- Advertisment -
HomeNew postsRain- ಹವಾಮಾನ ಮುನ್ಸೂಚನೆ: ಇನ್ನು ಎಷ್ಟು ದಿನ ಮಳೆ ವಾತಾವರಣ ಮುಂದುವರೆಯಲಿದೆ?

Rain- ಹವಾಮಾನ ಮುನ್ಸೂಚನೆ: ಇನ್ನು ಎಷ್ಟು ದಿನ ಮಳೆ ವಾತಾವರಣ ಮುಂದುವರೆಯಲಿದೆ?

Last updated on September 28th, 2024 at 08:12 am

ಕರ್ನಾಟಕ ಮಳೆ ನಕ್ಷೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಅಗ್ರಹಾರ ವ್ಯಾಪ್ತಿಯಲ್ಲಿ ಅತ್ಯಧಿಕ 134.5 ಮಿಲಿ ಮೀಟರ್ ಮಳೆ ದಾಖಲಾಗಿರುತ್ತದೆ.

ಉಳಿದಂತೆ ದಾವಣಗೆರೆ, ಚಿತ್ರದುರ್ಗ, ಮೈಸೂರು, ಉತ್ತರಕನ್ನಡ, ಬೆಳಗಾವಿ, ಕೊಡಗು, ಹಾಸನ, ದಕ್ಷಿಣಕನ್ನಡ, ಶಿವಮೊಗ್ಗ, ಹಾವೇರಿ ಜಿಲ್ಲೆಯ ಅಲ್ಲಲ್ಲಿ ಮಳೆ ಬಂದಿರುತ್ತದೆ.

ಪ್ರಸ್ತುತ ಹವಾಮಾನ ಮುನ್ಸೂಚನೆಯನ್ವಯ ಜನವರಿ 09 ರವರೆಗೆ ರಾಜ್ಯದಾದ್ಯಂತ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಮತ್ತು ನಂತರ ಮಳೆಯ ಚಟುವಟಿಕೆಯು ರಾಜ್ಯದಾದ್ಯಂತ ಕಡಿಮೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Bara parihara-ರೈತರ ಖಾತೆಗೆ 105.00 ಕೋಟಿ ಬರ ಪರಿಹಾರ ಬಿಡುಗಡೆ! ಯಾರಿಗೆಲ್ಲ ಸಿಗಲಿದೆ ಮೊದಲನೆ ಕಂತಿನ ಹಣ?

rain forecast-ನಾಳೆ ಬೆಳಿಗ್ಗೆ(08-01-2024) 8-00 ಗಂಟೆವರೆಗಿನ ರಾಜ್ಯದ ಮಳೆ ಮುನ್ಸೂಚನೆ ವಿವರ ಹೀಗಿದೆ:

ಕಾಸರಗೋಡು ವ್ಯಾಪ್ತಿಯಲ್ಲಿ ಅಲ್ಲಲ್ಲಿ ದಕ್ಷಿಣ ಕನ್ನಡ – ಕಾಸರಗೋಡು ಗಡಿ ಭಾಗಗಳಲ್ಲಿ ಅಲ್ಲಲ್ಲಿ, ದಕ್ಷಿಣ ಕನ್ನಡ, ಉಡುಪಿ ಘಟ್ಟದ ಕೆಳಗಿನ ತಪ್ಪಲು ಪ್ರದೇಶಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇರುತ್ತದೆ. 

ಸಕಲೇಶಪುರ, ಮೂಡಿಗೆರೆ, ಶಿೃಂಗೇರಿ, ಕುದುರೆಮುಖ, ಕೊಡಗು, ಸೋಮವಾರಪೇಟೆ, ಶಿೃಂಗೇರಿ, ತೀರ್ಥಹಳ್ಳಿ, ಕೊಪ್ಪ, ಹೊಸನಗರ, ಸಾಗರ ಸುತ್ತಮುತ್ತ ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಬರುವ ಸಾಧ್ಯತೆ ಇರುತ್ತದೆ. ಉಳಿದ ಮಲೆನಾಡು ಭಾಗಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. 

ಚಾಮರಾಜನಗರ, ಮೈಸೂರು ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. 
ಮಂಡ್ಯ, ಹಾಸನ, ರಾಮನಗರ, ಬೆಂಗಳೂರು, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಅಲ್ಲಲ್ಲಿ ಮೋಡ ಹಾಗೂ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ನೀಡಲಾಗಿದೆ. 

ಇದನ್ನು ಹೊರತುಪಡಿಸಿ ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಒಣ ಹವೆ ಮುಂದುವರಿಯಲಿದೆ. 

ಇದನ್ನೂ ಓದಿ: Gruhalakshmi new application: ಗ್ರಾಮ ಒನ್ ನಲ್ಲಿ ಹೊಸ ಗೃಹಲಕ್ಷ್ಮಿ ಅರ್ಜಿ ಮತ್ತು ತಿದ್ದುಪಡಿಗೆ ಅವಕಾಶ!

ಜನವರಿ 13 ರವರೆಗಿನ ಮಳೆ ಮುನ್ಸೂಚನೆ ನಕ್ಷೆ:

ಇದನ್ನೂ ಓದಿ: life insurance-ಕಾರ್ಮಿಕ ಇಲಾಖೆಯಿಂದ ರೂ.2 ಲಕ್ಷ ಜೀವ ವಿಮೆ ಹಾಗೂ ಅಪಘಾತ ವಿಮೆ ಪಡೆಯಲು ಅರ್ಜಿ ಆಹ್ವಾನ!

ಈ ಮೇಲಿನ ನಕ್ಷೆಯಲ್ಲಿ ನೀಲಿ ಬಣ್ಣದಲ್ಲಿ ಗುರುತಿಸಿದ ಜಿಲ್ಲೆಯ ವ್ಯಾಪ್ತಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಸೂಚಿಸಲಾಗಿದೆ.

ಮಾಹಿತಿ ಕೃಪೆ: ಸಾಯಿ ಶೇಖರ್ ಬಿ& KSNDMC, bengalore

- Advertisment -
LATEST ARTICLES

Related Articles

- Advertisment -

Most Popular

- Advertisment -