UPSC Pre-examination: ಕರ್ನಾಟಕ ಸರ್ಕಾರದಿಂದ ಪದವಿ ಶಿಕ್ಷಣದೊಂದಿಗೆ UPSC ತಯಾರಿಗೆ ಅರ್ಜಿ ಅಹ್ವಾನ!

July 11, 2024 | Siddesh

2024 - 25 ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಊಟ ವಸತಿಯೊಂದಿಗೆ ಸಂಯೋಜಿತ ಪದವಿ ಶಿಕ್ಷಣ ಹಾಗೂ UPSC ಪರೀಕ್ಷಾ ಪೂರ್ವ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.

ಸಮಾಜ ಕಲ್ಯಾಣ ಇಲಾಖೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ಅಭ್ಯರ್ಥಿಗಳ ಅರ್ಹರು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ? ಯಾವ ಕೋರ್ಸ್ ಗಳ ಪದವಿ ಶಿಕ್ಷಣ ಪಡೆಯಬಹುದೆಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: NLM ಯೋಜನೆಯಡಿ ರೂ 25 ಲಕ್ಷದವರೆಗೆ ಶೇ 50% ಸಬ್ಸಿಡಿಯಲ್ಲಿ ಸ್ವ-ಉದ್ಯೋಗ ಮಾಡಲು ಅವಕಾಶ! ಇಲ್ಲಿದೆ ಸಂಪೂರ್ಣ ಮಾಹಿತಿ!

UPSC Pre-examination Training with Degree by Social Welfare Department - 

ದ್ವಿತೀಯ ಪಿಯುಸಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಬಿಎ, ಬಿ.ಕಾಂ, ಬಿ.ಎಸ್ ಸಿ ಪದವಿ ಶಿಕ್ಷಣದ ಜೊತೆಗೆ ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಪರೀಕ್ಷೆಗೆ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಿ ಆಯ್ಕೆಯಾದವರಿಗೆ ಊಟ ವಸತಿಯೊಂದಿಗೆ ಪದವಿ ಶಿಕ್ಷಣದ ಜೊತೆಗೆ ಯುಪಿಎಸ್‌ಸಿ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಅಭ್ಯರ್ಥಿಯ ವಯೋಮಿತಿ - ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 17 ವರ್ಷ ಹೊಂದಿರಬೇಕು.

ಇದನ್ನೂ ಓದಿ: Diploma Agriculture Application-2024-25ನೇ ಸಾಲಿನ ಡಿಪ್ಲೊಮಾ(ಕೃಷಿ) ಕೋರ್ಸ್‌ಗೆ ಅರ್ಜಿ ಆಹ್ವಾನ!

Eligibility-ಸಾಮಾನ್ಯ ಅರ್ಹತೆಗಳು: 

• ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
• ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದ ಒಳಗಾಗಿ ಅಭ್ಯರ್ಥಿಯು ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ಹೊಂದಿರಬೇಕು.
• ದ್ವಿತೀಯ ಪಿಯುಸಿಯಲ್ಲಿ ಪಾಸಾಗಿರಬೇಕು.

ವಾರ್ಷಿಕ ಆದಾಯ - ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು 5 ಲಕ್ಷದ ಒಳಗಿರಬೇಕು.

ಇದನ್ನೂ ಓದಿ: Ayushman card-2024: ನಿಮ್ಮ ಬಳಿ ಈ ಕಾರ್ಡ ಇದ್ದರೆ 5 ಲಕ್ಷದವರೆಗೆ ಉಚಿತ ಆರೋಗ್ಯ ಚಿಕಿತ್ಸೆ ಪಡೆಯಬಹುದು?

Last date for application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 31 ಜುಲೈ 2024

• ಅರ್ಜಿ ಸಲ್ಲಿಸುವ ಡೈರೆಕ್ಟ ಲಿಂಕ್ : Click here
• ಅಧಿಸೂಚನೆ : ಡೌನ್ಲೋಡ್ 

WhatsApp Group Join Now
Telegram Group Join Now
Share Now: