ಸಂಗ್ರಹಿಸಲಾದ ಒಟ್ಟು ಮೊತ್ತ 80,91,01,224 ರೂ. ನೀವು ಸಲ್ಲಿಸಿದ ಅರ್ಜಿಯ ಸ್ಥಿತಿಯನ್ನು ಈ  https://samrakshane.karnataka.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂರಕ್ಷಣೆ ಪೋರ್ಟಲ್ ಭೇಟಿ ಅರ್ಜಿದಾರರ ಆಧಾರ್ ನಂಬರ್ ಅಥವಾ ಮೊಬೈಲ್ ನಂಬರ್ ಹಾಕಿ ಬೆಳೆ ವಿಮೆ ಅರ್ಜಿಯು ಯಾವ ಹಂತದಲ್ಲಿ ಇದೆ ಎಂದು ತಿಳಿಯಬವುದಾಗಿದೆ.

ಇಲ್ಲಿಯವರೆಗೆ ರೈತರಿಂದ  ಸಲ್ಲಿಕೆಯಾದ ಜಿಲ್ಲಾವಾರು ಬೆಳೆ ವಿಮೆ  ಅರ್ಜಿಗಳ ಸಂಖ್ಯೆಗಳು(17-07-2023):

ಹಾವೇರಿ- 1,03,511
ತುಮಕೂರು- 68,141
ಗದಗ- 48,123
ಮಂಡ್ಯ- 44,310
ಬಿಜಾಪುರ- 43,786
ಹಾಸನ- 40,911
ಕೊಪ್ಪಳ- 34,799
ಗುಲ್ಬರ್ಗ- 29,044
ದಾರವಾಡ- 22,555
ಬೀದರ್- 19,887
ದಾವಣಗೆರೆ- 19,187
ಚಿತ್ರದುರ್ಗ- 17,335
ಚಾಮರಾಜನಗರ- 15,690
ಕಾರವಾರ- 14,426
ಚಿಕ್ಕಬಳ್ಳಾಪುರ- 11,035
ಬೆಳಗಾವಿ- 10,038
ಶಿವಮೊಗ್ಗ- 7,423
ರಾಯಚೂರು- 7,315
ಉಡುಪಿ- 4,663
ಚಿಕ್ಕಮಗಳೂರು- 2,969
ವಿಜಯನಗರ- 2,748
ಮೈಸೂರು- 2,330
ಬಾಗಲಕೋಟೆ- 2,041
ಯಾದಗಿರಿ- 872
ಕೊಪ್ಪಳ- 812
ರಾಮನಗರ- 393
ಬಳ್ಳಾರಿ- 180

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಡೇಟ್ ಫಿಕ್ಸ್! ಅಗತ್ಯ ದಾಖಲಾತಿಗಳೇನು? ಅರ್ಜಿ ಸಲ್ಲಿಕೆ ವಿಧಾನ ಹೇಗೆ? ಇಲ್ಲಿದೆ ಸಂಪೂರ್ಣ ವಿವರ.

- Advertisment -
LATEST ARTICLES

Related Articles

- Advertisment -

Most Popular

- Advertisment -