Power Sprayer-ಸಬ್ಸಿಡಿಯಲ್ಲಿ ರೂ 1,781/- ಪಾವತಿಸಿ ಪವರ್ ಸ್ಪ್ರೇಯರ್ ಪಡೆಯಲು ಅರ್ಜಿ ಆಹ್ವಾನ!

November 2, 2025 | Siddesh
Power Sprayer-ಸಬ್ಸಿಡಿಯಲ್ಲಿ ರೂ 1,781/- ಪಾವತಿಸಿ ಪವರ್ ಸ್ಪ್ರೇಯರ್ ಪಡೆಯಲು ಅರ್ಜಿ ಆಹ್ವಾನ!
Share Now:

ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಪವರ್ ಸ್ಪ್ರೇಯರ್ ಅನ್ನು(Power Sprayer Susbidy) ಪಡೆಯಲು ಅರ್ಹ ರೈತರು ಅಗತ್ಯ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಲು ಅವಕಾಶವಿದ್ದು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಪ್ರಕಟಿಸಲಾಗಿದೆ.

ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ರೋಗ ಮತ್ತು ಕೀಟ ನಿಯಂತ್ರಣ ಮಾಡಲು ಕಾಲ ಕಾಲಕ್ಕೆ ಸಮರ್ಪಕವಾಗಿ ಸಿಂಪರಣೆಯನ್ನು(Power Sprayer Susbidy Application)ಮಾಡಲು ಪವರ್ ಸ್ಪ್ರೇಯರ್ ಒಂದು ಉತ್ತಮ ಉಪಕರಣವಾಗಿದ್ದು ಸಣ್ಣ ಮತ್ತು ಅತೀ ಸಣ್ಣ ರೈತರು ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಪವರ್ ಸ್ಪ್ರೇಯರ್ ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: SBI Degree Scholarship- ಎಸ್.ಬಿ.ಐ ನಿಂದ ಪದವಿ ವಿದ್ಯಾರ್ಥಿಗಳಿಗೆ ರೂ 75,000/- ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಅಹ್ವಾನ!

ಪವರ್ ಸ್ಪ್ರೇಯರ್ ಅನ್ನು ಸಬ್ಸಿಡಿಯಲ್ಲಿ ಪಡೆಯಲು ರೈತರು(Power Sprayer Susbidy Scheme) ಅನುಸರಿಸಬೇಕಾದ ಕ್ರಮಗಳೇನು? ಇದಕ್ಕಾಗಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವುವು? ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Power Sprayer Susbidy Amount-ಪವರ್ ಸ್ಪ್ರೇಯರ್ ಸಬ್ಸಿಡಿ ಮೊತ್ತ ಎಷ್ಟು?

ಕೃಷಿ ಇಲಾಖೆಯಿಂದ ಕೃಷಿ ಯಾಂತ್ರೀಕರಣ ಯೋಜನೆ ಅಡಿಯಲ್ಲಿ ವಿತರಣೆ ಮಾಡುವ ಪವರ್ ಸ್ಪ್ರೇಯರ್ ಯಂತ್ರಕ್ಕೆ(2 Stroke Diesel Knapsack Sprayer)ನಿಗದಿಪಡಿಸಿರುವ ರೈತರು ಯಂತ್ರ ಖರೀದಿ ಮಾಡಲು ಪಾವತಿ ಮಾಡಬೇಕಾದ ಮೊತ್ತ(Farmer Share) ಮತ್ತು ಸಹಾಯಧನ ಮೊತ್ತದ(Subsidy Amount) ವಿವರ ಹೀಗಿದೆ:

1) ಸಾಮಾನ್ಯ ವರ್ಗದ(GEN) ರೈತರಿಗೆ:

  • ಪೂರ್ಣ ದರ: 10,219/-
  • ಸಹಾಯಧನ: 4,688/-
  • ರೈತರ ವಂತಿಕೆ: 5,531/-

ಇದನ್ನೂ ಓದಿ: Power Weeder Susbidy-ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ರೂ 19,031/- ಕ್ಕೆ ಪವರ್ ವೀಡರ್! ಇಲ್ಲಿದೆ ಸಂಪೂರ್ಣ ವಿವರ!

2) ಪ.ಜಾತಿ/ಪ.ಪಂಗಡ(SC/ST) ವರ್ಗದ ರೈತರಿಗೆ:

  • ಪೂರ್ಣ ದರ: 9,375/-
  • ಸಹಾಯಧನ: 8,438/-
  • ರೈತರ ವಂತಿಕೆ: 1,781/-

ಗಮನಿಸಿ:

1) ಕಂಪನಿ ಮತ್ತು ಮಾಡೆಲ್ ವಾರು ಪವರ್ ಪವರ್ ಸ್ಪ್ರೇಯರ್ ಉಪಕರಣದ ಸಬ್ಸಿಡಿ ಮತ್ತು ಪೂರ್ಣ ದರದಲ್ಲಿ ವ್ಯತ್ಯಾಸವಿರುತ್ತದೆ.
2) ಆಯಾ ಜಿಲ್ಲೆಯ ಕೃಷಿ ಇಲಾಖೆಯ ಅನುದಾನ ಲಭ್ಯತೆಯ ಆಧಾರದ ಮೇಲೆ ಕೃಷಿ ಉಪಕರಣಗಳಿಗೆ ಸಹಾಯಧನವನ್ನು ನೀಡಲಾಗುತ್ತದೆ.

How To Apply For Power Sprayer Subsidy-ಅರ್ಜಿ ಸಲ್ಲಿಸುವುದು ಹೇಗೆ?

ಪವರ್ ಸ್ಪ್ರೇಯರ್ ಅನ್ನು ಸಹಾಯಧನದಲ್ಲಿ ಪಡೆಯಲು ಆಸಕ್ತಿಯನ್ನು ಹೊಂದಿರುವ ಅರ್ಹ ರೈತರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ನಮೂನೆಯನ್ನು ಪಡೆದು ಅರ್ಜಿ ಸಲ್ಲಿಸಬಹುದು ಅಥವಾ ಈ ಲೇಖನದಲ್ಲಿ ತಿಳಿಸಿರುವ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕವು ಸಹ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Fast Food Business-ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ಆರಂಭಿಸಲು ಉಚಿತ ತರಬೇತಿಗೆ ಅರ್ಜಿ ಆಹ್ವಾನ!

Power Sprayer

Required Documents For Application-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ಪವರ್ ಸ್ಪ್ರೇಯರ್ ಉಪಕರಣವನ್ನು ಸಹಾಯಧನದಲ್ಲಿ ಪಡೆಯಲು ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳ ವಿವರ ಹೀಗಿದೆ:

ರೈತರ ಅಧಾರ್ ಕಾರ್ಡ/Aadhar
ಬ್ಯಾಂಕ್ ಪಾಸ್ ಬುಕ್/Bank Pass Book
ಜಮೀನಿನ ಪಹಣಿ/RTC
ರೈತರ ಪೋಟೋ/Photo
ಬಾಂಡ್ ಪೇಪರ್/Bond Paper
ರೇಶನ್ ಕಾರ್ಡ/Ration Card
ಮೊಬೈಲ್ ನಂಬರ್/Mobile Number

ಇದನ್ನೂ ಓದಿ: Electric Scooter-ಕೆಎಂಎಫ್ ನಿಂದ ಹಾಲು ವಿತರಕರಿಗೆ ರಿಯಾಯಿತಿ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟಿ ವಿತರಣೆ!

Power Sprayer Benefits In Agriculture-ಕೃಷಿಯಲ್ಲಿ ಪವರ್ ಸ್ಪ್ರೇಯರ್ ಬಳಕೆಯಿಂದಾಗುವ ಪ್ರಯೋಜನಗಳೇನು?

ರೈತರು ತೋಟಗಾರಿಕೆ ಮತ್ತು ಕೃಷಿ ಬೆಳೆಗಳಲ್ಲಿ ಸಿಂಪರಣೆಯನ್ನು ಮಾಡಲು ಪವರ್ ಸ್ಪ್ರೇಯರ್ (Power Sprayer) ಗಳನ್ನು ಬಳಕೆ ಮಾಡುವುದರಿಂದ ನಿಮಗೆ ಹಲವು ಪ್ರಯೋಜನಗಳಿವೆ. ಇದು ಸಾಂಪ್ರದಾಯಿಕ ಕೈ ಸ್ಪ್ರೇಯರ್‌ಗಿಂತ ಹೆಚ್ಚು ದಕ್ಷ ಮತ್ತು ಸಮಯ ಉಳಿಸುವ ಸಾಧನವಾಗಿದೆ. ಈ ಕೆಳಗೆ ಮುಖ್ಯ ಪ್ರಯೋಜನಗಳ ಪಟ್ಟಿ ನೀಡಲಾಗಿದೆ:

ಸಮಯ ಮತ್ತು ಕಾರ್ಮಿಕ ಉಳಿತಾಯ: ರೈತರ ಜಮೀನು ಹೆಚ್ಚಿಗೆ ಇದ್ದ ಸಮಯದಲ್ಲಿ ಕೀಟನಾಶಕ,ಶಿಲೀಂಧ್ರನಾಶಕ ಮತ್ತು ರಸಗೊಬ್ಬರಗಳನ್ನು ಕಡಿಮೆ ಸಮಯ ಹಾಗೂ ಕಡಿಮೆ ಕಾರ್ಮಿಕರನ್ನು ಬಳಕೆ ಮಾಡಿಕೊಂಡು ಬೇಗನೆ ಸಿಂಪರಣೆ ಮಾಡಬಹುದು.

ಏಕರೂಪ ಹೈ ಪ್ರೆಶರ್ ಸಿಂಪರಣೆ: ಪವರ್ ಸ್ಪ್ರೇಯರ್ ಗಳು ಪೆಟ್ರ‍ೋಲ್ ಇಂದನ ಬಳಕೆಯಿಂದ ಕಾರ್ಯನಿರ್ವಹಿಸುವುದರಿಂದ ಹೆಚ್ಚಿನ ಒತ್ತಡದಿಂದ (High Pressure) ಔಷಧವು ಸಸ್ಯದ ಎಲ್ಲಾ ಭಾಗಗಳಿಗೂ (ಎಲೆಗಳ ಕೆಳಭಾಗ, ಕಾಂಡಗಳಿಗೆ ಸಮಾನವಾಗಿ ತಲುಪುವುದರಿಂದಾಗಿ
ಕೀಟಗಳು ಮತ್ತು ರೋಗಗಳ ನಿಯಂತ್ರಣದಲ್ಲಿ ಉತ್ತಮ ಫಲಿತಾಂಶವನ್ನು ನಾವು ಕಾಣಬಹುದು.

ರಾಸಾಯನಿಕ ದಕ್ಷತೆಯ ಬಳಕೆ: ಕಡಿಮೆ ಪ್ರಮಾಣದ ಔಷಧಿಯನ್ನು ಹಾಕಿಕೊಂಡು ಹೆಚ್ಚು ಪ್ರದೇಶದವನ್ನು ಈ ಉಪಕರಣ ಸಹಾಯದಿಂದ ನಾವು ಸಿಂಪರಣೆಯನ್ನು ಮಾಡುಬಹುದು.

ಬೆಳೆಯ ಉತ್ಪಾದನೆ ಹೆಚ್ಚಳ: ಪವರ್ ಸ್ಪ್ರೇಯರ್ ಅನ್ನು ಬಳಕೆ ಮಾಡಿ ಸಿಂಪರಣೆಯನ್ನು ಮಾಡಿದಾಗ ಹೆಚ್ಚಿನ ಒತ್ತಡದಿಂದ (High Pressure) ಔಷಧವು ಸಸ್ಯದ ಎಲ್ಲಾ ಭಾಗಗಳಿಗೂ ಎಲೆಗಳ ಕೆಳಭಾಗ, ಕಾಂಡಗಳಿಗೆ ಸಮಾನವಾಗಿ ತಲುಪುವುದರಿಂದಾಗಿ ಕೀಟ ಮತ್ತು ರೋಗಗಳು ಸರಿಯಾದ ಸಮಯಕ್ಕೆ ನಿಯಂತ್ರಣವಾಗಿ ಬೆಳೆಯ ಇಳುವರಿ ಹೆಚ್ಚು ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Maize MSP- ಕೆಎಂಎಫ್ ಕನಿಷ್ಠ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಗೆ ಮನವಿ!

Power Sprayer Online Application-ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು:

ಆಸಕ್ತ ರೈತರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಈ ಕೆಳಗಿನ ವಿಧಾನವನ್ನು ಅನುಸರಿಸಿ ಕೃಷಿ ಇಲಾಖೆಯ ಅಧಿಕೃತ ಕೆ-ಕಿಸಾನ್ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ತಮ್ಮ ಮೊಬೈಲ್ ಮೂಲಕವೇ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Step-1: ಅರ್ಜಿದಾರ ರೈತರು ಮೊದಲಿಗೆ "Power Sprayer Online Application" ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಕೆ-ಕಿಸಾನ್ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ನಂತರ ಈ ಪೇಜ್ ನಲ್ಲಿ "Farm Mechanisation Application Registration/ಕೃಷಿ ಯಾಂತ್ರೀಕರಣ ಅರ್ಜಿ ನೋಂದಣಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ FID ನಂಬರ್ ಅನ್ನು ನಮೂದಿಸಿ "Get Details" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: "Get Details" ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಅರ್ಜಿಯನ್ನು ಸಲ್ಲಿಸುವುದರ ಕುರಿತು ಮಾಹಿತಿಯನ್ನು ತಿಳಿಯಲು ಕೈಪಿಡಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ-Download Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: