Post matric scholarship-ರಾಜ್ಯ ಸರಕಾರದಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ! ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಬವುದು.

December 4, 2023 | Siddesh

ಅರ್ಥಿಕವಾಗಿ ಹಿಂದುಳಿದ ಗ್ರಾಮೀಣ ಮತ್ತು ನಗರ ಪ್ರದೇಶದ ಮಕ್ಕಳಿಗೆ ವಿದ್ಯಾಭ್ಯಾಸ ಮುಂದುವರೆಸಿಕೊಂಡು ಹೋಗಲು ಅರ್ಥಿಕವಾಗಿ ನೆರವಾಗಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿವೇತನ,ಶುಲ್ಕ ಮರುಪಾವತಿ, ವಿದ್ಯಾಸಿರಿ ಊಟ ಮತ್ತು ವಸತಿ ಸಹಾಯ ಯೋಜನೆ, ಸೌಲಭ್ಯ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಥಿಗಳು ಕೊನೆಯ ದಿನಾಂಕದ ಒಳಗಾಗಿ SSP ಪೋರ್ಟಲ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬವುದು. ಈ ಕೆಳಗೆ ಯಾರೆಲ್ಲ ಅರ್ಜಿ ಸಲ್ಲಿಸಬವುದು? ಅರ್ಜಿ ಸಲ್ಲಿಕೆ ಪ್ರಯೋಜನಗಳೇನು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅಗತ್ಯ ದಾಖಲಾತಿ ಮಾಹಿತಿ ಕುರಿತು ಸಂಪೂರ್ಣ ವಿವರವನ್ನು ತಿಳಿಸಲಾಗಿದೆ.

ಇದನ್ನೂ ಓದಿ: Food Department-ಹೊಸ ರೇಷನ್ ಕಾರ್ಡ ಅರ್ಜಿ ಸಲ್ಲಿಕೆ ಕುರಿತು ಆಹಾರ ಇಲಾಖೆಯಿಂದ ಮತ್ತೊಂದು ಪತ್ರಿಕಾ ಪ್ರಕಟಣೆ!

ಯಾರೆಲ್ಲ ಅರ್ಜಿ ಸಲ್ಲಿಸಬವುದು?

ಮೇಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 , ಅಲೆಮಾರಿ ಮತ್ತು ಅರೆಅಲೆಮಾರಿ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬವುದಾಗಿದೆ.

ಅರ್ಜಿ ಸಲ್ಲಿಕೆ ಪ್ರಯೋಜನಗಳು:

ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದರಿಂದ "ವಿದ್ಯಾರ್ಥಿವೇತನ" ಮತ್ತು "ಶುಲ್ಕ ಮರುಪಾವತಿ" ಹಾಗೂ "ವಿದ್ಯಾಸಿರಿ ಊಟ ಮತ್ತು ವಸತಿ ಸಹಾಯ ಯೋಜನೆ" ಸೌಲಭ್ಯವನ್ನು ವಿದ್ಯಾರ್ಥಿಗಳು ಪಡೆಯಬವುದಾಗಿದೆ.

ಅರ್ಜಿ ಸಲ್ಲಿಸಲು 10 ಜನವರಿ 2024 ಕೊನೆಯ ದಿನ.

ಇದನ್ನೂ ಓದಿ: Bara Parihara-2023: ರಾಜ್ಯ ಸರಕಾರದಿಂದ ಮೊದಲ ಕಂತಿನ ಬರ ಪರಿಹಾರ! ರೈತರಿಗೆ ಮೊದಲನೇ ಕಂತಿನಲ್ಲಿ ಎಷ್ಟು ಹಣ ಸಿಗಲಿದೆ?

Post matric scholarship-ಮೊಬೈಲ್ ನಲ್ಲೇ ಅರ್ಜಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ:

ವಿದ್ಯಾರ್ಥಿವೇತನಕ್ಕೆ ಮೊಬೈಲ್ ನಲ್ಲೇ ಆನ್ಲೈನ್ ಮೂಲಕ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ಸಂಪೂರ್ಣ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: click here

Scholarship Application-ಅರ್ಜಿ ಸಲ್ಲಿಸಲು ಅಗತ್ಯವಾಗಿ ಬೇಕಾಗುವ ದಾಖಲಾತಿಗಳು:

  • ವಿದ್ಯಾರ್ಥಿಯ ಆಧಾ‌ರ್ ಕಾರ್ಡ ಪ್ರತಿ
  • ವಿದ್ಯಾರ್ಥಿಯ ಮೊಬೈಲ್ ನಂಬರ್
  • ವಿದ್ಯಾರ್ಥಿಯ ಇ-ಮೇಲ್ ಐ.ಡಿ.
  • ವಿದ್ಯಾರ್ಥಿಯ ಶಾಲಾ/ಕಾಲೇಜು ನೋಂದಣಿ ಸಂಖ್ಯೆ
  • ವಿದ್ಯಾರ್ಥಿಯ ಹೆಸರಿನಲ್ಲಿ ಇರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್.ಡಿ ನಂಬರ್
  • ವಿದ್ಯಾರ್ಥಿಯು ವಿಕಲಚೇತನರಾಗಿದ್ದಲ್ಲಿ ಯು.ಡಿ.ಐ.ಡಿ ಗುರುತಿನ ಸಂಖ್ಯೆ ಸಲ್ಲಿಸಬೇಕಾಗುತ್ತದೆ.
  • ಹಾಸ್ಟೆಲ್ ನಲ್ಲಿ ಇದ್ದಲ್ಲಿ ಹಾಸ್ಟೆಲ್ ವಿವರ ಸಲ್ಲಿಸಬೇಕಾಗುತ್ತದೆ. 

ಇದನ್ನೂ ಓದಿ: Nigamada Yojane-ಸ್ವಯಂ ಉದ್ಯೋಗ ನೇರಸಾಲ, ಸ್ವಾವಲಂಬಿ ಸಾರಥಿ ಯೋಜನೆ ಸೇರಿ ಇತರೆ ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ!

Kutumba ID-ಕುಟುಂಬ ಐಡಿಯನ್ನು ಮೊಬೈಲ್ ನಲ್ಲಿ ತಿಳಿಯುವ ವಿಧಾನ:

ವಿದ್ಯಾರ್ಥಿಗಳು SSP ಪೋರ್ಟಲ್ ನಲ್ಲಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಲು ಕುಟುಂಬ ಐಡಿ(Kutumba ID) ಬೇಕಾಗುತ್ತದೆ ಇದನ್ನು ಮೊಬೈಲ್ ನಲ್ಲಿ ಹೇಗೆ ಪಡೆಯಬವುದು ಎಂದು ಈ ಕೆಳಗೆ ವಿವರಿಸಲಾಗಿದೆ.

Step-1: ಮೊದಲಿಗೆ ಈ ಲಿಂಕ್ Kutumba ID status ಮೇಲೆ ಕ್ಲಿಕ್ ಮಾಡಿ ಯಾವುದಾದರು ಒಂದು ದಾಖಲಾತಿಯನ್ನು ಆಯ್ಕೆ ಮಾಡಿಕೊಂಡು ರೇಷನ್ ಕಾರ್ಡ ನಂಬರ್/ಆಧಾರ್ ಕಾರ್ಡ ನಂಬರ್/ಪ್ರೂಟ್ಸ್ ಐಡಿ ನಂಬರ್ ಅನ್ನು ಹಾಕಬೇಕು.

Step-2: ತದನಂತರ ನಾಲ್ಕು ಅಂಕಿಯ ಕ್ಯಾಪ್ಚರ್ ಕೋಡ್ ನಮೂದಿಸಿ "Show Data" ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಕುಟುಂಬದ ಐಡಿ ತೋರಿಸುತ್ತದೆ.

ಒಂದೊಮ್ಮೆ ಈ ಮೇಲಿನ ವಿಧಾನ ಅನುಸರಿಸಿದ ಬಳಿಕ ನಿಮಗೆ ಕುಟುಂಬದ ಐಡಿ ಗೋಚರಿಸದಿದ್ದಲ್ಲಿ ಈ ಲಿಂಕ್ Kutumba ID Application link ಮೇಲೆ ಕ್ಲಿಕ್ ಮಾಡಿ ಕುಟುಂಬ ಐಡಿ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಬವುದು.

ಇನ್ನು ಹೆಚ್ಚಿನ ಮಾಹಿತಿಗಾಗಿ:

ಸಹಾಯವಾಣಿ ಸಂಖ್ಯೆ: 8050770004/8050770005

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವೆಬ್ಸೈಟ್: Click here

ಅರ್ಜಿ ಸಲ್ಲಿಸಲು ಲಿಂಕ್: Apply Now

ಇದನ್ನೂ ಓದಿ: Crop information- ಈ ತಂತ್ರಾಶದಲ್ಲಿ ತಾವು ಬೆಳೆದ ಬೆಳೆ ವಿವರ ಇದ್ದಲ್ಲಿ ಮಾತ್ರ ಬೆಳೆ ವಿಮೆ ಪರಿಹಾರ!

Tags:
WhatsApp Group Join Now
Telegram Group Join Now
Share Now: