Ration Card: ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರು ಯಾರೆಂದು ಮತ್ತು ಯಾವ ಬ್ಯಾಂಕ್ ಅಕೌಂಟ್ ಗೆ ಆಧಾರ್ ಲಿಂಕ್ ಆಗಿದೆ ಎಂದು ತಿಳಿಯಲು ವೆಬ್ಸೈಟ್ ಲಿಂಕ್.

ನಿಮ್ಮ ಬಳಿಯಿರುವ ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್(Ration card) ನಲ್ಲಿ ಕುಟುಂಬದ ಮುಖ್ಯಸ್ಥರು ಯಾರೆಂದು ಮತ್ತು ಯಾವ ಬ್ಯಾಂಕ್ ಅಕೌಂಟ್ ಆಧಾರ್ ಲಿಂಕ್(Adhar and bank account link) ಆಗಿದೆ ಹಾಗೂ ನಿಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವೆಲ್ಲ ಹಳ್ಳಿಯಲ್ಲಿ  ಪಡಿತರ ಅಂಗಡಿ/ ರೇಷನ್ ವಿತರಣೆ ಪಾಯಿಂಟ್ ಇವೆ , ನಿಮ್ಮ ಊರಿನ ಪಡಿತರ ಪಟ್ಟಿಯನ್ನು ಸಹ ನಿಮ್ಮ ಮೊಬೈಲ್ ತಿಳಿಯುವುದು ಹೇಗೆ? ಮತ್ತು ಈ ಮಾಹಿತಿ ಪಡೆಯುವ ವೆಬ್ಸೈಟ್ ಲಿಂಕ್ ಗಳನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ನಿಮ್ಮ ಬಳಿಯಿರುವ ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್(Ration card) ನಲ್ಲಿ ಕುಟುಂಬದ ಮುಖ್ಯಸ್ಥರು ಯಾರೆಂದು ಮತ್ತು ಯಾವ ಬ್ಯಾಂಕ್ ಅಕೌಂಟ್ ಆಧಾರ್ ಲಿಂಕ್(Adhar and bank account link) ಆಗಿದೆ ಹಾಗೂ ನಿಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವೆಲ್ಲ ಹಳ್ಳಿಯಲ್ಲಿ  ಪಡಿತರ ಅಂಗಡಿ/ ರೇಷನ್ ವಿತರಣೆ ಪಾಯಿಂಟ್ ಇವೆ , ನಿಮ್ಮ ಊರಿನ ಪಡಿತರ ಪಟ್ಟಿಯನ್ನು ಸಹ ನಿಮ್ಮ ಮೊಬೈಲ್ ತಿಳಿಯುವುದು ಹೇಗೆ? ಮತ್ತು ಈ ಮಾಹಿತಿ ಪಡೆಯುವ ವೆಬ್ಸೈಟ್ ಲಿಂಕ್ ಗಳನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ರಾಜ್ಯ ಸರಕಾರದಿಂದ ಗೃಹ ಲಕ್ಷ್ಮಿ(Gruha lakshmi yojana) ಯೋಜನೆಯಡಿ ಪ್ರತಿ ತಿಂಗಳು ಮನೆಯ ಯಾಜಮನಿಗೆ ರೂ 2,000 ಅರ್ಥಿಕ ನೆರವನ್ನು ರೇಷನ್ ಕಾರ್ಡ್ ನಲ್ಲಿ ನಮೂದಿಸಿದ ಕುಟುಂಬದ ಮುಖ್ಯಸ್ಥರ(Ration card head) ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ ಎಂದು ಸರಕಾರದಿಂದ ಮಾರ್ಗಸೂಚಿ ಹೊರಡಿಸಲಾಗಿದೆ ಹೀಗಾಗಿ ಅನೇಕ ಜನರಿಗೆ ತಮ್ಮ ರೇಷನ್ ಕಾರ್ಡನಲ್ಲಿ ಮುಖ್ಯಸ್ಥರ ಹೆಸರು ಯಾರದ್ದು ಇದೆ ಮತ್ತು ಯಾವ ಬ್ಯಾಂಕ್ ಅಕೌಂಟ್ ಗೆ ಅವರ ಆಧಾರ್ ಲಿಂಕ್(bank and adhar link status check) ಅಗಿದೆ ಎಂದು ಹೇಗೆ ತಿಳಿಯುವುದು ಎಂದು ತಿಳಿದಿಲ್ಲ ಈ ಕಾರಣದಿಂದ ಇಂದು ಈ ಅಂಕಣದಲ್ಲಿ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ನೀವು ತಿಳಿಯಿರಿ ನಿಮ್ಮ ಅಪ್ತರಿಗೂ ಈ ಮಾಹಿತಿ ಶೇರ್ ಮಾಡಿ ಅವರಿಗೂ ತಿಳಿಸಿ.

Ration card head checking link- ರೇಷನ್ ಕಾರ್ಡ ನಲ್ಲಿ ಕುಟುಂಬದ ಮುಖ್ಯಸ್ಥರು ಯಾರೆಂದು ತಿಳಿಯುವ ವಿಧಾನ:

Step-1: ನಿಮ್ಮ ಮೊಬೈಲ್ ಮೂಲಕ ಮೊದಲಿ ಈ https://mahitikanaja.karnataka.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ "ಪಡಿತರ ಚೀಟಿ ಪ್ರತೇಕವಾಗಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-2: ನಂತರದಲ್ಲಿ ನಿಮ್ಮ "ಜಿಲ್ಲೆ" ಆಯ್ಕೆ ಮಾಡಿಕೊಂಡು 12 ಅಂಕಿಯ ನಿಮ್ಮ ರ‍ೇಷನ್ ಕಾರ್ಡ ಸಂಖ್ಯೆಯನ್ನು ನಮೂದಿಸಿ "ಸಲ್ಲಿಸಿ" ಮೇಲೆ ಕ್ಲಿಕ್ ಮಾಡಿರಿ.

Step-3: "ಸಲ್ಲಿಸಿ" ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಪಡಿತರ ಅಂಗಡಿ ವಿವರ ಕಾಲಂ ನಲ್ಲಿ ರೇಷನ್ ಕಾರ್ಡ್ ಸ್ಥಿತಿ, ಪಡಿತರ ವಿತರಣೆ ಅಂಗಡಿ ಹೆಸರು, ಕಾರ್ಡ ಪ್ರಕಾರದ ಮಾಹಿತಿ ಸಿಗುತ್ತದೆ.

ಅಲ್ಲೇ ಕೆಳಗೆ "ಕುಟುಂಬ ಸದಸ್ಯರ ವಿವರಗಳು" ಕಾಲಂ ನಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು, ಕುಟುಂಬ ಸದಸ್ಯರ ಹೆಸರು, ಕುಟುಂಬ ಮುಖ್ಯಸ್ಥರೊಂದಿಗೆ ಸಂಬಂಧ, ವಿಳಾಸ, ಇತರೆ ಮಾಹಿತಿ ಗೋಚರಿಸುತ್ತದೆ.

Aadhar and bank account link checking- ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ ಯಾವ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದೆ ಎಂದು ತಿಳಿಯಲು ವೆಬ್ಸೈಟ್ ಲಿಂಕ್:

Step-1: ಆಧಾರ್ ಕಾರ್ಡ್ ಪ್ರಾಧಿಕಾರದ(UIDAI website link) ಈ https://resident.uidai.gov.in/bank-mapper ಲಿಂಕ್ ಮೇಲೆ ಕ್ಲಿಕ್ ಮಾಡಿ ಕುಟುಂಬದ ಮುಖ್ಯಸ್ಥರ ಆಧಾರ್ ನಂಬರ್(Aadhar number) ಹಾಕಿ ನಂತರ ಅಲ್ಲೇ ಪಕ್ಕದಲ್ಲಿ ಕಾಣುವ "Security code" ನಮೂದಿಸಿ "Send OTP" ಮೇಲೆ ಕ್ಲಿಕ್ ಮಾಡಬೇಕು.

Step-2: ಇದಾದ ನಂತರ ಆಧಾರ್ ಕಾರ್ಡನಲ್ಲಿ ಇರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ ಅದನ್ನು "Enter OTP" ಕಾಲಂ ನಲ್ಲಿ ಹಾಕಿಬೇಕು.

Step-3: ತದನಂತರ ಈ ಪುಟದಲ್ಲಿ ನಿಮ್ಮ ಆಧಾರ್ ವಿವರ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ ಆ ಬ್ಯಾಂಕಿನ ಹೆಸರು ಮತ್ತು ಸಕ್ರಿಯವಾಗಿದಲ್ಲಿ "active"Step-2: 
ಎಂದು ಗೋಚರಿಸುತ್ತದೆ ಇಲ್ಲಾವಾದಲ್ಲಿ "inactive" ಎಂದು ತೋರಿಸುತ್ತದೆ.

ಆಧಾರ್ ಲಿಂಕ್ ಬ್ಯಾಂಕ್ ಖಾತೆಗೆ ಅಗದಿದಲ್ಲಿ ಯಾವ ಮಾಹಿತಿಯನ್ನು ತೋರಿಸುವುದಿಲ್ಲ ಅಂತಹ ಸಮಯದಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆಗೆ ಆಧಾರ್ ಕಾರ್ಡ ಪ್ರತಿಯೊಂದಿಗೆ ಭೇಟಿ ಮಾಡಿ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕು.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಡೇಟ್ ಫಿಕ್ಸ್! ಅಗತ್ಯ ದಾಖಲಾತಿಗಳೇನು? ಅರ್ಜಿ ಸಲ್ಲಿಕೆ ವಿಧಾನ ಹೇಗೆ? ಇಲ್ಲಿದೆ ಸಂಪೂರ್ಣ ವಿವರ.

Ration card list- ನಿಮ್ಮ ಊರಿನ ಪಡಿತರ ಚೀಟಿ /ರೇಷನ್ ಕಾರ್ಡ ಪಟ್ಟಿಯನ್ನು ತಿಳಿಯುವ ವಿಧಾನ:

Step-1: ಮಾಹಿತಿ ಕಣಜ ಜಾಲತಾಣದ ಈ https://mahitikanaja.karnataka.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿ, ಗ್ರಾಮ ಮತ್ತು ಕಾರ್ಡ ಪ್ರಕಾರ‍ ವನ್ನು ಆಯ್ಕೆ ಮಾಡಿಕೊಂಡು "ಸಲ್ಲಿಸಿ" ಆಯ್ಕೆಯ  ಮೇಲೆ ಕ್ಲಿಕ್ ಮಾಡಿಬೇಕು.

Step-2: ಇದಾದ ಬಳಿಕ ನಂತರದ ಪುಟದಲ್ಲಿ ಪಡಿತರ ಚೀಟಿ ಸಂಖ್ಯೆ, ಕುಟುಂಬದ ಮುಖ್ಯಸ್ಥರ ಹೆಸರು, ವಿಳಾಸದ ಪಟ್ಟಿ ಗೋಚರಿಸುತ್ತದೆ.

ಪಡಿತರ ಅಂಗಡಿ/ ರೇಷನ್ ವಿತರಣೆ ಪಾಯಿಂಟ್ ತಿಳಿಯುವ ವಿಧಾನ:

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವೆಲ್ಲ ಹಳ್ಳಿಯಲ್ಲಿ  ಪಡಿತರ ಅಂಗಡಿ/ ರೇಷನ್ ವಿತರಣೆ ಪಾಯಿಂಟ್ ಇವೆ ಎಂದು ತಿಳಿಯಲು ಈ ಕ್ರಮ ಅನುಸರಿಸಿ.

ಮೊದಲಿಗೆ ಮಾಹಿತಿ ಕಣಜ ವೆಬ್ಸೈಟ್ ಭೇಟಿ ಮಾಡಲು ಈ https://mahitikanaja.karnataka.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು, ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿ ಮತ್ತು ಗ್ರಾಮ ಆಯ್ಕೆ ಮಾಡಿಕೊಂಡು ಪಡಿತರ ಅಂಗಡಿಯ ಹೆಸರು, ವ್ಯಾಪರಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ವಿವರ ತೋರಿಸುತ್ತದೆ.

ಇದನ್ನೂ ಓದಿ: Anna Bhagya Yojane: ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ವರ್ಗಾವಣೆ ಅಗಿದಿಯೋ ಇಲ್ಲವೋ ಎಂದು ತಿಳಿದುಕೊಳ್ಳಬೇಕೆ? ಇಲ್ಲಿದೆ ವೆಬ್‌ಸೈಟ್‌ ಲಿಂಕ್‌.