Home Blog

APAAR ID Card-ವಿದ್ಯಾರ್ಥಿಗಳಿಗೆ APAAR ID ಕಾರ್ಡ್‌! ಎಲ್ಲಿ ಪಡೆಯಬೇಕು? ಇಲ್ಲಿದೆ ಸಂಪೂರ್ಣ ವಿವರ!

0

ಕೇಂದ್ರ ಸರಕಾರದ ಶಿಕ್ಷಣ ಸಚಿವಾಲಯವು ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ ಮಾದರಿಯಲ್ಲಿ APAAR ಕಾರ್ಡ ಅನ್ನು ವಿತರಣೆ ಮಾಡಲು ನೂತನ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು ಈ ಯೋಜನೆಯ ಕುರಿತು ಸಂಪೂರ್ಣ ವಿವರವನ್ನು ಇಲ್ಲಿ ವಿವರಿಸಲಾಗಿದೆ.

ಅನೇಕ ಪೋಷಕರಿಗೆ ಏನಿದು APAAR ಕಾರ್ಡ? ಇದನ್ನು ಪಡೆಯುವುದರ ಪ್ರಯೋಜನಗಳೇನು? ಇತ್ಯಾದಿ ಮಾಹಿತಿಯ ಕುರಿತು ಅನೇಕ ಗೊಂದಲಗಳಿದ್ದು ಇವುಗಳಿಗೆ ತೆರೆ ಎಳೆಯಲು ಈ ಅಂಕಣದಲ್ಲಿ APAAR ಎಂದರೇನು? APAAR ಕಾರ್ಡ ಪಡೆಯುವುದು ಕಡ್ಡಾಯವೇ? APAAR ಕಾರ್ಡ ಪಡೆಯುವು ವಿಧಾನ ಹೇಗೆ ಎನ್ನುವ ಮಾಹಿತಿ ಸೇರಿದಂತೆ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Bima Sakhi-LIC ಯಿಂದ ಬಿಮಾ ಸಖಿ ಹೊಸ ಯೋಜನೆ! ಮಾಸಿಕ ₹7,000 ಸ್ಟೈಪೆಂಡ್!

APAAR ಎಂದರೇನು?

APAAR ಆಟೋಮ್ಯಾಟಿಕ್‌ ಪರ್ಮನೆಂಟ್ ಅಕಾಡೆಮಿಕ್ ಅಕೌಂಟ್ ರಿಜಿಸ್ಟ್ರಿ (Automatic Permanent Academic Account Registry) ಎಂದು ಪೂರ್ಣ ಅರ್ಥವಾಗಿದ್ದು ಇದನ್ನು ನೂತನವಾಗಿ ಕೇಂದ್ರ ಸರಕಾರಿಂದ ಪರಿಚಯಿಸಲಾಗುತ್ತಿದೆ. ಆಧಾರ್ ಕಾರ್ಡ ಮಾದರಿಯಲ್ಲಿ ಒಟ್ಟು 12-ಅಂಕಿಯ ವಿಶಿಷ್ಟ ಗುರುತಿನ ಚೀಟಿ ಇದಾಗಿರುತ್ತದೆ. ಈ ಕಾರ್ಡ ಅನ್ನು ಭಾರತದ ಎಲ್ಲಾ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. 2020 ರ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಪತ್ತೆಹಚ್ಚಲು ಮತ್ತು ಅವರ ಕಲಿಕೆಯ ಪ್ರಯಾಣದ ಉದ್ದಕ್ಕೂ ಅವರ ಶಿಕ್ಷಣವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

ಇದು ಡಿಜಿಟಲೀಕರಣ, ವೈಯಕ್ತಿಕರಿಸಿದ ಕಲಿಕೆ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು (OoSC) ಶಾಲೆಗಳಿಗೆ ಮರಳಿ ತರುವ ಮೂಲಕ ಶಿಕ್ಷಣದ ಸಾರ್ವತ್ರಿಕೀಕರಣದಂತಹ ವಿಶಾಲ ಗುರಿಗಳಲ್ಲಿ ಬೆಂಬಲಿಸುತ್ತದೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಮಾರ್ಗಗಳಲ್ಲಿ ಹೆಚ್ಚು ಪರಿಣಾಮಕಾರಿ ಮಧ್ಯಸ್ಥಿಕೆಗಳನ್ನು ಸಕ್ರಿಯಗೊಳಿಸುತ್ತದೆ ಎಂದು ಅಧಿಕೃತ ಕೇಂದ್ರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Vehicle ownership transfer-ವಾಹನ ಮಾರಿದ 14 ದಿನದ ಒಳಗಾಗಿ ಮಾಲೀಕತ್ವ ವರ್ಗಾವಣೆ ಕಡ್ಡಾಯ!

Apaar Card Benefits

APAAR ಕಾರ್ಡ ಪಡೆಯುವುದು ಕಡ್ಡಾಯವೇ?

ವಿದ್ಯಾರ್ಥಿಗಳು APAAR ಕಾರ್ಡ ಅನ್ನು ಹೊಂದುವುದನ್ನು ಕೇಂದ್ರದಿಂದ ಕಡ್ಡಾಯ ಮಾಡಿರುವುದಿಲ್ಲ, APAAR ಶೈಕ್ಷಣಿಕ ಟ್ರ್ಯಾಕಿಂಗ್ ಮತ್ತು ನಮ್ಯತೆಯನ್ನು ಹೆಚ್ಚಿಸಲು ಮೂಲಾಧಾರದ ಉಪಕ್ರಮವಾಗಿದ್ದರೂ, APAAR ವ್ಯವಸ್ಥೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ. ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಸಮಗ್ರ ಮೌಲ್ಯಮಾಪನ ಮತ್ತು ಕ್ರೆಡಿಟ್ ನಿರ್ವಹಣೆಯಂತಹ ಅದರ ವೈಶಿಷ್ಟ್ಯಗಳಿಂದ ಪ್ರಯೋಜನ ಪಡೆಯಲು ಈ ವ್ಯವಸ್ಥೆಯನ್ನು ಬಳಸಿಕೊಳ್ಳಲು ಆಯ್ಕೆ ಮಾಡಬಹುದು.

APAAR ಕಾರ್ಡ ಪಡೆಯುವು ವಿಧಾನ:

ವಿದ್ಯಾರ್ಥಿಯ ಪೋಷಕರು ನಿಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವ ಶಿಕ್ಷಣ ಸಂಸ್ಥೆಯನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ಮಾಹಿತಿಯನ್ನು ಒದಗಿಸಿ ಶಾಲೆಗಳ ಮೂಲಕ ಈ ಕಾರ್ಡ ಅನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Kera suraksha insurance-ತೆಂಗಿನ ಮರ ಏರುವವರಿಗೆ ₹7 ಲಕ್ಷ ವಿಮಾ ಸೌಲಭ್ಯವನ್ನು ಪಡೆಯಲು ಅರ್ಜಿ!

APAARನ ಪ್ರಯೋಜನಗಳು:

1) ವಿದ್ಯಾರ್ಥಿಗಳ ಚಲನಶೀಲತೆಯನ್ನು ಸುಲಭಗೊಳಿಸಿ:

ವಿವಿಧ ಕಾರಣಗಳಿಗಾಗಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಸಮಯದಲ್ಲಿ ಅನೇಕ ಸಂಸ್ಥೆಗಳಿಗೆ ಹಾಜರಾಗುವುದು ಸಾಮಾನ್ಯವಾಗಿದೆ, APAAR ವಿವಿಧ ರಾಜ್ಯಗಳು ಮತ್ತು ಮಂಡಳಿಗಳಲ್ಲಿ ವಿದ್ಯಾರ್ಥಿಗಳಿಗೆ ಏಕೀಕೃತ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ, ಅವರು ಒಂದು ಸಂಸ್ಥೆಯಿಂದ ಇನ್ನೊಂದಕ್ಕೆ ಚಲಿಸುವಾಗ ಸುಗಮ ಪರಿವರ್ತನೆಗಳು ಮತ್ತು ಸ್ಥಿರವಾದ ದಾಖಲೆಗಳನ್ನು ಖಾತ್ರಿಪಡಿಸುತ್ತದೆ.

2) ವರ್ಧಿತ ಡೇಟಾ ನಿಖರತೆ ಮತ್ತು ಸ್ಥಿರತೆ:

APAAR ವಿದ್ಯಾರ್ಥಿ ದಾಖಲೆಗಳ ಏಕೀಕೃತ ಮತ್ತು ವಿಶ್ವಾಸಾರ್ಹ ಡೇಟಾಬೇಸ್ ಅನ್ನು ಒದಗಿಸುತ್ತದೆ, ಬಹು ನಮೂದುಗಳಿಂದಾಗಿ ವ್ಯತ್ಯಾಸಗಳು ಮತ್ತು ದೋಷಗಳನ್ನು ಕಡಿಮೆ ಮಾಡುತ್ತದೆ. ಈ ಸ್ಥಿರತೆಯು ಶೈಕ್ಷಣಿಕ ದತ್ತಾಂಶವು ನಿಖರವಾಗಿದೆ ಮತ್ತು ನವೀಕೃತವಾಗಿದೆ ಎಂದು ಖಚಿತಪಡಿಸುತ್ತದೆ, ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪ್ರಯೋಜನವನ್ನು ನೀಡುತ್ತದೆ.

ಇದನ್ನೂ ಓದಿ: Property rights-ಸುಪ್ರೀಂ ಕೋರ್ಟನಿಂದ ಮಹತ್ವದ ತೀರ್ಪು ಪ್ರಕಟ! ತಂದೆ-ತಾಯಿಯನ್ನು ನೋಡಿಕೊಳ್ಳದವರಿಗಿಲ್ಲ ಆಸ್ತಿ!

3) ಶೈಕ್ಷಣಿಕ ದಾಖಲೆಗಳ ಸಂಗ್ರಹಣೆ:

APAAR ಸೀಡೆಡ್ ಡಿಜಿ ಲಾಕರ್ ಖಾತೆಗಳನ್ನು ವಿದ್ಯಾರ್ಥಿಗಳು ತಮ್ಮ ಎಲ್ಲಾ ಶೈಕ್ಷಣಿಕ ಸಾಧನೆಗಳನ್ನು ಡಿಜಿಟಲ್ ರೀತಿಯಲ್ಲಿ ಸಂಗ್ರಹಿಸಲು ಮತ್ತು ಸುರಕ್ಷಿತ ಸ್ಥಳದಲ್ಲಿ ಹಂಚಿಕೊಳ್ಳಲು ಹತೋಟಿಗೆ ತರಬಹುದು.

4) ಶಿಕ್ಷಣ ಹಕ್ಕು ಕಾಯಿದೆ, 2009 ರ ಅನುಷ್ಠಾನ:

6 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ RTE ಕಾಯಿದೆಯ ಆದೇಶದ ಅನುಸರಣೆಯನ್ನು ಖಾತ್ರಿಪಡಿಸುವ ಮೂಲಕ ಪ್ರತಿ ಮಗುವಿನ ದಾಖಲಾತಿ, ಹಾಜರಾತಿ ಮತ್ತು ಶೈಕ್ಷಣಿಕ ಪ್ರಗತಿಯ ಟ್ರ್ಯಾಕಿಂಗ್ ಅನ್ನು APAAR ಸುಗಮಗೊಳಿಸುತ್ತದೆ.

ಇದನ್ನೂ ಓದಿ: Yashaswini Card-ಯಶಸ್ವಿನಿ ಕಾರ್ಡ ಬಳಸಿ ಯಾವೆಲ್ಲ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದು?

5) ಡ್ರಾಪ್ ಔಟ್ ತಡೆಗಟ್ಟುವಿಕೆ:

ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಮೇಲ್ವಿಚಾರಣೆ ಮಾಡುವ ಮೂಲಕ, APAAR ಅಪಾಯದಲ್ಲಿರುವ ವಿದ್ಯಾರ್ಥಿಗಳನ್ನು ಗುರುತಿಸಲು ಸಹಾಯ ಮಾಡುತ್ತದೆ, ಶಾಲಾ ವ್ಯವಸ್ಥೆಯಿಂದ ಹೊರಗುಳಿಯುವುದನ್ನು ತಡೆಯಲು ಸಮಯೋಚಿತ ಮಧ್ಯಸ್ಥಿಕೆ ಸಾಧ್ಯ ಎಂದು ಖಚಿತಪಡಿಸುತ್ತದೆ.

APAAR ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಲಿಂಕ್ ಗಳು-

APAAR ಕಾರ್ಡ ಕುರಿತು ಅಧಿಕೃತ ಕನ್ನಡ ಕೈಪಿಡಿ ಡೌನ್ಲೋಡ್ ಲಿಂಕ್- Download Now
ಅಧಿಕೃತ ವೆಬ್ಸೈಟ್- Click here
ಸಹಾಯವಾಣಿ/Helpline Number- 18008893511

Bima Sakhi-LIC ಯಿಂದ ಬಿಮಾ ಸಖಿ ಹೊಸ ಯೋಜನೆ! ಮಾಸಿಕ ₹7,000 ಸ್ಟೈಪೆಂಡ್!

0

ಭಾರತೀಯ ಜೀವ ವಿಮಾ ನಿಗಮದಿಂದ(LIC) ನೂತನ ಯೋಜನೆಯನ್ನು ಅರ್ಥಿಕವಾಗಿ ಮಹಿಳೆಯರ ಬೆಳವಣಿಗೆಗೆ ನೆರವು ನೀಡಲು “ಬಿಮಾ ಸಖಿ”(Bima Sakhi Yojana) ಎನ್ನುವ ಹೊಸ ಯೋಜನೆಯನ್ನು ಪರಿಚಯಿಸಿದ್ದು ಈ ಯೋಜನೆಯ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಮನೆಯಲ್ಲೇ ಇದ್ದುಕೊಂಡು ಬಿಡುವಿನ ಸಮಯದಲ್ಲಿ ಏನಾದರು ಒಂದು(Lic Bima Sakhi) ಕೆಲಸ ಮಾಡಿ ಆದಾಯ ಗಳಿಕೆ ಮಾಡಿಕೊಳ್ಳಬೇಕು ಎನ್ನುವ ಆಸೆ ಇದ್ದವರು ಹಾಗೂ ಉದ್ಯೋಗಿಗಳು ಪಾರ್ಟ್ ಟೈಮ್ ನಲ್ಲಿ ಹಣ ಗಳಿಸುವ ಇಚ್ಚೆ ಹೊಂದಿರುವವರು, ವಿದ್ಯಾರ್ಥಿನಿಯರು, ಗೃಹಿಣಿಯರು, ಸ್ವಂತ ಉದ್ಯೋಗ ಮಾಡುತ್ತಿರುವವರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

ಇದನ್ನೂ ಓದಿ: Vehicle ownership transfer-ವಾಹನ ಮಾರಿದ 14 ದಿನದ ಒಳಗಾಗಿ ಮಾಲೀಕತ್ವ ವರ್ಗಾವಣೆ ಕಡ್ಡಾಯ!

“ಬಿಮಾ ಸಖಿ” ಯೋಜನೆಯಡಿ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? “ಬಿಮಾ ಸಖಿ” ಆಗುವುದರಿಂದ ಪ್ರಯೋಜನಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ. ಈ ಮಾಹಿತಿ ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

Bima Sakhi Benefits-ಬಿಮಾ ಸಖಿ ಆಗುವುದರಿಂದ ಪ್ರಯೋಜನಗಳು:

ಭಾರತೀಯ ಜೀವ ವಿಮಾ ನಿಗಮವು ಮಹಿಳೆಯರಿಗೆ ಅರ್ಥಿಕವಾಗಿ ಸಬಲರಾಗಲು ಉತ್ತಮ ಜೀವನವನ್ನು ನಡೆಸಲು ನೆರವು ನೀಡಲು ಬಿಮಾ ಸಖಿ ಯೋಜನೆಯನ್ನು ನೂತನವಾಗಿ ಜಾರಿಗೆ ತಂದಿದ್ದು ಯಾರೆಲ್ಲ ಬಿಮಾ ಸಖಿಯಾಗಿ ಆಯ್ಕೆ ಅಗುತ್ತಾರೋ ಅವರಿಗೆ ನಿಗಮದಿಂದ ಪಾಲಿಸಿ ಕಮಿಷನ್, ಬೋನಸ್ ಕಮಿಷನ್, ರಿನಿವಲ್ ಕಮಿಷನ್ ಹಾಗೂ ಎಲ್ಲ ಇತರ 37 ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ.

ಮಹಿಳೆಯರಿಗೆ ಈ ಯೋಜನೆಯ ಮೂಲಕ ಪ್ರಾರಂಭಿಕ ಹಂತದಲ್ಲಿ ಪ್ರೋತ್ಸಾಹ ನೀಡಲು ಮೊದಲ ವರ್ಷ ತಿಂಗಳಿಗೆ ₹7,000 ಹಾಗೂ ಎರಡನೇ ವರ್ಷ ಪ್ರತಿ ತಿಂಗಳಿಗೆ ₹6,000 ಮತ್ತು ಮೂರನೇ ವರ್ಷ ಪ್ರತಿ ತಿಂಗಳಿಗೆ ₹5,000 ಗೌರವಧನವನ್ನು ನೀಡಲಾಗುತ್ತದೆ.

ಇದನ್ನೂ ಓದಿ: Kera suraksha insurance-ತೆಂಗಿನ ಮರ ಏರುವವರಿಗೆ ₹7 ಲಕ್ಷ ವಿಮಾ ಸೌಲಭ್ಯವನ್ನು ಪಡೆಯಲು ಅರ್ಜಿ!

LIC agent

Who Can apply For Bima Sakhi-ಬಿಮಾ ಸಖಿ ಆಗಲು ಅರ್ಜಿ ಸಲ್ಲಿಸಲು ಅರ್ಹರು:

  • ಅರ್ಜಿದಾರರು ಭಾರತೀಯ ನಿವಾಸಿಯಾಗಿರಬೇಕು.
  • ಅರ್ಜಿದಾರರ ವಯಸ್ಸು 18 ರಿಂದ 70 ವರ್ಷದ ಒಳಗಿರಬೇಕು.
  • ಅರ್ಜಿದಾರರು 10 ನೇ ತರಗತಿಯನ್ನು ಪಾಸಾಗಿರಬೇಕು.
  • ಹೆಣ್ಣು ಮಕ್ಕಳಿಗೆ ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
  • ಸರಕಾರಿ ನೌಕರಿಯಲ್ಲಿರುವವರು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

Documents For Bima Sakhi-ಅರ್ಜಿ ಸಲ್ಲಿಸಲು ದಾಖಲಾತಿಗಳು:

A) ಅರ್ಜಿದಾರರ ಆದಾರ್ ಕಾರ್ಡ ಪ್ರತಿ
B) ಪಾನ್ ಕಾರ್ಡ
C) SSLC ಅಂಕಪಟ್ಟಿ
D) ಪೋಟೋ
E) ರದ್ದಾದ ಚೆಕ್ ಅಥವಾ ಬ್ಯಾಂಕ್ ಪಾಸ್ ಬುಕ್ ಮುಖಪುಟದ ಪ್ರತಿ
F) ಮೊಬೈಲ್ ನಂಬರ್

ಇದನ್ನೂ ಓದಿ: Property rights-ಸುಪ್ರೀಂ ಕೋರ್ಟನಿಂದ ಮಹತ್ವದ ತೀರ್ಪು ಪ್ರಕಟ! ತಂದೆ-ತಾಯಿಯನ್ನು ನೋಡಿಕೊಳ್ಳದವರಿಗಿಲ್ಲ ಆಸ್ತಿ!

Online Application For BIMA SAKHI-ಆನ್ಲೈನ್ ನಲ್ಲಿ ಭೀಮ ಸಖಿಗೆ ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳನ್ನು ತಯಾರಿ ಮಾಡಿಕೊಂಡು ಭಾರತೀಯ ಜೀವ ವಿಮಾ ನಿಗಮದ(LIC) ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Step-1: ಮೊದಲಿಗೆ ಈ ಲಿಂಕ್ Bima Sakhi Application ಮೇಲೆ ಕ್ಲಿಕ್ ಮಾಡಿ ಅಧಿಕೃತ LIC ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Yashaswini Card-ಯಶಸ್ವಿನಿ ಕಾರ್ಡ ಬಳಸಿ ಯಾವೆಲ್ಲ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದು?

Bima Sakhi application

Step-2: ಬಳಿಕ ಈ ಪೇಜ್ ನಲ್ಲಿ ಕೆಳಗೆ ಕಾಣುವ “Click Here For Bima sakhi” ಬಟನ್ ಮೇಲೆ ಕ್ಲಿಕ್ ಮಾಡಿದರೆ ಭೀಮ ಸಖಿ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

Step-3: ಇಲ್ಲಿ ಅರ್ಜಿದಾರರು ತಮ್ಮ ವೈಯಕ್ತಿಕ ವಿವರ ಮತ್ತು ಇನ್ನಿತರೆ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇನ್ನು ಹೆಚ್ಚಿನ ಮಾಹಿತಿ ಪಡೆಯಲು:

LIC Website-ಅಧಿಕೃತ ವೆಬ್ಸೈಟ್-Click here
Bima Sakhi Application link-ಅರ್ಜಿ ಸಲ್ಲಿಸಲು- Apply Now
Helpline-ಸಹಾಯವಾಣಿ- +91-8976862090(WhatsApp), +91-22-68276827(Call)

Vehicle ownership transfer-ವಾಹನ ಮಾರಿದ 14 ದಿನದ ಒಳಗಾಗಿ ಮಾಲೀಕತ್ವ ವರ್ಗಾವಣೆ ಕಡ್ಡಾಯ!

0

ಬೈಕ್ ಸೇರಿದಂತೆ ಇನ್ನಿತರ ವಾಹನಗಳನ್ನು ಎರಡನೇ ವ್ಯಕ್ತಿಗೆ ಮಾರಾಟ ಮಾಡಿದ ಬಳಿಕ ಆ ವಾಹನದ ಮಾಲೀಕತ್ವ(Vehicle ownership transfer) ವನ್ನು ಇಂತಿಷ್ಟು ದಿನದ ಒಳಗಾಗಿ ಖರೀದಿ ಮಾಡಿದ ವ್ಯಕ್ತಿಯ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಮೋಟಾರು ವಾಹನಗಳ ಇಲಾಖೆಯು ಈ ಕುರಿತು ನೂತನ ನಿಯಮವನ್ನು ಜಾರಿಗೆ ತರಲು ಸಿದ್ದತೆಯನ್ನು ನಡೆಸಿದೆ.

ಈಗಾಗಲೇ ಬಹುತೇಕ ಜನರಿಗೆ ಈ ಬಗ್ಗೆ ತಿಳಿದಿದ್ದು ಒಮ್ಮೆ ಹಳೆ ವಾಹನಗಳನ್ನು ಎರಡನೇ ವ್ಯಕ್ತಿಗೆ ಮಾರಾಟ ಮಾಡಿದ ಬಳಿಕ ಮಾಲೀಕತ್ವವನ್ನು ಆ ವ್ಯಕ್ತಿಯ ಹೆಸರಿಗೆ ಬದಲಾವಣೆ ಮಾಡದಿದ್ದಲ್ಲಿ ಅನೇಕ ತೊಂದರೆಗಳನ್ನು ಮೂಲ ಮಾಲೀಕರು ಅನುಭವಿಸಬೇಕಾಗುತ್ತದೆ ಈ ಕಿರಿಕಿರಿಯನ್ನು ತಪ್ಪಿಸಲು ಹಾಗೂ ಅನಗತ್ಯ ಕ್ರಿಮಿನಲ್ ಕೆಲಸಗಳಿಗೆ ವಾಹನ ಬಳಕೆಯನ್ನು ಮಾಡುವುದನ್ನು ತಪ್ಪಿಸಲು ಯಾರು ವಾಹನ ಬಳಕೆ ಮಾಡುತ್ತಾರೋ ಅವರ ಹೆಸರಿಗೆ ವಾಹನ ನೊಂದಣಿ ಮಾಡಿಕೊಳ್ಳಲು ಇಂತಿಷ್ಟು ದಿನಗಳನ್ನು ನಿಗದಿಪಡಿಸಲು ಮುಂದಾಗಿದೆ.

ಇದನ್ನೂ ಓದಿ: Kera suraksha insurance-ತೆಂಗಿನ ಮರ ಏರುವವರಿಗೆ ₹7 ಲಕ್ಷ ವಿಮಾ ಸೌಲಭ್ಯವನ್ನು ಪಡೆಯಲು ಅರ್ಜಿ!

ವಾಹನದ ಮೂಲ ಮಾಲೀಕರು ಮತ್ತೊಬ್ಬರಿಗೆ ವಾಹನವನ್ನು ಮಾರಾಟ ಮಾಡಿದ ಬಳಿಕ ಅವರ ಹೆಸರಿಗೆ ಆ ವಾಹನದ ಮಾಲೀಕತ್ವವನ್ನು ವರ್ಗಾವಣೆ ಮಾಡದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಈ ಕುರಿತು ಕೇಂದ್ರ ಸರಕಾರದ ಮೋಟಾರು ವಾಹನಗಳ ಇಲಾಖೆಯು ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.

Vehicle ownership transfer-ವಾಹನ ಮಾರಿದ 14 ದಿನದ ಒಳಗಾಗಿ ಮಾಲೀಕತ್ವ ವರ್ಗಾವಣೆ ಕಡ್ಡಾಯ:

ಕೇಂದ್ರ ಸರಕಾರದ ಮೋಟಾರು ವಾಹನಗಳ ಇಲಾಖೆಯ ನೂತನ ನಿಯಮದ ಅನ್ವಯ ಒಬ್ಬ ವ್ಯಕ್ತಿಯು ತನ್ನ ವಾಹನವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ ಬಳಿಕ ಈ ಹಿಂದೆ ಮಾಲೀಕತ್ವವನ್ನು ವರ್ಗಾವಣೆ ಮಾಡಬೇಕು ಎಂದು ಸೂಚಿಸಲಾಗಿತ್ತು ಆದರೆ ಈಗ 14 ದಿನದ ಒಳಗಾಗಿ ವಾಹನದ ಮಾಲೀಕತ್ವವನ್ನು ಖರೀದಿ ಮಾಡಿದ ವ್ಯಕ್ತಿಯ ಹೆಸರಿಗೆ ವರ್ಗಾವಣೆ ಮಾಡಲು ಸೂಕ್ತ ಅರ್ಜಿಯನ್ನು ಸಲ್ಲಿಸಿ ಮಾಲೀಕತ್ವವನ್ನು ಖರೀದಿ ಮಾಡಿದವರ ಹೆಸರಿಗೆ ವರ್ಗಾವಣೆ ಮಾಡಬೇಕು ಎಂದು ನೂತನ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.

ಮಾಲೀಕತ್ವ ವರ್ಗಾವಣೆ ಮಾಡದಿದ್ದರೆ ಮೂಲ ಮಾಲೀಕರೆ ಹೊಣೆ:

ಒಂದೊಮ್ಮೆ ನಿರ್ಲಕ್ಷ ಮಾಡಿ ವಾಹನವನ್ನು ಮಾರಾಟ ಮಾಡಿದ ಬಳಿಕ ಅ ವಾಹನದ ಮಾಲೀಕತ್ವವನ್ನು ಖರೀದಿ ಮಾಡಿದ ವ್ಯಕ್ತಿಯ ಹೆಸರಿಗೆ ವರ್ಗಾವಣೆ ಮಾಡದಿದ್ದರೆ ಆ ವ್ಯಕ್ತಿಯು ಯಾವುದೇ ಬಗ್ಗೆಯ ಅಪಘಾತ ಇನ್ನಿತರೆ ಕ್ರಿಮಿನಲ್ ಕೆಲಸಕ್ಕೆ ವಾಹನವನ್ನು ಬಳಕೆ ಮಾಡಿದರೆ ಮೂಲ ಮಾಲೀಕರೇ ಇದಕ್ಕೆ ಹೊಣೆಯಾಗುತ್ತಾರೆ ಎಂದು ಈಗಾಗಲೇ ಅನೇಕ ಜನರಿಗೆ ಈ ನಿಯಮದ ಕುರಿತು ಮಾಹಿತಿ ಇರುತ್ತದೆ ಅದ್ದರಿಂದ ತಪ್ಪದೇ ವಾಹನವನ್ನು ಮಾರಾಟ ಮಾಡಿದ ಬಳಿಕ ಶೀಘ್ರದಲ್ಲಿ ಮಾಲೀಕತ್ವವನ್ನು ವರ್ಗಾವಣೆ ಮಾಡುವುದು ಸೂಕ್ತ.

ಇದನ್ನೂ ಓದಿ: Property rights-ಸುಪ್ರೀಂ ಕೋರ್ಟನಿಂದ ಮಹತ್ವದ ತೀರ್ಪು ಪ್ರಕಟ! ತಂದೆ-ತಾಯಿಯನ್ನು ನೋಡಿಕೊಳ್ಳದವರಿಗಿಲ್ಲ ಆಸ್ತಿ!

Vehicle ownership transfer

Vehicle ownership transfer application-ವಾಹನ ಮಾಲೀಕತ್ವ ಬದಲಾವಣೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?

ವಾಹನದ ಮಾಲೀಕತ್ವ ಬದಲಾವಣೆಗೆ ಅರ್ಜಿ ಸಲ್ಲಿಸಲು ಇಚ್ಚೆ ಹೊಂದಿರುವವರು ನಿಮ್ಮ ತಾಲ್ಲೂಕಿನ/ಜಿಲ್ಲೆಯ RTO ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Documents for Vehicle ownership transfer-ಅರ್ಜಿ ಸಲ್ಲಿಸಲು ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
2) ವಾಹನದ RC
3) ಇನ್ಸೂರೆನ್ಸ್ ಪ್ರಮಾಣ ಪತ್ರ
4) ಹೊಗೆ ಪ್ರಮಾಣ ಪತ್ರ
5) ಲೋನ್ ಕ್ಲಿಯೆರೆನ್ಸ್ ಪ್ರಮಾಣ ಪತ್ರ
6) NOC ಪ್ರಮಾಣ ಪತ್ರ(ಅನ್ವಯಿಸಿದಲ್ಲಿ ಮಾತ್ರ)
7) ಮೊಬೈಲ್ ನಂಬರ್

ಇದನ್ನೂ ಓದಿ: Yashaswini Card-ಯಶಸ್ವಿನಿ ಕಾರ್ಡ ಬಳಸಿ ಯಾವೆಲ್ಲ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದು?

For more information- ಇನ್ನು ಹೆಚ್ಚಿನ ಮಾಹಿತಿಗಾಗಿ:

ಕೇಂದ್ರದ ಮೋಟಾರು ವಾಹನಗಳ ಇಲಾಖೆ- CLICK HERE
ರಾಜ್ಯದ ಮೋಟಾರು ವಾಹನಗಳ ಇಲಾಖೆ- CLICK HERE

Kera suraksha insurance-ತೆಂಗಿನ ಮರ ಏರುವವರಿಗೆ ₹7 ಲಕ್ಷ ವಿಮಾ ಸೌಲಭ್ಯವನ್ನು ಪಡೆಯಲು ಅರ್ಜಿ!

ಕೇಂದ್ರ ಸರಕಾರದಿಂದ ತೆಂಗಿನ ಮರ ಏರುವವರಿಗೆ ವಿಮೆ ಸೌಲಭ್ಯ ಒದಗಿಸಲು “ಕೇರಾ ಸುರಕ್ಷಾ”(Kera suraksha insurance) ವಿಮಾ ಯೋಜನೆಯನ್ನು ಅನುಷ್ಥಾನ ಮಾಡಲಾಗುತ್ತಿದ್ದು, ಈ ಯೋಜನೆಯ ಕುರಿತು ಅನೇಕ ಜನರಿಗೆ ಮಾಹಿತಿ ಇಲ್ಲದೇ ಇರುವ ಕಾರಣ ಇದರ ಬಗ್ಗೆ ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಕೇಂದ್ರದ ತೆಂಗು ಅಭಿವೃದ್ದಿ ಮಂಡಳಿ ಮತ್ತು ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಸಹಯೋಗದಲ್ಲಿ ಈ ವಿಮಾ ಯೋಜನೆಯನ್ನು(Kera Suraksha Insurance Application) ಅನುಷ್ಠಾನ ಮಾಡಲಾಗುತ್ತಿದ್ದು ಇದರ ಪ್ರಯೋಜನ ಪಡೆದುಕೊಳ್ಳಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಯಾವ ಕ್ರಮ ಅನುಸರಿಸಬೇಕು? ಇತ್ಯಾದಿ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಅಪಾಯಕಾರಿ ಕೆಲಸದಲ್ಲಿ ತೊಡಗಿಕೊಂಡಿರುವವರಿಗೆ ಅರ್ಥಿಕವಾಗಿ ಸುರಕ್ಷತೆಯನ್ನು ಒದಗಿಸಲು ಅನೇಕ ವಿಮಾ ಯೋಜನೆಗಳು(Kera suraksha insurance yojana) ನಮ್ಮ ದೇಶದಲ್ಲಿ ಜಾರಿಯಲ್ಲಿವೆ ಇದೆ ಮಾದರಿಯಲ್ಲಿ ತೆಂಗಿನ ಮರ ಹತ್ತಿ ಕಾಯಿ ಕೆಡುವುದು, ನೀರಾ ಇಳಿಸುವುದು ಇತ್ಯಾದಿ ತೆಂಗಿನ ಮರ ಹತ್ತುವವುದರ ಪೂರಕ ವೃತ್ತಿಯಲ್ಲಿರುವವರಿಗೆ “ಕೇರಾ ಸುರಕ್ಷಾ” ವಿಮಾ ಯೋಜನೆಯಡಿ ₹7 ಲಕ್ಷ ದವರೆಗೆ ವಿಮೆಯನ್ನು ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: Property rights-ಸುಪ್ರೀಂ ಕೋರ್ಟನಿಂದ ಮಹತ್ವದ ತೀರ್ಪು ಪ್ರಕಟ! ತಂದೆ-ತಾಯಿಯನ್ನು ನೋಡಿಕೊಳ್ಳದವರಿಗಿಲ್ಲ ಆಸ್ತಿ!

Who can apply for Kera suraksha insurance-ಈ ಯೋಜನೆಯಡಿ ಪ್ರಯೋಜನ ಪಡೆಯಲು ಅರ್ಹರು:

1) ತೆಂಗಿನ ಮರ ಹತ್ತುವವರು
2) ತೆಂಗಿನ ಕಾಯಿ ಕೀಳುವವರು
3) ನೀರಾ ತಂತ್ರಜ್ಞರು
4) ಕೃಷಿ ಕಾರ್ಮಿಕರು
5) ಅರ್ಜಿದಾರರ ವಯಸ್ಸು 18- 65 ರ ನಡುವೆ ಇರಬೇಕು.

ಇದನ್ನೂ ಓದಿ: Yashaswini Card-ಯಶಸ್ವಿನಿ ಕಾರ್ಡ ಬಳಸಿ ಯಾವೆಲ್ಲ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದು?

Kera suraksha insurance (3)

Kera suraksha insurance amount-ಕೇರಾ ಸುರಕ್ಷಾ ವಿಮಾ ಮೊತ್ತದ ವಿವರ:

ಅರ್ಜಿದಾರರ ಸಾವು/ಶಾಶ್ವತ ಅಂಗವೈಕಲ್ಯ ತುತ್ತಾದರೆ- ₹7 ಲಕ್ಷ

ಭಾಗಶಃ ಅಂಗವೈಕಲ್ಯಕ್ಕೆ ಒಳಗಾದಲ್ಲಿ- ₹3.5 ಲಕ್ಷ

ಅಸ್ಪತ್ರೆಯಿಂದ ಬಿಡುಗಡೆಯಾದ ನಂತರ 2 ತಿಂಗಳ ವರೆಗೆ ಔಷಧ ಒಳಗೊಂಡಂತೆ ಇನ್ನಿತರೆ ಅಸ್ಪತ್ರೆ ವೆಚ್ಚದ ಮರು ಪಾವತಿಗೆ- ₹2 ಲಕ್ಷ

ತಾತ್ಕಾಲಿಕ ಅಂಗವೈಲಕಲ್ಯದ ಸಮಯದಲ್ಲಿ ಗರಿಷ್ಟ 6 ವಾರದವರೆಗೆ ಪರಿಹಾರ ನೀಡಲು- ₹21,000

ಅಪಘಾತ ಅಥವಾ ಸಾವಿನ ಸಂದರ್ಭದಲ್ಲಿ ಅಂಬುಲೆನ್ಸ್ ಶುಲ್ಕ ಪಾವತಿಸಲು- ₹3,500

ಅಂತ್ಯಕ್ರಿಯೆ ವೆಚ್ಚ ಭರಿಸಲು ಸಹಾಯಧನ- ₹5,500

How to apply For kera suraksha insurance-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು:

ಆಸ್ತಕ ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಈ ಕೆಳಗೆ ನೀಡಿರುವ ವೆಬ್ಸೈಟ್ ಲಿಂಕ್ ಅನ್ನು ಬಳಕೆ ಮಾಡಿಕೊಂಡು ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಎಲ್ಲಾ ವಿವರವನ್ನು ಭರ್ತಿ ಮಾಡಿ “ನಿರ್ದೇಶಕರು, ತೆಂಗು ಅಭೀವೃದ್ದಿ ಮಂಡಳಿ, ಹುಳಿಮಾವು, ಬನ್ನೇರು ಘಟ್ಟ ರಸ್ತೆ, ಬೆಂಗಳೂರು-560076 ದೂರವಾಣಿ ಸಂಖ್ಯೆ: 080-26593750, 808-26593743” ಈ ವಿಳಾಸಕ್ಕೆ ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Bus Pass-ವಿಕಲಚೇತನರಿಗೆ ಬಸ್ ಪಾಸ್ ಪಡೆಯಲು ಅರ್ಜಿ ಆಹ್ವಾನ!

Application Form-ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ- Download Now

Kera suraksha insurance (3)

Documents-ಅರ್ಜಿ ಸಲ್ಲಿಸಲು ದಾಖಲೆಗಳು:

1) ಅರ್ಜಿದಾರರ ಆಧಾರ ಕಾರ್ಡ್ ಪ್ರತಿ
2) ಬ್ಯಾಂಕ್ ಪಾಸ್ ಬುಕ್
3) ಅರ್ಜಿದಾರರ ವಯಸ್ಸಿನ ಪುರಾವೆ ಪತ್ರ
4) ಪೋಟೋ
5) ಮೊಬೈಲ್ ನಂಬರ್

ರೈತರ ವಾರ್ಷಿಕ ವಂತಿಗೆ ಪಾವತಿಸಿದ ರಶೀದಿ (ವಾರ್ಷಿಕ ವಂತಿಗೆ ಅನ್ನು ಪಾವತಿಸಲು ಡಿಡಿ ಮೂಲಕ Coconut Development Board, payble at Cochin ಪಾವತಿಸಬಹುದು. ಅಥವಾ NEFT/BHIM/Phone pay/ Google Pay/ PayTM/ ಮೂಲಕ State Bank of India, Iyyatti In, Ernakulam Branch (Acc No. 41794101124, IFSC code: SBIN0070142 ಗೆ ಪಾವತಿಸಬೇಕು)

ಇದನ್ನೂ ಓದಿ: Cancelled ration card list-ಆಹಾರ ಇಲಾಖೆಯಿಂದ ರದ್ದಾದ ರೇಶನ್ ಕಾರ್ಡ ಪಟ್ಟಿ ಪ್ರಕಟ!

For More Information-ಇನ್ನು ಹೆಚ್ಚಿನ ಮಾಹಿತಿಗಾಗಿ-

Coconut board-ತೆಂಗು ಅಭಿವೃದ್ದಿ ಮಂಡಳಿ ಅಧಿಕೃತ ವೆಬ್ಸೈಟ್- CLICK HERE
Kera Suraksha Insurance Application-ಅರ್ಜಿ ನಮೂನೆ- DOWNLOAD NOW
Kera Suraksha Guidelines-ಯೋಜನೆಯ ಮಾರ್ಗಸೂಚಿ- DOWNLOAD NOW

Property rights-ಸುಪ್ರೀಂ ಕೋರ್ಟನಿಂದ ಮಹತ್ವದ ತೀರ್ಪು ಪ್ರಕಟ! ತಂದೆ-ತಾಯಿಯನ್ನು ನೋಡಿಕೊಳ್ಳದವರಿಗಿಲ್ಲ ಆಸ್ತಿ!

0

ಇತ್ತೀಚಿನ ದಿನಗಳಲ್ಲಿ ವಯಸ್ಸಾದ ತಂದೆ-ತಾಯಿಗಳನ್ನು ವೃದ್ಧಾಶ್ರಮಗಳಿಗೆ ಸೇರಿಸುವವರ(Property rights) ಸಂಖ್ಯೆ ದಿನೇ ದಿನೇ ಏರುಗತಿಯಲ್ಲೇ ಸಾಗುತ್ತಿದ್ದು ಇದಕ್ಕೆ ಕೊಂಚ ಕಡಿವಾಣ ಹಾಕಲು ಸುಪ್ರೀಂ ಕೋರ್ಟನಿಂದ ಮಹತ್ವದ ತೀರ್ಪು ಪ್ರಕಟವಾಗಿದೆ.

ಆಧುನಿಕ ಜೀವನದಲ್ಲಿ ಸಂಬಂಧಗಳ ಬೆಲೆ ಮತ್ತು ಒಬ್ಬರ ಮೇಲೆ ಒಬ್ಬರ ವಾತ್ಸಲ್ಯ, ಪ್ರೀತಿ, ಕಾಳಜಿ ಕುಗ್ಗುತ್ತಿದ್ದು ಇದರ ಪರಿಣಾಮವಾಗಿ ವಯಸ್ಸಾದ ತಂದೆ-ತಾಯಿಗಳ ಪೋಷಣೆ ವಿಚಾರಕ್ಕೆ ಅನೇಕ ಪ್ರಕರಣಗಳನ್ನು ಕೋರ್ಟ ನಲ್ಲಿ(Supreme court) ದಾಖಲಾಗುತ್ತಿರುವುದನ್ನು ನಾವು ದಿನನಿತ್ಯ ಕಾಣುತ್ತಿದ್ದೇವೆ.

ಇದನ್ನೂ ಓದಿ: Yashaswini Card-ಯಶಸ್ವಿನಿ ಕಾರ್ಡ ಬಳಸಿ ಯಾವೆಲ್ಲ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದು?

ಇದೇ ಮಾದರಿಯಲ್ಲಿ ತಂದೆ-ತಾಯಿಗಳ ಪೋಷಣೆ ವಿಷಯಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟನಲ್ಲಿ(Property rights transfer) ದಾಖಲಾದ ಪ್ರಕರಣ ಒಂದರ ತೀರ್ಪಿನಲ್ಲಿ ವಯಸ್ಸಾದ ತಂದೆ-ತಾಯಿಯನ್ನು ನೋಡಿಕೊಳ್ಳದ ಮಕ್ಕಳು ತಂದೆ-ತಾಯಿಯ ಆಸ್ತಿಯಲ್ಲಿ ಪಾಲಾ ಕೇಳುವ ಹಕ್ಕನ್ನು ಹೊಂದಿಲ್ಲ ಎಂದು ಮಹತ್ವದ ತೀರ್ಪನ್ನು ಪ್ರಕಟಿಸಿದೆ.

Property rights case-ಪ್ರಕರಣದ ಹಿನ್ನೆಲೆ:

ಸುಪ್ರೀಂ ಕೋರ್ಟ ನಲ್ಲಿ ದಾಖಲಾದ ಪ್ರಕರಣ ಒಂದರಲ್ಲಿ ಮಕ್ಕಳ ಹೆಸರಿಗೆ ತಂದೆ ಮತ್ತು ತಾಯಿಯ ಹೆಸರಿನಲ್ಲಿರುವ ಎಲ್ಲಾ ಆಸ್ತಿಗಳ ಮಾಲೀಕತ್ವವನ್ನು ವರ್ಗಾವಣೆ ಮಾಡಿದ ಬಳಿಕ ಆ ಮಕ್ಕಳು ತಮ್ಮ ತಂದೆ-ತಾಯಿಯನ್ನು ನೋಡಿಕೊಳ್ಳಲು ಹಿಂದೇಟು ಹಾಕಲು ಆರಂಭಿಸಿದರು ಈ ಕುರಿತು ಪೋಷಕರು ಪ್ರಕರಣವನ್ನು ದಾಖಲಿಸಿದ್ದು ಈ ಪ್ರಕರಣ ತೀರ್ಪು ಅನ್ನು ಸುಪ್ರೀಂ ಕೋರ್ಟ ಈ ಕೆಳಗಿನಂತೆ ಪ್ರಕಟಿಸಿದೆ.

ಮಕ್ಕಳು ತಮ್ಮ ಹೆತ್ತವರನ್ನು ನೋಡಿಕೊಳ್ಳಲು ವಿಫಲವಾದರೆ, ಪೋಷಕರು ಮತ್ತು “ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆಯಡಿ” ಪೋಷಕರು ನೀಡಿದ ಆಸ್ತಿ ಮತ್ತು ಉಡುಗೊರೆಗಳನ್ನು “ಮರಳಿ ಪಡೆಯಬಹುದು” ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪು ಅನ್ನು ಪ್ರಕಟಿಸಿದ್ದು “ಆಸ್ತಿಯ ವರ್ಗಾವಣೆಯನ್ನು ಅನೂರ್ಜಿತವೆಂದು ಘೋಷಿಸಲಾಗುವುದು” ಎಂದು ನ್ಯಾಯಾಲಯವು ಈ ಪ್ರಕರಣದಲ್ಲಿ ತನ್ನ ಅಬಿಪ್ರಾಯವನ್ನು ತಿಳಿಸಿದೆ.

ಇದನ್ನೂ ಓದಿ: Bus Pass-ವಿಕಲಚೇತನರಿಗೆ ಬಸ್ ಪಾಸ್ ಪಡೆಯಲು ಅರ್ಜಿ ಆಹ್ವಾನ!

Supreme court

ನ್ಯಾಯಮೂರ್ತಿಗಳಾದ ಸಿ.ಟಿ.ರವಿಕುಮಾರ್ ಮತ್ತು ಸಂಜಯ್ ಕರೋಲ್ ಅವರ ನ್ಯಾಯಪೀಠವು ಅವಿಭಕ್ತ ಕುಟುಂಬ ವ್ಯವಸ್ಥೆಯನ್ನು ರದ್ದುಪಡಿಸಿದ ನಂತರ ಒಂಟಿಯಾಗಿ ಉಳಿದಿರುವ ವೃದ್ಧರಿಗೆ ಸಹಾಯ ಮಾಡಲು ಈ ಕಾಯ್ದೆ ಪ್ರಯೋಜನಕಾರಿ ಶಾಸನವಾಗಿದೆ ಎಂದು ತಿಳಿಸಿದರು.

ವಯಸ್ಸಾದ ತಂದೆ-ತಾಯಿಗಳನ್ನು ಸರಿಯಾಗಿ ನೋಡಿಕೊಳ್ಳದೇ ಪೋಷಣೆ ಮಾಡಲು ಹಿಂದೇಟು ಹಾಕುವ ಮಕ್ಕಳಿಗೆ ಆಸ್ತಿ ಮತ್ತು ಉಡುಗೊರೆಗಳನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

ಇದನ್ನೂ ಓದಿ: Cancelled ration card list-ಆಹಾರ ಇಲಾಖೆಯಿಂದ ರದ್ದಾದ ರೇಶನ್ ಕಾರ್ಡ ಪಟ್ಟಿ ಪ್ರಕಟ!

Supreme court Property rights case-ಕಾನೂನಿನಲ್ಲಿ ಏನು ಹೇಳಲಾಗುತ್ತದೆ:

ಕಾನೂನಿನ ಉದ್ದೇಶವನ್ನು ಸಾಧಿಸಲು ಉದಾರ ದೃಷ್ಟಿಕೋನವನ್ನು ತೆಗೆದುಕೊಳ್ಳಬೇಕಾದಾಗ, ಮಧ್ಯಪ್ರದೇಶ ಹೈಕೋರ್ಟ್ ಕಾನೂನಿನ ಬಗ್ಗೆ “ಕಠಿಣ ದೃಷ್ಟಿಕೋನ” ತೆಗೆದುಕೊಂಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಾಯ್ದೆಯ ಸೆಕ್ಷನ್ 23 ರ ಪ್ರಕಾರ, ಈ ಕಾಯ್ದೆ ಪ್ರಾರಂಭವಾದ ನಂತರ, ಯಾವುದೇ ಹಿರಿಯ ನಾಗರಿಕರು ತಮ್ಮ ಆಸ್ತಿ ಅಥವಾ ಉಡುಗೊರೆಗಳನ್ನು ತಮ್ಮ ಮಕ್ಕಳಿಗೆ ವರ್ಗಾಯಿಸಿದರೆ, ಅವರು ಅವರನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾರೆ, ಅವರ ಅಗತ್ಯಗಳನ್ನು ಪೂರೈಸುತ್ತಾರೆ ಮತ್ತು ಅವರು ಹಾಗೆ ಮಾಡಲು ವಿಫಲವಾದರೆ, ಅವರ ಆಸ್ತಿಯ ವರ್ಗಾವಣೆಯನ್ನು ಅನೂರ್ಜಿತವೆಂದು ಘೋಷಿಸಲಾಗುತ್ತದೆ. ಅಲ್ಲದೆ, ಅಂತಹ ಸಂದರ್ಭದಲ್ಲಿ, ಆಸ್ತಿ ವರ್ಗಾವಣೆಯನ್ನು ಮೋಸದಿಂದ ಅಥವಾ ಬಲವಂತದಿಂದ ಅಥವಾ ಅನಗತ್ಯ ಪ್ರಭಾವದಿಂದ ಮಾಡಲಾಗಿದೆ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: MRI Scan-ಸರಕಾರದಿಂದ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ! ಈ ಕಾರ್ಡ ಇದ್ದರೆ ಎಂಆರ್​ಐ ಸ್ಕ್ಯಾನ್ ಉಚಿತ!

Supreme court-ಮತ್ತೊಂದು ಪ್ರಕರಣ ವಿವರ ಹೀಗಿದೆ:

ಕಳೆದ ತಿಂಗಳಲ್ಲಿ ನ್ಯಾಯಾಲಯದಲ್ಲಿ ವೃದ್ಧ ಮಹಿಳೆಯೊಬ್ಬರು ನನ್ನ ಹೆಸರಿನಲ್ಲಿರುವ ಎಲ್ಲಾ ಆಸ್ತಿಯನ್ನು ನನ್ನ ಮಗನ ಹೆಸರಿಗೆ ವರ್ಗಾವಣೆ ಮಾಡಿದ ಬಳಿಕ ಮಗ ನನ್ನನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ದೂರನ್ನು ದಾಖಲಿಸಲು ಬಂದಿದ್ದರು ಈ ದೂರಿನ ಅರ್ಜಿಯನ್ನು ನ್ಯಾಯಾಲಯವು ಸ್ವೀಕರಿಸಿ ಅರ್ಜಿಯ ವಿಚಾರಣೆಯನ್ನು ಕೈಗೊಳ್ಳುತ್ತಿದೆ.

Property rights transfer-ಮಕ್ಕಳ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಲು ಅವಸರ ಮಾಡಿಕೊಳ್ಳಬೇಡಿ:

ಪ್ರಸ್ತುತ ಜೀವನ ಶೈಲಿಯಲ್ಲಿ ಎಲ್ಲಾ ಪೋಷಕರಿಗೆ ಒಂದು ಕಿವಿ ಮಾತು ಮಕ್ಕಳು ವಯಸ್ಸಿಗೆ ಬಂದ ಬಳಿಕ ಕೂಡಲೇ ಅವರ ಹೆಸರಿಗೆ ತಮ್ಮ ಎಲ್ಲಾ ಆಸ್ತಿಯ ಮಾಲೀಕತ್ವವನ್ನು ವರ್ಗಾವಣೆ ಮಾಡಬೇಡಿ ಮಾಡಲೇ ಬೇಕಾದ ಸನ್ನಿವೇಶ ಬಂದಲ್ಲಿ ಅಲ್ಪ ಸ್ವಲ್ಪ ಆಸ್ತಿಯನ್ನು ತಮ್ಮ ಹೆಸರಿನಲ್ಲಿ ಇರುವಂತೆ ನೋಡಿಕೊಂಡು ಬಳಿಕ ಮಾಲೀಕತ್ವ ವನ್ನು ವರ್ಗಾವಣೆ ಮಾಡುವುದು ಉತ್ತಮ ಆಯ್ಕೆಯಾಗಿದೆ.

Yashaswini Card-ಯಶಸ್ವಿನಿ ಕಾರ್ಡ ಬಳಸಿ ಯಾವೆಲ್ಲ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದು?

0

ಸಹಕಾರಿ ಸಂಘಗಳ ಮೂಲಕ ಅರ್ಹ ಸದಸ್ಯರಿಗೆ ವಿತರಣೆ ಮಾಡುವ ಯಶಸ್ವಿನಿ ಕಾರ್ಡ(Yashaswini Card Benefits) ಅನ್ನು ಬಳಕೆ ಮಾಡಿಕೊಂಡು ಯಾವೆಲ್ಲ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಪ್ರಸ್ತುತ ದಿನಮಾನಗಳಲ್ಲಿ ಮನೆಯಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಬಂತು ಎಂದರೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹಣ ವ್ಯಯಿಸುವುದು ಅರ್ಥಿಕವಾಗಿ ಹಿಂದುಳಿದವರಿಗೆ ಮತ್ತು ಮಧ್ಯಮ ವರ್ಗದವರಿಗೂ ಸಹ ದೊಡ್ಡ ಹೊಡೆತವಾಗಿದೆ. ಇದಕ್ಕಾಗಿ ಆರೋಗ್ಯ ವಿಮೆಯನ್ನು(Health Insurance) ಹೊಂದುವುದು ಎಲ್ಲಾ ನಾಗರಿಕರ ಪ್ರಥಮ ಆಧ್ಯತೆಯಾಗಿದ್ದು, ರಾಜ್ಯ ಸರಕಾರದಿಂದ ಸಹಕಾರಿ ಸಂಘದ ಸದಸ್ಯರಿಗೆ ವಿಮಾ ಸೌಲಭ್ಯವನ್ನು ಒದಗಿಸಲು ಯಶಸ್ವಿನಿ ಕಾರ್ಡ ಅನ್ನು ವಿತರಣೆ ಮಾಡಲಾಗುತ್ತಿದೆ.

ಯಶಸ್ವಿನಿ ಯೋಜನೆಯಡಿ ನೊಂದಣಿಯನ್ನು ಮಾಡಿಕೊಂಡು ಈ ಕಾರ್ಡ ಅನ್ನು ಬಳಕೆ ಮಾಡಿ ಸಾರ್ವಜನಿಕರು ಉಚಿತವಾಗಿ ಅನೇಕ ಆರೋಗ್ಯ ಸೇವೆಗಳನ್ನು ಪಡೆಯಲು ಅವಕಾಶವಿದ್ದು ಈ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: Bus Pass-ವಿಕಲಚೇತನರಿಗೆ ಬಸ್ ಪಾಸ್ ಪಡೆಯಲು ಅರ್ಜಿ ಆಹ್ವಾನ!

Yashaswini Health Insurance- ₹5 ಲಕ್ಷದ ವರೆಗೆ ಉಚಿತ ಚಿಕಿತ್ಸೆ ಪಡೆಯಲು ಅವಕಾಶ:

ಯಶಸ್ವಿನಿ ಕಾರ್ಡ ಅನ್ನು ಹೊಂದಿರುವ ನಾಗರಿಕರು ಈ ಕಾರ್ಡ ಅನ್ನು ಬಳಕೆ ಮಾಡಿಕೊಂಡು 5.0 ಲಕ್ಷದ ವರೆಗೆ ಉಚಿತ ಚಿಕಿತ್ಸೆ ಪಡೆಯಲು ಅವಕಾಶವಿರುತ್ತದೆ.

Yashaswini Card Details-ಯಶಸ್ವಿನಿ ಕಾರ್ಡ ಬಳಸಿ ಯಾವೆಲ್ಲ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದು?

ಯಶಸ್ವಿನಿ ಕಾರ್ಡ ಅನ್ನು ಹೊಂದಿರುವ ಅನೇಕ ಜನರಿಗೆ ಈ ಕಾರ್ಡ ಬಳಕೆ ಮಾಡಿಕೊಂಡು ಯಾವೆಲ್ಲ ಆರೋಗ್ಯ ಸೇವೆಗಳನ್ನು ಉಚಿತವಾಗಿ ಪಡೆಯಬಹುದು ಎನ್ನುವ ಸಂಪೂರ್ಣ ಮಾಹಿತಿ ತಿಳಿದಿರುವುದಿಲ್ಲ ಇದರ ಬಗ್ಗೆ ಒಂದಿಷ್ಟು ಅಗತ್ಯ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

A) ಉಚಿತವಾಗಿ ಹೆರಿಗೆ ಆರೋಗ್ಯ ಸೇವೆಯನ್ನು ಪಡೆಯಲು ಅವಕಾಶವಿದ್ದು ಎರಡು ಜೀವಂತ ಮಕ್ಕಳು ಅಥವಾ ಎರಡು ಹರಿಗೆಗೆ ಈ ಯೋಜನೆಯಡಿ ಪ್ರಯೋಜನ ಪಡೆದುಕೊಳ್ಳಬಹುದು.

B) ರಾಜ್ಯ ಸರಕಾರದಿಂದ ಯಶಸ್ವಿನಿ ಯೋಜನೆಯ ನಿರ್ವಹಣೆಯನ್ನು ಸಹಕಾರ ಇಲಾಖೆಗೆ ವಹಿಸಲಾಗಿದ್ದು ಯೋಜನೆಯಡಿಯಲ್ಲಿ ಟ್ರಸ್ಟ್ ನಿಂದ ನಿಗದಿಪಡಿಸಿದ 1650 ವಿವಿಧ ಬಗ್ಗೆಯ ಚಿಕಿತ್ಸೆಗಳು ಮತ್ತು 478 ICU ಚಿಕಿತ್ಸೆಗಳೂ ಸೇರಿದಂತೆ ಒಟ್ಟು 2128 ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: Cancelled ration card list-ಆಹಾರ ಇಲಾಖೆಯಿಂದ ರದ್ದಾದ ರೇಶನ್ ಕಾರ್ಡ ಪಟ್ಟಿ ಪ್ರಕಟ!

Yashaswini Card benefits

C) ಯಶಸ್ವಿನಿ ಯೋಜನೆಯ ಮಾರ್ಗಸೂಚಿಯನ್ವ ಯಶಸ್ವಿನಿ ಕಾರ್ಡ ಅನ್ನು ಹೊಂದಿರುವವರು ಜನರಲ್ ವಾರ್ಡನಲ್ಲಿ ಮಾತ್ರ ಚಿಕಿತ್ಸೆ ಪಡೆಯಲು ಅವಕಾಶವಿದ್ದು. ಒಂದು ವೇಳೆ ಯೋಜನೆಯಡಿ ನಿಗದಿಪಡಿಸಿರುವ ಜನರಲ್ ವಾರ್ಡ್ ಬದಲಾಗಿ ಉನ್ನತ(Semi Special Ward Or Special Ward)ನಲ್ಲಿ ಚಿಕಿತ್ಸೆ ಪಡೆಯಲು ಇಚ್ಚಿಸಿದಲ್ಲಿ, ಇತಂಹ ಫಲಾನುಭವಿಗಳಿಗೆ ಈ ಯೋಜನೆಯಡಿ ನಿಗದಿ ಪಡಿಸಿರುವಂತೆ ಜನರಲ್ ವಾರ್ಡಗೆ ಅನ್ವಯಿಸುವ ಚಿಕಿತ್ಸೆಯ ವೆಚ್ಚವನ್ನು ಮಾತ್ರ ಭರಿಸಲಾಗುತ್ತದೆ. ಉನ್ನತ ವಾರ್ಡ್/ಸ್ಪೆಷಲ್ ವಾರ್ಡಿಗೆ ಆಗುವ ಹೆಚ್ಚುವರಿ ವ್ಯತ್ಯಾಸದ ಚಿಕಿತ್ಸಾ ಮೊತ್ತವನ್ನುಸದರಿ ಫಲಾನುಭವಿಗಳೇ ಭರಿಸಬೇಕು ಎಂದು ಈ ಯೋಜನೆಯ ಅಧಿಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಮಾತ್ರ ಅವಕಾಶ:

ರೋಗಿಗಳಿಗೆ ಚಿಕಿತ್ಸಾ ಸೌಲಭ್ಯಗಳನ್ನು ಪಡೆಯಲು ರಾಜ್ಯದಲ್ಲಿ ನೋಂದಾಯಿಸಿದ ಯಶಸ್ಸಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಪಡೆಯಲು ಮಾತ್ರ ಅವಕಾಶವಿದ್ದು, ಯಶಸ್ವಿನಿ ಯೋಜನೆಯಡಿ ಫಲಾನುಭವಿ ಚಿಕಿತ್ಸೆ ಪಡೆಯುವ ಮೊದಲು ಆಸ್ಪತ್ರೆಯು ಯೋಜನೆಗೆ ಒಳಪಟ್ಟಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ನಂತರ ಚಿಕಿತ್ಸೆ ಪಡೆಯತಕ್ಕದ್ದು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: MRI Scan-ಸರಕಾರದಿಂದ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ! ಈ ಕಾರ್ಡ ಇದ್ದರೆ ಎಂಆರ್​ಐ ಸ್ಕ್ಯಾನ್ ಉಚಿತ!

Yashaswini Card image

How To Get Yashaswini Card-ಯಶಸ್ವಿನಿ ಕಾರ್ಡ ಪಡೆಯುವುದು ಹೇಗೆ?

ಯಶಸ್ವಿನಿ ಯೋಜನೆಯಡಿ ಪ್ರಯೋಜನ ಪಡೆಯಲು ಅರ್ಹ ಅರ್ಜಿದಾರರು ಅರ್ಜಿಯನ್ನು ಆಹ್ವಾನಿಸಿದ ಸಮಯದಲ್ಲಿ ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರದ ಸಹಕಾರಿ ಸಂಘದ ಕಚೇರಿಯನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Who Can Apply For Yashaswini Card-ಕಾರ್ಡ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

1) ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.

2) ಅರ್ಜಿದಾರರು ಸಹಕಾರಿ ಸಂಘದ ಸದಸ್ಯರಾಗಿರಬೇಕು.

3) ಅರ್ಜಿದಾರರ ಕುಟುಂಬದ ಸದಸ್ಯರು ಸರಕಾರಿ ನೌಕರಿಯಲ್ಲಿ ಇರಬಾರದು.

4) ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Documents-ಅರ್ಜಿ ಸಲ್ಲಿಸಲು ದಾಖಲೆಗಳು:

  • ಅರ್ಜಿದಾರರ ಆಧಾರ್ ಕಾರ್ಡ
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಪೋಟೋ
  • ಮೊಬೈಲ್ ನಂಬರ್

Bus Pass-ವಿಕಲಚೇತನರಿಗೆ ಬಸ್ ಪಾಸ್ ಪಡೆಯಲು ಅರ್ಜಿ ಆಹ್ವಾನ!

0

ವಿಕಲಚೇತನರು ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಬರುವ ಬಸ್ ಗಳಲ್ಲಿ ಸಂಚಾರ ಮಾಡಲು ಬಸ್ ಪಾಸ್(Bus Pass Application) ಅನ್ನು ಪಡೆಯಲು ಅರ್ಹ ಅರ್ಜಿದಾರರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ವಿಕಲಚೇತನರಿಗೆ ಒಂದು ಸ್ಥಳ ದಿಂದ ಮತ್ತೊಂದು ಸ್ಥಳಕ್ಕೆ ಸಂಚಾರ ಮಾಡಲು ಬಸ್ ಟಿಕೆಟ್ ಪಡೆಯಲು ರಿಯಾಯಿತಿಯನ್ನು ಒದಗಿಸಲು ಅರ್ಹ ಫಲಾನುಭವಿಗಳನ್ನು ಗುರುತಿಸಿ ಬಸ್ ಪಾಸ್(Bus Pass) ಅನ್ನು ನೀಡಲು ಆನ್ಲೈನ್ ಮೂಲಕ ಅರ್ಜಿಯನ್ನು ಕರೆಯಲಾಗಿದೆ.

ಬಸ್ ಪಾಸ್ ಅನ್ನು ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳೇನು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ನಿಗಮದಿಂದ ನಿಗದಿಪಡಿಸಿರುವ ಅರ್ಹತೆಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Cancelled ration card list-ಆಹಾರ ಇಲಾಖೆಯಿಂದ ರದ್ದಾದ ರೇಶನ್ ಕಾರ್ಡ ಪಟ್ಟಿ ಪ್ರಕಟ!

Who Can Apply For Bus Pass- ಅರ್ಜಿ ಸಲ್ಲಿಸಲು ಅರ್ಹರು:

1) ಬಸ್ ಪಾಸ್ ಅನ್ನು ಪಡೆಯಲು ವೈದ್ಯಕೀಯ ದಾಖಲಾತಿ ಪ್ರಕಾರ ವಿಕಲಚೇತನರಾಗಿರಬೇಕು.
2) ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.

ಇದನ್ನೂ ಓದಿ: Gas Safety-ಮನೆಯಲ್ಲಿ ಬಳಕೆ ಮಾಡುವ ಗ್ಯಾಸ್ ಸಿಲಿಂಡರ್ ಕುರಿತು ಈ ಮಾಹಿತಿ ತಪ್ಪದೇ ತಿಳಿಯಿರಿ!

ksrtc bus pass

Documents For Bus Pass- ಅರ್ಜಿ ಸಲ್ಲಿಸಲು ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ
2) ರೇಷನ್ ಕಾರ್ಡ್
3) ಪೋಟೋ
4) ಜಾತಿ ಪ್ರಮಾಣ ಪತ್ರ(ಅನ್ವಯಿಸದ್ದಲ್ಲಿ ಮಾತ್ರ)
5) UDID ಪ್ರಮಾಣ ಪತ್ರ
6) ಹಳೆಯ ಬಸ್ ಪಾಸ್(ಲಭ್ಯವಿದ್ದಲ್ಲಿ)
7) ವೈದ್ಯಕೀಯ ಪ್ರಮಾಣ ಪತ್ರ

ಇದನ್ನೂ ಓದಿ: MRI Scan-ಸರಕಾರದಿಂದ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ! ಈ ಕಾರ್ಡ ಇದ್ದರೆ ಎಂಆರ್​ಐ ಸ್ಕ್ಯಾನ್ ಉಚಿತ!

How to Apply For Ksrtc Bus Pass- ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಹತ್ತಿರದ ಗ್ರಾಮ ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅಥವಾ ನೇರವಾಗಿ ಸೇವಾ ಸಿಂಧು ಪೋರ್ಟಲ್ ಭೇಟಿ ಮಾಡಿ ಸ್ವಂತ ಅರ್ಜಿದಾರರೇ ಖುದ್ದು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

KSRTC Bus Pass Benefits- ಬಸ್ ಪಾಸ್ ಪ್ರಯೋಜನಗಳೇನು?

ಅರ್ಜಿ ಸಲ್ಲಿಸಿ ಬಸ್ ಪಾಸ್ ಪಡೆಯುವ ಎಲ್ಲಾ ಫಲಾನುಭವಿಗಳು ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಸ್ ಗಳಲ್ಲಿ ರಿಯಾಯಿತಿ ದರದಲ್ಲಿ ಸಂಚಾರ ಮಾಡಲು ಅವಕಾಶವಿರುತ್ತದೆ.

ಈ ಪಾಸ್ ಹೊಂದಿದ್ದರೆ ಇತರೆ ಯಾವುದೇ ಪ್ರಕಾರದ ಗುರುತಿನ ಚೀಟಿಗಳನ್ನು ಪ್ರಯಾಣದ ಸಮಯದಲ್ಲಿ ತೆಗೆದುಕೊಂಡು ಹೋಗುವ ಅವಶ್ಯಕತೆ ಇರುವುದಿಲ್ಲ.

For More Information- ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ನಿಗಮದ ಅಧಿಕೃತ ವೆಬ್ಸೈಟ್- Click Here

Cancelled ration card list-ಆಹಾರ ಇಲಾಖೆಯಿಂದ ರದ್ದಾದ ರೇಶನ್ ಕಾರ್ಡ ಪಟ್ಟಿ ಪ್ರಕಟ!

0

ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಮಾರ್ಗಸೂಚಿ ಪ್ರಕಾರ ಪಡಿತರ ಚೀಟಿ(Cancelled ration card) ಪಡೆಯಲು ಅನರ್ಹರಿರುವ ರದ್ದಾದ ರೇಶನ್ ಕಾರ್ಡ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಆಹಾರ ಇಲಾಖೆಯಿಂದ(Ahara ilake) ಪ್ರತಿ ತಿಂಗಳು ತನ್ನ ಅಧಿಕೃತ ಜಾಲತಾಣದಲ್ಲಿ ತಾಲ್ಲೂಕುವಾರು ಇಲಾಖೆಯ ಮಾರ್ಗಸೂಚಿ ಪ್ರಕಾರ ರೇಶನ್ ಕಾರ್ಡ(Ration card) ಪಡೆಯಲು ಅನರ್ಹ ಇರುವ ಪಡಿತರ ಚೀಟಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಈ ಪಟ್ಟಿಯನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ನೋಡಲು ಅವಕಾಶವಿದ್ದು ಈ ಅಂಕಣದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.

ಇದನ್ನೂ ಓದಿ: MRI Scan-ಸರಕಾರದಿಂದ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ! ಈ ಕಾರ್ಡ ಇದ್ದರೆ ಎಂಆರ್​ಐ ಸ್ಕ್ಯಾನ್ ಉಚಿತ!

ಪಡಿತರ ಚೀಟಿ ಹೊಂದಿರುವ ಗ್ರಾಹಕರು ತಮ್ಮ ರದ್ದಾದ ಪಡಿತರ ಚೀಟಿ ಪಟ್ಟಿಯಲ್ಲಿ ಯಾವೆಲ್ಲ ಹೆಸರುಗಳು ಇವೆ ಎಂದು ಆಹಾರ ಇಲಾಖೆಯ(Karnataka Food Department) ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಲು ಅವಕಾಶವಿದ್ದು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

Ration Card Latetst News-ದೊಡ್ಡ ಸಂಖ್ಯೆಯಲ್ಲಿವೆ ಅನರ್ಹ ಬಿಪಿಎಲ್ ಪಡಿತರ ಚೀಟಿಗಳು:

ಆಹಾರ ಇಲಾಖೆಯ ಅಂಕಿ-ಅಂಶದ ಮಾಹಿತಿಯ ಪ್ರಕಾರ ಅರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರು ಸಹ ಬಿಪಿಎಲ್ ಕಾರ್ಡ ಅನ್ನು ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದ್ದು ಮಾರ್ಗಸೂಚಿ ಪ್ರಕಾರ ಬಿಪಿಎಲ್ ಕಾರ್ಡ ಪಡೆಯಲು ಅರ್ಹ ಇಲ್ಲದತಂಹ ಫಲಾನುಭವಿಗಳನ್ನು ಗುರುತಿಸಿ ಅಂತಹ ಜನರ ಬಿಪಿಎಲ್ ಕಾರ್ಡ ಅನ್ನು ರದ್ದು ಮಾಡಿ ಎಪಿಎಲ್ ಕಾರ್ಡಗೆ ಸೇರ್ಪಡೆ ಮಾಡಲಾಗುತ್ತಿದೆ.

Ration card

Cancelled ration card list-2025: ರದ್ದಾದ ರೇಶನ್ ಕಾರ್ಡ ಪಟ್ಟಿಯನ್ನು ಮೊಬೈಲ್ ನಲ್ಲಿ ಪಡೆಯುವ ವಿಧಾನ:

ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಆಹಾರ ಇಲಾಖೆಯ ಅಧಿಕೃತ ahara.karnataka.gov.in ಜಾಲತಾಣವನ್ನು ಪ್ರವೇಶ ಮಾಡಿ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ರದ್ದಾದ ರೇಶನ್ ಕಾರ್ಡ ಪಟ್ಟಿಯಲ್ಲಿ ತಮ್ಮ ಹೆಸರಿ ಇದಿಯಾ ಎಂದು ಚೆಕ್ ಮಾಡಿಕೊಳ್ಳಬಹುದು.

ರದ್ದಾದ ರೇಶನ್ ಕಾರ್ಡ ಪಟ್ಟಿಯನ್ನು ತಿಂಗಳುವಾರು ಇಲಾಖೆಯ ahara ತಂತ್ರಾಂಶದಲ್ಲಿ ಪ್ರಕಟಿಸಲಾಗುತ್ತದೆ. ಗ್ರಾಹಕರು ಕೆಲವು ಆಯ್ಕೆಗಳನ್ನು ಸೆಲೆಕ್ಟ್ ಮಾಡಿಕೊಂಡು Serach ಬಟನ್ ಮೇಲೆ ಕ್ಲಿಕ್ ಮಾಡಿ ಕೆಳಗಿನ ಹಂತಗಳನ್ನು ಅನುಸರಿಸಿ ಪಟ್ಟಿಯನ್ನು ಪಡೆಯಬಹುದು.

ಇದನ್ನೂ ಓದಿ: Gas Safety-ಮನೆಯಲ್ಲಿ ಬಳಕೆ ಮಾಡುವ ಗ್ಯಾಸ್ ಸಿಲಿಂಡರ್ ಕುರಿತು ಈ ಮಾಹಿತಿ ತಪ್ಪದೇ ತಿಳಿಯಿರಿ!

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ Cancelled ration card list ಮಾಡಿ ಅಧಿಕೃತ ಆಹಾರ ಇಲಾಖೆಯ ahara ತಂತ್ರಾಂಶವನ್ನು ಪ್ರವೇಶ ಮಾಡಬೇಕು.

ration card status

Step-2: ಇದಾದ ಬಳಿಕ ಈ ಪೇಜ್ ನ ಮುಖಪುಟದಲ್ಲಿ ಕಾಣುವ “ಇ-ಸೇವೆಗಳು” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಬಳಿಕ ಇಲ್ಲಿ ಬಲಬದಿಯಲ್ಲಿ ಕಾಣುವ “ಇ-ಪಡಿತರ ಚೀಟಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-4: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ಬಳಿಕ ಈ ಪುಟದಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ತಿಂಗಳು, ವರ್ಷ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಆ ತಿಂಗಳಲ್ಲಿ ನಿಮ್ಮ ತಾಲ್ಲೂಕಿನಲ್ಲಿ ರದ್ದಾದ ಪಡಿತರ ಚೀಟಿ ಪಟ್ಟಿಯನ್ನು ನೋಡಬಹುದು.

ಇದನ್ನೂ ಓದಿ: Kisan ID Card-ಪಿಎಂ ಕಿಸಾನ್ ಹಣ ಪಡೆಯಲು ನೂತನ ಐಡಿ ಕಾರ್ಡ! ಇಲ್ಲಿದೆ ಸಂಪೂರ್ಣ ವಿವರ!

Ration Card Village List-ಅರ್ಹ ಪಡಿತರ ಚೀಟಿ ಪಟ್ಟಿಯನ್ನು ಇದೆ ವೆಬ್ಸೈಟ್ ನಲ್ಲಿ ನೋಡಬಹುದು:

ಪಡಿತರ ಚೀಟಿ ಹೊಂದಿರುವ ಹಳ್ಳಿವಾರು ಅರ್ಹ ಫಲಾನುಭವಿಗಳ ಪಟ್ಟಿಯನ್ನು ಈ ತಂತ್ರಾಂಶದಲ್ಲಿ ನೋಡಲು ಅವಕಾಶವಿದ್ದು ಈ ಲಿಂಕ್ Ration Card Village List ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ಜಾಲತಾಣವನ್ನು ಪ್ರವೇಶ ಮಾಡಿ “ಇ-ಪಡಿತರ ಚೀಟಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು .

ತದನಂತರ ಕೆಳಗೆ ಕಾಣಿಸುವ “ಹಳ್ಳಿ ಪಟ್ಟಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿ, ಹಳ್ಳಿ ಹೆಸರನ್ನು ಆಯ್ಕೆ ಮಾಡಿಕೊಂಡು “Go” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯ ಅರ್ಹ ರೇಶನ್ ಕಾರ್ಡದಾರರ ಪಟ್ಟಿ ತೆರೆದುಕೊಳ್ಳುತ್ತದೆ.

MRI Scan-ಸರಕಾರದಿಂದ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ! ಈ ಕಾರ್ಡ ಇದ್ದರೆ ಎಂಆರ್​ಐ ಸ್ಕ್ಯಾನ್ ಉಚಿತ!

0

ರಾಜ್ಯ ಸರಕಾರದಿಂದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆರೋಗ್ಯ ಇಲಾಖೆ ಮತ್ತು ಇತರೆ ಇಲಾಖೆಗಳ ಯೋಜನೆಗಳ ಕುರಿತು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಬಿಪಿಎಲ್ ಕಾರ್ಡ ಹೊಂದಿರುವ ಸಾರ್ವಜನಿಕರಿಗೆ ಇನ್ನು ಮುಂದೆ ಎಂಆರ್​ಐ ಸ್ಕ್ಯಾನ್(MRI Scan) ಉಚಿತವಾಗಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಬಿಪಿಎಲ್ ಪಡಿತರ ಚೀಟಿಯನ್ನು(BPL Card) ಹೊಂದಿರುವ ಕುಟುಂಬಗಳು ಎಲ್ಲಾ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಮತ್ತು ಎಂಆರ್​ಐ ಸ್ಕ್ಯಾನಿಂಗ್​ ಅನ್ನು ಸಂಪೂರ್ಣ ಉಚಿತವಾಗಿ ಯಾವುದೇ ಶುಲ್ಕ ಪಾವತಿ ಮಾಡದೇ ಈ ಸೇವೆಯನ್ನು ಪಡೆಯಬಹುದು.

ರಾಜ್ಯ ಸರಕಾರದಿಂದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ(Karnataka Cabinet) ಈ ಕುರಿತು ಅಧಿಕೃತ ತಿರ್ಮಾಣವನ್ನು ತೆಗೆದುಕೊಳ್ಳಲಾಗಿದೆ. ಇದಲ್ಲದೇ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರು ಪ್ರಮುಖ ನಿರ್ಣಾಯಗಳ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: Gas Safety-ಮನೆಯಲ್ಲಿ ಬಳಕೆ ಮಾಡುವ ಗ್ಯಾಸ್ ಸಿಲಿಂಡರ್ ಕುರಿತು ಈ ಮಾಹಿತಿ ತಪ್ಪದೇ ತಿಳಿಯಿರಿ!

1) 13.3 ಕೋಟಿ ವೆಚ್ಚದಲ್ಲಿ ಆಶಾಕಿರಣ ಯೋಜನೆ ವಿಸ್ತರಣೆ(Karnataka cabinet meeting):

ದೃಷ್ಟಿ ದೋಷ ಉಳ್ಳವರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಮತ್ತು ಕನ್ನಡಕ ವಿತರಣೆ ಯೋಜನೆ ಇದಾಗಿದೆ.

ಅಂಧತ್ವ ಮುಕ್ತ ಕರ್ನಾಟಕ ನಿರ್ಮಾಣದತ್ತ ಮಹತ್ವದ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರವು ಮಹಾತ್ವಾಕಾಂಕ್ಷಿ ಆಶಾಕಿರಣ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಿದೆ.

ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ದಾರವನ್ನು ತೆಗೆದುಕೊಂಡಿದೆ. ಇದಕ್ಕಾಗಿ ₹13.30 ಕೋಟಿ ಮೊತ್ತವನ್ನು ಮೀಸಲಿರಿಸಲು ತೀರ್ಮಾನಿಸಿದೆ. ಈ ಮೂಲಕ ದೃಷ್ಟಿ ದೋಷ ಉಳ್ಳವರಿಗೆ ಉಚಿತವಾಗಿ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆ ಮತ್ತು ಕನ್ನಡಕಗಳನ್ನು ವಿತರಿಸಲಾಗುತ್ತದೆ.

ಇದನ್ನೂ ಓದಿ: Kisan ID Card-ಪಿಎಂ ಕಿಸಾನ್ ಹಣ ಪಡೆಯಲು ನೂತನ ಐಡಿ ಕಾರ್ಡ! ಇಲ್ಲಿದೆ ಸಂಪೂರ್ಣ ವಿವರ!

MRI Scan

2) ₹285 ಕೋಟಿ ವೆಚ್ಚದಲ್ಲಿ ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಫಾರ್ಮ್‌ನಲ್ಲಿ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆಗೆ ತೀರ್ಮಾನ

3) ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅವರಣದಲ್ಲಿ 450 ಹಾಸಿಗೆ ಸಾಮರ್ಥ್ಯದ ಎರಡನೇ ಹಂತದ ಕಟ್ಟಡ ನಿರ್ಮಾಣ ಕಾಮಗಾರಿಗೆ ಹಾಗೂ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣಗಳ ಖರೀದಿಗಾಗಿ ₹7830 ಕೋಟಿ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ

4) ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಧುನಿಕ ಮತ್ತು ವೈಜ್ಞಾನಿಕ ರೀತಿಯಲ್ಲಿ ಶವಸಂಸ್ಕಾರ ಮಾಡಲು ಅನುಕೂಲವಾಗುವಂತೆ 10 ಮಹಾನಗರ ಪಾಲಿಕೆ ಮತ್ತು 24 ನಗರಸಭೆಗಳಲ್ಲಿ ತಲಾ 1 ರಂತೆ 34 ಅಧುನಿಕ ವಿದ್ಯುತ್/ ಅನಿಲ ಚಿತಾಗಾರ ನಿರ್ಮಿಸಲು ನಿರ್ಧಾರ

5) ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಅನೆಕ್ಸ್ ಕಟ್ಟಡಕ್ಕೆ ಅವಶ್ಯವಿರುವ ವೈದ್ಯಕೀಯ ಉಪಕರಣಗಳು ಮತ್ತು ಪೀಠೋಪಕರಣಗಳನ್ನು ₹21.08 ಕೋಟಿ ವೆಚ್ಚದಲ್ಲಿ ಖರೀದಿಸಲು ನಿರ್ಧಾರ.

ಇದನ್ನೂ ಓದಿ: Uchitha Holige Yantra-ಗ್ರಾಮೀಣ ಕೈಗಾರಿಕೆ ಇಲಾಖೆಯಿಂದ ಉಚಿತ ಹೊಲಿಗೆ ಯಂತ್ರ!

6) ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಷ್ಟ್ರೀಯ ವಿಪತ್ತು ಉಪಶಮನ ನಿಧಿ ಅಡಿಯಲ್ಲಿ238 ಕೋಟಿ ಅಂದಾಜು ಮೊತ್ತದಲ್ಲಿ ನಗರ ಪ್ರವಾಹ ಅಪಾಯ ನಿರ್ವಹಣೆ ಕಾರ್ಯಕ್ರಮ ಅನುಷ್ಠಾನಗೊಳಿಸಲು ನಿರ್ಧಾರ

7) ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಅನುಮೋದನೆಯಾಗಿ ಸ್ಥಗಿತಗೊಂಡಿದ್ದ 61,894 ಮನೆಗಳ ನಿರ್ಮಾಣ ಕಾರ್ಯವನ್ನು 12,643 ಕೋಟಿ ವೆಚ್ಚದಲ್ಲಿ ಪುನರಾರಂಭಿಸಲು ನಿರ್ಧಾರ

8) ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ 7 ಶೀತಲ ಗೃಹಗಳ ನಿರ್ಮಾಣ ಹಾಗೂ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನೂತನ ಒಣಮೆಣಸಿನಕಾಯಿ ಮಾರುಕಟ್ಟೆ ನಿರ್ಮಿಸುವ 1118 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ.

ಇದನ್ನೂ ಓದಿ: Solar Subsidy-ಮನೆ ಮೇಲೆ ಸೋಲಾರ್ ಅಳವಡಿಕೆಗೆ ₹78,000 ರೂ ಸಬ್ಸಿಡಿ ಪಡೆಯಲು ಅರ್ಜಿ!

9) 1246 ಕೋಟಿ ವೆಚ್ಚದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಹಿಂದುಳಿದ ವರ್ನಗಳ ಕಲ್ಯಾಣ ಇಲಾಖೆಯ 10 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ತೀರ್ಮಾನ

10) 2413 ಕೋಟಿ ವೆಚ್ಚದಲ್ಲಿ ಬ್ರಾಂಡ್‌ ಬೆಂಗಳೂರು ಯೋಜನೆ ಅಡಿಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಅನುಮೋದನೆ

11) ₹33.07 ಕೋಟಿ ಅಂದಾಜು ಮೊತ್ತದಲ್ಲಿ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ 100 ಹಾಸಿಗೆ ಸಾಮರ್ಥ್ಯದ ನ್ಯೂರೋಲಜಿ ಮತ್ತು ನ್ಯೂರೋ ಸರ್ಜರಿ ವಿಭಾಗದ ಕಟ್ಟಡ ಕಾಮಗಾರಿಗೆ ಅನುಮೋದನೆ

12) ಸಂಜಯ್ ಗಾಂಧಿ ಟ್ರಾಮಾ ಮತ್ತು ಅಸ್ಥಿಚಿಕಿತ್ಸಾ ಸಂಸ್ಥೆಯ ಆವರಣದಲ್ಲಿ ಕ್ರೀಡಾ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸಾ ವಿಭಾಗದ ನೂತನ ಕಟ್ಟಡಕ್ಕೆ ಅವಶ್ಯಕವಿರುವ ವೈದ್ಯಕೀಯ ಉಪಕರಣಗಳು, ಪೀಠೋಪಕರಣಗಳನ್ನು ₹14 ಕೋಟಿ ವೆಚ್ಚದಲ್ಲಿ ಖರೀದಿಸಲು ತೀರ್ಮಾನ

Gas Safety-ಮನೆಯಲ್ಲಿ ಬಳಕೆ ಮಾಡುವ ಗ್ಯಾಸ್ ಸಿಲಿಂಡರ್ ಕುರಿತು ಈ ಮಾಹಿತಿ ತಪ್ಪದೇ ತಿಳಿಯಿರಿ!

0

ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ಗ್ಯಾಸ್ ಸಿಲಿಂಡರ್ ಅನ್ನು ಅಡುಗೆ ತಯಾರಿಕೆಗೆ ಬಳಕೆ(Gas Safety Tips) ಮಾಡುತ್ತಾರ‍ೆ ಅದ್ದರಿಂದ ಇಂದು ಈ ಅಂಕಣದಲ್ಲಿ ಗ್ಯಾಸ್ ಸಿಲಿಂಡರ್ ಸುರಕ್ಷತೆಯಾಗಿ ಬಳಕೆ ಮಾಡುವುದರ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಸಿಲಿಂಡರ್ ಬಳಕೆ ಮಾಡುವುದರ ಕುರಿತು ಎಷ್ಟು ಮುನ್ನೆಚ್ಚರಿಕೆ ಕ್ರಮ ಅನುಸರಿಸಿದರು ಕಡಿಮೆಯೇ ಅಡುಗೆ ತಯಾರಿ(How to Detect a Gas Leak) ಮಾಡುವಾಗ ಅಡುಗೆ ಸಿದ್ದಪಡಿಸಿದ ಬಳಿಕ ಇದರ ಬಳಕೆ ಕುರಿತು ಒಂದಿಷ್ಟು ಅಗತ್ಯವಾಗಿ ತಿಳಿದುಕೊಳ್ಳಬೇಕಾದ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಬಹುತೇಕ ಗ್ರಾಮೀಣ ಮತ್ತು ನಗರ ಭಾಗದಲ್ಲಿ ವಾಸ ಮಾಡುವ ಎಲ್ಲರ ಮನೆಯಲ್ಲಿಯು ಸಹ ಸಿಲಿಂಡರ್ ಅನ್ನು ನಾವು ಕಾಣಬವುದು ಇವುಗಳನ್ನು ಸರಿಯಾಗಿ ಬಳಸದಿದ್ದರೆ ಅಪಾಯಕಾರಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಗ್ಯಾಸ್ ಸಿಲಿಂಡರ್ ಗಳನ್ನು ಸುರಕ್ಷಿತವಾಗಿ ಬಳಸುವ ವೇಳೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ವಿವರ ಈ ಕೆಳಗಿನಂತಿದೆ.

ಇದನ್ನೂ ಓದಿ: Kisan ID Card-ಪಿಎಂ ಕಿಸಾನ್ ಹಣ ಪಡೆಯಲು ನೂತನ ಐಡಿ ಕಾರ್ಡ! ಇಲ್ಲಿದೆ ಸಂಪೂರ್ಣ ವಿವರ!

Gas Leak Safety Tips- ಗ್ಯಾಸ್ ಸಿಲಿಂಡರ್ ಸುರಕ್ಷತೆ ಕುರಿತು ಪ್ರಮುಖವಾಗಿ ಗಮನಿಸಬೇಕಾಗದ ಅಂಶಗಳು:

Gas Cylinder-ಸಿಲಿಂಡರ್ ಆಯ್ಕೆ:

ಪ್ರತಿ ತಿಂಗಳು ಮನೆಗೆ ಬೇಕಾಗುವ ಸಿಲಿಂಡರ್ ಅನ್ನು ಅಧಿಕೃತ ವಿತರಕರಿಂದ ಮಾತ್ರ ಖರೀದಿಸಬೇಕು.

ಮನೆ ಬಾಗಿಲಿಗೆ ಏಜೆನ್ಸಿ ಅವರು ಸಿಲಿಂಡರ್‌ ಅನ್ನು ತೆಗೆದುಕೊಂಡು ಬಂದ ಸಮಯದಲ್ಲಿ ಒಮ್ಮೆ ಸಿಲಿಂಡರ್‌ನಲ್ಲಿ ಯಾವುದೇ ಹಾನಿ ಅಗಿದಿಯೇ ಇಲ್ಲವೇ ಎಂದು ಖಚಿತಪಡಿಸಿಕೊಂಡ ಬಳಿಕವೇ ಮನೆ ಒಳಗೆ ಸಿಲಿಂಡರ್ ಅನ್ನು ತೆಗೆದುಕೊಂಡು ಹೋಗಬೇಕು.

ಸಿಲಿಂಡರ್‌ನಲ್ಲಿರುವ ನಮೂದಿಸಿರುವ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.

ಹಳೆಯ ಮತ್ತು ಹಾನಿಗೊಳಗಾದ ಸಿಲಿಂಡರ್‌ಗಳನ್ನು ಬಳಸಬೇಡಿ.

ಇದನ್ನೂ ಓದಿ: Uchitha Holige Yantra-ಗ್ರಾಮೀಣ ಕೈಗಾರಿಕೆ ಇಲಾಖೆಯಿಂದ ಉಚಿತ ಹೊಲಿಗೆ ಯಂತ್ರ!

Gas Cylinder

Gas Cylinder Leakage Detector- ಮನೆಯಲ್ಲಿ ಸಿಲಿಂಡರ್ ಇಡುವ ಸ್ಥಾನದ ಕುರಿತು ಈ ಕೆಳಗಿನ ಕ್ರಮ ಅನುಸರಿಸಿ:

ಮನೆಯಲ್ಲಿ ಸಿಲಿಂಡರ್‌ನ್ನು ಸಮತಟ್ಟಾದ ಮತ್ತು ಚೆನ್ನಾಗಿ ಗಾಳಿ ಬೀಸುವ ಜಾಗದಲ್ಲಿ ಇಡಬೇಕು ಅಥವಾ ಮನೆಯ ಹೊರಗಡೆಯಿಂದ ಪೈಪ್ ಲೈನ್ ಮಾಡಿಸಿ ಸಿಲಿಂಡರ್ ಅನ್ನು ಮನೆಯ ಹೊರಗೆ ಇರಿಸಿದರೆ ಬಹಳ ಉತ್ತಮ ಆಯ್ಕೆಯಾಗಿರುತ್ತದೆ.

ಮನೆಯಲ್ಲಿ ಸಿಲಿಂಡರ್ ಇಡುವ ಜಾಗಕ್ಕೆ ಸಿಲಿಂಡರ್‌ ಗೆ ನೇರವಾಗಿ ಸೂರ್ಯನ ಬೆಳಕು ಅಥವಾ ಬಿಸಿ ವಸ್ತು ತಾಕುವಂತಿರಬಾರದು.

ಭರ್ತಿಯಾದ ಸಿಲಿಂಡರ್‌ನ್ನು ಯಾವುದೇ ಕಾರಣಕ್ಕು ಅಡ್ಡ ಮಲಗಿಸಿ ಇಡಬಾರದು.

ಇದನ್ನೂ ಓದಿ: Solar Subsidy-ಮನೆ ಮೇಲೆ ಸೋಲಾರ್ ಅಳವಡಿಕೆಗೆ ₹78,000 ರೂ ಸಬ್ಸಿಡಿ ಪಡೆಯಲು ಅರ್ಜಿ!

ಸಿಲಿಂಡರ್ ರೆಗ್ಯುಲೇಟರ್ ಬಳಕೆ ಕುರಿತು ಅನುಸರಿಸಬೇಕಾದ ಕ್ರಮಗಳು:

ಸಿಲಿಂಡರ್ ಗೆ ಹಾಕುವ ರೆಗ್ಯುಲೇಟರ್ ಅನ್ನು ಅಧಿಕೃತ ಮಾರಾಟಗಾರಿಂದಲೇ ಖರೀದಿ ಮಾಡಿರಿ ಸ್ಥಳೀಯ ಮಾರುಕಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಖರೀದಿ ಮಾಡಬೇಕು.
ರೆಗ್ಯುಲೇಟರ್ ಅನ್ನು ಸರಿಯಾಗಿ ಜೋಡಿಸಿ ಮತ್ತು ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೆಂದು ಒಮ್ಮೆ ಖಚಿತಪಡಿಸಿಕೊಳ್ಳಿ.

ಹಾಳಾಗಿರುವ ಅಥವಾ ಹಾನಿಗೊಳಗಾದ ರೆಗ್ಯುಲೇಟರ್‌ಗಳನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಬೇಡಿ.

ಕಾಲ ಕಾಲಕ್ಕೆ ಹಳೆಯದಾದ ರೆಗ್ಯುಲೇಟರ್‌ನ್ನು ಪರಿಶೀಲಿಸಿ ಮತ್ತು ಅಗತ್ಯ ಅನಿಸಿದ್ದಲ್ಲಿ ಕೆಲವು ವರ್ಷ ಕಳೆದ ಬಳಿಕ ರೆಗ್ಯುಲೇಟರ್‌ ಅನ್ನು ಬದಲಾವಣೆ ಮಾಡಿಕೊಳ್ಳಿ.

ಪ್ರತಿ ದಿನ ಅಡುಗೆ ಮುಗಿದ ನಂತರ ಗ್ಯಾಸ್ ಸರಬರಾಜನ್ನು ನಿಲ್ಲಿಸಿ ಮತ್ತು ರೆಗ್ಯುಲೇಟರ್‌ ನಲ್ಲಿ ಗ್ಯಾಸ್ ಸರಬರಾಜನ್ನು ಸಂಪೂರ್ಣ ಸ್ಥಗಿತಗೊಳಿಸಿ.

ಇದನ್ನೂ ಓದಿ: Fertilizer Shop- ಬೀಜ ಮತ್ತು ಗೊಬ್ಬರ ಅಂಗಡಿ ಪರವಾನಗಿ ಪಡೆಯುವುದು ಹೇಗೆ? ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು?

Gas leak Detector-ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯನ್ನು ಪರಿಶೀಲನೆ:

ನಿಮಗೆ ಮನೆಯಲ್ಲಿ ಗ್ಯಾಸ್ ಸೋರಿಕೆ ವಾಸನೆ ಬಂದರೆ ಕೂಡಲೇ ಸೋಪ್ ನೀರನ್ನು ಬಳಸಿ ಗ್ಯಾಸ್ ಸೋರಿಕೆ ಇದೆಯೇ ಎಂದು ಪರಿಶೀಲಿಸಿ.

ಒಂದೊಮ್ಮೆ ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆ ಕಂಡುಬಂದರೆ ತಕ್ಷಣ ಗ್ಯಾಸ್ ಸರಬರಾಜನ್ನು ನಿಲ್ಲಿಸಿ ಮತ್ತು ಅಧಿಕೃತ ತಂತ್ರಜ್ಞರ ಸಹಾಯ ಪಡೆಯಿರಿ.

ಸಿಲಿಂಡರ್ ನಿಂದ ಗ್ಯಾಸ್ ಲಿಂಕ್/ಸೋರಿಕೆ ಅದ ಸಂದರ್ಭದಲ್ಲಿ ಬೆಂಕಿ ಅಥವಾ ವಿದ್ಯುತ್ ಸ್ವಿಚ್‌ಗಳನ್ನು ಯಾವುದೇ ಕಾರಣಕ್ಕೂ ಆನ್ ಮಾಡಬೇಡಿ.

ಒಂದೊಮ್ಮೆ ಗ್ಯಾಸ್ ಲಿಂಕ್ ಅಗಿ ಬೆಂಕಿ ಹತ್ತಿಕೊಂಡರೆ ಒಂದು ಗೋಣಿ ಚೀಲವನ್ನು ತೆಗೆದುಕೊಂಡು ನೀರಿನಲ್ಲಿ ಸಂಪೂರ್ಣವಾಗಿ ನೆನ್ನೆಸಿ ಸಿಲಿಂಡಗೆ ಮುಚ್ಚಲು ಪ್ರಯತ್ನಿಸಿ ಬೆಂಕಿ ನಂದಿಸಲು ಪ್ರಯತ್ನಿಸಿ. ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಅಗ್ನಿಶಾಮಕ ಇಲಾಖೆಯ ತುರ್ತು ಸಹಾಯವಾಣಿಗೆ ಕರೆ ಮಾಡಿ.