HomeNew postsFruits ID: ರೈತರು ನಿಮ್ಮ FID ನಂಬರ್ ನಲ್ಲಿ ಯಾವೆಲ್ಲ ಸರ್ವೆ ನಂಬರ್ ಸೇರ್ಪಡೆಯಾಗಿವೆ? ಎಂದು...

Fruits ID: ರೈತರು ನಿಮ್ಮ FID ನಂಬರ್ ನಲ್ಲಿ ಯಾವೆಲ್ಲ ಸರ್ವೆ ನಂಬರ್ ಸೇರ್ಪಡೆಯಾಗಿವೆ? ಎಂದು ನಿಮ್ಮ ಮೊಬೈಲ್‌ನಲ್ಲೇ ತಿಳಿಯಿರಿ!

2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ್ಯಂತ ಸಂಭವಿಸಿರುವ ಬರ ಪರಿಸ್ಥಿತಿಯಲ್ಲಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಬರದ ಛಾಯೆ ಅವರಿಸಿದ್ದು ,ಕರ್ನಾಟಕ ಸರ್ಕಾರದಿಂದ ಈಗಾಗಲೇ ಬರ ಪೀಡಿತ ತಾಲ್ಲೂಕಿಗಳನ್ನು ಘೋಷಣೆ  ಮಾಡಲಾಗಿರುತ್ತದೆ. 

ಈ ಸಂಬಂಧ ಸರ್ಕಾರದಿಂದ ಪರಿಹಾರ ಧನ ಬಿಡುಗಡೆಯಾದ ಸಂದರ್ಭದಲ್ಲಿ ರೈತರಿಗೆ ಅವರ FRUITS-ID ಗೆ ಸೇರಿಸಿರುವ ಜಮೀನಿನ ಸರ್ವೆ ನಂಬರ್ ಗಳ ವಿಸ್ತೀರ್ಣಕ್ಕನುಗುಣವಾಗಿ ಪರಿಹಾರ ಧನವನ್ನು ನೇರವಾಗಿ DBT ಮೂಲಕ ವಿತರಿಸಲಾಗುತ್ತದೆ. 

ಆದ್ದರಿಂದ, ಎಲ್ಲಾ ರೈತರು ಕಡ್ಡಾಯವಾಗಿ ತಮ್ಮ ಎಲ್ಲಾ ಜಮೀನುಗಳ ವಿವರಗಳನ್ನು ತಮ್ಮ FID ನಂಬರ್ ಗೆ ಸೇರಿಸಲು ಮತ್ತು ಯಾವ ರೈತರು ಇಲ್ಲಿಯವರೆಗೆ FID ಯನ್ನು ಮಾಡಿಸಿಕೊಂಡಿಲ್ಲವೋ ಅವರು ತಮ್ಮ ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ/ಗ್ರಾಮ ಚಾವಡಿ(VA office), ಪಶು ಸಂಗೋಪನಾ ಇಲಾಖೆ, ರೇಷ್ಮೆ ಇಲಾಖೆ ಅಥವಾ ನಾಗರೀಕ ಸೇವಾ ಕೇಂದ್ರಗಳನ್ನು ಭೇಟಿ ಮಾಡುವಂತೆ ಸಂಬಂಧಪಟ್ಟ ಇಲಾಖೆಗಳಿಂದ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ: udyogini scheme: ಉದ್ಯೋಗಿನಿ ಯೋಜನೆಯಡಿ 3 ಲಕ್ಷದವರೆಗೆ ಸಾಲ ಶೇ.50 ರಷ್ಟು ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ರೈತರು ಸರ್ಕಾರದ ಯಾವುದೇ ಯೋಜನೆಯಡಿ ಸವಲತ್ತು ಪಡೆಯಲು FID ನಂಬರ್  ಕಡ್ಡಾಯವಾಗಿದ್ದು ಎಲ್ಲಾ ರೈತರೂ ತಪ್ಪದೇ FID ಮಾಡಿಸಿಕೊಳ್ಳುವಂತೆ ಹಾಗೂ ತಮ್ಮ ಎಲ್ಲಾ ಜಮೀನುಗಳ ಸರ್ವೆ ನಂಬರ್ ವಿವರವನ್ನು FID ಯಲ್ಲಿ ಸೇರಿಸುವಂತೆ ತಿಳಿಸಲಾಗಿದೆ.

ರೈತರು ತಮ್ಮ ಮೊಬೈಲ್ ನಲ್ಲಿ FID ನಂಬರ್ ನಲ್ಲಿ ಈಗಾಗಲೇ ಯಾವೆಲ್ಲ ಜಮೀನಿನ ಸರ್ವೆ ನಂಬರ್ ಸೇರ್ಪಡೆ ಅಗಿದೆ ಯಾವ ಜಮೀನಿನ ಸರ್ವೆ ನಂಬರ್ ಸೇರಿಸುವುದು ಬಾಕಿ ಇದೆ ಎಂದು ತಿಳಿದುಕೊಳ್ಳುವುದು ಹೇಗೆ ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

ದಿನನಿತ್ಯ ಈ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್> WhatsApp channel ಮಾಡಿ ಕೃಷಿಕಮಿತ್ರ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ.

ಪ್ರೂಟ್ಸ್ ಐಡಿ ಎಂದರೇನು?

FRUITS – ID (FID) Farmer Registration and Unified beneficiary Information System ಎಂದು ಪೂರ್ಣ ವ್ಯಾಖ್ಯನವಾಗಿದ್ದು ಕೃಷಿ ಇಲಾಖೆಯಿಂದ ರಾಜ್ಯದ ಎಲ್ಲಾ ರೈತರ ವಿವರವನ್ನು ವಿವಿಧ ಸೌಲಭ್ಯ ನೀಡಲು ಡಿಜಿಟಲ್ ರೂಪದಲ್ಲಿ ದಾಖಲಿಸಿರುವಂತಹ ವ್ಯವಸ್ಥೆಯಾಗಿದೆ.

ಇದನ್ನೂ ಓದಿ: MSP price-2023: ಬೆಂಬಲ ಬೆಲೆಯಲ್ಲಿ ರಾಗಿ,ಜೋಳ,ಭತ್ತ ಖರೀದಿ! ಬೆಲೆ ಎಷ್ಟು? ನೊಂದಣಿ ಪ್ರಕ್ರಿಯೆ ಹೇಗಿರಲಿದೆ?

ರೈತರು ನಿಮ್ಮ FID ನಂಬರ್ ನಲ್ಲಿ ಯಾವೆಲ್ಲ ಸರ್ವೆ ನಂಬರ್ ಸೇರ್ಪಡೆಯಾಗಿವೆ? ಎಂದು ನಿಮ್ಮ ಮೊಬೈಲ್‌ನಲ್ಲೇ ತಿಳಿಯುವ ವಿಧಾನ:

ರೈತರು ರಾಜ್ಯ ಕೃಷಿ ಇಲಾಖೆಯ fruits ವೆಬ್ಸೈಟ್ ಭೇಟಿ ಮಾಡಿ Citizen ಲಾಗಿನ್ ಬಳಕೆ ಮಾಡಿಕೊಂಡು ತಮ್ಮ FID ಕುರಿತು ಸಂಪೂರ್ಣ ಮಾಹಿತಿಯನ್ನು ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ನಲ್ಲಿ ನೋಡಬವುದಾಗಿದೆ.

Step-1: ಮೊದಲಿಗೆ ಈ fruits website ಲಿಂಕ್ ಮೇಲೆ ಕ್ಲಿಕ್ ಮಾಡಿ ಪ್ರೂಟ್ಸ್ ತಂತ್ರಾಂಶ ಭೇಟಿ ಮಾಡಬೇಕು. ಬಳಿಕ ಬಲಬದಿಯಲ್ಲಿ ಮೇಲೆ ಕಾಣುವ citizen login ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಕೆಳಗಡೆ ಕಾಣುವ “Citizen registration” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿದಾರ ರೈತರ ಆಧಾರ್ ಕಾರ್ಡನಲ್ಲಿರುವಂತೆ ಹೇಗಿದಿಯೋ ಹಾಗೆ ಹೆಸರನ್ನು ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ “I agree” ಬಟನ್ ಮೇಲೆ ಟಿಕ್ ಮಾಡಿ ಸಲ್ಲಿಸಿ/Submit ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ:PMKSY-OI Scheme: ಶೇ. 50 ರ ಸಹಾಯಧನದಲ್ಲಿ PVC Pipe ವಿತರಣೆ, ಬೇಕಾದ ದಾಖಲೆಗಳೇನು? ಅರ್ಜಿ ಸಲ್ಲಿಸುವುದು ಎಲ್ಲಿ?

Step-3: ಮೇಲಿನ ಹಂತಗಳನ್ನು ಮುಗಿಸಿದ ಬಳಿಕ High Security One Time Password (OTP) Sent to Your Registered Mobile No. Please Enter OTP ಈ ರೀತಿ ಮೇಸೆಜ್ ಬಂದು ಆಧಾರ್ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ 5 ಅಂಕಿಯ OTP ಬಂದಿರುವುದನ್ನು ನಮೂದಿಸಿ ಈ ವೆಬ್ಸೈಟ್ ಗೆ ಲಾಗಿನ್ ಮಾಡಲು ನಿಮಗೆ ನೆನಪಿನಲ್ಲಿಟ್ಟುಕೊಳ್ಳಲು ಅನುಕೂಲವಾಗುವಂತಹ ಪಾಸ್ವರ್ಡ್ ಅನ್ನು ರಚನೆ ಮಾಡಿಕೊಳ್ಳಬೇಕು.

ಇದನ್ನೂ ಓದಿ: Udyogini Yojane-2023: ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ ಮಹಿಳಾ ಅಭಿವೃದ್ಧಿ ನಿಗಮದಿಂದ ಹಲವು ಯೋಜನೆಗಳಿಗೆ ಅರ್ಜಿ ಆಹ್ವಾನ!

Step-4: ಪಾಸ್ವರ್ಡ್ ಅನ್ನು ರಚನೆ ಮಾಡಿಕೊಂಡ ಬಳಿಕ “Successfully Account Created” ಎಂದು ತೋರಿಸುತ್ತದೆ ಬಳಿಕ fruits login ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಪೇಜ್ ಭೇಟಿ ಮಾಡಿ ಯುಸರ್ ಐಡಿ/ಬಳಕೆದಾರ ಐಡಿ (ನಿಮ್ಮ ಮೊಬೈಲ್ ನಂಬರ್ ಅಗಿರುತ್ತದೆ) ಮತ್ತು ಪಾಸ್ವರ್ಡ್ ಅನ್ನು ಹಾಕಿ Login ಅಗಬೇಕು.

Step-5: Login ಅದ ಬಳಿಕ ಈ ಕೆಳಗೆ ತೋರಿಸಿರುವ ಚಿತ್ರದ ಹಾಗೆ ವಿಡೋ ಒಪನ್ ಅಗುತ್ತದೆ ಇಲ್ಲಿ Registration ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ FID ನಂಬರ್ ಅಲ್ಲಿ ಯಾವೆಲ್ಲ ಸರ್ವೆ ನಂಬರ್ ಸೇರ್ಪಡೆ ಅಗಿವೆ ಮತ್ತು ಅಗಿಲ್ಲ ಎಂದು ತಿಳಿಯಬವುದು ಇದರ ಜೊತೆಗೆ ಇನ್ನುಹೆಚ್ಚಿನ ವಿವರವನ್ನು ನೋಡಬವುದು.

ಈ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಬೇಕು.

ಇದನ್ನೂ ಓದಿ: DBT Status App-ಅರ್ಜಿದಾರರಿಗೆ ಗ್ಯಾರಂಟಿ ಯೋಜನೆಗಳ ಹಣ ಜಮಾ ಅಗಿರುವುದನ್ನು ತಿಳಿಯಲು ಮೊಬೈಲ್ ಅಪ್ಲಿಕೇಶನ್!

Most Popular

Latest Articles

- Advertisment -

Related Articles