HomeAgriculturePM-kisan amount- ಈ ರೀತಿ ಸಂದೇಶ ಬಂದವರಿಗಿಲ್ಲಾ ಪಿ ಎಂ ಕಿಸಾನ್ ಯೋಜನೆ ಹಣ!

PM-kisan amount- ಈ ರೀತಿ ಸಂದೇಶ ಬಂದವರಿಗಿಲ್ಲಾ ಪಿ ಎಂ ಕಿಸಾನ್ ಯೋಜನೆ ಹಣ!

ಪಿ ಎಂ ಕಿಸಾನ್ ಯೋಜನೆಯಡಿ(Pm kisan yojana) ಅರ್ಥಿಕ ಸಹಾಯಧನ ಪಡೆಯುಲು ಅರ್ಜಿ ಸಲ್ಲಿಸಿದ ಕೆಲವು ರೈತರಿಗೆ ಈ ರೀತಿ ಸಂದೇಶ ಬಂದಿದ್ದರೆ ಕೂಡಲೇ ಈ ಅಂಕಣದಲ್ಲಿ ವಿವರಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಅರ್ಜಿ ಸರಿಯಾಗಿದಿಯೇ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(PM-kisan)ಕೇಂದ್ರ ಸರಕಾರದಿಂದ ದೇಶ ಎಲ್ಲಾ ರೈತರಿಗೆ ನಾಲ್ಕು ತಿಂಗಳಿಗೊಮ್ಮೆ 2,000 ದಂತೆ ವಾರ್ಷಿಕ 6,000 ರವನ್ನು ರೈತರ ಖಾತೆಗೆ ನೆರವಾಗಿ ವರ್ಗಾಹಿಸಲಾಗುತ್ತದೆ.

ಈ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ಅರ್ಜಿ ಸಲ್ಲಿಸಿದ ಕೆಲವು ರೈತರು ತಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಮಾಡಿಕೊಂಡಿರುವುದಿಲ್ಲ ಇಂತಹ ರೈತರಿಗೆ ಸರಕಾರದಿಂದ ಹಣ ವರ್ಗಾವಣೆ ಮಾಡಲು ತಾಂತ್ರಿಕ ಸಮಸ್ಯೆ ಎದುರಾಗಿರುವುದರಿಂದ ಈ ರೈತರ ಮೊಬೈಲ್ ಸಂಖ್ಯೆಗೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿ NPCI ಲಿಂಕ್ ಮಾಡಿಕೊಳ್ಳಿ ಎಂದು ಕೃಷಿ ಇಲಾಖೆಯಿಂದ ಮೇಸೆಜ್ ಕಳುಹಿಸಲಾಗಿದೆ.

ಇದನ್ನೂ ಓದಿ: Gruhalakhsmi-2023: ಅರ್ಜಿ ಸಲ್ಲಿಸಿದರು ಗೃಹಲಕ್ಷ್ಮಿ ಹಣ ಜಮಾ ಅಗದಿರಲು ಕಾರಣವೇನು? ಇವರಿಗೆ ಹಣ ಯಾವಾಗ ಜಮಾ ಅಗಲಿದೆ!

ರೈತರಿಗೆ ಕೃಷಿ ಇಲಾಖೆಯಿಂದ ಕಳುಹಿಸಲಾದ ಸಂದೇಶ:

Bank account Aadhar link- ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್/NPCI ಮ್ಯಾಪಿಂಗ್ ಎಲ್ಲಿ ಮಾಡಿಸಬೇಕು?

ಈ ಯೋಜನೆಗೆ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿ ರೈತರು ತಮ್ಮ ಅಕೌಂಟ್ ಇರುವ ಬ್ಯಾಂಕ್ ಶಾಖೆಗೆ ಆಧಾರ್ ಕಾರ್ಡ ಮತ್ತು ಮೊಬೈಲ್ ಸಂಖ್ಯೆ ಸಹಿತ ಭೇಟಿ ಮಾಡಿ ಅಲ್ಲಿ ಸಿಗುವ ಅರ್ಜಿ ಪಾರ್ಮ್ ಭರ್ತಿ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಥವಾ NPCI ಮ್ಯಾಪಿಂಗ್ ಮಾಡಿಕೊಳ್ಳಬವುದು.

How to check NPCI Status- ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್/NPCI ಮ್ಯಾಪಿಂಗ್ ಅಗಿರುವುದನ್ನು ಚೆಕ್ ಮಾಡುವುದು ಹೇಗೆ?

ಈ ಯೋಜನೆಯಡಿ ಹಿಂದಿನ ಕಂತನ್ನು ಪಡೆದುಕೊಂಡಿರುವವರು ಚಿಂತೆ ಮಾಡುವ ಅವಶ್ಯಕತೆಯಿರುವುದಿಲ್ಲ ಏಕೆಂದರೆ ನಿಮ್ಮ ಅರ್ಜಿಯ ಎಲ್ಲಾ ಮಾಹಿತಿಯು ಸರಿಯಾಗಿರುತ್ತದೆ. ಒಂದೊಮ್ಮೆ ಈ ಹಿಂದೆ ವರ್ಗಾಹಿಸಿದ ಹಣ ನಿಮಗೆ ಬರದಿದ್ದರೆ ಒಮ್ಮೆ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್/NPCI ಮ್ಯಾಪಿಂಗ್ ಅಗಿರುವುದನ್ನು ಖಚಿತಪಡಿಸಿಕೊಳ್ಳಿ.

Step-1: ಈ ಲಿಂಕ್ https://play.google.com/store/apps/details?id=com.dbtkarnataka ಮೇಲೆ ಕ್ಲಿಕ್ ಮಾಡಿ DBT Karnataka ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ನಿಮ್ಮ 12 ಅಂಕಿಯ ಆಧಾರ್ ಸಂಕ್ಯೆಯನ್ನು ನಮೂದಿಸಬೇಕು.

Step-2: ಇದಾದ ಬಳಿಕ ಆಧಾರ್ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಬರುವ 6 ಅಂಕಿಯ OTP ಅನ್ನು ನಮೂದಿಸಿ Verify OTP ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ತದನಂತರ ನಿಮಗೆ ನೆನಪಿನಲ್ಲಿ ಇಟ್ಟುಕೊಳ್ಳಲು ಸಹಕಾರಿಯಾಗುವಂತಹ 4 ಅಂಕಿಯ ಪಾಸ್ವರ್ಡ್ ಅನ್ನು ಎರಡು ಭಾರಿ ಹಾಕಿ “SUBMIT” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-4: ಈಗ ನೀವು ಇ ಮೊಬೈಲ್ ಅಪ್ಲಿಕೇಶನ್ ಗೆ ಲಾಗಿನ್ ಅಗುತ್ತೀರಿ ಮುಖಪುಟದಲ್ಲಿ Seeding Status of Aadhar in bank account ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಅಗಿದೆ ಎಂದು ತೊರಿಸಬೇಕು ಒಂದು ವೇಳೆ ಯಾವುದೇ ಬ್ಯಾಂಕ್ ವಿವರ ತೋರಿಸಿಲ್ಲ ಎಂದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್/NPCI ಮ್ಯಾಪಿಂಗ್ ಅಗಿರುವುದಿಲ್ಲ ಎಂದು.

PM kisan ಯೋಜನೆ ಅರ್ಜಿಯ ಎಲ್ಲಾ ಮಾಹಿತಿ ಈ ವೆಬ್ಸೈಟ್ ನಲ್ಲಿ ಲಭ್ಯ:

ಅರ್ಜಿದಾರರು ಕೇಂದ್ರ ಸರಕಾರದ ಈ https://www.pmkisan.gov.in ವೆಬ್ಸೈಟ್ ಭೇಟಿ ಮಾಡಿ PM kisan ಯೋಜನೆಯಡಿ ಹಣ ಪಡೆಯಲು ನೀವು ಸಲ್ಲಿಸಿದ ಅರ್ಜಿ ಸ್ಥಿತಿ, ಯಾವಾಗ ಮುಂದಿನ ಕಂತಿನ ಹಣ ಜಮಾ ಅಗುತ್ತದೆ?ಗ್ರಾಮವಾರು ಫಲಾನುಭವಿ ಪಟ್ಟಿ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬವುದಾಗಿದೆ.

PM kisan ಅರ್ಜಿ ಸ್ಥಿತಿ ಚೆಕ್ ಮಾಡಲು: Click here
ಹಳ್ಳಿವಾರು ಫಲಾನುಭವಿ ಪಟ್ಟಿ ಪಡೆಯಲು: Click here

Most Popular

Latest Articles

Related Articles