HomeNew postslingayat nigama yojanegalu-2024: ವೀರಶೈವ ಲಿಂಗಾಯತ ನಿಗಮದಿಂದ 8 ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ!

lingayat nigama yojanegalu-2024: ವೀರಶೈವ ಲಿಂಗಾಯತ ನಿಗಮದಿಂದ 8 ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ!

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ನಿಯಮಿತದಿಂದ 8 ಸಹಾಯಧನ ಆಧಾರಿತ ಯೋಜನೆಯಡಿ(lingayat nigama schemes-2024
) ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಯಾವೆಲ್ಲ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ? ಅರ್ಜಿ ಸಲ್ಲಿಸಲು ಅರ್ಹರು, ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳೇನು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? 8 ಯೋಜನೆಗಳ ಸಂಪೂರ್ಣ ವಿವರಣೆಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಅರ್ಹ ಅರ್ಜಿದಾರರು ಕೊನೆಯ ದಿನಾಂಕದ ಒಳಗಾಗಿ ಅನ್ಲೈನ್ ಮೂಲಕ  ಅರ್ಜಿ ಸಲ್ಲಿಸಿ ಈ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು. 8 ಯೋಜನೆಯ ಸಹಾಯಧನ ಮಾಹಿತಿ ಸೇರಿದಂತೆ ಇತ್ಯಾದಿ ಸಂಪೂರ್ಣ ವಿವರವನ್ನು ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ:  AIIMS Nursing Officer job- 4,000 ನರ್ಸಿಂಗ್ ಅಧಿಕಾರಿ ಹುದ್ದೆಗಳ ನೇಮಕಾತಿ ಅರ್ಜಿ!

ಪ್ರಸ್ತುತ ಅರ್ಜಿ ಆಹ್ವಾನ ಮಾಡಿರುವ 8 ಯೋಜನೆಗಳ ಮಾಹಿತಿ ಹೀಗಿದೆ:

1) student scholarship yojana- ಶೈಕ್ಷಣಿಕ ಸಾಲ ಯೋಜನೆಗಳು:

A) ಬಸವ ಬೆಳಗು ಯೋಜನೆ(Fresh Students)

ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಅವರ ಕುಟುಂಬ ವಾರ್ಷಿಕ ಆದಾಯ ರೂ.3.50 ಲಕ್ಷ ಮಿತಿಯಲ್ಲಿರುವ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳಾದ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮುಂತಾದ 28 ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ ವಾರ್ಷಿಕ ರೂ.1.00 ಲಕ್ಷಗಳಂತೆ ಕೊರ್ಸ್ ನ ಅವಧಿಗೆ ಗರಿಷ್ಠ ರೂ.4.00 ಲಕ್ಷಗಳಿಂದ 5.00 ಲಕ್ಷಗಳವರೆಗೆ ವಾರ್ಷಿಕ ಶೇ.2 ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು. ವಿದ್ಯಾರ್ಥಿಗಳು CET/NEET ಇತ್ಯಾದಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರಿ ಕೋಟಾದ ಸೀಟು ಪಡೆದಿರಬೇಕು.

B) ಬಸವ ಬೆಳಗು ಯೋಜನೆ (Renewals): 2022-23 ನೇ ಸಾಲಿನಲ್ಲಿ ಸಾಲ ಪಡೆದ ವಿದ್ಯಾರ್ಥಿಗಳಿಗೆ 3ನೇ ಕಂತಿನ ನವೀಕರಣ ಸಾಲ ಹಾಗೂ 2023-24 ನೇ ಸಾಲಿನಲ್ಲಿ ಸಾಲ ಪಡೆದ ವಿದ್ಯಾರ್ಥಿಗಳಿಗೆ 2ನೇ ತಿನ ನವೀಕರಣ ಸಾಲ ಮಂಜೂರು ಮಾಡಲು ವ್ಯಾಸಂಗ ದೃಢೀಕರಣ ಮತ್ತು ಹಿಂದಿನ ವರ್ಷದ ಅಂಕಪಟ್ಟಿಯೊಂದಿಗೆ ಅರ್ಜಿ ಸಲ್ಲಿಸುವುದು.

ಇದನ್ನೂ ಓದಿ: IBPS Banking Jobs-2024: 5,351 ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ! ದೇಶದ ಒಟ್ಟು 11 ವಿವಿಧ ಬ್ಯಾಂಕ್ ಗಳಲ್ಲಿ ಉದ್ಯೋಗವಕಾಶ!

C) ವಿದೇಶ ವಿದ್ಯಾವಿಕಾಸ ಯೋಜನೆ(Fresh Students):

ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಅವರ ಕುಟುಂಬ ವಾರ್ಷಿಕದ ಆದಾಯ ರೂ.8.00 ಲಕ್ಷಗಳ ಮಿತಿಯಲ್ಲಿರುವ ವಿದ್ಯಾರ್ಥಿಗಳು QS World Ranking 500 ರೊಳಗೆ ಬರುವ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪೋಸ್ಟ್ ಡಾಕ್ಟರಲ್, ಪಿಹೆಚ್ ಡಿ, ಮಾಸ್ಟ‌ರ್ ಡಿಗ್ರಿ ಕೋರ್ಸ್‌ಗಳಲ್ಲಿ ಉನ್ನತ ವ್ಯಾಸಂಗ ಪಡೆಯಲು ವಾರ್ಷಿಕ ಗರಿಷ್ಠ ರೂ.10.00 ಲಕ್ಷಗಳಂತೆ ವರ್ಷದ ಅವಧಿಗೆ ಒಟ್ಟು ರೂ.20.00 ಲಕ್ಷಗಳನ್ನು ಶೂನ್ಯ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು.

D) ವಿದೇಶ ವಿದ್ಯಾವಿಕಾಸ ಯೋಜನೆ (Renewals): 

2022-23 ಮತ್ತು 2023-24 ನೇ ಸಾಲಿನಲ್ಲಿ ಸಾಲ ಪಡೆದ ವಿದ್ಯಾರ್ಥಿಗಳಿಗೆ 2ನೇ ಕಂತಿನ ನವೀಕರಣ ಸಾಲ ಮಂಜೂರು ಮಾಡಲು ವ್ಯಾಸಂಗ ದೃಢೀಕರಣ ಮತ್ತು ಹಿಂದಿನ ವರ್ಷದ ಅಂಕಪಟ್ಟಿಯೊಂದಿಗೆ ಅರ್ಜಿ ಸಲ್ಲಿಸುವುದು.

2) Jeeva jala yojane-ಜೀವಜಲ ಯೋಜನೆ:

ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98,000/- ಹಾಗೂ ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳ ಮಿತಿಯೊಳಗಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ಕೊಳವೆ ಬಾವಿ ಕೊರೆಸುವ ಮುಖೇನ ನೀರಾವರಿ ಸೌಲಭ್ಯ ಒದಗಿಸಲಾಗುವುದು.

ಇದನ್ನೂ ಓದಿ: Business loan application-ಸ್ವ-ಉದ್ಯೋಗ ಮಾಡಲು ಶೇ 4ರ ಬಡ್ಡಿದರದಲ್ಲಿ 2.0 ಲಕ್ಷ ಸಾಲ ಮತ್ತು ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಇತರೇ ಜಿಲ್ಲೆಗಳಲ್ಲಿ ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಒಳಗೆ ಜಮೀನು ಹೊಂದಿರಬೇಕು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ Farmer’s FRUIT ID ಮತ್ತು ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ ಹೊಂದಿರಬೇಕು.

3) Kayaka kirana-ಕಾಯಕ ಕಿರಣ ಯೋಜನೆ:

ವೀರಶೈವ-ಲಿಂಗಾಯತ ಸಮುದಾಯದ ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆಗಳಿಗನುಸಾರ ಈ ಕೆಳಕಂಡಂತೆ ಸಾಲ ಮತ್ತು ಸಹಾಯಧನ ಸೌಲಭ್ಯ ಒದಗಿಸಲಾಗುವುದು.

4) Bojana kendra-ಭೋಜನಾಲಯ ಕೇಂದ್ರ:

ಸಮುದಾಯದ ಜನರು ಹೋಟೆಲ್ (ಖಾನಾವಳಿ) ಉದ್ಯಮ ಕೈಗೊಳ್ಳಲು ಈ ಯೋಜನೆಯಲ್ಲಿ ಸಾಲ ಮತ್ತು ಸಹಾಯಧನ ನೀಡಲಾಗುವುದು. ಹೋಟೆಲ್ ಉದ್ದಿಮೆ ಕೈಗೊಳ್ಳಲು ಘಟಕ ವೆಚ್ಚ ರೂ. 5.00 ಲಕ್ಷ ಇದರಲ್ಲಿ ರೂ.4,60,000/- ಬ್ಯಾಂಕ್ ಸಾಲ ಪಡೆದಿದ್ದಲ್ಲಿ ರೂ. 40,000/- ಸಹಾಯಧನ ನೆರವು ನೀಡಲಾಗುವುದು. ಫಲಾನುಭವಿಗಳು ತಮ್ಮ ಸ್ವಂತ ಹೆಸರಿನಲ್ಲಿ ಕನಿಷ್ಠ 20+30 ಅಳತೆಯುಳ್ಳ ನಿವೇಶನ ಹೊಂದಿರಬೇಕು.

ಇದನ್ನೂ ಓದಿ: Ration card application-ರೇಷನ್ ಕಾರ್ಡ ತಿದ್ದುಪಡಿಗೆ ಈ ದಿನ ಅರ್ಜಿ ಸಲ್ಲಿಸಲು ಅವಕಾಶ!

5) Vibuti ghataka-ವಿಭೂತಿ ನಿರ್ಮಾಣ ಘಟಕ:

ವೀರಶೈವ-ಲಿಂಗಾಯತ ಸಮುದಾಯದವರು ವಿಭೂತಿಯನ್ನು ತಯಾರಿಸುವವರಿಗೆ ಸಾಲ ಮತ್ತು ಸಹಾಯಧನ ನೀಡುವ ಯೋಜನೆ ಇದಾಗಿದೆ. ಕುಟುಂಬದ ವಾರ್ಷಿಕ ವರಮಾನ ರೂ.3.50 ಲಕ್ಷಗಳು ಮತ್ತು 18 ರಿಂದ 55 ವರ್ಷಗಳ ವಯೋಮಿತಿಯಲ್ಲಿರುವವರು ಅರ್ಜಿ ಸಲ್ಲಿಸಬಹುದು. ವಿಭೂತಿ ನಿರ್ಮಾಣ ಘಟಕ ನಿರ್ಮಿಸಲು ಘಟಕ ವೆಚ್ಚ ರೂ. 4.00 ಲಕ್ಷ ಇದರಲ್ಲಿ ರೂ.3,60,000/- ನಿಗಮದಿಂದ ಸಾಲ ಮತ್ತು ರೂ. 40,000/- ಸಹಾಯಧನ ವಾರ್ಷಿಕ ಶೇ.3 ರ ಬಡ್ಡಿದರದಲ್ಲಿ ನೆರವು ನೀಡಲಾಗುವುದು.

6) Swavalambi sarati yojane-ಸ್ವಾವಲಂಭಿ ಸಾರಥಿ ಯೋಜನೆ:

ನಿರುದ್ಯೋಗಿ ಚಾಲಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಾವಲಂಭಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರ ವಾಹನ (ಹಳದಿ ಬೊರ್ಡ್) ಖರೀದಿಗೆ ಪಡೆಯುವ ಸಾಲಕ್ಕೆ ಶೇ.50ರಷ್ಟು ಅಥವಾ ಗರಿಷ್ಠ 3.00 ಲಕ್ಷಗಳ ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು. ಉಳಿದ ಮೊತ್ತವನ್ನು ಬ್ಯಾಂಕ್/ ಹಣಕಾಸು ಸಂಸ್ಥೆಗಳ ಮೂಲಕ ಅವರು ವಿಧಿಸುವ ಚಾಲ್ತಿ ಬಡ್ಡಿದರದಲ್ಲಿ ಸಾಲ ಪಡೆಯುವುದು. ವಯೋಮಿತಿ 21 ರಿಂದ 45 ವರ್ಷಗಳ ವಯೋಮಿತಿಯಲ್ಲಿರುವವರು ಅರ್ಜಿ ಸಲ್ಲಿಸಬಹುದು.

7) self employment loan- ಸ್ವಯಂ ಉದ್ಯೋಗ ಸಾಲ ಯೋಜನೆ: (ವಾಣಿಜ್ಯ ಬ್ಯಾಂಕ್‌ಗಳ ಸಹಯೋಗದೊಂದಿಗೆ)

ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಅವರು ಕೈಗೊಳ್ಳುವ ಕೃಷಿ/ ಕೃಷಿ ಅವಲಂಭಿತ ಚಟುವಟಿಕೆಗಳು, ವ್ಯಾಪಾರ, ಸಾರಿಗೆ ಮತ್ತು ಯಂತ್ರೋಪಕರಣಗಳನ್ನು ಕೊಳ್ಳುವ ಆರ್ಥಿಕ ಚಟುವಟಿಕೆಗಳು/ ಉದ್ಯಮಗಳಿಗೆ ವಾಣಿಜ್ಯ ಬ್ಯಾಂಕ್‌ಗಳ ಮೂಲಕ ಸಾಲ ಪಡೆದಿದ್ದಲ್ಲಿ ನಿಗಮದಿಂದ ಶೇ.20 ರಷ್ಟು ಅಥವಾ ಗರಿಷ್ಠ ರೂ. 1.00 ಲಕ್ಷಗಳ ಸಹಾಯಧನ ಮಂಜೂರು ಮಾಡಲಾಗುವುದು.

ಇದನ್ನೂ ಓದಿ: Borewell Subsidy- ಬೋರ್ವೆಲ್ ಕೊರೆಸಲು ರೂ 4.25 ಲಕ್ಷ ಸಬ್ಸಿಡಿ ಪಡೆಯಲು ಆನ್ಲೈನ್ ಅರ್ಜಿ ಆಹ್ವಾನ!

8) ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆ

ವಿದ್ಯಾವಂತ ಯುವಜನರನ್ನು ಗುರುತಿಸಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ತರಬೇತಿಯನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ITIS, GTTC, KGTTI, ATDC, VTU ಮೂಲಕ ವಿವಿಧ ಅಲ್ಪಾವಧಿ ಮತ್ತು ಉತ್ಕೃಷ್ಟ ಕೌಶಲ್ಯ ತರಬೇತಿಯನ್ನು ನೀಡಿ ಅವರ ಉದ್ಯೋಗ ಸಾಮರ್ಥ್ಯವನ್ನು ಹಾಗೂ ಸಾಮಾಜಿಕ/ ಆರ್ಥಿಕ ಸ್ಥಿತಿಗತಿಗಳನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಉದ್ಯೋಗಮುಖಿಗಳನ್ನಾಗಿಸುವುದು. I

Eligibility details- ಅರ್ಹತೆಗಳು: 

10ನೇತರಗತಿ/ದ್ವಿತೀಯ ಪಿ.ಯು.ಸಿ/ಡಿಪ್ಲೋಮ/ಪದವಿ/ಇಂಜಿನಿಯರಿಂಗ್ ವ್ಯಾಸಂಗವನ್ನು ಪೂರ್ಣಗೊಳಿಸಿರಬೇಕು, ಅರ್ಜಿದಾರರ ವಯಸ್ಸು 18 ರಿಂದ 25 ವರ್ಷಗಳ ಒಳಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ/ಆದಾಯ ರೂ.8.00 ಲಕ್ಷಗಳಿಗಿಂತ ಕಡಿಮೆ ಇರಬೇಕು. ಅರ್ಜಿದಾರರು https://bcwd.kaushalkar.com/ ಜಾಲತಾಣದೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.

How to apply-ಎಲ್ಲಿ ಅರ್ಜಿ ಸಲ್ಲಿಸಬೇಕು?

ಈ ಮೇಲೆ ತಿಳಿಸಿರುವ ಎಲ್ಲಾ ಯೋಜನೆಗಳಿಗೆ ಸೇವಾ ಸಿಂಧೂ ಪೋರ್ಟಲ್ ಮತ್ತು ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ್ ಒನ್ ಕೇಂದ್ರವನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

last date for lingayat nigama yojana application- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಎಲ್ಲಾ 8 ಯೋಜನೆಗಳಿಗೆ ಅರ್ಜಿ ಸಲ್ಲಿಸಲು 31 ಆಗಸ್ಟ್ 2024 ಕೊನೆಯ ದಿನಾಂಕವಾಗಿರುತ್ತದೆ.

ನಿಗಮದ ವಿಶೇಷ ಸೂಚನೆಗಳು:

ಅರ್ಜಿದಾರರು ತಮ್ಮ ಆಧಾ‌ರ್ ಸಂಖ್ಯೆಗೆ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿರಬೇಕು.

ನಿಗಮವು ಅನುಷ್ಠಾನಗೊಳಿಸುವ ಈ ಮೇಲ್ಕಂಡ ಯೋಜನೆಗಳಲ್ಲಿ ಸರ್ಕಾರದ ವಿವೇಚನಾ ಕೋಟಾ ಮತ್ತು ನಿಗಮದ ಅಧ್ಯಕ್ಷರು/ ನಿರ್ದೇಶಕರ ಮಂಡಳಿಯ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯಬಯಸುವವರೂ ಸಹ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸುವುದು. ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಮೇಲ್ಕಂಡ ಯಾವುದಾದರೂ ಒಂದು ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.

ಅರ್ಹ ಫಲಾಪೇಕ್ಷಿಗಳು ಗ್ರಾಮ ಒನ್/ ಬೆಂಗಳೂರು ಒನ್/ ಕರ್ನಾಟಕ ಒನ್ ನಾಗರೀಕ ಸೇವಾ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಾಗಿರುತ್ತದೆ.

ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

2023-24 ನೇ ಸಾಲಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗದವರು ಆದೇ ಯೋಜನೆಗೆ ಈ ವರ್ಷ ಮರುಅರ್ಜಿ ಸಲ್ಲಿಸುವ ಅಗತ್ಯತೆ ಇರುವುದಿಲ್ಲ.

Lingayat nigama website-ಹೆಚ್ಚಿನ ಮಾಹಿತಿ ಪಡೆಯಲು ವೆಬ್ಸೈಟ್ ಲಿಂಕ್: 

ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: Download Now

ನಿಗಮದ ಅಧಿಕೃತ ವೆಬ್ಸೈಟ್ ಲಿಂಕ್: Click here

ನಿಗಮದ ದೂರವಾಣಿ ಸಂಖ್ಯೆ:- 080 22865522/ 9900012351 ಅಥವಾ ಜಿಲ್ಲಾ ವ್ಯವಸ್ಥಾಪಕರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ಕಛೇರಿಗಳನ್ನು ಸಂಪರ್ಕಿಸಬಹುದಾಗಿದೆ.

Most Popular

Latest Articles

Related Articles