PM-kisan: ಪಿ ಎಮ್ ಕಿಸಾನ್ ಯೋಜನೆಯಡಿ ಸಹಾಯಧನ ಪಡೆಯುವ ರೈತರಿಗೆ ಮಹತ್ವದ ಮಾಹಿತಿ.

ಪಿ.ಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ವಾರ್ಷಿಕ ಆರು ಸಾವಿರ ರೂಪಾಯಿಗಳ ಆರ್ಥಿಕ ಸೌಲಭ್ಯ ಪಡೆಯುವ ಅರ್ಹ ರೈತ ಫಲಾನುಭವಿಗಳು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ, ಈ ಹಿಂದೆ ಅನೇಕ ಭಾರಿ ಇ-ಕೆವೈಸಿ ಮಾಡಲು ರೈತರಿಗೆ ಕೃಷಿ ಇಲಾಖೆಯಿಂದ ಅಗತ್ಯ ಸೂಚನೆ ನೀಡಲಾಗಿರುತ್ತದೆ.

ಇದನ್ನು ಹೊರತುಪಡಿಸಿಯೂ ಇನ್ನೂ ಹಲವು ರೈತರು ಇ-ಕೆವೈಸಿ ಮಾಡಿಸಿಲ್ಲದೇ ಇರುವುದರಿಂದ ಈಗ ಕೃಷಿ ಇಲಾಖೆ ಅಧಿಕಾರಿಗಳು ಅಯ್ದ ದಿನಗಳಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕ್ಷೇತ್ರ ಭೇಟಿ ಮಾಡಿ ಇ-ಕೆವೈಸಿ ಮಾಡಿಸಿಕೊಳ್ಳದ ಫಲಾನುಭವಿ ರೈತರನ್ನು ಭೇಟಿ ಮಾಡಿ ತಾವೇ ಇ-ಕೆವೈಸಿ ಮಾಡುತ್ತಿದ್ದಾರೆ. ಈ ಮಾಹಿತಿಯನ್ನು ನಿಮ್ಮ ಅಕ್ಕಪಕ್ಕದ ರೈತರಿಗೆ ತಿಳಿಸಲು ಕೋರಿದೆ ಇದರಿಂದ ಇ-ಕೆವೈಸಿ ಮಾಡಿಸದ ರೈತರು ಇ-ಕೆವೈಸಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ.

ರೈತರು ಇ-ಕೆವೈಸಿ ಮಾಡಿಸದೇ ಹಾಗೆ ಇದಲ್ಲಿ ಮುಂದಿನ ಪಿ.ಎಂ ಕಿಸಾನ್ ಯೋಜನೆಯ ಅರ್ಥಿಕ ನೆರವನ್ನು ಸ್ಥಗಿತಗೊಳಿಸಲಾಗುವುದು ಎಂದು ಕೃಷಿ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

ಇಲ್ಲಿಯವರೆಗೆ ಇ-ಕೆವೈಸಿ ಮಾಡಿಸದ ರೈತ ಫಲಾನುಭವಿಗಳು ತಮ್ಮ ಆಧಾರ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ಈ ಕೆಳಗೆ ತಿಳಿಸಿದ ವಿಧಾನ ಅನುಸರಿಸಿ ಇ-ಕೆವೈಸಿ ಮಾಡಿಕೊಳ್ಳಬವುದಾಗಿದೆ.

ಇದನ್ನೂ ಓದಿ: 2000 rs Note Ban: ₹2000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದ ಆರ್‌ಬಿಐ! ಈ ದಿನಾಂಕದ ಒಳಗೆ ನಿಮ್ಮ ಬಳಿಯಿರುವ ನೋಟುಗಳನ್ನು ಬ್ಯಾಂಕ್ ಗೆ ಹಿಂತಿರುಗಿಸಿ.

ಗ್ರಾಮ ಒನ್ ಕೇಂದ್ರ, ಸಾಮಾನ್ಯ ಗ್ರಾಹಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಥವಾ ಒಟಿಪಿ ಮೂಲಕ ಈ ಕೆವೈಸಿ ಮಾಡಿಸಬಹುದು. ಇದರ ಜೊತೆಗೆ ಫಲಾನುಭವಿಗಳು ಸ್ವತಃ ತಾವೇ ಪಿಎಂ ಕಿಸಾನ್ ವೆಬ್ಸೈಟ್ ಭೇಟಿ ಮಾಡುವ ಮೂಲಕ ಮೊಬೈಲ್ ಗೆ ಒಟಿಪಿ ಪಡೆದು ಇ-ಕೆವೈಸಿ ಮಾಡಬಹುದು.

ತಾವೇ ಇ-ಕೆವೈಸಿ ಮಾಡುವ ವಿಧಾನ:

ನಿಮ್ಮ ಮೊಬೈಲ್ ನಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://exlink.pmkisan.gov.in/aadharekyc.aspx ನಿಮ್ಮ ಆಧಾರ್ ನಂಬರ್ ಮತ್ತು ಆಧಾರ್ ಜೋಡಣೆಯಾಗಿರುವ ಮೊಬೈಲ್ ನಂಬರ್ ಹಾಕಿ, ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಪಡೆದು ಅದನ್ನು ನಮೂದಿಸಿ ಇ-ಕೆವೈಸಿ ಮಾಡಬವುದಾಗಿದೆ.

ಈಗಾಗಲೇ ಇ-ಕೆವೈಸಿ ಮಾಡಿಕೊಂಡಿರು ರೈತರು https://exlink.pmkisan.gov.in/aadharekyc.aspx ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿದಾಗ "already E-kyc done" ಎಂದು ಗೋಚರಿಸುತ್ತದೆ. ಈ ರೀತಿ ಮಾಡಿ ಇ-ಕೆವೈಸಿ ಅಗಿರುವುದನ್ನು ಖಚಿತಪಡಿಸಿಕೊಳ್ಳಬವುದು.

ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಸಂಪರ್ಕಿಸಬಹುದು.