FID Number-2023: ಈ ನಂಬರ್ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ ಮೊತ್ತ ಜಮೆ! ಕೂಡಲೇ FID ಮಾಡಿಸಿಕೊಳ್ಳಿ.

FID number: ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಎಲ್ಲಾ ಇಲಾಖೆಗಳಲ್ಲಿ ರೈತರಿಗಾಗಿ ಜಾರಿಯಲ್ಲಿರುವ ಯೋಜನೆಗಳ ಸೌಲಭ್ಯ ಪಡೆಯಲು ರೈತರು ಎಫ್.ಐ.ಡಿ(FID number) ಅನ್ನು ಕೃಷಿ ಇಲಾಖೆಯಿಂದ ಮಾಡಿಸಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ.

FID Number-2023: ಈ ನಂಬರ್ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ ಮೊತ್ತ ಜಮೆ! ಕೂಡಲೇ FID ಮಾಡಿಸಿಕೊಳ್ಳಿ.
FID number Status check

ಕಲಬುರ್ಗಿ: ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಎಲ್ಲಾ ಇಲಾಖೆಗಳಲ್ಲಿ ರೈತರಿಗಾಗಿ ಜಾರಿಯಲ್ಲಿರುವ ಯೋಜನೆಗಳ ಸೌಲಭ್ಯ ಪಡೆಯಲು ರೈತರು ಎಫ್.ಐ.ಡಿ(FID number) ಅನ್ನು ಕೃಷಿ ಇಲಾಖೆಯಿಂದ ಮಾಡಿಸಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ.

ಬರ ಪರಿಹಾರ, ಬೆಳೆ ವಿಮೆ, ವಿವಿಧ ಯೋಜನೆಯಡಿ ಯಂತ್ರೋಪಕರಣಗಳ ಸಹಾಯಧನ ಪಡೆಯಲು ಹೀಗೆ ಅನೇಕ ಯೋಜನೆಯಡಿ ರೈತರು ಸೌಲಭ್ಯ ಪಡೆಯಲು ಈ ನಂಬರ್ ಅನ್ನು ಮಾಡಿಕೊಳ್ಳಬೇಕು ಎಂದು ಕೃಷಿ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

ಬರ ಪರಿಹಾರದ ಹಣ ಪಡೆಯಬೇಕಾದರೆ ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಲೇಬೇಕು. ಒಂದು ವೇಳೆ ಎಫ್‌ಐಡಿ ಮಾಡಿಸದಿದ್ದರೆ ಹಣ ಬರುವುದಿಲ್ಲ. ಎಫ್‌ಐಡಿ ಮಾಡದೆ ಇರುವ ಕೂಡಲೇ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಎಫ್‌ಐಡಿ ಮಾಡಿಸಬೇಕು.

ಕಲಬುರಗಿ ಜಿಲ್ಲೆಯಲ್ಲಿ ಎಫ್‌ಐಡಿ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ ಮೊತ್ತ ಜಮೆಯಾಗಲಿದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 4,21,715 ಭೂ ಹಿಡುವಳಿದಾರರಿದ್ದು, ಈವರೆಗೆ ಕೇವಲ 3,87,874 ರೈತರು ಮಾತ್ರ ಎಫ್‌ಐಡಿ ನೊಂದಣಿ ಮಾಡಿಸಿದ್ದು, 

ಇದನ್ನೂ ಓದಿ: free sewing machine scheme-2023: ಉಚಿತವಾಗಿ ವಿದ್ಯುತ್‌ ಚಾಲಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!

ಇನ್ನೂ ಎಫ್‌ಐಡಿ ಮಾಡಿಸದೇ ಇರುವ 33,841 ರೈತರಿಗೆ ಬರ ಪರಿಹಾರ, ತೊಗರಿ ನೆಟೆ ರೋಗ ಪರಿಹಾರ ಮೊತ್ತ ಬರುವುದಿಲ್ಲ. ಏಕೆಂದರೆ ಈ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.

ಇದನ್ನೂ ಓದಿ: Annabhagya DBT Status: "ಅನ್ನಭಾಗ್ಯ ಯೋಜನೆ" ರೂ 240 ಕೋಟಿ ಸೆಪ್ಟೆಂಬರ್ ತಿಂಗಳ ಅಕ್ಕಿ ಹಣ ವರ್ಗಾವಣೆ! ನಿಮ್ಮ ಖಾತೆಗೆ ಬಂತಾ ಚೆಕ್ ಮಾಡಿ.

ಅದ ಕಾರಣ ಎಫ್‌ಐಡಿ ಮಾಡಿಸದೇ ಇರುವ ಜಿಲ್ಲೆಯ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ ಅಥವಾ ಹೊಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗೆ ತಮ್ಮ ಆಧಾರ ಕಾರ್ಡ್​, ಪಹಣಿ, ಬ್ಯಾಂಕ್ ಪಾಸ್ ಬುಕ್, ತಮ್ಮ ಮೂಬೈಲ್ ಸಂಖ್ಯೆಯೊಂದಿಗೆ ಹೋಗಿ ತುರ್ತಾಗಿ ಎಫ್‌ಐಡಿ ಮಾಡಿಸಬೇಕು. ಇದಕ್ಕೆ ತಪ್ಪಿದಲ್ಲಿ ಸರ್ಕಾರದಿಂದ ನೀಡಲ್ಪಡುವ ಪರಿಹಾರದ ಮೊತ್ತದಿಂದ ರೈತರು ವಂಚಿತರಾಗಬೇಕಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ.

ಈಗಾಗಲೇ ಎಫ್.ಐ.ಡಿ(FID number) ಇದ್ದರೆ ಚೆಕ್ ಮಾಡುವ ವಿಧಾನ:

ನಿಮ್ಮ ಹೆಸರಿನಲ್ಲಿ ಈಗಾಗಲೇ ಎಫ್.ಐ.ಡಿ(FID) ನಂಬರ್ ಇದಿಯೋ ಇಲ್ಲವೋ ಅಥವಾ ಇದ್ದರೆ ಅದರ ವಿವರವನ್ನು ಹೇಗೆ ಪಡೆಯಬವುದು ಎಂದು ಈ ಕೆಳಗೆ ವಿವರಿಸಲಾಗಿದೆ.
ಈಗಾಗಲೇ ಹೆಚ್ಚಿನ ರೈತರ ನೊಂದಣಿ ಅಗಿದ್ದು ಈ ಇಲ್ಲಿ ಕ್ಲಿಕ್ ಮಾಡಿ: FID number Status check ನಿಮ್ಮ 12 ಅಂಕಿಯ ಆಧಾರ್ ನಂಬರ್ ಹಾಕಿ "Search" ಬಟನ್ ಮೇಲೆ ಕ್ಲಿಕ್ ಮಾಡಿ "FID" ನಂಬರ್ ತಿಳಿಯಬವುದು.

ಇದನ್ನೂ ಓದಿ: Emergency Alert message: ಇಂದು ನಿಮ್ಮ ಮೊಬೈಲ್ ಗೆ ಬರಲಿದೆ ಈ ರೀತಿಯ ಸಂದೇಶ! ಇದರ ಕುರಿತು ತಪ್ಪದೇ ಈ ಮಾಹಿತಿಯನ್ನು ತಿಳಿಯಿರಿ.

FID ನಂಬರ್ ಪಡೆಯಲು ನಿಮ್ಮ ಮೊಬೈಲ್ ನಲ್ಲೇ  ಅರ್ಜಿ ಸಲ್ಲಿಸಬವುದು

ಇಲ್ಲಿಯವರೆಗೆ ಈ ನಂಬರ್ ಪಡೆಯದಿರುವವರು ಇಲ್ಲಿ ಕ್ಲಿಕ್ ಮಾಡಿ> FID number application ನಿಮ್ಮ ಮೊಬೈಲ್ ನಲ್ಲೇ ಹೇಗೆ ಅರ್ಜಿ ಸಲ್ಲಿಸಬವುದು ಎನ್ನುವ ಮಾಹಿತಿಯನ್ನು ವಿವರಿಸಲಾಗಿದೆ.
ಇದನ್ನೂ ಓದಿ: Basaraga Ghoshane taluk list-2023: ರಾಜ್ಯ ಸರಕಾರದಿಂದ ಮತ್ತೆ ಹೊಸ 21 ತಾಲೂಕುಗಳ ಬರಪೀಡಿತ ಘೋಷಣೆ ಪಟ್ಟಿ ಬಿಡುಗಡೆ!