Karnataka Weather: ಕರ್ನಾಟಕ ಮಳೆ ಮುನ್ಸೂಚನೆ | 07-10-2023

karnataka weather Report: ಕರ್ನಾಟಕ ಮಳೆ ನಕ್ಷೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಸರಗೂರು ಗ್ರಾಮದಲ್ಲಿ ಅತ್ಯಧಿಕ 82 ಮಿಮೀ ಮಳೆ ದಾಖಲಾಗಿರುತ್ತದೆ. 

Karnataka Weather: ಕರ್ನಾಟಕ ಮಳೆ ಮುನ್ಸೂಚನೆ | 07-10-2023
karnataka weather Report 07-10-2023

ಕರ್ನಾಟಕ ಮಳೆ ನಕ್ಷೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಸರಗೂರು ಗ್ರಾಮದಲ್ಲಿ ಅತ್ಯಧಿಕ 82 ಮಿಮೀ ಮಳೆ ದಾಖಲಾಗಿರುತ್ತದೆ. 

ಉಳಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಒಣ ಹವೆ ಮತ್ತು ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ದಾಖಲಾಗಿರುತ್ತದೆ.

ನಾಳೆ(08.10.2023) ಬೆಳಿಗ್ಗೆ 8-00 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ ಮಾಹಿತಿ:

ರಾಜ್ಯದ ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆ ಇರುತ್ತದೆ ಹಾಗೂ ಅಲ್ಲಲ್ಲಿ ಭಾರಿ ಮಳೆ. ಕರಾವಳಿ ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಮತ್ತು ಉತ್ತರ ಒಳನಾಡು ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ಮಳೆ ಮುನ್ಸೂಚನೆ ನಕ್ಷೆಯಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ: LPG subsidy: ಅಡುಗೆ ಸಿಲಿಂಡರ್ ಸಬ್ಸಿಡಿ ಬಿಡುಗಡೆ! ಎಲ್‌ಪಿಜಿ ಸಬ್ಸಿಡಿ ಹೆಚ್ಚಿಸಿದ ಕೇಂದ್ರ ಸರಕಾರ.

ಕರ್ನಾಟಕ ಮಳೆ ಮುನ್ಸೂಚನೆ ನಕ್ಷೆ (08.10.2023 ಬೆಳಿಗ್ಗೆ 8-30ರ ವರೆಗೆ):

Gruhalakshmi: ನಿಮಗೆ ಇನ್ನೂ ಗೃಹಲಕ್ಷ್ಮಿ ಮೊದಲನೇ ಕಂತಿನ ಹಣ ಬಂದಿಲ್ವಾ? ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ!

ಕಾಸರಗೋಡು ಬಿಸಿಲು, ಮೋಡ ಹಾಗೂ ಸಂಜೆ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನಡ, ಉಡುಪಿ ಸಹ ಬಿಸಿಲು, ಮೋಡದ ವಾತಾವರಣ ಇರಲಿದ್ದು, ಮಂಗಳೂರು ಸುತ್ತಮುತ್ತ ಸಾಮಾನ್ಯ ಮಳೆಯ ಸಾಧ್ಯತೆ ಇದೆ. 

ಕಾರ್ಕಳ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ, ಸುಳ್ಯ ಸುತ್ತಮುತ್ತ ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. 

ಸೋಮವಾರಪೇಟೆ, ಸಕಲೇಶಪುರ,  ಕೊಡಗು, ಮೂಡಿಗೆರೆ, ಶಿೃಂಗೇರಿ, ಕುದುರೆಮುಖ, ಆಗುಂಬೆ, ಕೊಪ್ಪ, ತೀರ್ಥಹಳ್ಳಿ, ಹೊಸನಗರ, ಸಾಗರ ಸುತ್ತಮುತ್ತ ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. 

ಮೈಸೂರು, ಹಾಸನ ಮೋಡದೊಂದಿಗೆ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಹಗುರವಾಗಿ ಮೋಡ ಕವಿದ ವಾತಾವರಣದ ಇದೆ. 

ದೀರ್ಘಾವಧಿ ಮಳೆ ಮುನ್ಸೂಚನೆ ಮಾಹಿತಿ:

ಒಕ್ಟೊಬರ್ 8ರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಲಕ್ಷಣಗಳಿವೆ.

ಮಾಹಿತಿ ಕೃಪೆ: ಸಾಯಿ ಶೇಖರ್ ಬಿ&KSNDMC,ಬೆಂಗಳೂರು.

ಇದನ್ನೂ ಓದಿ: BPL ಮತ್ತು  APL​​​ ಕಾರ್ಡ್​ದಾರರಿಗೆ ಆಹಾರ ಇಲಾಖೆಯಿಂದ ಗುಡ್ ನ್ಯೂಸ್!  ಮಿಸ್ ಮಾಡ್ದೆ ಸುದ್ದಿ ನೋಡಿ.