- Advertisment -
HomeNew postsNTPC Recruitment 2024 - ಇಂಧನ ಇಲಾಖೆಯಲ್ಲಿ ಸರ್ವೇಯರ್ ಹುದ್ದೆಗಳ ನೇಮಕಾತಿ

NTPC Recruitment 2024 – ಇಂಧನ ಇಲಾಖೆಯಲ್ಲಿ ಸರ್ವೇಯರ್ ಹುದ್ದೆಗಳ ನೇಮಕಾತಿ

Last updated on September 30th, 2024 at 08:15 am

ಭಾರತ ದೇಶದ ಅತಿ ದೊಡ್ಡ ಇಂಧನ ಸಂಸ್ಥೆಯಾಗಿರುವಂತಹ ನ್ಯಾಷನಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ 144 ಹುದ್ದೆಗಳನ್ನು ನೇಮಕಾತಿ(NTPC Recruitment 2024 ) ಮಾಡಿಕೊಳ್ಳಲು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.

ಸರ್ವೆಯರ್ ಸೇರಿದಂತೆ ಹಲವಾರು ಹುದ್ದೆಗಳಿಗೆ ಈbನೇಮಕಾತಿ ನಡೆಯುತ್ತಿದ್ದು, ನೇಮಕಾತಿಯ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ಅರ್ಹತೆಗಳು, ಅರ್ಜಿ ಸಲ್ಲಿಸುವ ಮಾಹಿತಿ, ಆಯ್ಕೆಯಾದವರಿಗೆ ಇರುವ ವೇತನ ಶ್ರೇಣಿ, ಅರ್ಜಿ ಶುಲ್ಕಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣ ಮಾಹಿತಿಯ ಜೊತೆಗೆ ಅಧಿಸೂಚನೆಯನ್ನು ಓದಿ ನಂತರ ಅರ್ಜಿ ಸಲ್ಲಿಸಿರಿ.

ಇದನ್ನೂ ಓದಿ: free Hostel Application-2024: ಉಚಿತ ಹಾಸ್ಟೆಲ್ ಪ್ರವೇಶಾತಿಗೆ ಅರ್ಜಿ! ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸುವ ಲಿಂಕ್ ಬಿಡುಗಡೆ!

NTPC Recruitment 2024 – National Thermal Power Corporation Limited : ನೇಮಕಾತಿ ವಿವರ : 

• ನೇಮಕಾತಿ ಇಲಾಖೆ – ನ್ಯಾಷನಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ 
• ಒಟ್ಟು ಹುದ್ದೆಗಳ ಸಂಖ್ಯೆ – 144 ಹುದ್ದೆಗಳು 
• ಅರ್ಜಿ ಸಲ್ಲಿಕೆ – ಆನ್ಲೈನ್ ಮುಕಾಂತರ 

ಹುದ್ದೆಗಳ ವಿಂಗಡಣೆ – 

• ಮೈನಿಂಗ್ ಓವರ್ ಮ್ಯಾನ್ – 67 ಹುದ್ದೆ 
• ಮ್ಯಾಜಿಕ್ ಇನ್ ಚಾರ್ಜ್ – 9 ಹುದ್ದೆ 
• ಯಾಂತ್ರಿಕ ಮೇಲ್ವಿಚಾರಕರು – 28 ಹುದ್ದೆ 
• ವಿದ್ಯುತ್ ಮೇಲ್ವಿಚಾರಕರು – 26 ಹುದ್ದೆ 
• ವೃತ್ತಿಪರ ತರಬೇತಿ ಭೋದಕರು – 08 ಹುದ್ದೆ 
• ಜೂನಿಯರ್ ಮೈನ್ಸ್ ಸರ್ವೆಯರ್ – 03 ಹುದ್ದೆ 
• ಮೈನಿಂಗ್ ಸಿರ್ದಾರ – 03 ಹುದ್ದೆ 

ಇದನ್ನೂ ಓದಿ: karnataka dams water level: ರಾಜ್ಯದ ಯಾವ ಜಲಾಶಯಕ್ಕೆ ಎಷ್ಟು ನೀರು ಹರಿದು ಬರುತ್ತಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ಶೈಕ್ಷಣಿಕ ಹಾಗೂ ವಯೋಮಿತಿ ಅರ್ಹತೆಗಳು : Educational and Age limit eligibility 

ಈ ನೇಮಕಾತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 10ನೇ ತರಗತಿ ಪಾಸಾದವರು ಡಿಪ್ಲೋಮಾ ಮುಗಿಸಿದವರು ಹಾಗೂ ಪದವಿ ಮುಗಿಸಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಇದರ ಜೊತೆಗೆ ವೃತ್ತಿ ಅನುಭವವನ್ನು ಹೊಂದಿರಬೇಕು.

ವಯೋಮಿತಿ ಅರ್ಹತೆಗಳನ್ನು ನೋಡುವುದಾದರೆ ಅರ್ಜಿ ಸಲ್ಲಿಸುವವರು ಗರಿಷ್ಠ 30 ವರ್ಷದ ಒಳಗಿರಬೇಕು. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ವರ್ಗಗಳಿಗೆ ಅನುಗುಣವಾಗಿ ಸಡಿಲಿಕೆ ನೀಡಲಾಗುತ್ತದೆ.

Pay Scale : ಈ ನೇಮಕಾತಿಯಲ್ಲಿ ಅಂತಿಮವಾಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನೇಮಕಾತಿಯ ನಿಯಮಗಳಿಗೆ ಅನುಸಾರ ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

ಇದನ್ನೂ ಓದಿ: Veterinary department-ಪಶುಪಾಲನಾ ಇಲಾಖೆಯಿಂದ ಯಾವೆಲ್ಲ ಯೋಜನೆಯಡಿ ಸೌಲಭ್ಯ ಪಡೆಯಬಹುದು?

NTPC Recruitment 2024 – ಅರ್ಜಿ ಶುಲ್ಕ : 

• ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 300 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಬೇಕು.
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶೇಷ ಚೇತನ, ಮಹಿಳಾ ಅಭ್ಯರ್ಥಿಗಳ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು.

 ನೇಮಕಾತಿಗೆ ಅರ್ಜಿ ಸಲ್ಲಿಸಲು ನಿಗದಿಸಿರುವ ಪ್ರಮುಖ ದಿನಾಂಕಗಳು : 

• ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ – 20 ಜುಲೈ 2024
• ಅರ್ಜಿ ಸಲ್ಲಿಕೆ ಮುಕ್ತಾಯವಾಗುವ ದಿನಾಂಕ – 05 ಆಗಸ್ಟ್ 2024

ಪ್ರಮುಖ ಲಿಂಕುಗಳು: 

• ಅರ್ಜಿ ಸಲ್ಲಿಸುವ ಲಿಂಕ್ – Click here
• ಅಧಿಸೂಚನೆ – ಡೌನ್ಲೋಡ್ 

- Advertisment -
LATEST ARTICLES

Related Articles

- Advertisment -

Most Popular

- Advertisment -